Site icon Vistara News

2022 Wrap | ಕನ್ನಡ ಚಿತ್ರರಂಗಕ್ಕೆ 2022 ಮ್ಯಾಜಿಕಲ್‌ ವರ್ಷ: ಇಲ್ಲಿವೆ ಸಿನಿಮಾಗಳ ಸಮಗ್ರ ನೋಟ!

2022 Wrap

ಬೆಂಗಳೂರು : 2022 ಕನ್ನಡ ಚಿತ್ರರಂಗಕ್ಕೆ (2022 Wrap) ಒಂದು ಚಮತ್ಕಾರಿ ವರ್ಷ ಎಂತಲೇ ಹೇಳಬಹುದು. ರಿಷಬ್‌ ಶೆಟ್ಟಿ ನಟನೆ ಹಾಗೂ ನಿರ್ದೇಶನದ ‘ಕಾಂತಾರ’ ಸಿನಿಮಾ ಹಾಗೂ ಪ್ರಶಾಂತ್‌ ನೀಲ್‌ ನಿರ್ದೇಶನ ಹಾಗೂ ಯಶ್‌ ನಟನೆಯ ‘ಕೆಜಿಎಫ್‌-2’ ಸಿನಿಮಾ ರಾಜ್ಯ ಮಾತ್ರವಲ್ಲದೆ ವಿಶ್ವಾದ್ಯಂತ ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಗಳಿಕೆ ಕಂಡು ಇತಿಹಾಸ ನಿರ್ಮಿಸಿದವು. ಇದರ ಸಾಲಿಗೆ ʻ777 ಚಾರ್ಲಿʼ ಹಾಗೂ ಕಿಚ್ಚ ಸುದೀಪ್‌ ನಟನೆಯ ʻವಿಕ್ರಾಂತ್‌ ರೋಣʼ ಕೂಡ ಸೇರಿವೆ. ಈ ವರ್ಷ ಸ್ಯಾಂಡಲ್‌ವುಡ್‌ನಲ್ಲಿ ಅನೇಕ ಹೊಸ ಪ್ರತಿಭೆಗಳು ಹೊಸ ಸಿನಿಮಾ ಮೂಲಕ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಸಾಕಷ್ಟು ಪ್ರೀತಿ ಮತ್ತು ಮೆಚ್ಚುಗೆಯನ್ನು ಹಲವು ಸಿನಿಮಾಗಳು ಗಳಿಸಿವೆ. ಸ್ಯಾಂಡಲ್‌ವುಡ್‌ನಲ್ಲಿ ಕಳೆದ 12 ತಿಂಗಳುಗಳಲ್ಲಿ ಎಷ್ಟೆಲ್ಲ ಸಿನಿಮಾಗಳು ರಿಲೀಸ್‌ ಆಗಿವೆ ಎಂಬುದರ ಸಮಗ್ರ ನೋಟ ಇಲ್ಲಿವೆ.

ನೆನಪುಳಿದ ಜೇಮ್ಸ್‌ ಸಿನಿಮಾ!
ಮಾರ್ಚ್ 17ರಂದು ಬಿಡುಗಡೆಯಾದ ಪುನೀತ್ ರಾಜ್‌ಕುಮಾರ್ ಅವರ ಕೊನೆಯ ಆ್ಯಕ್ಷನ್-ಥ್ರಿಲ್ಲರ್ ಚಿತ್ರವಾದ ಜೇಮ್ಸ್, ಭರ್ಜರಿ ಕಲೆಕ್ಷನ್ ಮಾಡಿತು. ಹಲವಾರು ಬಾಕ್ಸ್‌ ಆಫೀಸ್‌ ದಾಖಲೆಗಳನ್ನು ಪುಡಿಮಾಡಿತು. ಬಿಡುಗಡೆಯಾದ ನಾಲ್ಕು ದಿನಗಳಲ್ಲಿ ಚಿತ್ರವು 150 ಕೋಟಿ ರೂ. ಕೋಟಿ ರೂಪಾಯಿ ಗಳಿಸುವ ಮೂಲಕ ಅತ್ಯಂತ ವೇಗವಾಗಿ 100 ಕೋಟಿ ಕ್ಲಬ್‌ಗೆ ಸೇರಿದ ಕನ್ನಡ ಚಿತ್ರ ಎನಿಸಿಕೊಂಡಿತು.  ಕೋವಿಡ್‌ ನಂತರದಲ್ಲಿ ʻಲವ್ ಮಾಕ್ಟೇಲ್ 2ʼ,ʻ ಏಕ್ ಲವ್ ಯಾʼ, ʻಬೈ2ಲವ್ʼ ಮತ್ತು ʻಓಲ್ಡ್ ಮಾಂಕ್ʼ ಚಿತ್ರಗಳು ಬಿಡುಗಡೆಗೊಂಡು ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡವು.

