ಬೆಂಗಳೂರು: ಬಿಗ್ ಬಾಸ್ ಕಲರ್ಸ್ ಕನ್ನಡದಲ್ಲಿ (BBK Season 10) ಎರಡು ವಾರಗಳನ್ನು ಪೂರೈಸಿದೆ. ಇದರ ಬೆನ್ನಲ್ಲೇ ಕಲರ್ಸ್ ಕನ್ನಡ ʻಬೃಂದಾವನʼ ಧಾರಾವಾಹಿಯನ್ನು ಮತ್ತೆ ಕೊಡುಗೆಯಾಗಿ ವೀಕ್ಷಕರಿಗೆ ಕೊಡುತ್ತಿದೆ. ಇದೇ ಸೋಮವಾರದಿಂದ (ಅ.23) ಧಾರಾವಾಹಿ ಪ್ರಸಾರ ಕಾಣುತ್ತಿದೆ. ಆದರೀಗ ಇಡೀ ಬೃಂದಾವನ ತಂಡ ಬಿಗ್ ಬಾಸ್ ಮನೆಗೆ ಭೇಟಿ ಕೊಟ್ಟಿದೆ. ಅಷ್ಟೇ ಅಲ್ಲದೇ ‘ಕನ್ನಡತಿ’ ಧಾರಾವಾಹಿ ಮೂಲಕ ಅಮ್ಮಮ್ಮ ಎಂದೇ ಖ್ಯಾತಿ ಪಡೆದ ಚಿತ್ಕಲಾ ಬಿರಾದಾರ್ ಅವರು ಕಾರ್ತಿಕ್ ಅವರಿಗೆ ಕ್ಯೂಟ್ ಪ್ರಶ್ನೆ ಇಟ್ಟಿದ್ದಾರೆ.
ಕಾರ್ತಿಕ್ ಹುಡುಗಿ ಹೇಗಿರಬೇಕು?
ದೊಡ್ಮನೆಗೆ 36 ಜನರ ದೊಡ್ಡ ಕುಂಟುಂಬ ಬೃಂದಾವನ ಸರ್‌ಪ್ರೈಸ್ ವಿಸಿಟ್ ಕೊಟ್ಟಿದೆ. ಬಾಳ ಸಂಗಾತಿ ಹೇಗಿರಬೇಕು?ಎಂದು ಅಮ್ಮಮ್ಮ ಕಾರ್ತಿಕ್ ಅವರಿಗೆ ಪ್ರಶ್ನೆ ಇಟ್ಟರು. ಆಗ ಕಾರ್ತಿಕ್ ಮಾತನಾಡಿ ʻʻಲಕ್ಷಣವಾಗಿರಬೇಕು. ಅಚ್ಚ ಕನ್ನಡದವಳು ಆಗಿರಬೇಕು. ಇಂಡಿಪೆಂಡೆಂಟ್ ಆಗಿರಬೇಕು. ಆದರೂ ನಾನೇ ಅವಳನ್ನು ನೋಡ್ಕೋಬೇಕುʼʼಎಂದು ಸಂಗೀತಾ ಪಕ್ಕದಲ್ಲೇ ಕುಳಿತು ಹೇಳಿದ್ದಾರೆ.
ಇನ್ನೂ ಮನೆಮಂದಿ ಕೂಡ ನಾಟಕ ಸೇರದಂತೆ ಮನರಂಜನಾ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿತ್ತು. ಕಲರ್ಸ್ ಕನ್ನಡ ಇದೀಗ ಪ್ರೋಮೊ ಹಂಚಿಕೊಂಡಿದ್ದು, ಇಂದು ರಾತ್ರಿ ಎಪಿಸೋಡ್ ಪ್ರಸಾರ ಕಾಣಲಿದೆ.
‘ಪುಟ್ಟಗೌರಿ ಮದುವೆ’, ‘ಮಂಗಳಗೌರಿ ಮದುವೆ’, ‘ರಂಗನಾಯಕಿ’, ‘ನಾಗಿಣಿ- 2’, ‘ಗೀತಾ’, ‘ರಾಣಿ’ ಮುಂತಾದ ಧಾರಾವಾಹಿಗಳನ್ನು ನಿರ್ದೇಶಿಸಿರುವ ಕೆ. ಎಸ್ ರಾಮ್ ಜೀ ಈಗ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಮತ್ತೆ ಬೃಂದಾವನ(Brundavana Serial Kannada) ಧಾರಾವಾಹಿ ಮೂಲಕ ಹೊಸ ಕತೆಯನ್ನು ಹೊತ್ತು ತರುತ್ತಿದ್ದಾರೆ.
ಇದನ್ನೂ ಓದಿ: BBK Season 10: ಎರಡನೇ ವಾರ ರಕ್ಷಕ್ ಬುಲೆಟ್‌ಗೆ ಕ್ಯಾಪ್ಟನ್ ಪಟ್ಟ; ಫೇಲಾದ ಸ್ನೇಹಿತ್!
ಸಿಹಿ ಸುದ್ದಿ ಕೊಡಲು ಬರ್ತಾ ಇದೆ ‘ಬೃಂದಾವನ’
‘ಪುಟ್ಟಗೌರಿ ಮದುವೆ’, ‘ಮಂಗಳಗೌರಿ ಮದುವೆ’, ‘ರಂಗನಾಯಕಿ’, ‘ನಾಗಿಣಿ- 2’, ‘ಗೀತಾ’, ‘ರಾಣಿ’ ಮುಂತಾದ ಧಾರಾವಾಹಿಗಳನ್ನು ನಿರ್ದೇಶಿಸಿರುವ ಕೆ. ಎಸ್ ರಾಮ್ ಜೀ ಈಗ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಮತ್ತೆ ಬೃಂದಾವನ(Brundavana Serial Kannada) ಧಾರಾವಾಹಿ ಮೂಲಕ ಹೊಸ ಕತೆಯನ್ನು ಹೊತ್ತು ತರುತ್ತಿದ್ದಾರೆ. ಈ ಧಾರಾವಾಹಿ ಸೋಮವಾರದಿಂದ ರಾತ್ರಿ 8 ಗಂಟೆಗೆ ಪ್ರಸಾರ ಕಾಣಲಿದೆ. ಈ ಕುಟುಂಬದಲ್ಲಿ 36 ಜನ ಇದ್ದಾರೆ. ಮೊಮ್ಮೊಗನಿಗೆ ಮದುವೆ ಮಾಡಬೇಕು ಎನ್ನುವುದು ಸುಧಾ ಮೂರ್ತಿ (ಚಿತ್ಕಲಾ ಬಿರಾದಾರ್) ಆಸೆ.
ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಗೀತಾ’ ಮತ್ತು ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ರಾಣಿ’ ಧಾರಾವಾಹಿಯನ್ನು ರಾಮ್ ಜೀ ನಿರ್ದೇಶಿಸುತ್ತಿದ್ದಾರೆ. ರಾಮಾಚಾರಿ’ ಸೇರಿ ಹಲವು ಧಾರಾವಾಹಿಗಳು ಇನ್ನು ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣುತ್ತಿದ್ದು, ಇವುಗಳ ಜತೆಗೆ ಈಗ ‘ಬೃಂದಾವನ’ ಧಾರಾವಾಹಿ ಕೂಡ ಪ್ರಸಾರ ಕಾಣಲಿದೆ.