Site icon Vistara News

BBK Season 10: ಬಿಗ್‌ ಬಾಸ್‌ ಮನೆಗೆ ಇನ್ನೂ ಚಾರ್ಲಿ ಯಾಕೆ ಬರಲಿಲ್ಲ? ಹೊರಬಿತ್ತು ಸತ್ಯ!

777 Charlie

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ (BBK Season 10) ಆರಂಭದಲ್ಲಿ ಪ್ರೇಕ್ಷಕರು ತುದಿಗಾಲಲ್ಲಿ ಕಾಯುತ್ತಿದ್ದದ್ದು ಚಾರ್ಲಿಗೋಸ್ಕರ. ಬಿಗ್‌ ಬಾಸ್‌ ಆರಂಭವಾಗುವ ಮುಂಚೆಯೇ ಚಾರ್ಲಿ ಮೊದಲ ಸ್ಪರ್ಧಿ ಎಂದು ಕಲರ್ಸ್‌ ಕನ್ನಡ ಘೋಷಣೆ ಮಾಡಿತ್ತು. ಆದರೆ ಇದುವೆರೆಗೆ ಚಾರ್ಲಿ ಬರಲೇ ಇಲ್ಲ. ಇದೀಗ ಕಾರಣ ಏನು ಎಂಬುದು ರಿವೀಲ್‌ ಆಗಿದೆ.

777 ಚಾರ್ಲಿ ನಟಿ ಸಂಗೀತಾ ಶೃಂಗೇರಿ ಅವರಿಗೆ 80ಕ್ಕಿಂತಲೂ ಕಡಿಮೆ ಮತಗಳು ದೊರೆತ ಕಾರಣ ಅವರನ್ನು ವೇಟಿಂಗ್ ರೂಂನಲ್ಲಿ ಇರಿಸಲಾಯಿತು. ಹೊರಡುವುದಕ್ಕೂ ಮುಂಚೆ ಸುದೀಪ್‌ ಅವರು ಚಾರ್ಲಿ ಬಗ್ಗೆ ಪ್ತಸ್ತಾಪಿಸಿದರು. ಒಂದು ಸಲ ಚಾರ್ಲಿಯನ್ನು ಜೋರಾಗಿ ಕರೆಯಿರಿ ಎಂದರು. ನಟಿ ಸಂಗೀತಾ ಕೂಡ ‘ಚಾರ್ಲಿ.. ಚಾರ್ಲಿ.. ಟ್ರೀಟ್ ಕೊಡ್ತೀನಿ ಬಾ..’ ಎಂದು ಎಷ್ಟೇ ಕರೆದರೂ ಕೊನೆಗೂ ಬರಲೇ ಇಲ್ಲ. ‘ಬಹುಶಃ ನೀವು ಕರೆದಿದ್ದು ಚಾರ್ಲಿಗೆ ಕೇಳಿರುತ್ತದೆ. ಪರ್ಮಿಷನ್ ತೆಗೆದುಕೊಳ್ಳಲು ಕಾದಿರುತ್ತದೆ. ನಾರ್ತ್ ಇಂಡಿಯಾ ಹೋಗಿದೆ, ಬರುತ್ತೆ’ ಎಂದಿದ್ದರು ಸುದೀಪ್‌.

ಅಸಲಿ ಕಾರಣ ಬೇರೆ!

