Site icon Vistara News

BBK SEASON 10: ಬಿಗ್‌ಬಾಸ್ ಮನೆಯಲ್ಲಿ ಮಹಿಳೆಯರಿಗೆ ಅವಕಾಶ ಸಿಕ್ತಿಲ್ವಾ? ಧ್ವನಿ ಎತ್ತಿದ ಸಂಗೀತಾ!

vinay and sangeetha clash

ಬೆಂಗಳೂರು: ಬಿಗ್‌ಬಾಸ್ (BBK SEASON 10) ಮನೆಯಲ್ಲಿ ಮಹಿಳೆಯರಿಗೆ ಅವಕಾಶ ಸಿಕ್ತಿಲ್ವಾ? ‘ಬಿಗ್‌ಬಾಸ್ ಮನೆಯಲ್ಲಿ ಮಹಿಳೆಯರಿಗೆ ಸರಿಯಾದ ಅವಕಾಶ ಸಿಕ್ತಿಲ್ವಾ? -ಇಂಥದ್ದೊಂದು ವಿಚಾರ ಮನೆಯಲ್ಲಿ ಉದ್ಭವವಾಗಿದೆ. ಬಿಗ್‌ಬಾಸ್‌ ಒಂದು ಟಾಸ್ಕ್‌ ಕೊಟ್ಟಿದ್ದಾರೆ. ಆ ಟಾಸ್ಕ್ ಆಡಲು ನೀರಲ್ಲಿ ಮುಳುಗುವ, ಉತ್ತಮ ಗುರಿ ಹೊಂದಿರುವ ನಾಲ್ಕು ಸದಸ್ಯರ ಅಗತ್ಯ ಇದೆ ಎಂದು ಬಿಗ್‌ಬಾಸ್ ಹೇಳಿದ್ದಾರೆ. ಟಾಸ್ಕ್‌ಗೆ ಆಯ್ಕೆ ಮಾಡುವಾಗ ವಿನಯ್‌, ‘ನಾನು, ಕಾರ್ತಿಕ್, ಮೈಕಲ್ ಮತ್ತು ತುಕಾಲಿ’ ಎಂದು ಹೇಳಿದ್ದಾರೆ.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಸಂಗೀತಾ, ‘ನಾನು ಯಾಕೆ ಬೇಡ ಅಂತ ಹೇಳಿಲ್ಲ ನೀವು. ಮಹಿಳೆಯರು ಹೀಗೆಯೇ ಗೆಲ್ಲಲು ಸಾಧ್ಯವಾಗ್ತಿಲ್ಲ’ ಎಂದು ತಕರಾರು ತೆಗೆದಿದ್ದಾರೆ. ಇದಕ್ಕೆ ವಿನಯ್, ‘ಪುರುಷ ಹಾಗೂ ಸ್ತ್ರೀ ಎಂದು ಬೇರೆ ಮಾಡಿ ನೋಡುವುದು ಸರಿಯಲ್ಲ. ಈ ಮನೆಯಲ್ಲಿ ನಿನ್ನ ಬಾಯಲ್ಲಿ ಮಾತ್ರ ಯಾಕೆ ಪುರುಷ ಹಾಗೂ ಸ್ತ್ರೀ ಎನ್ನುವ ತಾರತಮ್ಯದ ಮಾತು ಬರೀ ನಿನ್ನ ಬಾಯಲ್ಲಿ ಕೇಳಿಸುತ್ತದೆ?’ ಎಂದು ವಿನಯ್ ಗರಂ ಆಗಿದ್ದಾರೆ. ಇದಕ್ಕೆ ಸಂಗೀತಾ ಕೂಡ ‘ಅವಕಾಶ ಸಿಕ್ತಿದೆ ಅಂತ ಬೇರೆ ವಿಷಯನೆಲ್ಲ ಇಲ್ಲಿಗೆ ಎಳೆದು ತರಬೇಡಿ’ ಎಂದು ಅಷ್ಟೇ ಗಟ್ಟಿಯಾಗಿ ಮಾತಾಡಿದ್ದಾರೆ. ತನಿಷಾ ಕೂಡ ಸಂಗೀತಾ ವಿರುದ್ಧ, ‘ನೀವು ಆಡಿದ ಎಲ್ಲ ಟಾಸ್ಕ್‌ಗಳಲ್ಲಿಯೂ ಫರ್ಪೆಕ್ಟ್ ಆಗಿ ಆಡಿದ್ದೀರಾ?’ ಎಂದು ಪ್ರಶ್ನಿಸಿದ್ದಾರೆ. ಒಟ್ಟಾರೆ ಮತ್ತೊಮ್ಮೆ ಬಿಗ್‌ಬಾಸ್ ಮನೆಯಲ್ಲಿ ಮಹಿಳೆ-ಪುರುಷರ ನಡುವಿನ ತಾರತಮ್ಯ ಬಗ್ಗೆ ಚರ್ಚೆ ಶುರುವಾಗಿದೆ.

ಇದನ್ನೂ ಓದಿ: BBK SEASON 10: ಕುಟುಂಬದಿಂದ ದೂರ ಇರುವಂತೆ ಸಲಹೆ ನೀಡಿದ ಗುರೂಜಿ; ಪ್ರತಾಪ್‌ಗೆ ಶಾಕ್‌!

