Site icon Vistara News

BBK SEASON 10: ವಿನಯ್‌ ಸ್ಟ್ರಾಟಜಿ ವರ್ಕೌಟ್‌ ಆಯ್ತಾ? 8 ಮಂದಿ ನಾಮಿನೇಟ್‌!

bbk 10 nominated 6th week

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ (BBK SEASON 10) ಆರನೇ ವಾರ ಒಟ್ಟು 8 ಮಂದಿ ನಾಮಿನೇಟ್‌ ಆಗಿದ್ದಾರೆ. ಈ ಬಾರಿ ಕೂಡ ಮನೆಯಲ್ಲಿ ಗ್ರೂಪಿಸಂ ನಡೆದಿದ್ದು ಬಿಗ್‌ ಬಾಸ್‌ ಅಸ್ತ್ರದಿಂದ ಮನೆಮಂದಿಯ ಪ್ಲ್ಯಾನ್‌ಗಳು ತಲೆ ಕೆಳಗಾಗಿದೆ. ಈ ವಾರ ಭಾಗ್ಯಶ್ರೀ ಅವರನ್ನು ಮೈಕಲ್‌ ನೇರವಾಗಿ ನಾಮಿನೇಟ್‌ ಮಾಡಿದರೆ, ಉಳಿದವರು ಲುಡೋ ಗೇಮ್‌ನಿಂದಾಗಿ ನಾಮಿನೇಟ್‌ ಆದರು. ಲುಡೋ ಗೇಮ್‌ ಅನುಸಾರ ವಿನಯ್ ಗೌಡ, ಇಶಾನಿ, ನಮ್ರತಾ ಗೌಡ, ತನಿಷಾ ಕುಪ್ಪಂಡ, ತುಕಾಲಿ ಸಂತು, ಕಾರ್ತಿಕ್ ಮಹೇಶ್ ಹಾಗೂ ನೀತು ನಾಮಿನೇಟ್ ಆದರು.

ಏನದು ಲುಡೋ ಗೇಮ್‌?

ಈ ಗೇಮ್‌ನಲ್ಲಿ ಮೂರು ಸ್ಪರ್ಧಗಳ ಗುಂಪು ಆಡಬೇಕಿತ್ತು. ಬೋರ್ಡ್‌ನಲ್ಲಿ ಬರೆದಿರುವ ನಿಯಮಗಳ ಅನುಸಾರ ಸ್ಪರ್ಧಿಗಳು ನಡೆದುಕೊಳ್ಳಬೇಕಿತ್ತು. ಅದರಲ್ಲಿ ಎದುರಾಳಿಯ ಗುಂಪಿನಲ್ಲಿ ಒಬ್ಬರನ್ನು ನಾಮಿನೇಟ್‌ ಮಾಡಿ, ನೀವು ಸೇಫ್‌, ನಿಮ್ಮಲ್ಲೇ ತಂಡದ ಒಬ್ಬರನ್ನು ಸೇಪ್‌ ಮಾಡಿ, ಹೀಗೆ ಬರೆದುಕೊಂಡಿತ್ತು. ಅದರಂತೆ ಸದಸ್ಯರು ಆಟ ಆಡಿ ಒಟ್ಟು 8 ಮಂದಿ ನಾಮಿನೇಟ್‌ ಆದರು.

