ಬೆಂಗಳೂರು: ಬಿಗ್ ಬಾಸ್ ಸೀಸನ್ 10ರಲ್ಲಿ (BBK Season 10) ಕೇವಲ ನಾಲ್ಕೇ ದಿನಕ್ಕೆ ಮನೆಯಲ್ಲಿ ಸ್ಪರ್ಧಿಗಳ ಮಧ್ಯೆ ಬಿರುಕು ಮೂಡಿದೆ. ವಿನಯ್ ಗೌಡ ಅವರು ಸಂಗೀತಾ ಅವರ ಜತೆ ಈ ಹಿಂದೆ ಕಿರಿಕ್ ಮಾಡಿಕೊಂಡಿದ್ದರು. ಇದೀಗ ಡ್ರೋನ್ ಪ್ರತಾಪ್ ಜತೆಗೂ ಜಗಳವಾಡಿದ್ದಾರೆ. ಅಡುಗೆ ಮನೆ ಸ್ವಚ್ಛತೆಯ ಬಗ್ಗೆ ಮಾತು ಬಂದಿದ್ದು, ವಿನಯ್ ಕೋಪದಲ್ಲಿ ʻʻನಿನ್ನ ಡ್ರೋನ್ ರೆಕ್ಕೆ ಪುಕ್ಕ ಕಿತ್ತಾಕ್ತೀನಿʼʼಎಂದು ಡ್ರೋನ್ ಪ್ರತಾಪ್‌ಗೆ ಹೇಳಿದ್ದಾರೆ.
ಏನಿದು ಕಿರಿಕ್?
ಕಾರ್ತಿಕ್ ಗೌಡ ಅವರು ಮನೆಯ ಸದಸ್ಯರಿಗೆ ಅಡುಗೆ ಮನೆಯಲ್ಲಿ ಸ್ವಚ್ಛತೆ ಬಗ್ಗೆ ನಿಮಗೇನಾದರು ಸಮಸ್ಯೆನಾ? ಎಂದು ಕೇಳಿದ್ದಾರೆ. ಆಗ ಸಿರಿ ಅವರು ಯಾರು ಹೇಳಿದ್ದು? ಎಂದು ಕೇಳಿದ್ದಾರೆ. ಡ್ರೋನ್ ಪ್ರತಾಪ್ ಅವರು ವಿನಯ್ ಹೇಳಿರುವುದಾಗಿ ಅಂದರು. ಅಷ್ಟೇ ಅಲ್ಲದೇ ನೀವೇನು ಅಡುಗೆ ಮಾಡುತ್ತೀರಾ ಎಂಬುದು ನಮಗೆ ಗೊತ್ತು ಎಂದು ಅವರು ಹೇಳಿದರು ಎಂದರು. ವಿನಯ್ ಈ ಮಾತು ಕೇಳಿದ ಕೂಡಲೇ ಸಿಟ್ಟಗಿದ್ದಾರೆ. ವಿನಯ್ ಅವರು ಪ್ರತಾಪ್‌ಗೆ ʻʻನಾನು ಕಣ್ಣಲ್ಲಿ ಕಣ್ಣು ಇಟ್ಟು ಮುಖದ ಮೇಲೆ ಹೇಳುತ್ತೇನೆ. ಹಿಂದೆ ಮಾತನಾಡಲ್ಲ. ಗಲೀಜಾಗಿ ಮಾಡ್ತಾರೆ ಎನ್ನುವ ರೀತಿಯಲ್ಲಾದ್ರೂ ನಾನು ಹೇಳಿದ್ದೇನಾ? ನಿಮ್ಮದು ತಪ್ಪಿದೆ ʻʻನಿನ್ನ ಡ್ರೋನ್ ರೆಕ್ಕೆ ಪುಕ್ಕ ಕಿತ್ತಾಕ್ತೀನಿʼʼಎಂದು ವಿನಯ್ ಅವರು ಪ್ರತಾಪ್‌ಗೆ ಖಡಕ್ ವಾರ್ನಿಂಗ್ ಮಾಡಿದ್ದಾರೆ.
ಇದೀಗ ಈ ಪ್ರೋಮೊ ಔಟ್ ಆದ ಕೂಡಲೇ ನೋಡುಗರು ಪ್ರತಾಪ್ ಅವರಿಗೆ ಸಾತ್ ಕೊಟ್ಟಿದ್ದಾರೆ. ಒಬ್ಬರು ಕಮೆಂಟ್ ಅಲ್ಲಿ ʻಪ್ರತಾಪ್‌ಗೆ ಬೈಯೋದು ಹೀಯಾಳಿಸಿ ಮಾತಾಡದು ಮಾಡ್ತಿದೀರಾ ಆದರೆ ನಮಗೆ ಪ್ರತಾಪ್ ಇಷ್ಟ ಆಗುತ್ತಿದ್ದಾನೆ. ರೆಕ್ಕೆ ಪುಕ್ಕ ಕಿತ್ರೆ ನಾವು ಪ್ರೇಕ್ಷಕರು ನಿನ್ನ (ವಿನಯ್) ಪುಕ್ಕ ಕೀಳ್ತೀವಿ ಟಾಸ್ಕ್ ಅಲ್ಲಿ ನಿನ್ನ (ವಿನಯ್) ರೆಕ್ಕೆ ಪುಕ್ಕ ಎಲೋಗಿತ್ತು?ʼʼಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ʻʻಈ ಸಲ ಸುದೀಪ್ ಸರ್ ಈ ಸಮರ್ಥರ ಬೆವರಿಳಿಸುತ್ತಾರೆ. ಅದಂತೂ ಸತ್ಯ. ಒಬ್ಬ ವ್ಯಕ್ತಿಯ ಹೊರಗಿನ ವಿಷಯ ಇಟ್ಟುಕೊಂಡು ಎಷ್ಟು ಗೇಲಿ ಮಾಡ್ತಾರೆ ಈ ಜನಗಳುʼʼಎಂದು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: BBK Season 10: ಇಶಾನಿ- ಮೈಕೆಲ್ ನಡುವೆ ಸಮ್‌ಥಿಂಗ್; ನಥಿಂಗ್ ಅಂತಿದ್ದಾರೆ ಸಂಗೀತಾ-ಕಾರ್ತಿಕ್!
ಕಲರ್ಸ್ ಕನ್ನಡ ಹೊಸ ಪ್ರೋಮೊ
5ನೇ ದಿನಕ್ಕೆ ಬಿಗ್‌ಬಾಸ್ ಶೋ ಕಾಲಿಟ್ಟಿದೆ. ಮೊದಲ ದಿನ ಶಾಸಕರಾದ ಪ್ರದೀಪ್ ಈಶ್ವರ್ ಮನೆಯೊಳಗೆ ಹೋಗಿದ್ದು ಭಾರೀ ಚರ್ಚೆಯಾಗಿತ್ತು. ಬಳಿಕ ಪ್ರಥಮ್ ಎಂಟ್ರಿ ಕೊಟ್ಟಿದ್ದರು.