Site icon Vistara News

BBK Season 10: ಯಾರ ಕತೆ ಶುರು? ಯಾವ ಕತೆ ಫಿನಿಷ್? ಆಟ ಶುರುವಾಗೋ ಮುಂಚೆ ಡ್ರೋನ್‌ ಪ್ರತಾಪ್‌ಗೆ ಕಿಚ್ಚ ಖಡಕ್‌ ಪ್ರಶ್ನೆ!

Dron Pratap In bbk10

ಬೆಂಗಳೂರು: ಕಲರ್ಸ್‌ ಕನ್ನಡದಲ್ಲಿ ಇಂದೇ ಬಿಗ್‌ ಬಾಸ್‌ ಸೀಸನ್‌ 10 (BBK Season 10) ಲಾಂಚ್‌ ಆಗುತ್ತಿದೆ. ಈಗಾಗಲೇ ಕಲರ್ಸ್‌ ಕನ್ನಡ ಒಂದೊಂದೇ ಪ್ರೋಮೊವನ್ನು ಶೇರ್‌ ಮಾಡುತ್ತಿದೆ. ಪ್ರೋಮೊದಲ್ಲಿ ಹೇಳುವಂತೆ ಬಿಗ್ ಬಾಸ್ ಮನೆಗೆ ಹೋಗುವವರನ್ನು ನಿರ್ಧರಿಸುವವರು ಪ್ರೇಕ್ಷಕರು. ಪ್ರೇಕ್ಷಕರ ಕೈಯಲ್ಲಿ ವೋಟಿಂಗ್‌ ಮಷೀನ್ ಇರುವುದು ಮತ್ತು ಜನ ವೋಟ್ ಮಾಡುತ್ತಿರುವುದನ್ನು ತೋರಿಸಲಾಗಿದೆ. ಇದೀಗ ವೇದಿಕೆಯಲ್ಲಿ ವರ್ತೂರ್ ಸಂತೋಷ್‌, ಡ್ರೋನ್‌ ಪ್ರತಾಪ್‌, ಬುಲೆಟ್‌ ಪ್ರಕಾಶ್‌ ಮಗ ರಕ್ಷಕ್‌ ಕಂಡಿದ್ದಾರೆ. ಈ ಮೂವರಲ್ಲಿ ಜನ ಯಾರನ್ನು ಗೆಲ್ಲಿಸಲಿದ್ದಾರೆ, ಯಾರು ಹೊರಗೆ?ಯಾರು ಒಳಗೆ ಎಂಬ ಉತ್ತರ ಇಂದು ಗೊತ್ತಾಗಲಿದೆ.

ಈ ಮೂವರಿಗೂ ಸುದೀಪ್‌ ಕೆಲವೊಂದು ಖಡಕ್‌ ಪ್ರಶ್ನೆಗಳನ್ನು ವೇದಿಕೆಯಲ್ಲಿ ಇಟ್ಟರು. ಬುಲೆಟ್‌ ಪ್ರಕಾಶ್‌ ಮಗನಿಗೆ ಸುದೀಪ್‌ ʻʻತಾವು ಯಾವ ವರ್ಗದಿಂದ ಮನೆಗೆ ಹೋಗುತ್ತ ಇದ್ದೀರಿ? ಅಷ್ಟೇ ಅಲ್ಲದೇ ಬಿಗ್‌ ಬಾಸ್‌ ಮನೆಗೆ ಹೋಗುವವರು ಕಲಾವಿದರೋ ಏನೋ ಒಂದು ಒಂದು ವರ್ಗದಿಂದ ಹೋಗುತ್ತಾರೆ. ನಿಮ್ಮದೇನು? ಎಂದು ಪ್ರಶ್ನಿಸಿದ್ದಾರೆ. ಡ್ರೋನ್‌ ಪ್ರತಾಪ್‌ಗೆ ಕಿಚ್ಚ ಸುದೀಪ್‌ ʻʻಕರ್ನಾಟಕ ನಿಮ್ಮನ್ನು ತುಂಬ ನಂಬಿತು. ಇದ್ರೆ ಡ್ರೋನ್‌ ಪ್ರತಾಪ್‌ ತರ ಇರಬೇಕು ಅಂತ. ತಾವು ಸುಳ್ಳು ಹೇಳಿದ್ರಾ ಪ್ರತಾಪ್‌? ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೇ ಈ ಮೂವರಿಗೆ ಶೇ. 40ರಷ್ಟು ಕಡಿಮೆ ವೋಟಿಂಗ್‌ ಬಂದರೆ ಮನೆಯಿಂದ ಹೇಗೆ ಬಂದಿದ್ರೋ ಹಾಗೇ ವಾಪಸ್ ಹೋಗುತ್ತೀರಿ ಎಂದು ವೇದಿಕೆಯಲ್ಲಿ ಕಿಚ್ಚ ಹೆಳಿದ್ದಾರೆ. ಇವರಲ್ಲಿ ಯಾರು ಮನೆಯೊಳಗೆ ಎಂಟ್ರಿ ಪಡೆದುಕೊಳ್ಳುತ್ತಾರೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಹೆಚ್ಚಾಗಿದೆ. ಈ ಪ್ರೋಮೊಗೆ ನೆಟ್ಟಿಗರು ಕೂಡ ಡ್ರೋನ್‌ ಪ್ರತಾಪ್‌ ಬಿಗ್‌ ಬಾಸ್‌ಗೆ ಹೋಗುವುದು ಬೇಡ ಎಂದು ಬಹುತೇಕರು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: BBK Season 10: ಯಾರು ಇನ್, ಯಾರು ಔಟ್? ಸ್ಪರ್ಧಿಗಳನ್ನು ಡಿಸೈಡ್‌ ಮಾಡೋದು ಪ್ರೇಕ್ಷಕರು! ಹೊಸ ಪ್ರೋಮೊ ಔಟ್‌!