ವರದಿಗಳ ಪ್ರಕಾರ ಯಾವುದೇ ಸಿನಿಮಾ, ಕಿರುತೆರೆ ಅಥವಾ ರಿಯಾಲಿಟಿ ಶೋಗಳಲ್ಲಿ ಪ್ರಾಣಿಗಳನ್ನು ಬಳಸಿಕೊಳ್ಳಬೇಕಾದರೆ ಅನಿಮಲ್ ವೆಲ್‌ಫೇರ್ ಬೋರ್ಡ್ ಆಫ್ ಇಂಡಿಯಾ ಅನುಮತಿ ಬೇಕು. ಹಾಗೇ ಚಾರ್ಲಿಗೂ ಆದೇ ಆಗಿದೆ. ಬಿಗ್‌ಬಾಸ್ ಮನೆ ಪ್ರವೇಶಿಸಲು ಕೂಡ ಅನುಮತಿ ಬೇಕಾಗಿದೆ. ಆದರೆ ಇನ್ನೂ ಅನುಮತಿ ಸಿಕ್ಕಿಲ್ಲ. ಈ ಬಗ್ಗೆ ಚಾರ್ಲಿ ಟ್ರೈನರ್‌ ಮಾಧ್ಯಮವೊಂದಕ್ಕೆ ಮಾಹಿತಿ ಕೂಡ ಹಂಚಿಕೊಂಡಿದ್ದಾರೆ. ʻಅನಿಮಲ್ ವೆಲ್‌ಫೇರ್ ಬೋರ್ಡ್ ಆಫ್ ಇಂಡಿಯಾದಿಂದ ಇನ್ನೂ ಅನುಮತಿ ಸಿಕ್ಕಿಲ್ಲ. ಅದಕ್ಕಾಗಿ ಎಲ್ಲಾ ಪ್ರಯತ್ನಗಳು ನಡೀತಿದೆ. ಪತ್ರ, ಮೇಲ್ ಮೂಲಕ ಅನುಮತಿ ಕೋರಲಾಗಿತ್ತು. ಅನುಮತಿ ಸಿಕ್ಕ ಕೂಡಲೇ ಚಾರ್ಲಿ ಬಿಗ್‌ಬಾಸ್ ಮನೆ ಪ್ರವೇಶಿಸುತ್ತದೆ. ಅಷ್ಟೇ ಅಲ್ಲದೇ ಚಾರ್ಲಿ ಸ್ಪರ್ಧಿಯಾಗಿ ಹೋಗುತ್ತಿಲ್ಲ. ಎಂಟರ್‌ಟೈನರ್ ಆಗಿ ಮಾತ್ರ ಬಿಗ್‌ ಬಾಸ್‌ಗೆ ಹೋಗಲಿದೆʼʼ ಎಂದಿದ್ದಾರೆ.

ಇದನ್ನೂ ಓದಿ: BBK Season 10: ಬಾತ್‌ ರೂಮ್‌ನಲ್ಲಿ ಬಿಕ್ಕಿ ಬಿಕ್ಕಿ ಅತ್ತ ಡ್ರೋನ್‌ ಪ್ರತಾಪ್‌; ಕ್ಷಮೆ ಕೇಳಿದ ಸ್ಪರ್ಧಿಗಳು!

BBK Season 10

ಚಾರ್ಲಿ ಬಗ್ಗೆ ನಿಮಗೆಷ್ಟು ಗೊತ್ತು?

ಈ ವರ್ಷದ ಅನುಬಂಧ ಅವಾರ್ಡ್‌ನಲ್ಲಿ ಚಾರ್ಲಿ ಎಂಟ್ರಿ ಬಗ್ಗೆ ಘೋಷಣೆ ಮಾಡಲಾಗಿತ್ತು. ಈ ಬಾರಿ ಬಿಗ್‌ ಬಾಸ್‌ಗೆ ಮೊದಲನೇ ಸ್ಪರ್ಧಿಯಾಗಿ ಚಾರ್ಲಿ ಎಂಟ್ರಿ ಕೊಡಲಿದೆ ಎಂದು ಅನೌನ್ಸ್‌ ಕೂಡ ಮಾಡಲಾಗಿತ್ತು. ಆದರೀಗ ಅದು ಸುಳ್ಳಾಗಿದೆ. ರಕ್ಷಿತ್‌ ಶೆಟ್ಟಿ ನಟನೆಯ 777 ಚಾರ್ಲಿ ಸಿನಿಮಾ ಮೂಲಕ ಚಾರ್ಲಿ ನೋಡುಗರಿಗೆ ಪರಿಚಿತವಾದಳು. ನಿರ್ದೇಶಕ ಕಿರಣ್‌ ರಾಜ್‌ ಈ ಚಿತ್ರಕ್ಕಾಗಿ ಚಾರ್ಲಿಯನ್ನು ಅದ್ಭುತವಾಗಿ ತರಬೇತು ಮಾಡಿಸಿದ್ದಾರೆ. ಹಿಂದೊಮ್ಮೆ ಕಿರಣ್‌ ರಾಜ್‌ ಚಾರ್ಲಿ ಬಗ್ಗೆ ಮಾತನಾಡಿ ʻʻಚಾರ್ಲಿಗೆ ಅರ್ಥ ಮಾಡಿಸುವುದು ಸಿಕ್ಕಾಪಟ್ಟೆ ಚಾಲೆಂಜಿಂಗ್‌ ವಿಷಯವಾಗಿತ್ತು. ಅದು ಯಾವುದನ್ನು ಅರ್ಥ ಮಾಡಿಕೊಳ್ಳುತ್ತದೆ, ಯಾವುದು ಅದಕ್ಕೆ ಅರ್ಥವಾಗುವುದಿಲ್ಲ ಎಂಬುದನ್ನು ಮೊದಲು ಅರಿತು ನಂತರ ಅದಕ್ಕೆ ಬೇಕಾದ ಊಟ, ತಿಂಡಿ ಕೊಟ್ಟು ಪುಸಲಾಯಿಸಿ ನಟಿಸುವಂತೆ ಮಾಡುತ್ತಿದ್ದೆವು. ಕೆಲವೊಮ್ಮೆ ಇಡೀ ದಿನ ಒಂದೇ ಒಂದು ಟೇಕ್‌ ಕೂಡ ಆಗುತ್ತಿರಲಿಲ್ಲ’ ಎಂದು ಕಿರಣ್ ರಾಜ್ ಹೇಳಿದ್ದರು.