ಇದನ್ನೂ ಓದಿ | Vedha Movie | ʻವೇದʼ ಸಿನಿಮಾ 3 ದಿನಗಳಲ್ಲಿ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಮಾಡಿದ್ದೆಷ್ಟು?

ಈ ವರ್ಷ ಭಾರತದಾದ್ಯಂತ 1,000 ಕೋಟಿ ರೂ. ಕಲೆಕ್ಷನ್ ಮಾಡಿದ ಮೊದಲ ಚಿತ್ರ ಕೆಜಿಎಫ್ ಚಾಪ್ಟರ್ 2
ಸ್ಯಾಂಡಲ್‌ವುಡ್‌ಗೆ ಮೊದಲ ದೊಡ್ಡ ಬ್ರೇಕ್ ಎಂದರೆ ʻಕೆಜಿಎಫ್ ಚಾಪ್ಟರ್ 2, ʻಮಾಸ್ ಮಸಾಲಾ ಆ್ಯಕ್ಷನ್ ಎಂಟರ್‌ಟೈನರ್ ಆಗಿರುವ ಕೆಜಿಎಫ್‌ ಕನ್ನಡ ಚಿತ್ರರಂಗವನ್ನು ಮತ್ತೊಮ್ಮೆ ರಾಷ್ಟ್ರಮಟ್ಟಕ್ಕೆ ತಲುಪಿಸುವಂತೆ ಮಾಡಿತು. ಪ್ರಶಾಂತ್‌ ನೀಲ್‌ ನಿರ್ದೇಶನ ಹಾಗೂ ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಕೆಜಿಎಫ್‌ ಜಾಗತಿಕವಾಗಿ 1200 ಕೋಟಿ ರೂ. ಗಳಿಕೆ ಕಂಡಿತು. ಫ್ರ್ಯಾಂಚೈಸ್ ಒಟ್ಟಾರೆಯಾಗಿ 1,500 ಕೋಟಿ ರೂ. ಗಳಿಸಿದೆ. ಕನ್ನಡದಲ್ಲಿ 2022ರಲ್ಲಿ 100 ಕೋಟಿ ಕ್ಲಬ್ ಸೇರಿದ ಮೊದಲ ಸಿನಿಮಾ ಇದಾಗಿದೆ.