ಮೈಕಲ್‌ ಟಾರ್ಗೆಟ್‌ ಭಾಗ್ಯಶ್ರೀ

ವಿನಯ್ ಗೌಡ ಗ್ರೂಪ್‌ನಲ್ಲಿ ಮೈಕಲ್ ಗುರುತಿಸಿಕೊಂಡಿದ್ದಾರೆ. ಕಳೆದ ಮೂರು ವಾರಗಳಿಂದ ವಿನಯ್‌ ಟೀಂಗೆ ಭಾಗ್ಯಶ್ರೀ ಅವರು ಮನೆಯಿಂದ ಹೊರಗೆ ಹೋಗಬೇಕು ಎನ್ನುವುದು ಸ್ಟ್ರಾಟೆಜಿ .ಭಾಗ್ಯಶ್ರೀ ನಾಮಿನೇಟ್ ಆಗದಿದ್ದಾಗ, ಸ್ನೇಹಿತ್ ಅವರನ್ನ ಭಾಗ್ಯಶ್ರೀ ನಾಮಿನೇಟ್ ಮಾಡಿದಾಗ ವಿನಯ್ ಗೌಡ ಓಪನ್ ಆಗಿಯೇ ಅಸಮಾಧಾನವನ್ನ ಹೊರಹಾಕಿದ್ದರು. ಇಶಾನಿ ಸೇಫ್ ಆಗಬೇಕು ಎಂಬ ಸ್ಟ್ರಾಟೆಜಿ ಅನುಸಾರ, ಭಾಗ್ಯಶ್ರೀ ಅವರನ್ನ ಮೈಕಲ್ ನೇರವಾಗಿ ನಾಮಿನೇಟ್ ಮಾಡಿದ್ದಾರೆ.

ಲೂಡೋ ಗೇಮ್‌ ವೇಳೆ ಡ್ರೋನ್ ಪ್ರತಾಪ್, ಸ್ನೇಹಿತ್ ಹಾಗೂ ಸಿರಿ ಸೇಫ್ ಆದರು. ಆಟದಲ್ಲಿ ಗೆದ್ದ ಸಂಗೀತಾ ಕೂಡ ಸೇಫ್ ಝೋನ್‌ಗೆ ಹೋದರು. ಆಟದಲ್ಲಿ ಸಂಗೀತಾ ಗೆದ್ದ ಕಾರಣ ಒಬ್ಬರನ್ನು ಸೇಫ್‌ ಮಾಡುವ ಅಧಿಕಾರ ಸಿಕ್ಕಿತು. ಈ ವೇಳೆ, ವರ್ತೂರು ಸಂತೋಷ್‌ ಅವರನ್ನ ಸಂಗೀತಾ ಸೇಫ್ ಮಾಡಿದರು. ಅತ್ತ ಸ್ನೇಹಿತ್‌ ಅವರು ನಮ್ರತಾ ಅವರನ್ನು ಸೇಫ್‌ ಮಾಡಿ ವಿನಯ್‌ ಅವರನ್ನು ನಾಮಿನೇಟ್‌ ಮಾಡಿದರು.

ಇದನ್ನೂ ಓದಿ: BBK Season 10: ‘ಐ ಲವ್ ಯೂ’ ಎಂದು ಪ್ರತಾಪ್‌ಗೆ ಪ್ರಪೋಸ್‌ ಮಾಡಿದ ಸಂಗೀತಾ!

ಅಡುಗೆಮನೆಯಲ್ಲಿ ಸಕ್ಕತ್ ಗೊಂದಲ!

ತುಕಾಲಿ ಅವರನ್ನು ನೀತು ನಾಮಿನೇಟ್‌ ಮಾಡಿದರು. ಇತ್ತ ವಿನಯ್‌ ಅವರು ಮೈಕಲ್‌ ಹಾಗೂ ಕಾರ್ತಿಕ್‌ ಬಳಿ ಚರ್ಚಿಸಿದ್ದಾರೆ. ವಿನಯ್‌ ಮಾತನಾಡಿ ʻʻಅಡುಗೆ ಮನೆಯಲ್ಲಿ ಒಂದು ಸಿನಿಮಾ ಆಗ್ತಿದೆ. ತುಕಾಲಿನಾ ನೀತು ನಾಮಿನೇಟ್‌ ಮಾಡಿರುವುದು. ಅಲ್ಲಿ ಎಲ್ಲ ಸಾಲ್ವ್‌ ಆಗಿತ್ತು. ನಾನು ಹೋಗಿ ಪ್ರಶ್ನೆ ಇಟ್ಟು ಬಂದೆ ಮತ್ತೆ ಅಲ್ಲಿ ಬೆಂಕಿ ಹೊತ್ತಿಕೊಂಡಿತುʼʼಎಂದು ಹೇಳಿದ್ದಾರೆ. ವಿನಯ್‌ ಎಷ್ಟೇ ಸ್ಟ್ರಾಟೆಜಿ ಮಾಡಿದರೂ ಈ ವಾರ ಅವರೂ ಕೂಡ ನಾಮಿನೇಟ್‌ ಆಗಿದ್ದಾರೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version