ಸ್ಟುಪಿಡ್ ಥರ ಆಡಬೇಡ; ಡ್ರೋನ್‌ಗೆ ಜಾಡಿಸಿದ ವಿನಯ್‌!

ಬಿಗ್‌ ಬಾಸ್‌ ಸೀಸನ್‌ 10 (BBK SEASON 10) ಹದಿಮೂರನೇ ವಾರಕ್ಕೆ ಕಾಲಿಟ್ಟಿದೆ. ಈಗಾಗಲೇ ʻಬಿಗ್‌ ಬಾಸ್‌ʼ ಸ್ಪರ್ಧಿಗಳ ಮಧ್ಯೆ ಪೈಪೋಟಿ ಹೆಚ್ಚಾಗಿದೆ. ಡ್ರೋನ್ ಪ್ರತಾಪ್ ವಿರುದ್ಧ ಮೈಕಲ್, ವಿನಯ್ ಸಿಡಿದೆದಿದ್ದಾರೆ. ಬಿಗ್‌ಬಾಸ್‌ ಒಂದು ಟಾಸ್ಕ್‌ ಕೊಟ್ಟಿದ್ದಾರೆ. ಆ ಟಾಸ್ಕ್ ಆಡಲು ನೀರಲ್ಲಿ ಮುಳುಗುವ, ಉತ್ತಮ ಗುರಿ ಹೊಂದಿರುವ ನಾಲ್ಕು ಸದಸ್ಯರ ಅಗತ್ಯ ಇದೆ ಎಂದು ಬಿಗ್‌ಬಾಸ್ ಹೇಳಿದ್ದಾರೆ. ಈ ಟಾಸ್ಕ್‌ನಲ್ಲಿ ಯಾರು ಭಾಗವಹಿಸಬೇಕು ಎಂಬ ಚರ್ಚೆ ನಡೆದಾಗ ಡ್ರೋನ್ ಪ್ರತಾಪ್ ಕೊಟ್ಟ ಆಯ್ಕೆಗಳು ಮೈಕಲ್, ವಿನಯ್‌ಗೆ ಸರಿ ಎನಿಸಲಿಲ್ಲ. ಹೀಗಾಗಿ, ‘’ನಿನ್ನದು ಈಗೋ ಗೇಮ್ ಆಗ್ತಿದೆʼ ಎಂದು ಡ್ರೋನ್ ಪ್ರತಾಪ್‌ಗೆ ಮೈಕಲ್, ವಿನಯ್ ಹೇಳಿದ್ದಾರೆ.

ವಿನಯ್‌ ಅವರು, ‘ನಾನು, ಕಾರ್ತಿಕ್, ಮೈಕಲ್ ಮತ್ತು ತುಕಾಲಿ’ ಎಂದು ಹೇಳಿದ್ದಾರೆ. ಇದಕ್ಕೆ ಸಂಗೀತಾ ಕೂಡ ಅಸಮಾಧಾನ ವ್ಯಕ್ತಪಡಿಸಿದರು. ಜತೆಗೆ ಡ್ರೋನ್‌ ಅವರ ಆಯ್ಕೆ ವಿಚಾರದಲ್ಲಿ ವಿನಯ್‌, ಮೈಕಲ್‌ ಸಿಡಿದೆದ್ದರು. 10 ಲಕ್ಷ ರೂಪಾಯಿ ಗಳಿಸಲು ಈ ವಾರದ ಮೂರನೇ ಟಾಸ್ಕ್‌ ಅನ್ನು ‘ಬಿಗ್ ಬಾಸ್‌’ ನೀಡಿದರು. ಯಾವ 4 ಸ್ಪರ್ಧಿಗಳು ಆಡಬೇಕು, ಯಾವ 5 ಸ್ಪರ್ಧಿಗಳು ಆಡಬಾರದು ಎಂದು ತನಿಷಾ ಹೊರತುಪಡಿಸಿ ಪ್ರತಿಯೊಬ್ಬರೂ ಹೇಳಬೇಕು ಎಂದು ‘ಬಿಗ್ ಬಾಸ್‌’ ಸೂಚಿಸಿದರು.

ಬಹುತೇಕರು ಸೂಚಿಸಿದ್ದು ವಿನಯ್, ಕಾರ್ತಿಕ್, ಮೈಕಲ್ ಹಾಗೂ ತುಕಾಲಿ ಸಂತು. ಆದರೆ, ಡ್ರೋನ್ ಪ್ರತಾಪ್ – ತಮ್ಮನ್ನೂ ಸೇರಿಸಿ ಸಂಗೀತಾ, ನಮ್ರತಾ, ಕಾರ್ತಿಕ್ ಹೆಸರನ್ನ ಹೇಳಿದರು. ʻʻವಿನಯ್ ಯಾಕೆ ಬೇಡ ಅಂದ್ರೆ ಕೆಲವು ಟಾಸ್ಕ್‌ಗಳಲ್ಲಿ ಸ್ಟ್ರಾಟೆಜಿ ಮಾಡ್ತೀನಿ ಅಂತ ಹೋಗಿ ಫೇಲ್ ಆಗಿವೆ’’ ಎಂದರು ಡ್ರೋನ್ ಪ್ರತಾಪ್. ಈ ವೇಳೆ ಮೈಕಲ್, ವಿನಯ್ ಹಾಗೂ ಡ್ರೋನ್ ಪ್ರತಾಪ್ ಮಧ್ಯೆ ಜಗಳ ಆಗಿದೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version