ಬೆಂಗಳೂರು: ವರ್ತೂರು ಸಂತೋಷ್ ಕಾರಣದಿಂದ ಕನ್ನಡ ಬಿಗ್ ಬಾಸ್ ಸೀಸನ್ 10(BBK Season 10) ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಹಿಂದೆ ಹುಲಿ ಉಗುರು ಧರಿಸಿದ್ದ ಕಾರಣಕ್ಕೆ ಬಿಗ್ ಬಾಸ್ ಮನೆಯಿಂದಲೇ ಬಂಧನಕ್ಕೆ ಒಳಗಾಗಿದ್ದ ಅವರು ಬಳಿಕ ಸ್ಪರ್ಧೆ ಮುಂದುವರಿಸಿದ್ದರು. ಬಳಿಕ ಶೋ ಬಿಟ್ಟು ಮಧ್ಯದಿಂದಲೇ ಹೊರ ಹೋಗುವುದಾಗಿ ಹೇಳಿ ಸುದ್ದಿಯಾಗಿದ್ದರು. ಅವರಿಗೆ 2 ವರ್ಷಗಳ ಹಿಂದೆಯೇ ಮದುವೆಯಾಗಿದೆ ಎನ್ನುವ ವಿಚಾರ ಇದೀಗ ಮುನ್ನಲೆಗೆ ಬಂದಿದೆ. ಜತೆಗೆ ವರ್ತೂರ್ ಅಮ್ಮ ಬಂದು ಹೋದಾಗಿನಿಂದ ನಮ್ರತಾ ಅವರು ತನಿಷಾ ಅವರಿಗೆ ಕಾಲೆಳೆದಿದ್ದಾರೆ. ಇದೀಗ ನೆಟ್ಟಿಗರು ತನಿಷಾಗೆ ಇನ್ನು ವರ್ತೂರ್ ಬಗ್ಗೆ ಗೊತ್ತಿಲ್ಲ ಪಾಪ ಎಂದು ಕಮೆಂಟ್ ಮಾಡಿದ್ದಾರೆ.
ಬಿಗ್ ಬಾಸ್ ಸೀಸನ್ 10ರ ದೀಪಾವಳಿಯಂದು ಸ್ಪರ್ಧಿಗಳ ಕುಟುಂಬ ಸದಸ್ಯರ ಇಷ್ಟವಾದ ಫುಡ್‌ಗಳನ್ನು ಕಳುಹಿಸಿದ್ದರು. ಆದರೆ ವರ್ತೂರ್ ಅವರಿಗೆ ಮಾತ್ರ ಬಂದಿರಲಿಲ್ಲ. ಇದರಿಂದ ಬೇಸರಗೊಂಡ ವರ್ತೂರ್ ಅತ್ತು ಬಿಟ್ಟರು. ಇದಾದ ಬಳಿಕ ಸರ್‌ಪ್ರೈಸ್ ಆಗಿ ವರ್ತೂರ್ ಅವರ ಅಮ್ಮ ಮನೆಗೆ ಎಂಟ್ರಿ ಕೊಟ್ಟರು. ಜತೆಗೆ ತಿಂಡಿ ತಿನಿಸುಗಳನ್ನು ತಂದರು. ನಮ್ರತಾ ಈ ವೇಳೆ ತನಿಷಾಗೆ ಚುಡಾಯಿಸಿದ್ದಾರೆ. ಕೆಲವು ದಿನಗಳ ಹಿಂದೆ ತನಿಷಾ ಹಾಗೂ ಸಂತೋಷ್ ಜೋಡಿಯ ಬಗ್ಗೆ ಮನೆಯಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಹೀಗಿರುವಾಗ ನಮ್ರತಾ ಅವರು ವರ್ತೂರ್ ಹಾಗೂ ಅವರ ಅಮ್ಮನ ಬಗ್ಗೆ ತನಿಷಾ ಜತೆ ಮಾತನಾಡಿದರು.
