ಬೆಂಗಳೂರು: ಬಿಗ್ ಬಾಸ್ ಸೀಸನ್ 10ರ (BBK SEASON 10) ಎಂಟನೇ ವಾರ ಯಾರೊಬ್ಬರೂ ಎಲಿಮಿನೇಶನ್ ಆಗಿಲ್ಲ. ಸುದೀಪ್ ಅವರು ತಮ್ಮ ಅಧಿಕಾರ ಬಳಸಿಕೊಂಡು ಸ್ನೇಹಿತ್ ಹಾಗೂ ಮೈಕಲ್ ಅವರನ್ನು ಸೇವ್ ಮಾಡಿದ್ದಾರೆ. ಆದರೆ ಇಲ್ಲಿಗೆ ಸುದೀಪ್ ಅವರು ಸಮ್ಮನಾಗಿಲ್ಲ. ಸ್ನೇಹಿತ್ ಅವರಿಗೆ ಮಾತಿನಲ್ಲಿಯೇ ತಿವಿದಿದ್ದಾರೆ. ಲಕ್ಷುರಿ ಬಜೆಟ್ ವಿಚಾರ ವೇದಿಕೆಯಲ್ಲಿ ಪಸ್ತಾವನೆ ಆದಾಗ ಸುದೀಪ್ ಅವರು ಸ್ನೇಹಿತ್ ಅವರಿಗೆ ತಿರುಗೇಟು ನೀಡಿದರು.
ಮನೆಯಲ್ಲಿ ವೆಜ್ ತಿನ್ನುವವರು ಅಂದರೆ ಅದು ಸಂಗೀತಾ ಮಾತ್ರ. ಕಳೆದ ವಾರದ ಲಕ್ಷುರಿ ಬಜೆಟ್ನಲ್ಲಿ ಸಂಗೀತಾ ಪನೀರ್ ಬೇಕು ಎಂದಿದ್ದರು. ಅದಕ್ಕೆ ಯಾರೂ ಪ್ರಾಮುಖ್ಯತೆ ನೀಡಲೇ ಇಲ್ಲ. ಕೇವಲ 10 ಕೆಜಿ ಚಿಕನ್ ತರಿಸಲಾಯಿತು. ಇದು ಸಂಗೀತಾ ಬೇಸರಕ್ಕೆ ಕಾರಣ ಆಗಿತ್ತು. ಈ ವಿಚಾರ ಸುದೀಪ್ ಅವರ ಮುಂದೆ ಚರ್ಚೆಯಾಗಿದೆ. ಸ್ನೇಹಿತ್ ಅವರು, ‘ನಾನು ಯಾರೇ ಇದ್ದರೂ ನಿಷ್ಪಕ್ಷಪಾತವಾಗಿ ನಡೆದುಕೊಳ್ಳುತ್ತಿದ್ದೆ’ ಎಂದರು. ಇದಕ್ಕೆ ಸುದೀಪ್ ಅವರು ಸ್ನೇಹಿತ್‌ಗೆ ಚೆನ್ನಾಗಿಯೇ ಮಾತು ಕೊಟ್ಟರು.
