ಬೆಂಗಳೂರು: ಬಿಗ್‌ಬಾಸ್ (BBK SEASON 10) ಮನೆಯೊಳಗೆ ಸ್ಪರ್ಧಿಗಳು ಇಷ್ಟು ದಿನಗಳ ಕಾಲ ಮನೆಯವರಿಂದ ದೂರವಿದ್ದರು. ಮನೆಯ ಸದಸ್ಯರಿಗೆ ಬಿಗ್‌ಬಾಸ್ ಕುಟುಂಬದವರೊಂದಿಗೆ ಬೆರೆಯುವ ಅವಕಾಶ ನೀಡಿದ್ದು ಗೊತ್ತೆ ಇದೆ. ಇದೀಗ ವಿನಯ್ ಅವರ ಪತ್ನಿ ಅಕ್ಷತಾ ಅವರು ಮನೆಯೊಳಗೆ ಬಂದಿದ್ದಾರೆ. ಮಡದಿ ಎದುರು ವಿನಯ್ ಅವರು ಮಗುವಾಗಿದ್ದಾರೆ.
ಅಕ್ಷತಾ ಗೌಡ ಅವರ ಎಂಟ್ರಿಗೆ ವೀಕ್ಷಕರು ಕೂಡ ಕಾದಿದ್ದರು. ಆ ಘಳಿಗೆ ಈಗ ಬಂದಿದೆ. ಅಕ್ಷತಾ ಬಂದ ಕೂಡಲೇ ಮಲಗಿದ್ದ ವಿನಯ್ ಅವರಿಗೆ ಮುತ್ತಿಟ್ಟು ತಬ್ಬಿಕೊಂಡಿದ್ದಾರೆ. ವಿನಯ್ ಕೂಡ ಮಡದಿ ಎದುರು ಮಗುವಾದರು. ಅಕ್ಷತಾ ಮನೆಗೆ ಬರುತ್ತಿದ್ದಂತೆ ʻʻಇವರು ನಿಮಗೆ ತಿಳಿದಂತೆ ತುಂಬ ಕೋಪಿಷ್ಠ ಅಲ್ಲ. ಮಗು ಅಂತ ಮನಸ್ಸು ಇರುವವರು ಅವರುʼʼಎಂದರು. ತನಿಷಾ ಕೂಡ ʻʻವಿಲನ್ ಮುಖದಲ್ಲಿ ಹೀರೊ ಕಳೆ ಬಂದಿದೆʼʼಎಂದಿದ್ದಾರೆ. ಅದಕ್ಕೆ ವಿನಯ್ ಕೂಡ ʻʻನಾವು ವಿಲನ್ ಆಗುವ ಮುಂಚೆ ಹೀರೋನೆʼʼಎಂದಿದ್ದಾರೆ. ಇದಾದ ಬಳಿಕ ಸಂಗೀತಾ ಅವರ ಜತೆ ಅಕ್ಷತಾ ಮಾತನಾಡಬೇಕು ಎಂದರು. ಮನೆಯಲ್ಲಿ ಸದಾ ಕಿತ್ತಾಡುತ್ತಲೇ ಇರುತ್ತಿದ್ದ ವಿನಯ್ ಹಾಗೂ ಸಂಗೀತಾ, ಅಕ್ಷತಾ ಅವರ ಮುಂದೆ ಹೇಗಿರಬಹುದು ಎಂಬುದೇ ವೀಕ್ಷಕರಿಗೆ ಇರುವ ಕುತೂಹಲ. ಸಂಗೀತಾ ಹಾಗೂ ಅಕ್ಷತಾ ನಡುವೆ ಏನೆಲ್ಲ ಮಾತುಕತೆ ಆಗಲಿದೆ ಎಂಬುದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.
ವಿನಯ್ ಮನೆಯಲ್ಲಿ ಪ್ರತಿ ಬಾರಿ ಅತ್ಯುತ್ತಮ ಪಡೆದಾಗ, ಸಂತೋಷ್ ಕ್ಷಣಗಳನ್ನು ಹಂಚಿಕೊಳ್ಳುವಾಗ ಅಕ್ಷತಾ ಹಾಗೂ ಅವರ ಮಗನಿಗೆ ಅರ್ಪಿಸುತ್ತೇನೆ ಎಂದೇ ಹೇಳುತ್ತಿದ್ದರು.
ಇದನ್ನೂ ಓದಿ: BBK SEASON 10: ವಿನಯ್ ಸ್ಟ್ರಾಟಜಿಗೆ ಸಂಗೀತಾ ಅಣ್ಣ ಜೈಕಾರ!
ಅಪ್ಪ-ಮಗನ ಸಮಾಗಮಕ್ಕೆ ಸಾಕ್ಷಿಯಾಯ್ತು ದೊಡ್ಮನೆ!
ಮನೆಯವರೆಲ್ಲರೂ ಡ್ರೋನ್ ಪ್ರತಾಪ್ ಅವರಿಗೆ ಊಟ ಮಾಡಿಸಲು ಪರದಾಡಿದ್ದಾರೆ. ಅಪ್ಪ ಅಮ್ಮ ಬರುವಿಕೆಗೆ ಕಾಯುತ್ತಿರುವ ಡ್ರೋನ್ ಊಟ ಕೂಡ ಮಾಡುತ್ತಿಲ್ಲ. ಸಂಗೀತಾ ಕೂಡ ಪ್ರತಾಪ್ ಅವರಿಗೆ ʻʻನೀನು ಈ ರೀತಿ ಹಸಿದುಕೊಂಡು ಇದ್ದರೆ, ಅವರಿಗೆ ಖುಷಿ ಆಗುತ್ತಾ?ಎಂದು ಪ್ರಶ್ನೆ ಇಟ್ಟರು. ನಮ್ರತಾ ಕೂಡʻʻಒಂದೇ ಒಂದು ತುತ್ತು ತಿನ್ನು. ಖಂಡಿತ ಅಪ್ಪ ಅಮ್ಮ ಬರುತ್ತಾರೆʼʼಎಂದು ಕೈ ತುತ್ತು ತಿನಿಸಿದ್ದಾರೆ. ಪ್ರತಾಪ್ ಅವರ ಅಮ್ಮ ʻಪ್ರತಾಪುʼ ಎಂದು ಕರೆದೊಡನೆ ಡ್ರೋನ್ ಪ್ರತಾಪ್ ಮನೆಯಲ್ಲೆ ಅಮ್ಮನನ್ನು ಹುಡುಕಲು ಶುರು ಮಾಡಿದರು. ಅಪ್ಪ ಅಮ್ಮ ಮುಖ್ಯ ದ್ವಾರದಿಂದ ಎಂಟ್ರಿ ಕೊಟ್ಟಾಗ ಪ್ರತಾಪ್ ಅವರು ಅಳಲು ಶುರು ಮಾಡಿದರು. ಬಿಗ್ ಬಾಸ್ ಡೋರ್ ಲಾಕ್ ಮಾಡಿದ ಕಾರಣ ʻʻಬಿಗ್ ಬಾಸ್ ಡೋರ್ ಓಪನ್ ಮಾಡಿʼʼಎಂದು ಜೋರಾಗಿ ಅತ್ತಿದ್ದಾರೆ.ಒಂದು ಕ್ಷಣ ಅಪ್ಪ ಅಮ್ಮನನ್ನು ನೋಡಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ ಪ್ರತಾಪ್.
ಬಿಗ್‌ಬಾಸ್ ಜಿಯೋ ಸಿನಿಮಾಸ್ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