ಹಣಕಾಸು ಸಚಿವೆ (Finance Minister) ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಜುಲೈ 23ರಂದು ಮಂಗಳವಾರ ಕೇಂದ್ರ ಬಜೆಟ್ 2024-25 (Union Budget 2024) ಅನ್ನು ಮಂಡಿಸುವ ಸಿದ್ಧತೆಯಲ್ಲಿದ್ದಾರೆ. ಲೋಕಸಭಾ ಚುನಾವಣೆ ಬಳಿಕ ಏರಿಕೆ ಹಾದಿಯಲ್ಲಿ ಜಿಗಿಯುತ್ತಿರುವ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಬಜೆಟ್ ಮಂಡನೆ ದಿನ ಕೊಂಚ ತಲ್ಲಣ ಉಂಟು ಮಾಡಬಹುದಾ ಎಂಬ ಪ್ರಶ್ನೆ ಎದ್ದಿದೆ. ಆದರೆ ಆರ್ಥಿಕ ತಜ್ಞರು ಈ ಬಜೆಟ್ ಭಾರತೀಯ ಷೇರು ಮಾರುಕಟ್ಟೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, ಎಂದಿನಂತೆ ಅದು ನಡೆಯುತ್ತದೆ ಎನ್ನುತ್ತಿದ್ದಾರೆ.
ಹೀಗಾಗಿ ಬಜೆಟ್ ಮಂಡನೆ ದಿನ ಷೇರು ಮಾರುಕಟ್ಟೆಯಲ್ಲಿ ಏನಾಗಬಹುದು ಎನ್ನುವ ಕುತೂಹಲ ಹೆಚ್ಚಾಗಿದೆ. ಈ ಬಗ್ಗೆ ಈ ಹಿಂದಿನ ಷೇರು ಮಾರುಕಟ್ಟೆ ಇತಿಹಾಸ ಏನು ಹೇಳುತ್ತದೆ ಎಂಬುದನ್ನು ನೋಡೋಣ. 2013ರಿಂದ ಬಜೆಟ್ ದಿನಗಳಲ್ಲಿ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಆಗಿರುವ ಬದಲಾವಣೆಗಳು ಹೇಗಿತ್ತು ಎನ್ನುವ ಮಾಹಿತಿ ಇಲ್ಲಿದೆ.
2013ರ ಬಜೆಟ್
ಪ್ರಮುಖ ಅಂಶ: ಬಂಡವಾಳ ಹಿಂತೆಗೆತ ಮತ್ತು ಸ್ಪೆಕ್ಟ್ರಮ್ ಮಾರಾಟದಿಂದ ಹೆಚ್ಚಿನ ಆದಾಯ, ಮ್ಯೂಚುವಲ್ ಫಂಡ್ ಮತ್ತು ಈಕ್ವಿಟಿ ಫ್ಯೂಚರ್ಸ್ ವಹಿವಾಟುಗಳಿಗೆ ಸೆಕ್ಯುರಿಟೀಸ್ ಟ್ರಾನ್ಸಾಕ್ಷನ್ ತೆರಿಗೆಯಲ್ಲಿ ಕಡಿತ.
ಬಜೆಟ್ ಮಂಡನೆ ದಿನ: 2013ರ ಫೆಬ್ರವರಿ 28
ಇಂಟ್ರಾ-ಡೇ ಸ್ವಿಂಗ್: ಶೇ. 2.8
2014ರ ಮಧ್ಯಂತರ ಬಜೆಟ್
ಮಾರುಕಟ್ಟೆ ಪ್ರತಿಕ್ರಿಯೆ: ದೇಶೀಯ ಷೇರು ಮಾರುಕಟ್ಟೆಯಲ್ಲಿ ಶೇ. 0.5ರಷ್ಟು ಏರಿಕೆಯಾಗಿದೆ.