ಈ ವರ್ಷ ಅತಿ ಹೆಚ್ಚು ಗಳಿಕೆ ಮಾಡಿದ ಐದನೇ ಕನ್ನಡ ಚಿತ್ರ 777 ಚಾರ್ಲಿ
ನಂತರ ಬಿಡುಗಡೆಗೊಂಡ ರಿಯಲ್‌ ಸ್ಟಾರ್‌ ಉಪೇಂದ್ರ ಅವರ ʻಹೋಮ್ ಮಿನಿಸ್ಟರ್ʼ ನೀರಸ ಪ್ರತಿಕ್ರಿಯೆಯನ್ನು ಪಡೆಯಿತು. ʻಅವತಾರ ಪುರುಷʼ, ʻಹರಿಕಥೆ ಅಲ್ಲ ಗಿರಿಕಥೆʼ ಸೇರಿದಂತೆ ಅನೇಕ ಚಿತ್ರಗಳು ಏಪ್ರಿಲ್ ಮತ್ತು ಜೂನ್ ನಡುವೆ ಬಿಡುಗಡೆ ಮಾಡಲಾಯಿತು. ʻಶುಗರ್‌ಲೆಸ್ʼ ಮತ್ತು ʻವೀಲ್ ಚೇರ್ʼ, ʻರೋಮಿಯೋʼ ಸಿನಿಮಾಗಳು ಕಟೆಂಟ್‌ ಮೂಲಕ ಗಮನ ಸೆಳೆದವು. ನಿರ್ದೇಶಕ ಕಿರಣ್‌ರಾಜ್ ಅವರ 777 ಚಾರ್ಲಿ ವಿಮರ್ಶಾತ್ಮಕವಾಗಿ ಮೆಚ್ಚುಗೆ ಗಳಿಸಿತು . ರಕ್ಷಿತ್‌ ಶೆಟ್ಟಿ ಅಭಿನಯದ ಈ ಚಿತ್ರ 100 ಕೋಟಿಗೂ ಅಧಿಕ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಮಾಡಿತು. ಇದು ಈ ವರ್ಷ ಅತಿ ಹೆಚ್ಚು ಗಳಿಕೆ ಮಾಡಿದ ಐದನೇ ಕನ್ನಡ ಚಲನಚಿತ್ರವಾಗಿದೆ.

ಇದನ್ನೂ ಓದಿ | Kannada New Movie | ಸೈನ್ಸ್ ಫಿಕ್ಷನ್ ಸಿನಿಮಾದಲ್ಲಿ ಮಿಂಚಲಿದ್ದಾರೆ ʻವಿಕ್ರಾಂತ್‌ ರೋಣʼ ಪಿಟಿ ಮೇಷ್ಟ್ರು ವಜ್ರಧೀರ್ ಜೈನ್

ಜುಲೈ ಮತ್ತು ಸೆಪ್ಟೆಂಬರ್ ನಡುವೆ 50 ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಗೊಂಡ ಕಾರಣ ವರದಿ ಪ್ರಕಾರ ಶಿವರಾಜ್‌ಕುಮಾರ್ ಅಭಿನಯದ ʻಬೈರಾಗಿʼ ಚಿತ್ರ ಅಷ್ಟಾಗಿ ಯಶಸ್ಸು ಪಡೆದುಕೊಂಡಿಲ್ಲ. ʻಬೆಂಕಿʼ, ʻರವಿ ಬೋಪಣ್ಣʼ, ʻಪೆಟ್ರೋಮ್ಯಾಕ್ಸ್ʼ, ʻತೋತಾಪುರಿʼ ಮತ್ತು ʻಮಾನ್ಸೂನ್ ರಾಗʼದಂತಹ ಚಲನಚಿತ್ರಗಳು ಅಷ್ಟಾಗಿ ಸಕ್ಸೆಸ್‌ ಕಂಡಿಲ್ಲ.

100 ಕೋಟಿ ಕ್ಲಬ್‌ ಸೇರಿದ ವಿಕ್ರಾಂತ್ ರೋಣ
ಬಳಿಕ ಬಿಡುಗಡೆಗೊಂಡ ಕಿಚ್ಚ ಸುದೀಪ್‌ ನಟನೆಯ ʻವಿಕ್ರಾಂತ್‌ ರೋಣʼ 100 ಕೋಟಿ ಕ್ಲಬ್‌ ಸೇರಿತು. ಮಿಸ್ಟರಿ ಥ್ರಿಲ್ಲರ್‌ಗಾಗಿ ಅನುಪ್ ಭಂಡಾರಿ ಜತೆಗೂಡಿ, ಸುದೀಪ್ ಈ ಚಿತ್ರದಲ್ಲಿ ಹೊಸ ಪ್ರಯೋಗ ಮಾಡಿದರು. ಇದೇ ಸಾಲಿನಲ್ಲಿ ಗಣೇಶ್-ಯೋಗರಾಜ್ ಭಟ್ ಕಾಂಬಿನೇಶನ್‌ನಲ್ಲಿ ಮೂಡಿಬಂದ ಗಾಳಿಪಟ-2 ಮತ್ತು ಶರಣ್ ಅಭಿನಯದ ʻಗುರು ಶಿಷ್ಯರುʼ ಇತರ ಕೆಲವು ಚಿತ್ರಗಳು ಯಶಸ್ಸನ್ನು ಕಂಡವು.

