ಬೆಂಗಳೂರು: ಬಿಗ್ ಬಾಸ್ ಸೀಸನ್ 9 (Bigg Boss Kannada) ಮೊದಲ ದಿನವೇ ಕಾವೇರಿದ ವಾತಾವರಣದಿಂದ ಶುರುವಾಗಿತ್ತು. ಮನೆಯಲ್ಲಿ ಹೊಸ ಸ್ಪರ್ಧಿಗಳು ಹಾಗೇ ಹಳೆಯ ಸ್ಪರ್ಧಿಗಳು ಟಾಸ್ಕ್ ನಿಭಾಯಿಸಿದ್ದಾರೆ. 18 ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಪ್ರವೇಶಿಸಿದ್ದರು. ಇದೀಗ ಮೊದಲ ದಿನವೇ 12 ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ.
ಆರ್ಯವರ್ಧನ್ ಗುರೂಜಿ, ದರ್ಶ್ ಚಂದ್ರಪ್ಪ, ದಿವ್ಯಾ ಉರುಡುಗ, ಐಶ್ವರ್ಯ ಪಿಸೆ, ಪ್ರಶಾಂತ್ ಸಂಬರಗಿ, ವಿನೋದ್ , ಅರುಣ್ ಸಾಗರ್, ನವಾಜ್, ಸಾನ್ಯ, ಮಯೂರಿ, ರೂಪೇಶ್ ಶೆಟ್ಟಿ ಹಾಗೂ ಕಾವ್ಯಶ್ರೀ ಗೌಡ ನಾಮಿನೇಟ್ ಆಗಿದ್ದಾರೆ.
ಬಿಗ್ ಬಾಸ್ ಮೊದಲ ದಿನವೇ ಹಳೆಯ ಸ್ಪರ್ಧಿಗಳು ಯಾರೋಬ್ಬ ನವೀನರನ್ನು ಆಯ್ಕೆ ಮಾಡಬೇಕಿತ್ತು. ಮತ್ತು ಆ ಜೋಡಿ ಟಾಸ್ಕ್‌ಗಳನ್ನು ನಿಭಾಯಿಸಬೇಕಿತ್ತು. ಬಿಗ್ ಬಾಸ್ ಮೊದಲ ಟಾಸ್ಕ್‌ನಲ್ಲಿ ಪ್ರಶಾಂತ್ ಸಂಬರಗಿ-ವಿನೋದ್ ವಿಜೇತರಾಗಿ ಹೊರಹೊಮ್ಮಿದ್ದಾರೆ.
ಆರ್ಯವರ್ಧನ್-ಸಂಬರಗಿ ಜಟಾಪಟಿ
ಪ್ರಶಾಂತ್ ಸಂಬರಗಿ ಹಾಗೂ ಆರ್ಯವರ್ಧನ್ ಗುರೂಜಿ ಮಧ್ಯೆ ವಾರ್ ಆಗಿದೆ. ಎಲ್ಲಾ ಸ್ಪರ್ಧಿಗಳು ಒಟ್ಟಾಗಿ ಕೂತು ಮಾತನಾಡಿಕೊಳ್ಳುತ್ತಿರುವಾಗ ʻʻನಾನು 10 ಲಕ್ಷ ಜನರಿಗೆ ಜ್ಯೋತಿಷ ಹೇಳಿರಬಹುದುʼʼ ಎಂದು ಗುರೂಜಿ ಹೇಳಿದ್ದಾರೆ. ಅದಕ್ಕೆ ಪ್ರಶಾಂತ್ ಸಂಬರಗಿ ವಿರೋಧ ವ್ಯಕ್ತಪಡಿಸಿ ʻʻ10 ಲಕ್ಷ ಎಂದು ಏನೇನೋ ಹೇಳಬೇಡಿʼʼ ಎಂದಿದ್ದಾರೆ. ಅಲ್ಲಿಂದ ಇಬ್ಬರ ಮಧ್ಯೆ ಜಗಳ ಶುರುವಾಗಿದೆ. ಆರ್ಯವರ್ಧನ್ ಕೂಡ ಕೂಗಾಡಿದ್ದು ʻʻನಾನು ಸೈಲೆಂಟ್ ಅಲ್ಲ. ಸಖತ್ ವೈಲೆಂಟ್. ನನ್ನ ಕೆಣುಕುವ ಮುಠಾಳರು ಯಾರು ಇಲ್ಲಾ. ನಾನು ರಿಯಲ್ ಆಗಿ ಹೀಗೆ ಇದ್ದೇನೆ. ಈ ಬಿಗ್ ಬಾಸ್‌ನಲ್ಲಿ ನನಗೆ ಚೆನ್ನಾಗಿ ಮಾತನಾಡಿಸೋರು ಇಷ್ಟ ಆಗಲ್ಲ. ಕೆಣಕಿ ಬಂದವರು ಇಷ್ಟ ಆಗುತ್ತದೆʼʼ ಎಂದು ಸ್ಪರ್ಧಿಗಳ ಮುಂದೆ ಹೇಳಿದ್ದಾರೆ.
ಇದನ್ನೂ ಓದಿ | Kannada Serial | ಬಿಗ್ ಬಾಸ್‌ನಿಂದ ಅಂತ್ಯಗೊಳ್ಳಲಿವೆಯಂತೆ ಈ ಧಾರಾವಾಹಿಗಳು!