ಬೆಂಗಳೂರು: ʻಬಿಗ್ ಬಾಸ್ʼ ಸೀಸನ್ 10 (BBK SEASON 10) , 14ನೇ ವಾರಕ್ಕೆ ಕಾಲಿಟ್ಟಿದೆ. ಇನ್ನು ಫಿನಾಲೆಗೆ 18 ದಿನಗಳು ಬಾಕಿ ಇವೆ. ಫಿನಾಲೆ ವಾರ ತಲುಪೋದು ಯಾರ್ಯಾರು? ಟಾಪ್ 5 ಹಂತದಲ್ಲಿ ಯಾರ್ಯಾರು ಇರುತ್ತಾರೆ? ಎಂಬ ಚರ್ಚೆಗಳು ಜೋರಾಗಿದೆ. ಯಾವಾಗ ಪ್ರತಾಪ್ ಜತೆ ವಿನಯ್ ಜಗಳ ಮಾಡಿದ್ದಾರೋ, ಅದಾದ ಬಳಿಕ ಕ್ಷಮೆ ಕೇಳಿ ಪ್ರತಾಪ್ ಹಿಂದೆಯೇ ಇದ್ದರು ವಿನಯ್. ಹೀಗಿರುವಾಗ ಇದೀಗ ವಿನಯ್ ಅವರಿಗೆ ಡೌಟ್ ಒಂದು ಕಾಡುತ್ತಿದೆ. ಪ್ರತಾಪ್ ಹೇಳಿದ್ದು ನಿಜವೇ? ಎಂದು ನಮ್ರತಾ ಬಳಿ ಚರ್ಚಿಸಿದ್ದಾರೆ.
ಪ್ರತಾಪ್ ಹೇಳಿದ್ದೇನು?
ʻʻಯಾರೆಲ್ಲ ವಿನಯ್ ಅವರ ಜತೆಯಲ್ಲಿ ಇದ್ದರೋ ಅವರೆಲ್ಲಾ ಮನೆಗೆ ಹೋದರು. ಮನೆಗೆ ಹೋದವರೆಲ್ಲರ ಬೆಡ್‌ಶೀಟ್ ವಿನಯ್ ಅವರ ಬೆಡ್‌ಗೆ ಸೇರುತ್ತಿದೆ. ಜತೆಯಲ್ಲಿದ್ದವರ ಸರಿ ತಪ್ಪುಗಳನ್ನ ವಿನಯ್ ಹೇಳಲಿಲ್ಲ. ಸರಿ ಎಂದುಕೊಂಡೇ ಜತೆಯಲ್ಲಿ ಇದ್ದವರೆಲ್ಲಾ ಮನೆಗೆ ಹೋದರು’’ ಎಂದು ಡ್ರೋನ್ ಪ್ರತಾಪ್ ಹೇಳಿದ್ದರು. ಡ್ರೋನ್ ಪ್ರತಾಪ್ ಅವರ ಈ ಮಾತನ್ನ ಕೇಳಿ ವಿನಯ್ ಸುಮ್ಮನಾಗಿದ್ದರು. ಇದೇ ವಿಚಾರವಾಗಿ ಡ್ರೋನ್ ಪ್ರತಾಪ್ ಹಾಗೂ ವಿನಯ್ ಮಧ್ಯೆ ಜೋರು ಜಗಳ ನಡೆದಿತ್ತು. ಈಗ ಡ್ರೋನ್ ಪ್ರತಾಪ್ ಹೇಳಿದ್ದು ಸತ್ಯವಾ ಅಂತ ವಿನಯ್‌ಗೆ ಕಾಡುತ್ತಿದೆ.
ಎಲ್ಲಾ ನಮ್ ಫ್ರೆಂಡ್ಸೇ ಹೋಗಿರೋದು
ನಮ್ರತಾ ಜತೆ ವಿನಯ್ ಮಾತನಾಡಿ ʻʻಮನೆಯಲ್ಲಿ ಈಗ ಗ್ರೂಪ್‌ಗಳು ಆಗಿವೆ. ಸಂತು-ಪಂತು, ಕಾರ್ತಿಕ್- ತನಿಷಾ, ಸಂಗೀತಾ-ಪ್ರತಾಪ್, ಮತ್ತೆ ನಾವು-ನೀವೂ. ಎಲ್ಲಾ ನಮ್ ಫ್ರೆಂಡ್ಸೇ ಹೋಗಿರೋದು. ಕೆಲವು ಬಾರಿ ಡ್ರೋನ್ ಪ್ರತಾಪ್ ಹೇಳಿದ್ದು ನಿಜನಾ ಅಂತ ಅನಿಸಿಬಿಡುತ್ತೆʼʼಎಂದು ಹೇಳಿದ್ದಾರೆ. ನಮ್ರತಾ ಕೂಡ ಈ ಬಗ್ಗೆ ʻʻಅವರವರ ಗೇಮ್ ಆಡುತ್ತಿದ್ದಾರೆʼʼಎಂದು ಹೇಳಿದರು. ಇಲ್ಲಿಯ ತನಕ ವಿನಯ್ ಗ್ಯಾಂಗ್‌ನಲ್ಲಿ ʻರಕ್ಷಕ್, ಇಶಾನಿ, ಮೈಕಲ್, ಸ್ನೇಹಿತ್, ಪವಿ ಪೂವಪ್ಪ ಎಲಿಮಿನೇಟ್ʼ ಆಗಿದ್ದಾರೆ. ಇದೀಗ ಉಳಿದಿರೋದು ವಿನಯ್ ಮತ್ತು ನಮ್ರತಾ ಮಾತ್ರ.
ಇದನ್ನೂ ಓದಿ: BBK SEASON 10: ಮುರಿದುಬಿತ್ತಾ ಸಂತು-ಪಂತು ಸ್ನೇಹ?
ಇನ್ನು ಮನೆಯಲ್ಲಿ ಕೂಡ ವಿನಯ್ ಅವರಿಗೆ ಸಂಕಷ್ಟ ಎದುರಾಗಿದೆ. ಅವರು ಪ್ರಬಲ ಸ್ಪರ್ಧಿಯಾದ ಕಾರಣ ಅವರನ್ನು ಟಾಸ್ಕ್ಗೆ ಆಯ್ಕೆ ಮಾಡಿಕೊಳ್ಳುವಷ್ಟು ಧೈರ್ಯ ತೋರಿಸುವುದಿಲ್ಲ. ತಮ್ಮನ್ನು ಆಯ್ಕೆ ಮಾಡಿಕೊಂಡರೆ ಅಂಥವರಿಗೆ 100 ಪಾಯಿಂಟ್ಸ್ ಕೊಡಿಸಲು ವಿನಯ್ ಸಹಾಯ ಮಾಡುತ್ತೇನೆ ಎಂದು ಸ್ಪರ್ಧಿಗಳಿಗೆ ಹೇಳುತ್ತಿದ್ದಾರೆ. ಈ ರೀತಿ ಮ್ಯಾಚ್ ಫಿಕ್ಸಿಂಗ್ ಸಹವಾಸ ಬೇಡ ಎಂದು ಎಲ್ಲರೂ ಸುಮ್ಮನಾಗಿದ್ದಾರೆ.
ಬಿಗ್ಬಾಸ್ ಜಿಯೋ ಸಿನಿಮಾಸ್ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