ಕನ್ನಡದ ಎರಡನೇ ಅತಿ ಹೆಚ್ಚು ಗಳಿಕೆಯ ಚಿತ್ರ ಕಾಂತಾರ
16 ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ ನಿರ್ಮಿಸಲಾಗಿದ ರಿಷಬ್ ಶೆಟ್ಟಿ ಅಭಿನಯಿಸಿ ನಿರ್ದೇಶಿಸಿರುವ ಕಾಂತಾರ ಕನ್ನಡದಲ್ಲಿ ಮಾತ್ರ ತೆರೆಗೆ ಬಂದು ಭಾರಿ ಪ್ರಶಂಸೆಯನ್ನು ಪಡೆಯಿತು. ಸೆಪ್ಟೆಂಬರ್ 30 ರಂದು ತೆರೆಕಂಡ ಈ ಚಿತ್ರವು ಭಾರಿ ಬೇಡಿಕೆಯ ಕಾರಣದಿಂದ ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ತುಳು ಭಾಷೆಗಳಿಗೆ ಡಬ್ ಆಗಿದ್ದು, ವಿಶ್ವದಾದ್ಯಂತ 400 ಕೋಟಿ ರೂ.ಗಳನ್ನು ಗಳಿಸಿದೆ. ಕಾಂತಾರ ಸಿನಿಮಾ ಸಾರ್ವಕಾಲಿಕ ಕನ್ನಡದ ಎರಡನೇ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿ ಹೊರಹೊಮ್ಮಿದೆ.

ಇದನ್ನೂ ಓದಿ | Naga Chaitanya | ನಾಗಚೈತನ್ಯ ನಟನೆಯ ʻಕಸ್ಟಡಿʼ ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್‌!

ಹೊಸ ಪ್ರತಿಭೆಗಳ ಸಿನಿಮಾಗಳೇ ಹೆಚ್ಚು
ಅಕ್ಟೋಬರ್‌ನಲ್ಲಿ ಡಾಲಿ ಧನಂಜಯ್‌ ಅವರ ʻಹೆಡ್ ಬುಷ್‌ʼ ಸಿನಿಮಾ ಬಿಡುಗಡೆಗೊಂಡಿದ್ದರೂ ಹಲವು ವಿವಾದಗಳನ್ನು ಎದುರಿಸಿತು. ಬಳಿಕ ನವನಟ ಝೈದ್ ಖಾನ್ ಅವರ ʻಬನಾರಸ್ʼ ನವೆಂಬರ್‌ನಲ್ಲಿ ನವೆಂಬರ್‌ನಲ್ಲಿ ಬಹು ಭಾಷೆಗಳಲ್ಲಿ ಬಿಡುಗಡೆಯಾಯಿತು. ಈ ವರ್ಷ ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರತಿಭೆಗಳು ಹೆಚ್ಚಾಗಿ ಸಿನಿಮಾಗಳನ್ನು ಮಾಡಿದ್ದಾರೆ. ಅದರಲ್ಲಿ ʻಕಂಬ್ಳಿಹುಳʼ, ʻಧರಣಿ ಮಂಡಲ ಮಧ್ಯದೊಳಗೆ ʼಸಿನಿಮಾ ಸಾಕಷ್ಟು ಛಾಪು ಮೂಡಿಸಿತು. ʻದಿಲ್ ಪಸಂದ್ʼ, ʻರಾಣಾʼ, ತ್ರಿʻಬಲ್‌ ರೈಡಿಂಗ್ʼ ಮತ್ತು ʻತಿಮ್ಮಯ್ಯ ಆ್ಯಂಡ್‌ ತಿಮ್ಮಯ್ಯʼನಂತಹ ದೊಡ್ಡ ಚಿತ್ರಗಳ ಜತೆಗೆ ರಿಲೀಸ್‌ ಆದರೂ ಸಾಕಷ್ಟು ಸದ್ದು ಮಾಡಿದೆ.ʼ

