Site icon Vistara News

BBK SEASON 10: ʻನಮ್ರತಾʼ ಓದಿದ್ದು ಯಾರ ಹೆಸರು? ಅದೃಷ್ಟ ಕೈ ಕೊಟ್ಟಿದ್ದು ಯಾರಿಗೆ?

Whose name read Namratha who will eliminate today bigg boss kannada

ಬೆಂಗಳೂರು: ಬಿಗ್‌ಬಾಸ್‌ ಕನ್ನಡ ಹತ್ತನೇ ಸೀಸನ್‌ (BBK SEASON 10) ಫಿನಾಲೆ ಹಬ್ಬ ಶುರುವಾಗಿ ಆಗಿದೆ. ಸಖತ್ ಅದ್ಧೂರಿ ವೇದಿಕೆಯಲ್ಲಿ ನಿರೂಪಕ ಕಿಚ್ಚ ಸುದೀಪ್ (Kichcha Sudeep) ಭರ್ಜರಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಅಂತಿಮ ಹಂತಕ್ಕೆ ಇನ್ನೊಂದೇ ಹೆಜ್ಜೆ ಬಾಕಿ ಇರುವಾಗ ತುಕಾಲಿ ಸಂತೋಷ್‌ ಅವರು ಮನೆಯಿಂದ ಹೊರಗೆ ಬಂದಿದ್ದಾರೆ. ತುಕಾಲಿ ನಂತರ ʻವಿನಯ್‌ ಔಟ್‌ʼ ಆಗುತ್ತಾರೆ ಎಂಬ ಉಹಾಪೋಹಗಳು ಹಬ್ಬಿದ್ದವು. ಇದೀಗ ಕಲರ್ಸ್‌ ಕನ್ನಡ ವಾಹಿನಿ ಬಿಟ್ಟಿರುವ ಪ್ರೋಮೊ ಇನಬ್ನಷ್ಟು ಕುತೂಹಲಕ್ಕೆ ಕಂಡೊಯ್ದಿದೆ.

ಪ್ರೋಮೊದಲ್ಲಿ ಸುದೀಪ್‌ ಅವರು ಪತ್ರವನ್ನು ನಮ್ರತಾ ಅವರ ಕೈಗೆ ನೀಡುತ್ತಾರೆ. ನಮ್ರತಾ ಅವರು ಮನೆಯೊಳಗೆ ಪ್ರವೇಶಿಸಿ ಓದುತ್ತಾರೆ. ಆಗ ನಮ್ರತಾ ಮಾತನಾಡಿ ʻʻನನಗೆ ಇವರು ಇದ್ದೇ ಇರುತ್ತಾರೆ ಎಂಬ ಭರವಸೆ ಇದ್ದಿತ್ತು. ಟಾಪ್‌ 3 ಅಥವಾ ಟಾಪ್‌ 2ನಲ್ಲಿ ಇರುತ್ತಾರೆ ಅಂದುಕೊಂಡಿದ್ದೆ. ಆದರೆ…ʼʼಎಂದು ಫುಲ್‌ ಸ್ಟಾಪ್‌ ಇಟ್ಟಿದ್ದಾರೆ. ಇದೀಗ ಈ ಪ್ರೋಮೊ ವೈರಲ್‌ ಆಗುತ್ತಿದ್ದಂತೆ ವಿನಯ್‌ ಅವರು ಔಟ್‌ ಎಂದು ಹೇಳಲಾಗುತ್ತಿದೆ. ಇನ್ನು ಪೂರಕವೆಂಬಂತೆ ಕಿಚ್ಚ ಸುದೀಪ್‌ ಕೂಡ ಪತ್ರವನ್ನು ನಮ್ರತಾ ಅವರ ಕೈಗೆ ಕೊಡುವಾಗ ʻʻನಿಮಗೆ ಪರಿಚಯ ಇರುವ ಒಬ್ಬರು ಹೊರಗೆ ಬರ್ತಾರೆʼʼಎಂದು ಹೇಳಿದರು. ವಿನಯ್‌ ಅವರಿಗೆ ನಮ್ರತಾ ಮನೆಯಲ್ಲಿ ಇದ್ದಾಗ ಸಖತ್‌ ಕ್ಲೋಸ್‌ ಕೂಡ ಆಗಿದ್ದರು. ಹೀಗಾಗಿ ವಿನಯ್‌ ಔಟ್‌ ಆಗಿರಬೇಕು ಎಂದು ವೀಕ್ಷಕರು ಕಮೆಂಟ್‌ ಮಾಡುತ್ತಿದ್ದಾರೆ.

ಇದನ್ನೂ ಓದಿ: BBK SEASON 10:  ಇಶಾನಿ ತಮ್ಮದೇ ರೀತಿಯಲ್ಲಿ ಸ್ಪರ್ಧಿಗಳನ್ನು ಬೈದಿದ್ದಾ? ಹೊಗಳಿದ್ದಾ?ಹಾಡನ್ನು ನೀವೆ ಕೇಳಿ!

ಇದಾದ ಬಳಿಕ ನಾಲ್ಕನೇ ಸ್ಥಾನದಲ್ಲಿರುವ ಸ್ಪರ್ಧಿ ವರ್ತೂರು ಸಂತೋಷ್‌ ಔಟ್‌ ಆಗಬಹುದು ಎನ್ನಲಾಗುತ್ತಿದೆ. ಇದು ಹೌದಾಗಿದ್ದರೆ ಸಂಗೀತಾ ಶೃಂಗೇರಿ, ಡ್ರೋನ್‌ ಪ್ರತಾಪ್‌ ಮತ್ತು ಕಾರ್ತಿಕ್‌ ಮಹೇಶ್‌ ಅವರು ಫಿನಾಲೆ ದಿನಕ್ಕೆ ಕಾಲಿಡುವ ಸ್ಪರ್ಧಿಗಳಾಗಿರುವ ಸಾಧ್ಯತೆ ದಟ್ಟವಾಗಿದೆ.

ಇದೂ ಸೇರಿದಂತೆ ಹಲವು ಪರ್ಫಾರ್ಮೆನ್ಸ್‌, ಕಲರ್‌ಫುಲ್‌ ಡಾನ್ಸ್‌, ಕಚಗುಳಿಯ ಮಾತುಕತೆ ಎಲ್ಲವೂ ತಂಬಿರುವ ಬಿಗ್‌ಬಾಸ್‌ ಕನ್ನಡ ಸೀಸನ್‌ 10 ಫಿನಾಲೆ ಶನಿವಾರ ಮತ್ತು ಭಾನುವಾರ ಜಿಯೊಸಿನಿಮಾದಲ್ಲಿ ಸಂಜೆ 7.30ಯಿಂದ ಪ್ರಸಾರವಾಗಲಿದೆ. ಕಲರ್ಸ್‌ ಕನ್ನಡದಲ್ಲಿಯೂ ಅದೇ ಸಮಯದಲ್ಲಿ ಫಿನಾಲೆ ವೀಕ್ಷಿಸಬಹುದು.

Exit mobile version