Site icon Vistara News

BBK Season 10: ಅವಳ್ಯಾರು ನನ್ನ ಡಾಮಿನೇಟ್‌ ಮಾಡೋಕೆ, ಬಾಯಿ ಮುಚ್ಚಲ್ಲ; ನಮ್ರತಾ-ತನಿಷಾ ಜಡೆ ಜಗಳ!

namratha gowda Tanisha fight

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ (BBK Season 10) ಮೂರನೇ ವಾರ ನಮೃತಾ ಹಾಗೂ ತನಿಷಾ ನಡುವೆ ಭರ್ಜರಿ ಕಾಳಗವೇ ಆಗಿದೆ. ಯಾರು ಯಾರನ್ನು ಡಾಮಿನೇಟ್ ಮಾಡುತ್ತಿದ್ದಾರೆ? ಎಂದು ನಮ್ರತಾ ಅವರು ತನಿಷಾಗೆ ಸಖತ್‌ ಕೂಗಾಡಿದ್ದಾರೆ. ಈಗಾಗಲೇ ನಮ್ರತಾ ಅವರು ಕ್ರಿಕೆಟ್‌ ಟಾಸ್ಕ್‌ ಆದ ಬಳಿಕ ಆ್ಯಸಿಡ್ ಹಾಕಿ ತನಿಷಾ ಬಾಯಿ ತೊಳಿಯಿರಿ ಎಂದು ಕಾರ್ತಿಕ್‌ ಹಾಗೂ ವಿನಯ್‌ ಮುಂದೆ ಹೇಳಿದ್ದರು.

ಕಲರ್ಸ್‌ ಕನ್ನಡ ಬಿಟ್ಟರುವ ಹೊಸ ಪ್ರೋಮೊದಲ್ಲಿ ನಮ್ರತಾ ಹಾಗೂ ತನಿಷಾ ಜೋರಾಗಿಯೇ ಕೂಗಿದ್ದಾರೆ. ನಮ್ರತಾ ಅವರು ತನಿಷಾಗೆ ʻʻನಿಮಗೆ ಒಬ್ರಿಗೆ ಮಾತ್ರ ಧ್ವನಿ ಇದೆ ಅಂತ ಕಿರಿಚೋದು ಅಲ್ಲಾ. ನೀವಲ್ಲ ಬಿಗ್‌ ಬಾಸ್‌. ಅಲ್ಲಿ ಇರೋರು ಬಿಗ್‌ ಬಾಸ್‌. ಬಾಯಿ ಮುಚ್ಚಲ್ಲ ಅವಳು ಗುರು! ಇನ್ಮುಂದೆ ನನ್ನ ಹತ್ರ ಮಾತಾಡಬೇಕಾದ್ರೆ ವಾಯ್ಸ್‌ ಕಮ್ಮಿ ಇರಬೇಕು. ನಾನು ನಿನ್ನೆ ತಡಕ್ಕೊಂಡಿದ್ದೀನಿ. ಇವತ್ತು ನಾಟ್‌ ಒಕೆ. ಅವಳು ಯಾವಳು ನನ್ನ ಡಾಮಿನೇಟ್‌ ಮಾಡೋಕೆʼʼಎಂದು ಕೂಗಿದ್ದಾರೆ.

