Site icon Vistara News

BBK SEASON 10: ಯಾರಾಗ್ತಾರೆ ಈ ವಾರದ ಕಳಪೆ ಸ್ಪರ್ಧಿ? ಜೈಲಿಗೆ ಹೋಗ್ತಾರಾ ಮೈಕಲ್‌, ವರ್ತೂರ್‌?

Michael Varthur kalape stage

ಬೆಂಗಳೂರು: ʻಬಿಗ್ ಬಾಸ್ʼ (BBK SEASON 10) ಮನೆಯೊಳಗೆ ವಾರಾಂತ್ಯ ಸಮೀಪಿಸುತ್ತಿರುವ ಹಾಗೆಯೇ ʻಕಳಪೆ’ `ಉತ್ತಮ’ ಎನ್ನುವ ಹಾವು ಏಣಿ ಆಟ ಮತ್ತೆ ಶುರುವಾಗಿದೆ. ಈ ವಾರ ಬಹುಮಾನದ ಮೊತ್ತವನ್ನು ಗಳಿಸುವ ಟಾಸ್ಕ್ ಅನ್ನು ʻಬಿಗ್ ಬಾಸ್ʼ ಮನೆಯ ಸದಸ್ಯರಿಗೆ ನೀಡಿತ್ತು. ಈ ಟಾಸ್ಕ್ ಗಳಲ್ಲಿ ಆಡುವ ಅವಕಾಶಕ್ಕಾಗಿ ಮಾತಿನ ಚಕಮಕಿಗಳೂ ನಡೆದಿದ್ದವು. ಈಗ ಅವೆಲ್ಲ ಮುಗಿದು ಈ ವಾರದ ಕಳಪೆ ಯಾರು? ಉತ್ತಮ ಯಾರು ಎಂಬುದನ್ನು ನಿರ್ಧರಿಸುವ ಹಂತ ಬಂದಿದೆ.

ಕಳಪೆ-ಉತ್ತಮ ಯಾರು ಎಂಬ ಬಗ್ಗೆ ಮನೆಯ ಸದಸ್ಯರ ಅಭಿಪ್ರಾಯ ಏನು ಎಂಬುದರ ಕುರಿತು ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಸುಳಿವು ನೀಡಲಾಗಿದೆ. ಕಾರ್ತಿಕ್ ಅವರು ವರ್ತೂರು ಸಂತೋಷ್ ಅವರಿಗೆ ಕಳಪೆ ನೀಡಿದ್ದರೆ, ತನಿಷಾ ಅವರು ಮೈಕಲ್ ಕಳಪೆ ಪ್ರದರ್ಶನ ನೀಡಿದ್ದಾರೆ ಎಂದು ಹೇಳಿದ್ದಾರೆ. ಒಟ್ಟಾರೆ ಮನೆಯ ಸದಸ್ಯರ ಬಾಯಲ್ಲಿ ಮೈಕಲ್‌ ಮತ್ತು ವರ್ತೂರು ಸಂತೋಷ್ ಹೆಸರೇ ಹೆಚ್ಚು ಸಲ ಬಂದಂತಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ವರ್ತೂರು, ‘ಐದು ಲಕ್ಷದ ಟಾಸ್ಕ್ ನಲ್ಲಿ ರಿಸ್ಕ್ ತೆಗೆದುಕೊಂಡು ಆಡಿದ್ದೀನಿ.‌ ನಾನೇನೂ ಸ್ಪೋರ್ಟ್ಸ್ ಫೀಲ್ಡಿಂದ ಬಂದವನಲ್ಲ, ಆದರೆ ಎತ್ತು, ದನಗಳನ್ನು ಪರಿಗಣಿಸಿದರೆ ಸ್ಪೋರ್ಟ್ಸ್ ಹುಟ್ಟುಹಾಕಿದ್ದೇ ನಾವು’ ಎಂದು ಖಡಕ್ಕಾಗಿ ಹೇಳಿದ್ದಾರೆ.

ಒಟ್ಟಾರೆ ಈ ವಾರದ ʻಕಳಪೆʼ ಯಾರು? ಮತ್ತು ʻಉತ್ತಮʼ ಯಾರು? ಎಂಬುದು ಪ್ರಶ್ನಾರ್ಥಕವಾಗಿಯೇ ಉಳಿದಿದೆ‌. ಅದಕ್ಕೆ ಉತ್ತರ ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಇದನ್ನೂ ಓದಿ: BBK SEASON 10: ʻಕ್ಯಾಪ್ಟನ್ಸಿʼ ವಿಚಾರಕ್ಕೆ ಸಂಗೀತಾ, ತನಿಷಾ ನಡುವೆ ವಾರ್‌; ರೇಸ್‌ನಲ್ಲಿ ಉಳಿದಿದ್ದು ಯಾರು?