ಬಜೆಟ್ ಮಂಡನೆ ದಿನ: 2014ರ ಫೆಬ್ರವರಿ 17
ಇಂಟ್ರಾ-ಡೇ ಸ್ವಿಂಗ್: ಶೇ. 0.8
2014ರ ಪೂರ್ಣ ಬಜೆಟ್
ಮುಖ್ಯಾಂಶಗಳು: ಹೊಸದಾಗಿ ರಚನೆಯಾದ ನರೇಂದ್ರ ಮೋದಿ ಸರ್ಕಾರದ ಮೊದಲ ಬಜೆಟ್.
ಮಾರುಕಟ್ಟೆ ಪ್ರತಿಕ್ರಿಯೆ: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಶೇ. 0.3ರಷ್ಟು ಇಳಿಕೆಯಾಗಿದೆ.
ಬಜೆಟ್ ಮಂಡನೆ ದಿನ: 2014ರ ಜುಲೈ 10
ಇಂಟ್ರಾ-ಡೇ ಸ್ವಿಂಗ್: ಶೇ. 3.2
2015ರ ಬಜೆಟ್
ಮುಖ್ಯಾಂಶಗಳು: ಆರೋಗ್ಯ ಕ್ಷೇತ್ರ, ವೈದ್ಯಕೀಯ ಶಿಕ್ಷಣ, ಸಂಸ್ಥೆಗಳ ಸ್ಥಾಪನೆ, ಸೌರ ವಿದ್ಯುತ್ ಯೋಜನೆಗಳು ಮತ್ತು ನಮಾಮಿ ಗಂಗೆ ಯೋಜನೆಗೆ 2,037 ಕೋಟಿ ರೂ.
ಮಾರುಕಟ್ಟೆ ಪ್ರತಿಕ್ರಿಯೆ: ಬಿಎಸ್‌ಇ ಸೆನ್ಸೆಕ್ಸ್ ಶೇ.0.5ರಷ್ಟು ಏರಿಕೆ ಕಂಡಿದೆ.
ಬಜೆಟ್ ಮಂಡನೆ ದಿನ: 2015ರ: ಫೆಬ್ರವರಿ 28
ಇಂಟ್ರಾ-ಡೇ ಸ್ವಿಂಗ್: ಶೇ. 2.3
2016ರ ಬಜೆಟ್
ಮುಖ್ಯಾಂಶಗಳು: 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಭರವಸೆ, ಗ್ರಾಮೀಣ ನೈರ್ಮಲ್ಯಕ್ಕಾಗಿ ಸ್ವಚ್ಛ ಭಾರತ ಅಭಿಯಾನಕ್ಕೆ 9,000 ಕೋಟಿ ಅನುದಾನ.
ಮಾರುಕಟ್ಟೆ ಪ್ರತಿಕ್ರಿಯೆ: ಷೇರು ಮಾರುಕಟ್ಟೆ ಶೇ. 0.7ರಷ್ಟು ಕುಸಿತ
ಬಜೆಟ್ ಮಂಡನೆ ದಿನ: 2016ರ ಫೆಬ್ರವರಿ 29
ಇಂಟ್ರಾ-ಡೇ ಸ್ವಿಂಗ್: ಶೇ. 3.8
2017ರ ಬಜೆಟ್
ಮುಖ್ಯಾಂಶಗಳು: 2.5 ಲಕ್ಷ ರೂ. ನಿಂದ 5 ಲಕ್ಷ ರೂ. ನಡುವಿನ ಆದಾಯ ಹೊಂದಿರುವ ವ್ಯಕ್ತಿಗಳಿಗೆ ಆದಾಯ ತೆರಿಗೆ ದರವನ್ನು ಶೇ. 5ಕ್ಕೆ ಕಡಿತಗೊಳಿಸಲಾಗಿದೆ.
ಮಾರುಕಟ್ಟೆ ಪ್ರತಿಕ್ರಿಯೆ: ಸೆನ್ಸೆಕ್ಸ್ ಶೇ.1.8ರಷ್ಟು ಏರಿಕೆಯಾಗಿದೆ.
