ಬೆಂಗಳೂರು: ಬಿಗ್ ಬಾಸ್ ಸೀಸನ್ 10ರ (BBK Season 10) ನಾಲ್ಕನೇ ವಾರ ಡ್ರೋನ್ ಪ್ರತಾಪ್ ಟೀಂ ʻಗೊಂಬೆ ಆಟವಯ್ಯಾʼ ಟಾಸ್ಕ್‌ನಲ್ಲಿ ವಿನ್ ಆಗಿದೆ. ‘ಇದು ಗೊಂಬೆ ಆಟವಯ್ಯ’ ಚಟುವಟಿಕೆಯನ್ನು ಬಿಗ್ ಬಾಸ್ ನೀಡಿದ್ದರು‘. ಗಂಧದ ಗುಡಿ’ ಮತ್ತು ‘ವಜ್ರಕಾಯʼ ತಂಡಗಳು ಈ ಆಟವನ್ನು ಆಡಬೇಕಿತ್ತು. ಸದಸ್ಯರು ಗೊಂಬೆಗಳಂತೆ ಕೂರಬೇಕಿತ್ತು. ಬಿಗ್ ಬಾಸ್ ಯಾವ ಭಾವನೆ ಘೋಷಿಸುತ್ತಾರೋ, ಆ ಭಾವನೆಗಳನ್ನ ಗೊಂಬೆಗಳಂತೆ ಕೂತವರಿಂದ ಎದುರಾಳಿ ತಂಡದವರು ಹೊರಗೆ ತರಿಸಬೇಕಿತ್ತು. ಪಾಯಿಂಟ್ಸ್ ಹಾಕುವಾಗ ಪ್ರತಾಪ್ ಸರಿಯಾಗಿ ನಿಭಾಯಿಸಿಲ್ಲ ಎಂದು ಅವರ ತಂಡ ರೊಚ್ಚಿಗೆದ್ದಿತು. ಉಸ್ತುವಾರಿ ಕೆಲಸ ಸರಿಯಾಗಿ ಮಾಡಿಲ್ಲ ಎಂದು ಡ್ರೋನ್ ಪ್ರತಾಪ್ ವಿರುದ್ಧ ತಂಡದವರು ಬೇಸರ ಹೊರಹಾಕಿದರು. ಡ್ರೋನ್ ಪ್ರತಾಪ್ ವಾದಿಸಿದರು. ತಮ್ಮ ಉಗ್ರ ರೂಪವನ್ನು ಪ್ರದರ್ಶಿಸಿದರು.
ತನಿಷಾ ಹಾಗೂ ಪ್ರತಾಪ್ ನಡುವೇ ವಾರ್ ನಡೆದೇ ಹೋಗಿತ್ತು. ಅಳುವ ಹಂತದಲ್ಲಿ ತನಿಷಾ ಟಾಸ್ಕ್ ಮುಗಿದ ಮೇಲೆಯೂ ಕಣ್ಣೀರಿಟ್ಟರು. ಎರಡನೇ ಸುತ್ತು ಡ್ರಾ ಆಯ್ತು. ಇದು ಎರಡೂ ತಂಡಗಳಲ್ಲೂ ಅಸಮಾಧಾನ ಮೂಡಿಸಿತು. ಪ್ರತಾಪ್ ಮೇಲೆ ಅವರ ಟೀಂ ಕೂಗಾಡಿದರು. ಉಸ್ತುವಾರಿ ಕೆಲಸ ಸರಿಯಾಗಿ ಮಾಡಿಲ್ಲ ಎಂದು ಡ್ರೋನ್ ಪ್ರತಾಪ್ ವಿರುದ್ಧ ತಂಡದವರು ಬೇಸರ ಹೊರಹಾಕಿದರು.
ಇದನ್ನೂ ಓದಿ: BBK Season 10: ಚೂಡಿದಾರ ತೊಟ್ಟು ʻಮರಿಜಿಂಕೆ’ಯಾಗಿ ಬದಲಾದ ತುಕಾಲಿ ಸಂತು!