ಚಾರ್ಲಿಯನ್ನು ತಂದು ಅದಕ್ಕಾಗಿ ಆಫೀಸ್‌ ಪಕ್ಕ ಒಂದು ಮನೆ ಮಾಡಿದ್ದೆವು. ಟ್ರೇನರ್‌ ಪ್ರಮೋದ್‌ ಬಿ. ಸಿ. ಅದಕ್ಕೆ ಟ್ರೇನಿಂಗ್‌ ಮಾಡುತ್ತಿದ್ದರು. ನಮ್ಮ ಸಿನಿಮಾ ತಂಡದ ಜತೆ ಟ್ರೇನರ್‌ ಕೂಡ ನಾಲ್ಕು ವರ್ಷ ಜರ್ನಿ ಮಾಡಿದ್ದಾರೆ’ ಎಂದಿದ್ದರು. ಪ್ರಮೋದ್‌ ಅವರ ಬಳಿ ಕಿರಣ್‌ ರಾಜ್‌ ನಾಯಿಯ ಬಗ್ಗೆ ಪ್ರಸ್ತಾಪಿಸಿದ್ದರು. ನಾಲ್ಕೈದು ಸುತ್ತಿನ ಮಾತುಕತೆ ಬಳಿಕ ಪ್ರಮೋದ್ ಅವರೇ ಈ ಸಿನಿಮಾಕ್ಕೆ ಡಾಗ್‌ ಟ್ರೈನರ್ ಎಂದು ಸೆಲೆಕ್ಟ್ ಮಾಡುತ್ತಾರೆ. ಸಾಕಷ್ಟು ನಾಯಿಗಳನ್ನು ಹುಡುಕಿದರೂ ಸಿನಿಮಾಕ್ಕೆ ಬೇಕಾಗುವಂತಹ ಶ್ವಾನ ಸಿಗೋದಿಲ್ಲ. ಕೊನೇಗೆ ಸಿಕ್ಕಿದ್ದು ಚಾರ್ಲಿ. ಸ್ನೇಹಿತರೊಬ್ಬರು ಈ ನಾಯಿ ಬಗ್ಗೆ ಪ್ರಮೋದ್ ಅವರಿಗೆ ಹೇಳುತ್ತಾರೆ. ಆಗ ಇದು ತರಲೆ ನಾಯಿ ಮರಿ. ಮನೆಯವರಿಗೆ ಇದರ ಉಪಟಳ ಸಾಕಾಗಿ ಯಾರಾದರೂ ಸಾಕುವವರಿದ್ದರೆ ಕೊಡಲು ಮುಂದಾಗಿರುತ್ತಾರೆ. ಅಷ್ಟು ಹೊತ್ತಿಗೆ ಪ್ರಮೋದ್ ಕೂಡ ಹುಡುಕುತ್ತಿದ್ದ ನಾಯಿಯ ಲಕ್ಷಣಗಳೆಲ್ಲ ಇದರಲ್ಲೇ ಇತ್ತು. ಯಾರಿಗೂ ಬೇಡದ ಈ ನಾಯಿ ಮುಂದೆ 777 ಚಾರ್ಲಿಯಂಥಾ ಪ್ಯಾನ್‌ ಇಂಡಿಯಾ ಸಿನಿಮಾಗೆ ಹೀರೋ ಆಗುತ್ತದೆ. ಚಾರ್ಲಿ ಬಹಳ ತಿಂಡಿಪೋತಿ ಆಗಿತ್ತಂತೆ. ಇದನ್ನು ಇಟ್ಟುಕೊಂಡು ಪ್ರಮೋದ್ ಸತತ ನಾಲ್ಕು ವರ್ಷ ಈ ನಾಯಿಯನ್ನು ಟ್ರೈನ್ ಮಾಡುತ್ತಾರೆ.

Exit mobile version