ಬಜೆಟ್ ಮಂಡನೆ ದಿನ: 2017ರ ಫೆಬ್ರವರಿ 1
ಇಂಟ್ರಾ-ಡೇ ಸ್ವಿಂಗ್: ಶೇ. 2.1
2018ರ ಬಜೆಟ್
ಮುಖ್ಯಾಂಶಗಳು: ಉತ್ಪಾದನೆ, ಸೇವೆಗಳು ಮತ್ತು ರಫ್ತುಗಳೊಂದಿಗೆ ಶೇ.8ಕ್ಕಿಂತ ಹೆಚ್ಚಿನ ಬೆಳವಣಿಗೆಯತ್ತ ಹೆಜ್ಜೆ.
ಮಾರುಕಟ್ಟೆ ಪ್ರತಿಕ್ರಿಯೆ: ಭಾರತೀಯ ಷೇರು ಮಾರುಕಟ್ಟೆಯು ಶೇ. 0.2ರಷ್ಟು ಕುಸಿತ
ಬಜೆಟ್ ಮಂಡನೆ ದಿನ: 2018ರ ಫೆಬ್ರವರಿ 1
ಇಂಟ್ರಾ-ಡೇ ಸ್ವಿಂಗ್: ಶೇ. 2.1
2019ರ ಮಧ್ಯಂತರ ಬಜೆಟ್
ಮುಖ್ಯಾಂಶಗಳು: ರೈತರಿಗೆ ಪ್ರಮುಖ ಯೋಜನೆ, ಆದಾಯ ತೆರಿಗೆ ಕೊಡುಗೆ, ಸೆಕ್ಷನ್ 87A ಅಡಿಯಲ್ಲಿ ವಾರ್ಷಿಕ ಆದಾಯವನ್ನು 5 ಲಕ್ಷ ರೂ.ವರೆಗೆ ತೆರಿಗೆ ಮುಕ್ತಗೊಳಿಸಲು ರಿಯಾಯಿತಿಯನ್ನು ಹೆಚ್ಚಿಸಲಾಗಿದೆ.
ಮಾರುಕಟ್ಟೆ ಪ್ರತಿಕ್ರಿಯೆ: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಶೇ. 0.6% ಏರಿಕೆ.
ಬಜೆಟ್ ಮಂಡನೆ ದಿನ: 2019ರ ಫೆಬ್ರವರಿ 1
ಇಂಟ್ರಾ-ಡೇ ಸ್ವಿಂಗ್: ಶೇ. 1.5
2019ರ ಪೂರ್ಣ ಬಜೆಟ್
ಮುಖ್ಯಾಂಶಗಳು: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಮೋದಿ 2.0 ಸರ್ಕಾರಕ್ಕೆ ಇದು ಮೊದಲ ಬಜೆಟ್.
ಮಾರುಕಟ್ಟೆ ಪ್ರತಿಕ್ರಿಯೆ: ಷೇರು ಮಾರುಕಟ್ಟೆ ಶೇ.1ರಷ್ಟು ಕುಸಿತ ಕಂಡಿದೆ.
ಬಜೆಟ್ ಮಂಡನೆ ದಿನ: 2019ರ ಜುಲೈ 5
ದಿನದ ವಹಿವಾಟು: ಶೇ. 1.5
2020ರ ಬಜೆಟ್
ಮುಖ್ಯಾಂಶಗಳು: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಹೆಚ್ಚಳ, ಚಿನ್ನದ ಮೇಲಿನ ಆಮದು ಸುಂಕ ಹೆಚ್ಚಳ, ಸೂಪರ್ ರಿಚ್‌ಗಳ ಮೇಲೆ ಹೆಚ್ಚುವರಿ ಸರ್ಚಾರ್ಜ್, ಹೆಚ್ಚಿನ ಮೌಲ್ಯದ ನಗದು ಹಿಂಪಡೆಯುವಿಕೆಯ ಮೇಲೆ ತೆರಿಗೆ, ಕಾರ್ಪೊರೇಟ್ ತೆರಿಗೆ ಕಡಿತ, ವಸತಿ ವಲಯ, ಸ್ಟಾರ್ಟ್‌ಅಪ್‌ಗಳು ಮತ್ತು ಎಲೆಕ್ಟ್ರಿಕ್ ವಾಹನಗಳಿಗೆ ತೆರಿಗೆ ಕಡಿತ.
