ಬೆಂಗಳೂರು: ಕಾಯುವಿಕೆ ಕೊನೆಗೊಳ್ಳುತ್ತಿದೆ! ಬಿಗ್‌ಬಾಸ್ ಕನ್ನಡ 10ನೇ (BBK Season 10) ವರ್ಷಾಚರಣೆಯ ಸೀಸನ್‌ಗೆ ಕ್ಷಣಗಣನೆ ಆರಂಭವಾಗಿದೆ. ಕನ್ನಡ ಬಿಗ್ ಬಾಸ್ ಹೊಸ ಸೀಸನ್ ಇಂದು (ಅ.8)ಆರಂಭಗೊಳ್ಳಲಿದೆ. ದೈನಂದಿನ ಸಂಚಿಕೆಗಳು ಪ್ರತಿದಿನ ರಾತ್ರಿ 9.30ಕ್ಕೆ ಪ್ರಸಾರವಾಗುತ್ತವೆ. ಆದರೆ ಬಿಗ್‌ಬಾಸ್ ಕನ್ನಡದ ಹತ್ತನೇ ವರ್ಷಾಚರಣೆಯ ಈ ಸೀಸನ್ , ವಯಕಾಮ್18ನ ಒಟಿಟಿ ಫ್ಲ್ಯಾಟ್‌ಫಾರಂ ಆದ ಜಿಯೋ ಸಿನಿಮಾದಲ್ಲಿ, 24ಗಂಟೆ ಲೈವ್ ಚಾನಲ್‌ನಲ್ಲಿ ಉಚಿತವಾಗಿ ವೀಕ್ಷಿಸುವ ಸೌಲಭ್ಯವನ್ನು ಕಲ್ಪಿಸಲಾಗಿದೆ.
ನೂರು ದಿನಗಳ ಈ ರಂಜನೀಯ ಹಬ್ಬದ ಪ್ರತಿ ಕ್ಷಣಗಳನ್ನು ಆಸ್ವಾದಿಸಲು ಜಿಯೋ ಸಿನಿಮಾ 24 ಗಂಟೆ ಲೈವ್ ಚಾನಲ್ ಅವಕಾಶ ಮಾಡಿಕೊಡುತ್ತಿದೆ. ವಿಶಿಷ್ಟವೂ ವಿನೂತನವೂ ಆದ ಸಂವಾದ ಚಟುವಟಿಕೆಗಳ ಮೂಲಕ ಅಭಿಮಾನಿಗಳನ್ನು ರಂಜಿಸಲು ಜಿಯೋ ಸಿನಿಮಾ ಸಜ್ಜುಗೊಂಡಿದೆ.
ಬಿಗ್ ನ್ಯೂಸ್
ಬಿಗ್‌ಬಾಸ್ ಮನೆಯೊಳಗೆ ನಡೆದ ಘಟನಾವಳಿಗಳು, ಟಾಸ್ಕ್‌ಗಳ ವಿವರಗಳನ್ನು ‘ಬಿಗ್ ನ್ಯೂಸ್’ ನ್ಯೂಸ್ ಬುಲೆಟಿನ್ ರೂಪದಲ್ಲಿ ಪ್ರೇಕ್ಷಕರಿಗೆ ತಲುಪಿಸುತ್ತದೆ. ದೊಡ್ಡಮನೆಯೊಳಗಿನ ರೋಚಕ ಘಟನೆಗಳ ವರದಿಯನ್ನು ಇಲ್ಲಿ ಆಸ್ವಾದಿಸಬಹುದು.
ಅನ್‌ಸೀನ್ ಕಥೆಗಳು
ಬಿಗ್‌ಬಾಸ್ ಮನೆಯೆಂದರೇ ಹಲವು ಕಥೆಗಳ ಗುಚ್ಛ. ಪ್ರತಿದಿನವೂ ಹತ್ತು ಹಲವು ರೋಚಕ ಕಥೆಗಳು ಇಲ್ಲಿ ಹುಟ್ಟಿಕೊಳ್ಳುತ್ತವೆ. ಅವುಗಳಲ್ಲಿ ಕೆಲವಷ್ಟನ್ನೇ ದೈನಂದಿನ ಎಪಿಸೋಡ್‌ಗಳಲ್ಲಿ ನೋಡಲು ಸಾಧ್ಯ. ಎಪಿಸೋಡ್‌ಗಳಲ್ಲಿ ಇಲ್ಲದ, ತೆರೆಯ ಹಿಂದಿನ ಕಥೆಗಳನ್ನು ನೀವು ಜಿಯೋ ಸಿನಿಮಾದ 24 ಗಂಟೆ ಲೈವ್‌ನಲ್ಲಿ ಉಚಿತವಾಗಿ ನೋಡಬಹುದು. ಇಂಥಹ ರೋಚಕ ಕಥೆಗಳನ್ನು ‘ಅನ್‌ಸೀನ್ ಕಥೆಗಳು’ ನಿಮಗೆ ಕಟ್ಟಿಕೊಡುತ್ತದೆ.
ಇದನ್ನೂ ಓದಿ: BBK Season 10: ಅಸಲಿ ಪಟ್ಟಿ ಹೊರಬಿತ್ತು? ಯಾರೆಲ್ಲ ದೊಡ್ಮನೆಗೆ ಎಂಟ್ರಿ? ಹಿನ್ನೆಲೆ ಏನು?