ಕಲರ್ಸ್‌ ಕನ್ನಡ ಪ್ರೋಮೊ

ಪ್ರೋಮೊದಲ್ಲಿ ಸುದೀಪ್‌ ʻಒಂದು ಮನೆ ಒಬ್ಬ ರಾವಣ ಮತ್ತು ಹತ್ತು ತಲೆ ಎಂದು ಹೇಳಿದ್ದಾರೆʼ. ಅಂದರೆ ಈ ಬಾರಿ ಹತ್ತು ಮಂದಿ ಬಿಗ್ ಬಾಗ್ ಮನೆಯೊಳಗೆ ಹೋಗುವುದು ಪಕ್ಕಾ ಆಗಿದೆ.ಈ ಮುಂಚಿನ ಬಿಗ್‌ ಬಾಸ್‌ನಲ್ಲಿ ವಿಜೇತರುಗಳಾದ ನಟಿ ಶೃತಿ, ಪ್ರಥಮ್, ರ‍್ಯಾಪರ್ ಚಂದನ್ ಶೆಟ್ಟಿ ಮತ್ತು ಹಾಸ್ಯ ನಟ ಮಂಜು ಪಾವಗಡ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ.ಈ ಬಾರಿ 10ನೇ ಸೀಸನ್ ಆಗಿರುವುದರಿಂದ ತುಂಬಾ ಸ್ಪೆಷಲ್ ಎಂದು ಕಲರ್ಸ್ ಕನ್ನಡ ಹೇಳಿದೆ. ಇಂದು ಬಿಗ್‌ ಬಾಸ್‌ ಮನೆಗೆ ಯಾರೆಲ್ಲ ಸ್ಪರ್ಧಿಗಳು ಇರಲಿದ್ದಾರೆ ಎಂಬುದು ರಿವೀಲ್‌ ಆಗಲಿದೆ. .‘777 ಚಾರ್ಲಿ’ ಸಿನಿಮಾದ ಚಾರ್ಲಿ ಈ ಬಾರಿ ಬಿಗ್ ಬಾಸ್ ಮನೆಗೆ ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಡುತ್ತಿರುವುದಂತೂ ಪಕ್ಕಾ ಆಗಿದೆ. ಮೂಲಗಳ ಪ್ರಕಾರ ಉರಗ ಸಂರಕ್ಷಕ ಸ್ನೇಕ್ ಶ್ಯಾಮ್ ಈ ಬಾರಿ ಬಿಗ್‌ಬಾಸ್ ಮನೆಗೆ ಹೋಗುತ್ತಿದ್ದಾರೆ. ಇದೀಗ ಮತ್ತೊಂದಿಷ್ಟು ಹೆಸರುಗಳು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಯಾಗುತ್ತಿವೆ. ಬಿಗ್ ಬಾಸ್ ಕನ್ನಡವನ್ನು ಜಿಯೋ ಸಿನಿಮಾದಲ್ಲಿ 24ಗಂಟೆ ನೇರಪ್ರಸಾರವನ್ನು ವೀಕ್ಷಿಸಬಹುದು.

Exit mobile version