ಇದೀಗ ನೆಟ್ಟಿಗರು ʻʻತನಿಷಾ ಎಲ್ಲಾ ಟಾಸ್ಕ್ ಗೆದ್ದರು ಅಂತ ನಮ್ರತಾಗೆ ಹೊಟ್ಟೆ ಉರಿʼʼಎಂದು ಕಮೆಂಟ್‌ ಮಾಡಿದ್ದಾರೆ. ʻʻನಮ್ರತಾಗೆ ಬಿಗ್ ಬಾಸ್ ಗೆ ಬಂದ ಮೊದಲ ವಾರದಲ್ಲಿ ಕಿರುಚಾಡೋದು ಅಂದ್ರೆ ಆಗ್ತಿರ್ಲಿಲ್ವಂತೆ ಪಾಪ. ಈ ವಾರ ನೋಡಿ ಅವಳ ನಾಗಿಣಿ, ನಾಗವಲ್ಲಿ ರೂಪ ಹೇಗೆ ಹೊರಬಂತು ಅಂತʼʼ ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ. ʻʻನಾಗಿಣಿಯ ರಿಯಲ್ ಬಣ್ಣ ಆಚೆ ಬರ್ತಿದೆ.. ತನಿಷಾಗೆ ಅಲ್ಲಾ ನಿನ್ನ ಬಾಯಿನ ಮೊದಲು ಫಿನೈಲ್ ಹಾಕಿ ತೊಳಿಬೇಕುʼʼಎಂದು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: BBK Season 10: ಆ್ಯಸಿಡ್ ಹಾಕಿ ತನಿಷಾ ಬಾಯಿ ತೊಳಿಯಿರಿ ಎಂದ ನಮ್ರತಾ!

‘ಆ್ಯಸಿಡ್ ಹಾಕಿ ತನಿಷಾ ಬಾಯಿ ತೊಳಿಯಿರಿ’’ ಎಂದಿದ್ದ ನಮ್ರತಾ

‘ಭಜರಂಗಿ’ ತಂಡದಿಂದ ತನಿಷಾ ಅಂಪೈರ್ ಆದರೆ, ‘ಉಗ್ರಂ’ ತಂಡದಿಂದ ನಮ್ರತಾ ಗೌಡ ಅಂಪೈರ್‌ ಆಗಿದ್ದರು. ಈ ಮಧ್ಯೆ ಫೇರ್‌ ಗೇಮ್‌ ಆಡಿ ಎಂದು ನಮ್ರತಾ ಅವರು ತನಿಷಾಗೆ ಹೇಳಿದ್ದೇ ತಡ, ಇಬ್ಬರ ಮಧ್ಯೆ ಜಗಳ ತಾರರಕ್ಕೇರಿತ್ತು. ಅಷ್ಟೇ ಅಲ್ಲದೇ ಇಬ್ಬರ ಜಗಳ ಇಂದು ಕೂಡ ಮುಂದುವರಿದಿದೆ. ನಮ್ರತಾ ಅವರು ವಿನಯ್‌ ಮುಂದೆ ʻʻನಾನು ಏನೂ ಹೇಳಿಲ್ಲ ನಾನು ಹೇಳಿದ್ದು ‘ಈ ಗೇಮ್‌ನ ಫೇರ್ ಆಗಿ ಆಡೋಣ’ ಅಂತ ಅಷ್ಟೇ ಎಂದು ಹೇಳಿದ್ದರು. ನಮ್ರತಾ ಅವರು ವಿನಯ್‌ ಜತೆ ʻʻ’ತನಿಷಾಗೆ ಮಾತನಾಡುವ ಕಾಯಿಲೆ ಅನ್ಸುತ್ತೆ. ಆ್ಯಸಿಡ್ ಹಾಕಿ ಬಾಯಿ ತೊಳೆದುಬಿಡು ಒಂದ್ಸಲಿʼʼಎಂದು ಟಾಂಟ್‌ ಕೊಟ್ಟಿದ್ದರು. ಅತ್ತ ತನಿಷಾ ಕೂಡ ಸಿರಿ ಅವರ ಬಳಿ ಈ ಬಗ್ಗೆ ಚರ್ಚಿಸಿದ್ದರು. ಫೇರ್ ಆಗಿ ಆಡಿ ಅಂದ್ರೆ ನನಗೆ ಕೋಪ ಬರಲ್ವಾ? ಇವರ ಹತ್ತಿರ ಪಾಠ ಮಾಡಿಸಿಕೊಳ್ಳಲು ನಾನು ಬಂದಿದ್ದೀನಾ?ಎಂದು ಹೇಳಿದ್ದರು.

ಬಿಗ್​ಬಾಸ್ ಕನ್ನಡ ಕಲರ್ಸ್ ವಾಹಿನಿಯಲ್ಲಿ ಪ್ರತಿರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

Exit mobile version