Site icon Vistara News

BBK SEASON 10: ವಿನಯ್ ನನ್ನ ಗಂಡನ ದವಡೆ ಮುರಿದಿದ್ದ; ಕಿರುತೆರೆ ನಟಿಯ ಆರೋಪ!

ILAA VITLA actress

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ (BBK SEASON 10) ಒಂಬತ್ತನೇ ವಾರ ಟಾಸ್ಕ್‌ ಆಡುವ ವೇಳೆ ಸಂಗೀತಾ ಹಾಗೂ ಪ್ರತಾಪ್‌ ಅವರಿಗೆ ಗಾಯ ಆಗಿ ಆಸ್ಪತ್ರೆ ಸೇರಿದ್ದರು. ಇದೀಗ ಸಂಗೀತಾ ಹಾಗೂ ಪ್ರತಾಪ್‌ ಮನೆಗೆ ಹಿಂದಿರುಗಿದ್ದಾರೆ. ಕಪ್ಪು ಕನ್ನಡಕವನ್ನು ಧರಿಸಿ ಇಬ್ಬರೂ ಮನೆಯೊಳಗೆ ಎಂಟ್ರಿ ಕೊಟ್ಟಿದ್ದನ್ನು ನೋಡಿ ಸ್ಪರ್ಧಿಗಳು ಶಾಕ್‌ ಆಗಿದ್ದಾರೆ. ವೀಕೆಂಡ್‌ ಪಂಚಾಯಿತಿಯಲ್ಲಿಯೂ ಸಹ ಈ ಬಗ್ಗೆ ಸುದೀಪ್‌ ಚರ್ಚೆ ಮಾಡಿ ಸ್ಪರ್ಧಿಗಳಿಗೆ ಬೆಂಡೆತ್ತಿದ್ದಾರೆ. ಇಷ್ಟಾದರೂ ವಿನಯ್‌ ಟೀಂಗೆ ಪಶ್ಚಾತ್ತಾಪ ಕಾಡುತ್ತಿಲ್ಲ ಎಂದು ನೆಟ್ಟಿಗರು ಹಿಡಿಶಾಪ ಹಾಕುತ್ತಿದ್ದಾರೆ. ಇದೀಗ ವಿನಯ್‌ ವಿರುದ್ಧ ಕಿರುತೆರೆ ನಟಿಯಿಂದ ಆರೋಪ ಕೇಳಿ ಬಂದಿದೆ. ʻʻಜೋಡಿ ನಂ 1 ರಿಯಾಲಿಟಿ ಶೋನಲ್ಲೂ ವಿನಯ್‌ ಅವರು ಬಿಗ್‌ ಬಾಸ್‌ ಮನೆಯಲ್ಲಿ ಹೇಗೆ ಅಮಾನವೀಯವಾಗಿ ವರ್ತಿಸಿದ್ದರೋ ಅದೇ ರೀತಿ ನನ್ನ ಗಂಡನ ಮೇಲೂ ವರ್ತಿಸಿದ್ದಾರೆʼʼಎಂದ ನಟಿ ಇಳಾ ವಿಟ್ಳಾ ಗಂಭೀರ ಆರೋಪ ಮಾಡಿದ್ದಾರೆ.

