Site icon Vistara News

BBK Season 10: ನಿಮ್ಮ ಜತೆ ನಾವಿದ್ದೇವೆ ʻಡ್ರೋನ್‌ʼ ಎಂದ ಪ್ರೇಕ್ಷಕರು; ಕಿಚ್ಚನ ಚಪ್ಪಾಳೆಗೆ ಬೇಡಿಕೆ!

drone prathap bigg boss Kannada

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10 (BBK Season 10) ಶುರುವಾಗಿ ಒಂದು ವಾರ ಕಳೆದಿದೆ. ಸ್ಪರ್ಧಿಗಳ ಮಧ್ಯೆ ಪೈಪೋಟಿ ಹೆಚ್ಚಾಗಿದೆ. ಈ ವಾರ ಮನೆಯಲ್ಲಿ ಉಳಿಯುವವರು ಯಾರು? ಹೊರಗೆ ಹೋಗುವವರು ಯಾರು? ಎಂಬ ಲೆಕ್ಕಾಚಾರ ಕೂಡ ಶುರುವಾಗಿದೆ. ದಿನ ಕಳದಂತೆ ಡ್ರೋನ್‌ ಪ್ರತಾಪ್‌ ಮನೆಯಲ್ಲಿ ಸಖತ್‌ ಹೈಲೈಟ್‌ ಕೂಡ ಆಗುತ್ತಿದ್ದಾರೆ. ಹಲವಾರು ಟ್ರೋಲ್‌ ಪೇಜ್‌ಗಳು, ಮೀಮ್‌ಗಳು ಸೇರಿದಂತೆ ಡ್ರೋನ್‌ ಪ್ರತಾಪ್‌ಗೆ ಸಾಥ್‌ ಕೊಡುತ್ತಿದೆ. ನಿಮ್ಮ ಜತೆ ನಾವಿದ್ದೇವೆ ʻಡ್ರೋನ್‌ʼ ಎಂದು ಸಾರಿ ಸಾರಿ ಹೇಳುತ್ತಿದ್ದಾರೆ.

ಬಿಗ್‌ ಬಾಸ್‌ ಇಂಟ್ರೆಸ್ಟ್‌ ಇಲ್ಲ ಎಂದವರೇ ಪ್ರಬಲ ಸ್ಪರ್ಧಿಯಾದ್ರಾ?

ಡ್ರೋನ್‌ ವಿಚಾರವಾಗಿ ಪ್ರತಾಪ್‌ ಟ್ರೋಲ್‌ಗೆ ಗುರಿಯಾಗಿದ್ದು ಗೊತ್ತೇ ಇದೆ. ಇದೇ ವಿಚಾರ ಇಟ್ಟುಕೊಂಡು ವರ್ತೂರ್ ಸಂತೋಷ್‌ ಹಾಗೂ ತುಕಾಲಿ ಸಂತೋಷ್‌ ಡ್ರೋನ್‌ ಪ್ರತಾಪ್‌ ಕಾಳೆಯುತ್ತಿರುತ್ತಾರೆ. ಕ್ಯಾಪ್ಟನ್‌ ಸ್ನೇಹಿತ್‌ ಕೂಡ ʻಡೋಂಗಿʼ ಎಂದು ಪ್ರತಾಪ್‌ನನ್ನು ಕರೆದು ಮನೆಯಲ್ಲಿ ವಾದವೂ ಆಯಿತು. ಇಷ್ಟೆಲ್ಲಾ ಆದ ಮೇಲೆ ಕಳೆದ ಸಂಚಿಕೆಯಲ್ಲಿ ಪ್ರತಾಪ್‌ ಬಾತ್‌ರೂಮ್‌ನಲ್ಲಿ ಬಿಕ್ಕಿ ಬಿಕ್ಕಿ ಅತ್ತರು. ಬಳಿಕ ಸ್ಪರ್ದಿಗಳು ಪ್ರತಾಪ್‌ಗೆ ಕ್ಷಮೆ ಕೂಡ ಕೇಳಿದರು. ಇಷ್ಟೆಲ್ಲ ಅವಾಂತರಗಳನ್ನು ಎದುರಿಸುತ್ತಿರುವ ಡ್ರೋನ್‌ ಪ್ರತಾಪ್‌ ʻʻನನಗೆ ಬಿಗ್‌ ಬಾಸ್‌ ಇಂಟ್ರೆಸ್ಟ್‌ ಇಲ್ಲʼʼ ಎಂದು ಈ ಹಿಂದೆ ಹೇಳಿದ್ದರು.