ಸಂತೋಷ್ ಅವರ ತಾಯಿ ಮಾತನಾಡಿದ ಭಾಷೆ ಬಗ್ಗೆ ನಮ್ರತಾ ಅವರು ತನಿಷಾಗೆ ಹೇಳಿ. ‘ಆ ಭಾಷೆ ಕೇಳೋಕೆ ಬಹಳ ವಿಚಿತ್ರವಾಗಿದೆ’ ಎಂದರು ನಮ್ರತಾ. ‘ಅವರ ಆಡುಭಾಷೆ ಹಾಗೆಯೇ. ಕನ್ನಡ, ತೆಲುಗು, ತಮಿಳು ಭಾಷೆಯ ಮಿಶ್ರಣವಾಗಿ ಇದೆ. ಅರ್ಥವೇ ಆಗುವುದಿಲ್ಲ’ ಎಂದರು ತನಿಷಾ. ಇದನ್ನು ಕೇಳಿದ ನಮ್ರತಾ ಅವರು ತನಿಷಾರ ಕಾಲೆಳೆದರು. ‘ಹೀಗಾದ್ರೆ ಮುಂದೆ ಹೇಗೆ? ಅಂದ್ರೆ, ಮದುವೆ ಆಗಿ ಅವರ ಮನೆಗೆ ಹೋದರೆ ಪರಿಸ್ಥಿತಿ ಏನು’ ಎಂದು ಪ್ರಶ್ನೆ ಮಾಡಿದ್ದಾರೆ ನಮ್ರತಾ. ಇದಕ್ಕೆ ತನಿಷಾ ನಕ್ಕಿದ್ದಾರೆ. ಇತ್ತ ಈ ರೀತಿ ತನಿಷಾ ಅವರನ್ನು ಸ್ಪರ್ಧಿಗಳು ಕಾಲೆಳೆದರೆ ಸಂತೋಷ್ ಅವರು ಬಿಗ್ ಬಾಸ್ನಲ್ಲಿ ಎಲ್ಲಿಯೂ ಮದುವೆ ವಿಚಾರ ಎತ್ತಿಲ್ಲ. ಅವರಿಗೆ ಈಗಾಗಲೇ ಒಂದು ಮದುವೆ ಆಗಿ ವಿಚ್ಛೇದನ ಆಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಇದನ್ನೂ ಓದಿ: BBK Season 10: ಜಾತಿ ನಿಂದನೆ; ತನಿಷಾ ವಿರುದ್ಧ ಮತ್ತೊಂದು ದೂರು
ಈಗಾಗಲೇ ಮದುವೆಯಾಗಿರುವ ವರ್ತೂರು ಸಂತೋಷ್ ಅವರಿಗೆ ಹೆಣ್ಣು ಮಗುವಿದೆ ಎನ್ನುವ ವಿಚಾರವೇ ಚರ್ಚೆಯಾಗುತ್ತಿದೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ವರ್ತೂರು ಸಂತೋಷ್ ಅವರದ್ದು ಎನ್ನಲಾದ ಮದುವೆಯ ಫೋಟೊ, ವಿಡಿಯೊ ಹರಿದಾಡುತ್ತಿದೆ.2 ವರ್ಷಗಳ ಹಿಂದೆಯೇ ವರ್ತೂರು ಸಂತೋಷ್ ಅವರಿಗೆ ಮದುವೆ ಆಗಿದೆ. ಎಸ್.ಜಯಶ್ರೀ ಎಂಬುವರನ್ನ ವರ್ತೂರು ಸಂತೋಷ್ ವರಿಸಿದ್ದಾರೆ. ಅವರಿಗೆ ಮಗುವೂ ಇದೆ. ಬಳಿಕ ಮನಸ್ತಾಪ ಎದುರಾಗಿ ಪತಿ-ಪತ್ನಿ ದೂರವಾಗಿದ್ದಾರೆ ಎನ್ನಲಾಗುತ್ತಿದೆ.
ಇತ್ತೀಚೆಗೆ ವರ್ತೂರು ಸಂತೋಷ್ ಬಿಗ್ ಬಾಸ್ ಮನೆಯಿಂದ ಹೊರ ಹೋಗುವುದಾಗಿ ಹೇಳಿದ್ದರು. ಹುಲಿ ಉಗುರಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಅವರು, ʻʻಮನೆಯಲ್ಲಿ ಇರಲು ಕಷ್ಟವಾಗುತ್ತಿದೆ. ಹೊರಗಡೆ ಒಂದು ಘಟನೆ ನಡೆಯಿತು. ನಾನು ಆ ಗುಂಗಿನಿಂದ ಹೊರಗೆ ಬಂದು ಆಡಬೇಕು ಅಂದರೂ ಕೂಡ ನನಗೆ ಆಗುತ್ತಿಲ್ಲ. ನಾನು ಹೊರ ಹೋಗಲು ಇಷ್ಟ ಪಡುತ್ತೇನೆʼʼ ಎಂದು ಹೇಳಿದ್ದರು. ಆದರೆ ಸುದೀಪ್ ಇದಕ್ಕೆ ಅವಕಾಶ ನೀಡಿರಲಿಲ್ಲ. ಸಹ ಸ್ಪರ್ಧಿಗಳು ಆಟ ಮುಂದುವರಿಸುವಂತೆ ಆಗ್ರಹಿಸಿದ್ದರು. ಅಲ್ಲದೆ ವರ್ತೂರು ಅವರ ತಾಯಿ ಸ್ವತಃ ಬಿಗ್ ಬಾಸ್ ಮನೆಗೆ ಬಂದು ಮಗನ ಮನವೊಲಿಸಿದ್ದರು. ಇದಕ್ಕೆ ವರ್ತೂರ್ ಕೂಡ ಸಮ್ಮತಿ ಸೂಚಿಸಿದರು.
ಬಿಗ್ಬಾಸ್ ಜಿಯೋ ಸಿನಿಮಾಸ್ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