ನಟಿ ಇಳಾ ವಿಟ್ಳಾ ಅವರು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಈ ರೀತಿ ಬರೆದುಕೊಂಡಿದ್ದಾರೆ. ನಾನು ಒಬ್ಬಳು ಆರ್ಟಿಸ್ಟ್ ಆಗಿ ರಿಯಾಲಿಟ ಶೋಗಳನ್ನು ಮಾಡಿದ್ದಕ್ಕೆ, ಹಾಗೇಯೇ ಸಾಮಾನ್ಯವಾಗಿ ಬಿಗ್ ಬಾಸ್ ನೋಡುತ್ತಿರುವ ಕಾರಣ ವಿನಯ್ ಅವರನ್ನು ಹತ್ತಿರದಿಂದ ನೋಡಿ ಅನುಭವಿಸಿರುವುದಕ್ಕೆ ಈ ಪೋಸ್ಟ್‌ ಮಾಡಿದ್ದೇನೆ. ನನಗೇನಾದ್ರೂ ಆದ್ರೆ ನಾನು ಸುಮ್ನೆ ಬಿಡಲ್ಲ ಸುಮ್ನೆ ಬಿಡಲ್ಲ ಎಂದು ವಿನಯ್‌ ಅವರು ಬಿಗ್‌ ಬಾಸ್‌ ಮನೆಯಲ್ಲಿ ಹೇಳುತ್ತಲೇ ಇರ್ತಾರಲ್ವಾ, ಆದ್ರೆ ಏನ್ ಮಾಡ್ತಿದ್ರು? ಅವರಿಂದ ಬೇರೆಯವರಿಗೆ ತೊಂದರೆ ಆದ್ರೆ ಏನ್ ಮಾಡ್ಬೇಕಿತ್ತು? ಆಟ ಅಂದ್ಮೇಲೆ ಹೆಚ್ಚು ಕಡಿಮೆ ಇದ್ದೇ ಇರುತ್ತೆ. ಸ್ವಲ್ಪ ಸ್ವಲ್ಪ ಗಾಯಗಳು ಆಗುತ್ತೆ ಅದು ಸರ್ವೇಸಾಮಾನ್ಯ. ಬೇರೆಯವರು ಯಕ್ಕುಟೋದ್ರು ಪರ್ವಾಗಿಲ್ಲ ನಾನು ಗೆಲ್ಲಲೇ ಬೇಕು ಅನ್ನೋ ಮನಸ್ಥಿತಿ ಇರೋದು ಯಾವತ್ತಿಗೂ ಉದ್ದಾರ ಆಗಿಲ್ಲ. ರಿಯಾಲಿಟಿ ಶೋ ನೇ ಹಾಗೆ ಏನು ಮಾಡಕ್ಕಾಗಲ್ಲ. ಇಷ್ಟ ಇದ್ರೆ ಹೋಗ್ಬೇಕು ಇಲ್ಲ ಅಂದ್ರೆ ಸುಮ್ನಿರಬೇಕುʼʼಎಂದರು

ʻʻಬಿಗ್ ಬಾಸ್ ಅಂದರೆ ನನಗೆ ಮೊದಲಿಂದಾನು ಇಷ್ಟ. ನಮ್ಮ ಕಿರುತೆರೆ ಹೆಮ್ಮೆ . ಮೊದಲು ಕಿರುತೆರೆ ಎಂದು ತಾತ್ಸಾರ ಮಾಡಿದವರನ್ನು ಕಿರುತೆರೆಗೆ ಕರ್ಕೊಂಡು ಬಂದಿರುವ ಹೆಮ್ಮೆಯ ಶೋ. ಕಿಚ್ಚ ಸುದೀಪ್ ಅವರು ಹೇಳುವ ಬುದ್ಧಿ ಮಾತು ನಮ್ಮ ಜೀವನಕ್ಕೂ ಅನ್ವಯಿಸುತ್ತೆ. ಬಿಗ್ ಬಾಸ್ ಗೆ ಹೋಗ್ಬೇಕು ಅಂತೇನಿಲ್ಲ ಸುಮ್ನೆ ಕೇಳಿಸಿಕೊಂಡರೆ ಸಾಕಾಗುತ್ತೆʼʼಎಂದರು.

ಇದನ್ನೂ ಓದಿ; BBK SEASON 10: ಕ್ಯಾಪ್ಟನ್‌ ನೀವಾ ನಮ್ರತಾನಾ? ʻಬಯಾಸ್ಡ್ʼ​ ಆಗಿದ್ರಿ ಯಾಕೆ?ಸ್ನೇಹಿತ್‌ಗೆ ಕಿಚ್ಚನ ಕ್ಲಾಸ್‌