ಮಾರುಕಟ್ಟೆ ಪ್ರತಿಕ್ರಿಯೆ: ಮಾರುಕಟ್ಟೆಯು ಶೇ. 2.4ರಷ್ಟು ಕುಸಿತ
ಬಜೆಟ್ ಮಂಡನೆ ದಿನ: 2020ರ ಫೆಬ್ರವರಿ 1
ದಿನದ ವಹಿವಾಟು: ಶೇ. 3.2
2021ರ ಬಜೆಟ್
ಮುಖ್ಯಾಂಶಗಳು: ಸಾಂಕ್ರಾಮಿಕ ರೋಗದ ಮಧ್ಯೆ ಭಾರತೀಯ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವ ದಿಟ್ಟ ಕ್ರಮಗಳು.
ಮಾರುಕಟ್ಟೆ ಪ್ರತಿಕ್ರಿಯೆ: ಷೇರು ಮಾರುಕಟ್ಟೆ ಶೇ. 4.7ರಷ್ಟು ಏರಿಕೆ
ಬಜೆಟ್ ಮಂಡನೆ ದಿನ: 2021ರ ಫೆಬ್ರವರಿ 1
ದಿನದ ವಹಿವಾಟು: ಶೇ. 4.9
2022ರ ಬಜೆಟ್
ಮುಖ್ಯಾಂಶಗಳು: ಮೂಲಸೌಕರ್ಯ ಅಭಿವೃದ್ಧಿ, ದೇಶೀಯ ರಕ್ಷಣಾ ವಲಯ, ಬಂಡವಾಳ ವೆಚ್ಚ ಹೆಚ್ಚಳದ ಮೇಲೆ ಕೇಂದ್ರೀಕರಣ
ಮಾರುಕಟ್ಟೆ ಪ್ರತಿಕ್ರಿಯೆ: ಷೇರು ಮಾರುಕಟ್ಟೆ ಶೇ. 1.4ರಷ್ಟು ಜಿಗಿತ.
ಬಜೆಟ್ ಮಂಡನೆ ದಿನ: 2022ರ ಫೆಬ್ರವರಿ 1
ಇಂಟ್ರಾ-ಡೇ ಸ್ವಿಂಗ್: ಶೇ. 1.4
2023ರ ಬಜೆಟ್
ಮುಖ್ಯಾಂಶಗಳು: ಹೊಸ ತೆರಿಗೆ ಪದ್ಧತಿಗೆ ಆದಾಯ ತೆರಿಗೆ ರಿಯಾಯಿತಿಯನ್ನು 7 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಹೊಸ ತೆರಿಗೆ ಪದ್ಧತಿಗೆ 50,000 ರೂ.ಗಳ ಪ್ರಮಾಣಿತ ಕಡಿತ.
ಮಾರುಕಟ್ಟೆ ಪ್ರತಿಕ್ರಿಯೆ: ಷೇರು ಮಾರುಕಟ್ಟೆಯು ಶೇ. 0.25ರಷ್ಟು ಕುಸಿತ
ಬಜೆಟ್ ಮಂಡನೆ ದಿನ: 2023ರ ಫೆಬ್ರವರಿ 1
ಇಂಟ್ರಾ-ಡೇ ಸ್ವಿಂಗ್: ಶೇ. 3.6
2024ರ ಮಧ್ಯಂತರ ಬಜೆಟ್
ಮುಖ್ಯಾಂಶಗಳು: ಲೋಕಸಭಾ ಚುನಾವಣೆಗೆ ಮುನ್ನ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಮಧ್ಯಂತರ ಬಜೆಟ್ ಪ್ರಸ್ತುತಪಡಿಸಿದರು.