ವೈರಲ್‌ ಆಗ್ತಿದೆ ಹಳೆಯ ವಿಡಿಯೊ

ದೊಡ್ಮನೆ ಬರುವುದಕ್ಕೂ ಮುಂಚೆ ಸಂದರ್ಶನವೊಂದರಲ್ಲಿ ಡ್ರೋನ್‌ ಪ್ರತಾಪ್‌ ʻʻನನಗೆ ಮಾಡುವುದಕ್ಕೆ ತುಂಬ ಕೆಲಸವಿದೆ. ಒಂದು ಕಡೆ ಕೂರುವುದಕ್ಕೆ ನನಗೆ ಆಗಲ್ಲ. ಬಿಗ್‌ ಬಾಸ್‌ ಶೋ ಬಗ್ಗೆ ನನಗೆ ಏನೂ ಐಡಿಯಾ ಇಲ್ಲ. ಇಂಟ್ರೆಸ್ಟ್‌ ಇಲ್ಲದ ಜಾಗಕ್ಕೆ ಹೋಗಿ ಏನು ಮಾಡೋಣʼʼ ಎಂದಿದ್ದರು. ಇದೀಗ ಇಷ್ಟೆಲ್ಲ ಟಾರ್ಗೆಟ್‌ ಆದ ಮೇಲೆ ʻʻಕೊನೆಯವರೆಗೂ ಇರಬೇಕು ಎಂದು ನಿರ್ಧಾರ ಮಾಡಿದ್ದೇನೆ. ಅದು ಏನಾದರೂ ಪರವಾಗಿಲ್ಲ. ಅದೆಷ್ಟು ದಿವಸ ಆಗುತ್ತೋ ಅಷ್ಟು ದಿನ ಆಡೇ ಆಡ್ತೀನಿʼʼಎಂದು ದೃಢ ನಿರ್ಧಾರ ಮಾಡಿದ್ದಾರೆ.

ಅದೇನೇ ಇದ್ದರು ಡ್ರೋನ್‌ ಪ್ರತಾಪ್‌ ಅವರ ಸ್ವಭಾವ ವೀಕ್ಷಕರಿಗೆ ಇಷ್ಟವಾಗುತ್ತಿದೆ. ಕಮೆಂಟ್‌ ಮೂಲಕ ಸ್ಫೂರ್ತಿ ತುಂಬುವಂತಹ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: BBK Season 10: ನಮ್ರತಾ ಕಣ್ಣೀರಿಗೆ ʻಬಿಗ್‌ ಬಾಸ್‌ʼ ಕಾರಣವಾದ್ರಾ? ಕುಟುಂಬದ ಏಳು ಬೀಳು ನೆನೆದ ಸ್ಪರ್ಧಿ!

ಪ್ರೇಕ್ಷಕರ ಕಣ್ಣು ಡ್ರೋನ್‌ ಮೇಲೆ!

ಡ್ರೋನ್‌ ಪ್ರತಾಪ್‌ ಅವರ ಇಷ್ಟೂ ದಿನ ಆಟಗಳನ್ನು ಕಂಡು ಪ್ರೇಕ್ಷಕರು ಫಿದಾ ಆಗಿದ್ದಾರೆ. ಕೆಲವು ಸ್ಪರ್ಧಿಗಳು ಡ್ರೋನ್‌ ಅವರನ್ನು ತೇಜೋವಧೆ ಮಾಡುತ್ತಿರುವುದು ನಿಲ್ಲಿಸುತ್ತಿಲ್ಲ. ಆದರೆ ವೀಕ್ಷಕರು ಮಾತ್ರ ಡ್ರೋನ್‌ ಪರ ನಿಂತಿದ್ದಾರೆ. ಒಬ್ಬರು ʻʻನಾನು ಯಾವತ್ತು ಬಿಗ್ ಬಾಸ್ ಅಲ್ಲಿ ವೋಟ್ ಮಾಡಿಲ್ಲ, ಈ ಬಾರಿ ಮಾಡ್ತೀನಿ ಅದು ನಿಮಗೆ ಮಾತ್ರ ಡ್ರೋನ್‌ ಪ್ರತಾಪ್‌. ಗುರು ಯಾರು ಮಾಡದೇ ಇರೋ ತಪ್ಪೇನು ನೀನು ಮಾಡಿಲ್ಲ. ಬಾ ಗುರು, ಸಾಲ ಮಾಡಿ ಆದ್ರೂ ತುಪ್ಪ ತಿನ್ನಬೇಕು. ನಿನ್ನ ಮೇಲೆ ನಿನಗೆ ನಂಬಿಕೆ ಇರಲಿʼ ʼಎಂದು ಕಮೆಂಟ್‌ ಮಾಡಿದ್ದಾರೆ.  