ಲೈವ್ ಶಾರ್ಟ್ಸ್
ಬಿಗ್‌ಬಾಸ್ ಮನೆಯೊಳಗೆ ಅವತ್ತು ನಡೆದ ಮುಖ್ಯ ಘಟನಾವಳಿಗಳನ್ನು ಸಂಕ್ಷಿಪ್ತವಾಗಿ ರಿಕ್ಯಾಪ್ ಮಾಡಿ ತೋರಿಸುವ ಪ್ರಯತ್ನವೇ ‘ಲೈವ್ ಶಾರ್ಟ್ಸ್’. ಲೈವ್‌ನಲ್ಲಿ ಮಿಸ್ ಮಾಡಿಕೊಂಡ ಮುಖ್ಯ ಘಟನೆಗಳನ್ನು ಲೈವ್ ಶಾರ್ಟ್ಸ್ ಮೂಲಕ ಆಸ್ವಾದಿಸಬಹುದು.
ಹೈಪ್ ಚಾಟ್
ಇದು ಬಿಗ್‌ಬಾಸ್ ಮನೆಯೊಳಗಿನ ಘಟನಾವಳಿಗೆಜಿಯೋ ಸಿನಿಮಾದಲ್ಲಿ ಪ್ರೇಕ್ಷಕರಿಗೆ ಪ್ರತಿಕ್ರಿಯಿಸಲು, ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಮಾಡಿಕೊಡುವ ವೇದಿಕೆ. ಇಲ್ಲಿ ಪ್ರೇಕ್ಷಕರು ಚಾಟ್ ಮೂಲಕ ತಮ್ಮ ಅಭಿಪ್ರಾಯಗಳನ್ನು ದಾಖಲಿಸಬಹುದು.
ವಿಡಿಯೊ ವಿಚಾರ
ಇದು ಬಿಗ್‌ಬಾಸ್ ಶೋನ ಭಾಗವಾಗಲು ಪ್ರೇಕ್ಷಕರಿಗೆ ಇರುವ ಇನ್ನೊಂದು ವಿನೂತನ ಅವಕಾಶ. ಜಿಯೋ ಸಿನಿಮಾದ ‘ವಿಡಿಯೊ ವಿಚಾರ’ದ ಮೂಲಕ ಪ್ರೇಕ್ಷಕರು ಮನೆಯೊಳಗಿನ ಅಭ್ಯರ್ಥಿಗಳ ಬಗ್ಗೆ, ಟಾಸ್ಕ್‌ಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ವಿಡಿಯೊ ಮಾಡಿ ಹಾಕಬಹುದು.
ಇದನ್ನೂ ಓದಿ: BBK Season 10: ಯಾರ ಕತೆ ಶುರು? ಯಾವ ಕತೆ ಫಿನಿಷ್? ಆಟ ಶುರುವಾಗೋ ಮುಂಚೆ ಡ್ರೋನ್ ಪ್ರತಾಪ್‌ಗೆ ಕಿಚ್ಚ ಖಡಕ್ ಪ್ರಶ್ನೆ!
ಮೀಮ್ ದ ಮೊಮೆಂಟ್
ಬಿಗ್‌ಬಾಸ್ ಮನೆಯೊಳಗೆ ರಸವತ್ತಾದ ಕ್ಷಣಗಳಿಗೇನೂ ಕೊರತೆಯಿರುವುದಿಲ್ಲ. ಅದಕ್ಕೆ ನೀವೇ ಮೀಮ್ಸ್ ಕ್ರಿಯೇಟ್ ಮಾಡುವುದರ ಮೂಲಕ ಸ್ಪಂದಿಸಬಹುದು. ಜಿಯೋ ಸಿನಿಮಾದಲ್ಲಿನ ‘ಮೀಮ್ ದ ಮೊಮೆಂಟ್’ ಪ್ರೇಕ್ಷಕರಿಗೆ ಮನೆಯೊಳಗಿನ ಸ್ಪರ್ಧಿಗಳ ನಡವಳಿಕೆಯ ಮೇಲೆ ಮೀಮ್ಸ್ ಕ್ರಿಯೇಟ್ ಮಾಡುವ ಅವಕಾಶವನ್ನೂ ಕಲ್ಪಿಸುತ್ತಿದೆ.
ವಾಚ್ ಆ್ಯಂಡ್ ವಿನ್
ಜಿಯೋ ಸಿನಿಮಾದಲ್ಲಿ ಬಿಗ್‌ಬಾಸ್ ಕನ್ನಡವನ್ನು ಉಚಿತವಾಗಿ ನೋಡುವುದರ ಜತೆಗೆ ಬಹುಮಾನವನ್ನೂ ಗೆಲ್ಲುವ ಅವಕಾಶವಿದೆ. ಕಲರ್ಸ್ ಕನ್ನಡದಲ್ಲಿ ಪ್ರತಿದಿನದ ಎಪಿಸೋಡ್ ನೋಡಿ, ಅಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರವನ್ನು ಜಿಯೋ ಸಿನಿಮಾದಲ್ಲಿ ಕೊಡಬೇಕು. ಪ್ರತಿದಿನವೂ ಸರಿ ಉತ್ತರ ನೀಡಿದ ಒಬ್ಬರಿಗೆ ಬಹುಮಾನ ಗೆಲ್ಲುವ ಸುವರ್ಣಾವಕಾಶ ಸಿಗುತ್ತದೆ.