ಬೆಂಗಳೂರು: ಕರ್ನಾಟಕ ರತ್ನ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಸಿನಿಮಾ ಗಂಧದಗುಡಿಯು (100 Days Of Gandhadagudi) ೧೦೦ ದಿನ ಪೂರೈಸಿದೆ. ಹಾಗಾಗಿ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಅವರು ಟ್ವಿಟರ್‌ನಲ್ಲಿ ಸಂತಸ ಹಂಚಿಕೊಂಡಿದ್ದಾರೆ. “೧೦೦ ದಿನಗಳನ್ನು ಪೂರೈಸಿದ ನಿಜವಾದ ನಾಯಕನ ಪಯಣ” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಕರ್ನಾಟಕದ ಅರಣ್ಯ, ವನ್ಯಜೀವಿಗಳು, ಪರಿಸರ ಸಂಪತ್ತಿನ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಬಗ್ಗೆ ಚಿತ್ರಿಸಿದ ಡಾಕ್ಯುಮೆಂಟರಿಯಲ್ಲಿ ಪುನೀತ್ ರಾಜಕುಮಾರ್ ಅವರು ಪುನೀತ್ ಆಗಿಯೇ ಕಾಣಿಸಿಕೊಂಡಿದ್ದರು. ಸಾಕ್ಷ್ಯಚಿತ್ರವು ಅಕ್ಟೋಬರ್ ೨೮ರಂದು ವಿಶ್ವಾದ್ಯಂತ ಬಿಡುಗಡೆಯಾಗಿ, ಜನರ ಮನ ಗೆದ್ದಿತ್ತು. ಈಗ ಸಿನಿಮಾ ಶತದಿನ ಪೂರೈಸಿದ ಸಾಧನೆ ಮಾಡಿದೆ.
ಕರ್ನಾಟಕದ ಕಾನನದ ಕುರಿತು ಜಾಗೃತಿ ಮೂಡಿಸುವುದು, ವನ್ಯಜೀವಿಗಳ ಸಂರಕ್ಷಣೆ ಸಾರುವುದು ಪುನೀತ್ ರಾಜಕುಮಾರ್ ಅವರ ಉದ್ದೇಶವಾಗಿತ್ತು. ಹಾಗಾಗಿ ಅವರು ಅಮೋಘವರ್ಷ ನಿರ್ದೇಶನದ ಗಂಧದ ಗುಡಿಯ ಭಾಗವಾಗಿದ್ದರು. ಇದೇ ಅವರ ಕೊನೆಯ ಸಿನಿಮಾ ಆಗಿದೆ.
ಇದನ್ನೂ ಓದಿ: Gandhada Gudi | ಕೇಕ್ ಕತ್ತರಿಸಿ ʻಗಂಧದ ಗುಡಿʼ ಸಕ್ಸೆಸ್ ಆಚರಿಸಿದ ಚಿತ್ರತಂಡ: ಫೋಟೊ ವೈರಲ್!