ವಿನಯ್‌ ನಮ್ಮೆಜಮಾನ್ರ ದವಡೆ ಹಲ್ಲು ಮುರಿದ್ರು

ʻʻಇದೇ ವಿನಯ್ ಸೂಪರ್ ಜೋಡಿ ಟೈಮಲ್ಲಿ ನನ್ನ ಕಣ್ಣೆದುರಿಗೆ ಪ್ಲಾನ್ ಮಾಡ್ಕೊಂಡು ಬಂದು ನಮ್ಮತ್ರ ಹೇಳ್ತಾ ಇದ್ರು. ನನಗೇನಾದ್ರೂ ಆದ್ರೆ ನಾನ್ ಯಾರನ್ನು ಸುಮ್ಮನೆ ಬಿಡಲ್ಲ ಎಂದು ಹೆದ್ರಿಸೋದು. ಆಮೇಲೆ ಇಂತಹ ಕೆಲಸ ಅವರೇ ಮಾಡೋದು. ಅವತ್ತು ವಿನಯ್ ಜತೆ ನಮ್ಮೆಜಮಾನ್ರು ಆಡಿದಾಗ ಆಟದಲ್ಲಿ ದವಡೆ ಹಲ್ಲು ಮುರಿದ್ರು. ಅಷ್ಟು ಸಾಲದು ಅಂತ ರಿಬ್ಬು ಫ್ಯಾಕ್ಚರ್ ಮಾಡಿದ್ರು, ಆದ್ರೂ ಅವರಿಗೆ ನಾವು ಒಂದು ಮಾತು ಏನು ಹೇಳಿಲ್., ಶೋ ಮುಗಿದ್ ಮೇಲೆ ನೋವು ಜಾಸ್ತಿ ಆಯ್ತು. ಆರು ತಿಂಗಳು ಸರಿಯಾಗಿ ಕೆಲಸ ಮಾಡಕ್ಕಾಗ್ದೆ ನನ್ನ ಗಂಡ ಒದ್ದಾಡಿದ್ದಾರೆ. ಡಾಕ್ಟ್ರು ಏನು ಮಾಡಬಾರದು ರೆಸ್ಟ್ ಮಾಡಿ ಅಂತ ಹೇಳಿದ್ರು. ಅವತ್ತು ನಾನು ಎಷ್ಟು ಕಣ್ಣೀರು ಹಾಕ್ತ ಕೂತಿದ್ದೆ ಅನ್ನೋದು ಭಗವಂತನಿಗೆ ಮಾತ್ರ ಗೊತ್ತು. ಇದೇ ಪರಿಸ್ಥಿತಿ ಅವರಿಗೆ ಬಂದಿದ್ರೆ ಏನ್ ಮಾಡ್ತಿದ್ರು? ನಾವು ಕಲಾವಿದರು ಆಗಿ ಹೋಗಿರೋ ಘಟನೆಗಳಿಗೆ ರಿಯಾಕ್ಷನ್ ಕೊಡೋದು, ದುರಹಂಕಾರದ ಮಾತುಗಳನ್ನ ಆಡೋದು ಒಬ್ಬರಿಗೊಬ್ರು ಜಗಳ ಮಾಡ್ಕೊಂಡು ಲೈಫ್ ಹಾಳ್ ಮಾಡ್ಕೊಳೋದು ಬೇಡ. ಎಲ್ಲರೂ ಚೆನ್ನಾಗಿರ್ಲಿ ಅಂತ ಸುಮ್ನೆ ಇದ್ವಿ. ಅದ್ರಲ್ಲೂ ಅವರ ತಾಯಿ ತುಂಬಾ ಒಳ್ಳೆ ಮನಸ್ಸು ಇರೋರು. ಯಾರ್ ಗೆದ್ರು ಪರ್ವಾಗಿಲ್ಲ ಎಲ್ಲಾ ನನ್ನ ಮಕ್ಕಳೇ ಎಂದು ಹೇಳಿರೋ ಮಾತು ಈಗಲೂ ನನಗೆ ನೆನಪಿದೆ. ಸ್ವಲ್ಪ ದಿನ ನೋವಿರುತ್ತೆ, ಆಮೇಲೆ ಇರೋದೇ ಜೀವನ ಅಂತ ಸುಮ್ಮನೆ ಇದ್ವಿʼʼಎಂದರು.