ಇದನ್ನೂ ಓದಿ: BBK Season 10: ಜೈಲು ಸೇರಿದ ಭಾಗ್ಯಶ್ರೀ; ಸೀರೆಯುಟ್ಟಿದ್ದೇ ತಪ್ಪಾಯ್ತಾ? ನನಗೇನು ವಯಸ್ಸಾಗಿಲ್ಲ ಎಂದು ಕಣ್ಣೀರು!

ಇನ್ನೊಬ್ಬರು ʻʻಒಂದೇ ದಿನದಲ್ಲಿ ಎಷ್ಟೊಂದು ಸಪೋರ್ಟ್. ಇದ್ರಲ್ಲೇ ಗೊತ್ತಾಗತ್ತೆ ನಮ್ಮ ಕನ್ನಡಿಗರ ಪವರ್. ಎಲ್ಲರೂ ಪ್ರತಾಪ್ ಅವರಿಗೆ ಮಾಡಿ ವೋಟ್ʼʼ ಎಂದು ಕಮೆಂಟ್‌ ಮಾಡಿದ್ದಾರೆ. ʻʻಕೆಲವೊಬ್ಬರು ಹೇಳುತ್ತಿದ್ದಾರೆ ಇದು ನಾಟಕ ಎಂದು. ಆದರೆ ಅಲ್ಲಿ ಎಲ್ಲರೂ ನಾಟಕವಾಡುತ್ತಿದ್ದಾರೆ. ಆದರೆ ಪ್ರತಾಪ್ ಮಾತ್ರ ತನ್ನ ತಪ್ಪನ್ನು ತಿದ್ದಿಕೊಳ್ಳುತ್ತಿದ್ದಾನೆ. ನಾವು ಅವರಿಗೆ ಸಪೋರ್ಟ್ ಮಾಡೋದು. ಕಷ್ಟದಲ್ಲಿದ್ದವನು ಗೆಲ್ಲಬೇಕುʼʼ ಎಂದು ಕಮೆಂಟ್‌ ಮಾಡಿದ್ದಾರೆ. ʻʻಈ ವಾರದ ಕಿಚ್ಚನ ಮೆಚ್ಚುಗೆ ಚಪ್ಪಾಳೆ ಪ್ರತಾಪ್‌ಗೆʼʼ ಸಿಗಬೇಕು ಎಂದು ಕಮೆಂಟ್‌ ಮಾಡಿದ್ದಾರೆ. ʻʻಶನಿವಾರ ಪ್ರತಾಪ್ ಅವರಿಗೆ ನ್ಯಾಯ ದೊರಕಲಿಲ್ಲ ಎಂದಾದರೆ ಬಿಗ್‌ ಬಾಸ್‌ ಕಾರ್ಯಕ್ರಮ ನೋಡಲ್ಲʼʼ ಎಂದು ಇನ್ನೊಬ್ಬರು ಕಮೆಂಟ್‌ ಮಾಡಿದ್ದಾರೆ. ಈ ರೀತಿ ಸಾವಿರಾರು ಕಮೆಂಟ್‌ಗಳು ಪ್ರತಾಪ್‌ ಅವರಿಗೆ ಬರುತ್ತಿದೆ. ಹೀಗಾಗಿ ಪ್ರತಾಪ್‌ ವೀಕ್ಷಕರ ಮೆಚ್ಚಿನ ಸ್ಪರ್ಧಿಯಾಗಿ ಹೊರಹೊಮ್ಮುತ್ತಿದ್ದಾರೆ.

Exit mobile version