ಮಾರುಕಟ್ಟೆ ಪ್ರತಿಕ್ರಿಯೆ: ಸ್ಟಾಕ್ ಮಾರುಕಟ್ಟೆ ಸೂಚ್ಯಂಕಗಳು ದಿನದಂದು ಕೆಳಮಟ್ಟಕ್ಕೆ ಕೊನೆಗೊಂಡಿವೆ.
ಬಜೆಟ್ ಮಂಡನೆ ದಿನ: 2024ರ ಫೆಬ್ರವರಿ 1
ಎಸ್ ಆಂಡ್ ಪಿಬಿಎಸ್‌ಇ ಸೆನ್ಸೆಕ್ಸ್: 106.81 ಪಾಯಿಂಟ್‌ಗಳ ಇಳಿಕೆಯೊಂದಿಗೆ 71,645.30 ಕ್ಕೆ ಕೊನೆಗೊಂಡಿತು.
ಎನ್‌ಎಸ್‌ಇ ನಿಫ್ಟಿ 50: 28.25 ಪಾಯಿಂಟ್‌ಗಳ ಇಳಿಕೆಯೊಂದಿಗೆ 21,697.45ಕ್ಕೆ ಸ್ಥಿರವಾಯಿತು.
ಇದನ್ನೂ ಓದಿ: Union Budget 2024: ಬಜೆಟ್‌ಗೂ ಮೊದಲು, ನಂತರ ಹೂಡಿಕೆ ಮಾಡುವುದು ಲಾಭವೇ? ತಜ್ಞರು ಹೇಳೋದಿಷ್ಟು
ಕೇಂದ್ರ ಬಜೆಟ್ 2024 ಮಂಡನೆಗೆ ಮುಂಚಿತವಾಗಿ ನಿಫ್ಟಿ ಮತ್ತು ಸೆನ್ಸೆಕ್ಸ್‌ನಲ್ಲಿನ ವೇಗವು ಕೊಂಚ ನಿಧಾನವಾಗಿದೆ. ಸಾಮಾನ್ಯ ತೆರಿಗೆದಾರರು, ಹೂಡಿಕೆದಾರರು, ಕೈಗಾರಿಕೆಗಳು, ರೈತರು, ಮಹಿಳೆಯರು ಮತ್ತು ಎಫ್‌ಎಂಸಿಜಿ, ರಿಯಲ್ ಎಸ್ಟೇಟ್ ಮತ್ತು ತಂತ್ರಜ್ಞಾನದಂತಹ ಪ್ರಮುಖ ಉದ್ಯಮ ವಲಯಗಳು ಸೇರಿದಂತೆ ವಿವಿಧ ಶ್ರೇಣಿಯ ಮಧ್ಯಸ್ಥಗಾರರ ಅಗತ್ಯತೆಗಳು ಮತ್ತು ನಿರೀಕ್ಷೆಗಳನ್ನು ಬಜೆಟ್ ಮೇಲೆ ಹೆಚ್ಚಾಗಿದೆ. ಪ್ರಸ್ತುತ ಬಿಎಸ್‌ಇ ಸೆನ್ಸೆಕ್ಸ್ ಮತ್ತು ಎನ್‌ಎಸ್‌ಇ ನಿಫ್ಟಿ ತಮ್ಮ ದಾಖಲೆಯ ಉನ್ನತ ಮಟ್ಟದಲ್ಲಿ ವಹಿವಾಟು ನಡೆಸುತ್ತಿವೆ. ಹಾಗಾಗಿ ಈ ಬಾರಿಯ ಕೇಂದ್ರ ಬಜೆಟ್ ಕುತೂಹಲ ಮೂಡಿಸಿದೆ.