ನಟಿ ಇಳಾ ವಿಟ್ಳಾ ಪೋಸ್ಟ್‌

ಕುಟುಂಬಗಳು ಅನುಭವಿಸುವುದು ಒಳ್ಳೆ ಲಕ್ಷಣ ಅಲ್ಲ

ʻʻಯಾಕೆಂದ್ರೆ ನಮ್ಮಿಂದಾಗಿ ಎಲ್ಲ ಫ್ಯಾಮಿಲಿಯವರು ಅನುಭವಿಸುವುದು ಒಳ್ಳೆ ಲಕ್ಷಣ ಅಲ್ಲ . ಅವರ ಫ್ಯಾಮಿಲಿ ಮಾತ್ರ ಚೆನ್ನಾಗಿರಬೇಕು ಉಳಿದವರು ಯಕ್ಕುಟ್ ಹೋದ್ರು ಅವರಿಗೆ ತೊಂದರೆ ಇಲ್ಲ ಅನ್ಸುತ್ತೆ. ಈ ತರ ಹೆದರಿಸುವರಿಗೆ ನಂದೊಂದು ಮಾತು, ಒಂದು ವೇಳೆ ನೀವೇನಾದ್ರೂ ಮಾಡಿದ್ರೆ ಬೇರೆಯವರು ಕಡ್ಲೆಪುರಿ ತಿನ್ಕೊಂಡು ಕೂತಿರ್ತಾರಾ? ಗೊತ್ತಿಲ್ಲದೆ ಆಟದಲ್ಲಿ ಏನೋ ಒಂದಾದರೆ ಈ ಮನುಷ್ಯನ ಯೋಗ್ಯತೆನೆ ಇಷ್ಟು ಹಾಳಾಗೋಗ್ಲಿ ಅಂತ ಬಿಡಬಹುದು. ಆಟದಿಂದ ಹೊರಗೆ ಬಂದ ಮೇಲೆನೂ ಇವ್ರು ನಾ ನಿನ್ನ ಹೊರಗ್ ಹೋದ್ಮೇಲೆ ಸುಮ್ನೆ ಬಿಡಲ್ಲ ನಾನು ಸುಮ್ಮನೆ ಬಿಡಲ್ಲ ಅಂದ್ರೆ ಎದುರುಗಡೆಯವರು ಕೈಕಟ್ಟಿ ಕೂತ್ಕೊಂಡಿರ್ತಾರಾ? ಇವರೆಲ್ಲ ಲೈಫ್ ಹಾಳ್ ಮಾಡ್ಕೊಳಕ್ ಬಂದಿದ್ದಾರಾ ಜೀವನ ಮಾಡ್ಕೊಳ್ಳೋಕೆ ಬಂದಿದ್ದರೋ! ಒಂದು ಅರ್ಥ ಆಗ್ತಿಲ್ಲ. ಫ್ಯಾಮಿಲಿ ಮುಖ್ಯ ಅಂತ 50ಸರಿ ಹೇಳ್ತಿರಲ್ಲ, ಒಂದು ವೇಳೆ ನೀವೇನಾದರೂ ಮಾಡಿದ್ರಿ ಅಂತ ಇಟ್ಕೊಳಿ ಎದ್ರುಗಡೆ ಅವ್ರು ನಿಮ್ಮನ್ ಏನೋ ಒಂದು ಮಾಡ್ತಾರೆ ಅಲ್ಲಿಗೆ ಯಾರಿಂದ ಯಾರು ಫ್ಯಾಮಿಲಿ ಹಾಳ್ ಮಾಡುದ್ರು ಅಷ್ಟು ತಲೆ ಇಲ್ವಾ ಇವರಿಗೆ ಖರ್ಮ,ಎಲ್ಲಾ ಆದ್ಮೇಲೆ ಏನು ಗೊತ್ತಿಲ್ಲದಂಗೆ ಸಾರಿ ಸರ್ ಸಾರಿ ಸರ್ ಅಂತ ಹೇಳೋದು ಅಷ್ಟೇʼʼಎಂದರು.

ಇದನ್ನೂ ಓದಿ: BBK SEASON 10: ‘ಬಿಗ್ ಬಾಸ್‌’ ಮನೆಯಲ್ಲಿ ಇನ್ನು ಕ್ಯಾಪ್ಟನ್ ಇರಲ್ಲ; ರೂಮ್‌ಗೆ ಬೀಗ ಬಿದ್ದಾಯ್ತು!

