Site icon Vistara News

ʻಆರ್‌ಆರ್‌ಆರ್‌ʼಗೆ ಸಿಕ್ತು ಸೆನ್ಸಾರ್ ಸರ್ಟಿಫಿಕೇಟ್‌.. ʻಬಾಹುಬಲಿ-2ʼ ಚಿತ್ರವನ್ನೇ ಮೀರಿಸುತ್ತೆ ಈ ಸಿನಿಮಾ..!

ಸಕ್ಸಸ್‌ಫುಲ್‌ ಡೈರೆಕ್ಟರ್ ರಾಜಮೌಳಿ ನಿರ್ದೇಶನದಲ್ಲಿ ಮೆಗಾ ಪವರ್‌ ಸ್ಟಾರ್ ರಾಮಚರಣ್‌ ಹಾಗೂ ಯಂಗ್‌ ಟೈಗರ್‌ ಜ್ಯೂನಿಯರ್‌ ಎನ್‌ಟಿಆರ್‌ ಅಭಿನಯಿಸಿರುವ ಪಾನ್‌ ಇಂಡಿಯಾ ಮಲ್ಟಿಸ್ಟಾರರ್‌ ಸಿನಿಮಾ ʻಆರ್‌ಆರ್‌ಆರ್ʼ ಇನ್ನೊಂದು ವಾರದಲ್ಲಿ ವಿಶ್ವದಾದ್ಯಂತ ರಿಲೀಸ್‌ ಆಗುತ್ತಿರುವ ವಿಷಯ ಎಲ್ಲರಿಗೂ ಗೊತ್ತೇ ಇದೆ.

ಬಹು ನಿರೀಕ್ಷಿತ ʻಆರ್‌ಆರ್‌ಆರ್‌ʼ ಚಿತ್ರಕ್ಕೆ ಸೆನ್ಸಾರ್‌ ಮಂಡಳಿಯಿಂದ U/A ಸರ್ಟಿಫಿಕೇಟ್‌ ಸಿಕ್ಕಿದೆ. ಮತ್ತೊಂದು ಇಂಟ್ರೆಸ್ಟಿಂಗ್‌ ವಿಚಾರ ಅಂದ್ರೆ ಈ ಚಿತ್ರ ರನ್‌ ಟೈಮ್‌ ವಿಷಯದಲ್ಲಿ ʻಬಾಹುಬಲಿ-2ʼ ಸಿನಿಮಾವನ್ನೇ ಮೀರಿಸಿದೆ ಎಂದು ಚಿತ್ರತಂಡ ತಿಳಿಸಿದೆ.

ʻಆರ್‌ಆರ್‌ಆರ್‌ʼ ಸಿನಿಮಾದ ರನ್‌‌ ಟೈಮ್‌ 3 ಗಂಟೆ 6 ನಿಮಿಷ 54 ಸೆಕೆಂಡ್.‌ ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬಂದಿದ್ದ ʻಬಾಹುಬಲಿ ದಿ ಕನ್‌ಕ್ಯೂಷನ್ʼ ಚಿತ್ರದ ರನ್‌ ಟೈಮ್ 2 ಗಂಟೆ 47 ನಿಮಿಷ ಇತ್ತು. ಆದ್ರೆ, ಆರ್‌ಆರ್‌ಆರ್‌ ಚಿತ್ರ ಇಂಟರ್‌ವೆಲ್ ಸೇರಿ ಮೂರುವರೆ ಗಂಟೆ ಪ್ರದರ್ಶನ ಕಾಣಲಿದೆ. ಹಾಗಾಗಿ ʻಬಾಹುಬಲಿ-2ʼ ಚಿತ್ರಕ್ಕಿಂತ ʻಆರ್‌ಆರ್‌ಆರ್‌ʼ ಸಿನಿಮಾ ರನ್‌ ಟೈಮ್‌ ಹೆಚ್ಚಿದೆ ಎಂಬುದು ಗಮನಾರ್ಹ.

Exit mobile version