‘ಯಾರೇ ಇದ್ದರೂ ನಿಷ್ಪಕ್ಷಪಾತವಾಗಿ ನಡೆದುಕೊಳ್ಳುತ್ತಿದ್ದರೇ? ಇದು ಸುಳ್ಳು. ಬಹುಶಃ ಸಂಗೀತಾ ಜಾಗದಲ್ಲಿ ನಮ್ರತಾ ಇದ್ದಿದ್ದರೆ ಲಿಸ್ಟ್ನಲ್ಲಿ ಪನೀರ್ ತುಂಬಿ ಹೋಗುತ್ತಿತ್ತು’ ಎಂದಿದ್ದಾರೆ ಸುದೀಪ್. ‘ಬಹುಶಃ ನನ್ನ ಗುಂಡಿಯನ್ನು ನಾನೇ ತೋಡಿಕೊಂಡೆ ಎನಿಸುತ್ತಿದೆ’ ಎಂದು ಸುದೀಪ್ ಎದುರು ಸ್ನೇಹಿತ್ ಹೇಳಿದರು. ಇದಕ್ಕೆ ಸುದೀಪ್ ‘ನೀವು ಒಂದು ಗುಂಡಿ ತೋಡಿಕೊಂಡಿಲ್ಲ. ವಾರದಲ್ಲಿ ಒಂದೊಂದು ಗುಂಡಿ ತೋಡಿಕೊಂಡು ಸೈಟ್ ಮಾಡಿಕೊಂಡಿದ್ದೀರಿ. ಯಾವ ಗುಂಡಿಯಲ್ಲಿ ಮಲಗ್ತೀರಾ, ಯಾರಿಗೋಸ್ಕರ ಮಲಗ್ತೀರಾ, ಯಾವಾಗ ಮಲಗ್ತೀರಾ ನನಗೆ ಗೊತ್ತಿಲ್ಲ’ ಎಂದರು ಸುದೀಪ್. ಈ ಮಾತನ್ನು ಕೇಳಿ ಎಲ್ಲರೂ ನಕ್ಕರು.
ದುರಂಹಕಾರಕ್ಕೆ ಔಷಧ, ನಾಲಗೆ ಬಿಗಿ ಹಿಡಿಯಲು ಔಷಧ, ನಂಬಿಕೆ ದ್ರೋಹ ಮಾಡದಿರಲು ಔಷಧ, ನಾಲಿಗೆಗೆ ಲಗಾಮು ಹಾಕುವ ಔಷಧ ಹೆಸರಿನಲ್ಲಿ ಮನೆಯಲ್ಲಿ ತರಸಲಾಗಿತ್ತು. ಈ ವೇಳೆ ಸ್ನೇಹಿತ್‌ಗೆ ನಾಲಿಗೆ ಬಿಗಿ ಹಿಡಿತದ ಟಾನಿಕ್ ನೀಡಿದ್ದರು ನಮ್ರತಾ. ಆಗ ಸುದೀಪ್ ಅವರು ನಮ್ರತಾರಿಂದ ಸ್ನೇಹಿತ್‌ಗೆ ಅಮೃತ ಎಂದು ಕಾಲೆಳೆದರು.
ಇದನ್ನೂ ಓದಿ: BBK SEASON 10: ವಿನಯ್‌ಗಿಂತ ಸಂಗೀತಾಗೆ ಕೊಬ್ಬು ಜಾಸ್ತಿ; ಟಾನಿಕ್ ಕುಡಿಸಿದ ಮೇಲೆ ಒದ್ದಾಟ-ಗುದ್ದಾಟ!
ನಮ್ರತಾ ಮೇಲೆ ಸ್ಟ್ರಾಂಗ್ ಫೀಲಿಂಗ್ಸ್ ಇದೆ ಎಂದ ಸ್ನೇಹಿತ್!
ಸ್ನೇಹಿತ್ ಕೂಡ ಮನೆಯಲ್ಲಿ ಅದೆಷ್ಟೋ ಬಾರಿ ನಮ್ರತಾ ಬಗ್ಗೆ ಇರುವ ಫಿಲಿಂಗ್ಸ್ ಬಗ್ಗೆ ಪರೋಕ್ಷವಾಗಿ ಹೇಳಿಕೊಂಡಿದ್ದೂ ಇದೆ. ರಾತ್ರಿ ಎಲ್ಲರೂ ಮಲಗಿರುವಾಗ ಸ್ನೇಹಿತ್ ಅವರು ನಮ್ರತಾ ಫೋಟೊ ಪಕ್ಕ ತಮ್ಮ ಫೋಟೊವನ್ನು ಇಟ್ಟಿದ್ದರು. ಇದಾದ ಬಳಿಕ ವಿನಯ್ ಅವರ ಬಳಿ ನಮ್ರತಾ ಬಗ್ಗೆ ತಮಗಿರು ಫೀಲಿಂಗ್ ಬಗ್ಗೆ ಹೇಳಿಕೊಂಡಿದ್ದರು. ‘ನನಗೆ ಹುಡುಗಿಯರು ಇಷ್ಟ ಆಗಿದ್ದು ಬಹಳ ಕಡಿಮೆ. ಒಬ್ಬಳು ಇಷ್ಟ ಆಗಿದ್ದಳು. ಅದು ವರ್ಕೌಟ್ ಆಗಲಿಲ್ಲ. ಅದಾದ ಬಳಿಕ ಈಗಲೇ ಆಗಿರುವುದು. ಬಿಗ್ ಬಾಸ್ ಮನೆಗೆ ಬಂದಾಗ ಒಬ್ಬರು ನನಗೆ ಇಷ್ಟೆಲ್ಲ ಇಷ್ಟ ಆಗುತ್ತಾರೆ ಎಂದು ನನಗೂ ನಂಬಿಕೆ ಇರಲಿಲ್ಲ. ಅದನ್ನು ನಂಬೋಕೆ ಆಗುತ್ತಿಲ್ಲ. ಇವರ ಜತೆ ನಾನು ಫ್ರೆಂಡ್ಗಿಂತಲೂ ಚೂರು ಜಾಸ್ತಿ ಅಟ್ಯಾಚ್ ಆಗಿದ್ದೇನೆ ಎಂಬುದು ನಾನು ಜೈಲಿಗೆ ಹೋದಾಗ ಗೊತ್ತಾಯಿತು. ಆಮೇಲೆ ಒಂದು ಹಂತದ ನಂತರ ಅನಿಸಿತು. ನನಗೆ ಇವರ ಮೇಲೆ ಸ್ಟ್ರಾಂಗ್ ಫೀಲಿಂಗ್ಸ್ ಇದೆ. ಅದಾದ ಬಳಿಕ ಅವರಿಗೆ ನಾನು ಹೇಳಿದೆ. ಅವರ ಜತೆ ನನಗೆ ಮುಂದಿನ ಹತ್ತು ವರ್ಷಗಳು ಕಾಣುತ್ತಿವೆ. ನಮ್ಮ ಅಪ್ಪ-ಅಮ್ಮನ ಜೊತೆ ಅವರು ಕೂಡ ಕಾಣುತ್ತಾರೆ’ ಎಂದು ಸ್ನೇಹಿತ್ ಹೇಳಿದ್ದರು.
ಕಳೆದ ವಾರ ಪರೋಕ್ಷವಾಗಿ ನಮ್ರತಾ ಗೌಡಗೆ ಪ್ರೇಮ ನಿವೇದನೆ ಮಾಡಿದ್ದರು ಸ್ನೇಹಿತ್. ನಮ್ರತಾ ಗೌಡ ಸಮಯ ಕೊಡಿ ಅಂದಾಗಿತ್ತು. ಈ ವಿಚಾರವಾಗಿ ನಮ್ರತಾ ತುಂಬಾ ಕಿರಿಕಿರಿ ಅನುಭವಿಸಿದ್ದರು. ಈ ಮುಂಚೆಯೇ ನಮ್ರತಾ ಅವರು ಸ್ನೇಹಿತ್‌ಗೆ ʻʻಸ್ಮೈಲ್ ಮಾಡ್ಕೊಂಡು ಎಲ್ಲದನ್ನೂ ಚಿಲ್ಲಾಗಿ ತೆಗೆದುಕೊಳ್ಳುತ್ತಿದ್ದೀನಿ ಎಂದ ಮಾತ್ರಕ್ಕೆ ಎಲ್ಲವೂ ಸರಿ ಇದೆ ಎಂದಲ್ಲ. ‘ನಿಮಗೆ ಬೇಕಾದಾಗ ನೀವು ಮಾತು ನಿಲ್ಲಿಸಬಹುದು. ನಿಮಗೆ ಬೇಕಾದ ನೀವು ಬ್ಲೇಮ್ ಮಾಡಬಹುದು. ಮೊದಲ ದಿನದಿಂದಲೂ ಇದನ್ನೂ ಮಾಡುತ್ತಿದ್ದೀರಿ’ ಎಂದು ಬೇಸರ ಹೊರಹಾಕಿದ್ದರು.
ಬಿಗ್ಬಾಸ್ ಜಿಯೋ ಸಿನಿಮಾಸ್ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