ʻಕ್ಯಾಪ್ಟನ್ಸಿʼ ವಿಚಾರಕ್ಕೆ ಸಂಗೀತಾ, ತನಿಷಾ ನಡುವೆ ವಾರ್‌

ಬಿಗ್‌ ಬಾಸ್‌ ಸೀಸನ್‌ 10 (BBK SEASON 10) ಹದಿಮೂರನೇ ವಾರಕ್ಕೆ ಕಾಲಿಟ್ಟಿದೆ. ಮನೆಯಲ್ಲಿ ಕ್ಯಾಪ್ಟನ್ಸಿ ಹುದ್ದೆಗೆ ಭಾರಿ ಪೈಪೋಟಿಗಳು ಆಗುತ್ತಿವೆ. ಕ್ಯಾಪ್ಟನ್‌ ಆದರೆ ಒಂದು ಸಪರೇಟ್‌ ರೂಮ್‌, ಇಡೀ ವಾರ ನಿಯಮಗಳನ್ನು ಜಾರಿಗೊಳಿಸುವ ಅಧಿಕಾರದ ಜತೆಗೆ ಒಂದು ವಾರ ನಾಮಿನೇಷನ್​ನಿಂದ ಬಚಾವಾಗುವ ಸೌಕರ್ಯ ಸಿಗುತ್ತದೆ. ಹಾಗಾಗಿ ಕ್ಯಾಪ್ಟನ್ ಆಗಲು ಎಲ್ಲರೂ ಪ್ರಯತ್ನಿಸುತ್ತಿದ್ದಾರೆ. ತನಿಷಾ ಕ್ಯಾಪ್ಟನ್ ಆಗಿದ್ದರು. ವಾರದ ಮೊದಲ ಟಾಸ್ಕ್‌ನಲ್ಲಿ ಆಡಲು ಸಂಗೀತಾಗೆ ತನಿಷಾ ಅವಕಾಶ ಕೊಡಲಿಲ್ಲ. ಎರಡನೇ ಟಾಸ್ಕ್‌ನಲ್ಲಿ ಚಾನ್ಸ್ ಕೊಟ್ಟರು. ಮೂರನೇ ಟಾಸ್ಕ್‌ನಲ್ಲಿ ಭಾಗವಹಿಸಲು ಕೂಡ ನಿರಾಕರಿಸಿದರು. ಈ ವಿಚಾರ ಇಬ್ಬರ ನಡುವೆ ವಾಗ್ವಾದ ನಡೆದಿದೆ.

ಈ ಮನೆಯಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಅರ್ಹತೆ ಇರುವ ಇಬ್ಬರು ಯಾರೆಂದು ಬಿಗ್‌ ಬಾಸ್‌ ತಿಳಿಸಲು ಹೇಳಿದ್ದರು. ಎಲ್ಲರೂ ಹೆಚ್ಚಾಗಿ ಸಂಗೀತಾ, ನಮ್ರತಾ ಹೆಸರನ್ನು ತೆಗೆದುಕೊಂಡರು. ಬಹುಮತದ ಅನುಸಾರ ನಮ್ರತಾ, ಸಂಗೀತಾ ಆಯ್ಕೆಯಾದರು. ಇದಾದ ಬಳಿಕ ಟಾಸ್ಕ್‌ವನ್ನು ನಿಭಾಯಿಸಲು ಬಿಗ್‌ ಬಾಸ್‌ ಸಂಗೀತಾ, ನಮ್ರತಾಗೆ ಸೂಚಿಸಿದರು. ಅದರಂತೆ ಇವರಿಬ್ಬರು ಸೇರಿ ನಿರ್ಧಾರಗಳನ್ನು ತೆಗೆದುಕೊಂಡರು. ಮುಂದಿನ ಟಾಸ್ಕ್‌ಗೆ ವಿನಯ್‌, ಮೈಕಲ್‌, ಕಾರ್ತಿಕ್‌, ನಮ್ರತಾ, ತುಕಾಲಿ ಅವರನ್ನು ಟಾಸ್ಕ್‌ಗೆ ಆಡಲು ಅನುಮತಿ ಕೊಟ್ಟರು. ಟಾಸ್ಕ್‌ನಿಂದ ಡ್ರೋನ್ ಪ್ರತಾಪ್, ವರ್ತೂರು ಸಂತೋಷ್ ಹಾಗೂ ತನಿಷಾರನ್ನ ಸಂಗೀತಾ, ನಮ್ರತಾ ಹೊರಗಿಟ್ಟರು. ಇದು ತನಿಷಾ ಹಾಗೂ ಸಂಗೀತಾ ನಡುವೆ ವಾರ್‌ ಆಗಲು ಕಾರಣವಾಯ್ತು.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version