ಈ ವೇಳೆ ತನಿಷಾ ಅವರು ಡ್ರೋನ್‌ಗೆ ʻ10 ಫೌಲ್ ಎಕ್ಸ್ಟ್ರಾ ಆಗಿದೆ. ಪಾಯಿಂಟ್ಸ್ ಜಾಸ್ತಿ ಬರಬೇಕುʼʼಎಂದು ಪ್ರತಾಪ್ ಮೇಲೆ ಕೂಗಿದರು. ಈ ವೇಳೆ ಪ್ರತಾಪ್ ತಮ್ಮ ಟೀಂ ಮುಂದೆ ʻʻʻಉಸ್ತುವಾರಿ ಎಂದು ನಿಂತ ಮೇಲೆ ನನ್ನ ಡಿಸಿಶನ್ ಕರೆಕ್ಟ್ ಆಗಿದೆʼʼ ಎಂದು ವಾದಿಸಿದರು.
ವರ್ತೂರ್ ಸೇರಿದಂತೆ ಇಡೀ ತಂಡ ಪ್ರತಾಪ್ ಮೇಲೆ ಎರಗಿದಾಗ ಕೋಪಗೊಂಡ ಪ್ರತಾಪ್ ʻʻ‘’ಪಾಯಿಂಟ್ಸ್ ಹಾಕಿದ್ದೀನಿ’’ ಎಂದು ಫೈಲ್ ಎಸೆದು ರೊಚ್ಚಿಗೆದ್ದು ಹೊರಟರು. ‘’ಕಣ್ಣಿಗೆ ಕಾಣಿಸಿದ್ದನ್ನ ಬರೆಯಬೇಕು. ನಮ್ಮ ಅಪ್ಪ-ಅಮ್ಮ ಬಿಟ್ಟಿ ಹೆತ್ತು ಬಿಟ್ಟಿಲ್ಲ ಇಲ್ಲಿ. ಇವರು ಅಂದಂಗೆಲ್ಲಾ ಅನಿಸಿಕೊಳ್ಳೋಕೆ. ನೆಟ್ಟಗೆ ಮಾತನಾಡಬೇಕು. ಎಲ್ಲರಿಗೂ ನಾನು ಮರ್ಯಾದೆ ಕೊಟ್ಟು ಮಾತನಾಡುತ್ತೇನೆ’’ ಎಂದು ಹೇಳಿ ಪ್ರತಾಪ್ ಬೇಸರ ವ್ಯಕ್ತಪಡಿಸಿದರು. ತಮ್ಮ ತಂಡಕ್ಕೆ ಡ್ರೋನ್ ಪ್ರತಾಪ್ ಕ್ಷಮೆ ಕೇಳಿದರು.
ಈ ನಡುವೆ ಸಿರಿ ತಂಡದವರು ಟಾಸ್ಕ್ ಅನ್ನು ಮೈಖಲ್ ಮೂಲಕ ಫಿಕ್ಸ್ ಮಾಡುವ ಆಲೋಚನೆಯನ್ನೂ ಮಾಡಿದರಾದರೂ ವಿನಯ್ ಬೇಡ ಎಂದಿದ್ದಕ್ಕೆ ಸುಮ್ಮನಾದರು. ಅಂತಿಮವಾಗಿ ಡ್ರೋನ್ ಪ್ರತಾಪ್ರ ತಂಡವೇ ಗೆದ್ದಿತು. ಕಳೆದ ಸಂಚಿಕೆಯಲ್ಲಿಯೂ ಡ್ರೋನ್ ಪ್ರತಾಪ್ ಟೀಂ ಎಲ್ಲ ಟಾಸ್ಕ್‌ಗಳಲ್ಲಿ ವಿನ್ ಆಗಿದೆ. ಈಗಾಗಲೇ ಪ್ರತಾಪ್ ಅವರು ಸಂಗೀತಾ ಹಾಗೂ ಭಾಗ್ಯಶ್ರೀ ಅವರನ್ನು ನಾಮಿನೇಶನ್‌ನಿಂದ ಪಾರು ಮಾಡಿದ್ದಾರೆ. ಹಾಗೇ ಸ್ನೇಹಿತ್ ಅವರನ್ನು ನಾಮಿನೇಶನ್‌ನಿಂದ ಪಾರಾಗದಂತೆ ನಿರ್ಭಂದಿಸಿದ್ದಾರೆ.
ಬಿಗ್ಬಾಸ್ ಜಿಯೋ ಸಿನಿಮಾಸ್ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