ಕನ್ನಡದ ಮೊದಲ ಬಯೋಪಿಕ್‌ ಸಿನಿಮಾ
ಡಿಸೆಂಬರ್‌ನಲ್ಲಿ ಅನೇಕ ಚಿತ್ರಗಳು ಬಿಡುಗಡೆಯಾಗಿದ್ದು, ಕನ್ನಡ ಚಿತ್ರರಂಗದಲ್ಲಿಯೇ ಮೊದಲ ಬಯೋಪಿಕ್‌ ಸಿನಿಮಾ ಬಿಡುಗಡೆಯಾಯಿತು. ಅದುವೇ ಪದ್ಮಶ್ರೀ ಡಾ. ವಿಜಯ ಸಂಕೇಶ್ವರ ಅವರ ಜೀವನಾಧಾರಿತ ಸಿನಿಮಾ ʻವಿಜಯಾನಂದʼ. ಡಿಸೆಂಬರ್ 9ಕ್ಕೆ ಪಂಚ ಭಾಷೆಯಲ್ಲಿ ತೆರೆ ಕಂಡಿತು. ಬಳಿಕ ಶಿವರಾಜ್‌ ಕುಮಾರ್‌ ಅಭಿನಯದ 125 ನೇ ಚಿತ್ರ, ʻವೇದʼ ಮೆಚ್ಚುಗೆ ಗಳಿಸಿದೆ. ಇದೀಗ ಧನಂಜಯ್ ಅವರ ʻಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡʼ, ಹರಿಪ್ರಸಾದ್‌-ಜಯಣ್ಣ ಅವರ ʻಪದವಿ ಪೂರ್ವʼ ಹೀಗೆ ಹಲವು ಸಿನಿಮಾಗಳು ತೆರೆ ಕಾಣಲಿವೆ.

ಇಷ್ಟೆಲ್ಲ ಸಿನಿಮಾಗಳ ನಡುವೆ ಸಿನಿಪ್ರಿಯರು ಮೊದಲಾರ್ಧ ವರ್ಷದಲ್ಲಿ ಕೆಜಿಎಫ್‌ ಹಾಗೂ ಇಯರ್‌ ಎಂಡ್‌ವರೆಗೂ ಕಾಂತಾರ ಸಿನಿಮಾದ ಹ್ಯಾಂಗೋವರ್‌ನಲ್ಲಿಯೇ ಇದ್ದಾರೆ. ʻರಾಕಿಬಾಯ್‌ʼ (ಕೆಜಿಎಫ್‌) ಹಾಗೂ ʻಶಿವʼ (ಕಾಂತಾರ) ಪಾತ್ರ ಈ ವರ್ಷ ನೆನಪುಳಿಯುವಂತ ಪಾತ್ರಗಳಾಗಿವೆ.

ಇದನ್ನೂ ಓದಿ | Pathaan Film | ʻಪಠಾಣ್‌ʼ ಸಿನಿಮಾದ ಹಾಡುಗಳಲ್ಲಿ ಬದಲಾವಣೆಗೆ ಸೆನ್ಸಾರ್‌ ಮಂಡಳಿ ಆದೇಶ

Exit mobile version