ʻʻನಾನು ಬದಲಾಗಿದ್ದಾರೆ ಅನ್ಕೊಂಡಿದ್ದೆ ಯಾಕೆಂದ್ರೆ ಒಬ್ಬ ಮನುಷ್ಯ ಅಂದಮೇಲೆ ತಪ್ಪು ಮಾಡೋದು ಸಹಜ. ಇವರು ಬದಲಾಗಲ್ಲ. ಯಾಕೆಂದ್ರೆ ಇಂತಹ ಬಿಗ್ ಬಾಸ್ ಅಂತ ಶೋನಲ್ಲೂ ಕಂಟ್ರೋಲ್ ಇಲ್ದೆ ಮಾತಾಡ್ತಿದ್ದಾರೆ ಅಂದ್ರೆ ಹೊರಗಡೆ ಹೇಗಿರಬಹುದು? ಅಷ್ಟೇ ನನ್ನ ಪ್ರಶ್ನೆ! ಭಗವಂತ ಇನ್ನಾದರೂ ಒಳ್ಳೆ ಬುದ್ದಿ ಕೊಡ್ಲಿ. ನನ್ ಜೀವನದಲ್ಲಿ ನಾನು ಯಾರಿಗೂ ಹೆದರೋ ಮಾತಿಲ್ಲ. ನನ್ ಯಾರ್ ಸುದ್ದಿಗೂ ಹೋಗಲ್ಲ. ಯಾಕೆಂದ್ರೆ ಎಲ್ಲರ ಫ್ಯಾಮಿಲಿ ಚೆನ್ನಾಗಿರಬೇಕು. ಹೋಗುವಾಗ ಏನು ತಗೊಂಡ್ ಹೋಗಲ್ಲ ನಾವು ಅಂತ ತಿಳ್ಕೊಂಡಿರೋಳು. ಬದುಕಿರೋದು ಇಷ್ಟು ದಿನ ಪ್ರೀತಿ ವಿಶ್ವಾಸ ನಂಬಿಕೆ ಇಂದಾನೆ. ಡು ಆರ್ ಡೈ ಕೆಟ್ಟ ಕೆಲಸ ಮಾಡಿ ನೂರು ದಿನ ಬದುಕುವುದಕ್ಕಿಂತ ಒಳ್ಳೆ ಕೆಲಸ ಮಾಡಿ ಒಂದಿನ ಬದುಕೋದು ಗ್ರೇಟ್. ಮನ್ಸಲ್ಲಿರೋದನ್ನ ಹೇಳಲೇಬೇಕು ಆಗಲೇ ನಂಗೆ ಸಮಾಧಾನʼʼಎಂದು ಸುಧೀರ್ಘವಾಗಿ ನಟಿ ಬರೆದುಕೊಂಡಿದ್ದಾರೆ.

ಬಿಗ್‌ಬಾಸ್‌ ಮನೆಯೊಳಗೆ ಬಿಗ್‌ಬಾಸ್‌ ಲೋಕ ಆಟದಲ್ಲಿ ಗಂಧರ್ವರು ಮತ್ತು ರಾಕ್ಷಸರು ಎಂದು ಎರಡು ಗುಂಪುಗಳಾನ್ನಾಗಿ ಮಾಡಿ, ಹಲವು ಟಾಸ್ಕ್ ಗಳನ್ನು ನೀಡಲಾಗಿತ್ತು. ಟಾಸ್ಕ್ ವೇಳೆ ರಾಕ್ಷಸರು ಮತ್ತು ಗಂಧರ್ವರ ಗುಂಪುಗಳ ನಡುವೆ ಭಾರೀ ಕದನವೇ ನಡೆದು ಹೋಯ್ತು. ಈ ಟಾಸ್ಕ್‌ನಲ್ಲಿ ಒಬ್ಬರಿಗೊಬ್ಬರು ಕೆಣಕಿಕೊಳ್ಳುತ್ತಿದ್ದು, ಇದರಿಂದ ಮನೆಯಲ್ಲಿ ಅನಾಹುತ ಆಗಬಹುದು ಎಂದು ಅಂದಾಜಿಸಲಾಗಿತ್ತು. ಅದೇ ರೀತಿಯೇ ಆಯಿತು.

Exit mobile version