Site icon Vistara News

Actor Prithiveeraj | 24 ವರ್ಷದ ಜಿಮ್‌ ಟ್ರೈನರ್‌ ಪ್ರೀತಿಯ ಬಲೆಯಲ್ಲಿ 56 ವರ್ಷದ ನಟ ಪೃಥ್ವಿರಾಜ್‌!

Actor Prithiveeraj

ಬೆಂಗಳೂರು: ಕನ್ನಡ ಮಾತ್ರವಲ್ಲದೇ ಹಲವು ಸಿನಿಮಾಗಳಲ್ಲಿ ನಟಿಸಿರುವ ನಟ ಪೃಥ್ವಿರಾಜ್‌ (Actor Prithiveeraj ) ತನ್ನ ಜಿಮ್‌ ಟ್ರೈನರ್‌ ಜತೆ ಪ್ರೀತಿಯಲ್ಲಿ ಇರುವುದಾಗಿ ಬಹಿರಂಗವಾಗಿ ಸೋಷಿಯಲ್‌ ಮೀಡಿಯಾ ಮೂಲಕ ಹೇಳಿಕೊಂಡಿದ್ದಾರೆ. 56 ವರ್ಷದ ಪೃಥ್ವಿರಾಜ್‌ 24 ವರ್ಷದ ಜಿಮ್‌ ಟ್ರೈನರ್‌ ಶೀತಲ್‌ ಜತೆ ಇರುವ ಫೋಟೊ ವೈರಲ್‌ ಆಗಿದೆ.

ಚಿತ್ರರಂಗದಲ್ಲಿ ಅದೆಷ್ಟೋ ಜೋಡಿ ತಮಗಿಂತ ಕಿರಿಯವರ ಜತೆ ಎಂಗೇಜ್‌ ಆಗಿರುವ ಅದೆಷ್ಟೋ ಉದಾಹರಣೆಗಳಿವೆ. ಇದೀಗ 56 ವರ್ಷದ ನಟ ಪೃಥ್ವಿರಾಜ್‌ ತಮಗಿಂತ 33 ವರ್ಷದ ಕಿರಿಯ ಯುವತಿ ಜತೆ ಡೇಟಿಂಗ್‌ ಮಾಡುತ್ತಿರುವುದು ಪ್ರೀತಿಗೆ ವಯಸ್ಸಿನ ಹಂಗಿಲ್ಲಾ ಎಂಬುದು ಸಾಬೀತು ಮಾಡಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ನಟ ಪೃಥ್ವಿರಾಜ್‌ ಅವರು ಶೀತಲ್‌ ಜತೆ ರೀಲ್ಸ್‌ ಮಾಡುತ್ತಿದ್ದರು. ನೆಟ್ಟಿಗರು ಕಮೆಂಟ್‌ ಮೂಲಕ ಇವರಿಬ್ಬರು ರಿಲೇಷನ್‌ಶಿಪ್‌ನಲ್ಲಿ ಇದ್ದಾರೆ ಎಂದು ಹೇಳುತ್ತಿದ್ದರು. ಅನೇಕ ಸಮಯದಿಂದ ಇಬ್ಬರೂ ಒಟ್ಟಿಗೆ ಸುತ್ತಾಡುತ್ತಿರುವ ಫೋಟೊ ಕೂಡ ವೈರಲ್‌ ಆಗಿತ್ತು.

ಇದನ್ನೂ ಓದಿ | ಕಾಲಿವುಡ್​ ನಿರ್ಮಾಪಕರಿಗೆ ಸೇರಿದ ಸ್ಥಳಗಳಲ್ಲಿ ಐಟಿ ರೇಡ್​; 200 ಕೋಟಿ ರೂ ಅಕ್ರಮ ಆದಾಯ ಪತ್ತೆ

ಬಹುಮುಖ ಪ್ರತಿಭೆ ನಟ ಪೃಥ್ವಿರಾಜ್‌ !
ಪೃಥ್ವಿರಾಜ್‌ ಬಾಲ ಕಲಾವಿದನಾಗಿ ಚಿತ್ರರಂಗ ಪ್ರವೇಶಿಸಿದರು. 1971 ರಲ್ಲಿ ತಮಿಳು ಚಲನಚಿತ್ರ ʻನಂಗು ಸುವರ್ಗಲ್‌ʼನೊಂದಿಗೆ ನಟನೆಗೆ ಪದಾರ್ಪಣೆ ಮಾಡಿದರು. ಕೆಲವು ವರ್ಷಗಳ ಕಾಲ ಚಿತ್ರರಂಗದಿಂದ ವಿರಾಮ ತೆಗೆದುಕೊಂಡ ನಟ, 1980ರಲ್ಲಿ ಮತ್ತೆ ಕಮ್‌ ಬ್ಯಾಕ್‌ ಆದರು. 1980 ರಿಂದ 2000ರವರೆಗೆ ಅನೇಕ ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಚಲನಚಿತ್ರಗಳಲ್ಲಿ ಪೋಷಕ ನಟನಾಗಿ ಕಾಣಿಸಿಕೊಂಡರು.

1998ರಲ್ಲಿ ಬಿಡುಗಡೆಯಾದ ʻಅವಲ್ ವರುವಾಲಾʼ ಚಿತ್ರದಲ್ಲಿ ಅಜಿತ್ ಕುಮಾರ್ ಮತ್ತು ಸಿಮ್ರಾನ್ ಜತೆ ಪ್ರಮುಖ ಪಾತ್ರದಲ್ಲಿ ಪೃಥ್ವಿರಾಜ್‌ ಕಾಣಿಸಿಕೊಂಡರು. ಈ ಚಿತ್ರದ ಅಭಿನಯಕ್ಕಾಗಿ ಪೃಥ್ವಿರಾಜ್‌ ಪ್ರಶಂಸೆ ಗಳಿಸಿದರು. ʻಅರಸಿʼ ಮತ್ತು ʻವಾಣಿ ರಾಣಿʼಯಂತಹ ಕೆಲವು ಬ್ಲಾಕ್‌ಬಸ್ಟರ್ ಧಾರಾವಾಹಿಗಳಲ್ಲಿನ ಪಾತ್ರಗಳೊಂದಿಗೆ ತಮಿಳು ಟೆಲಿವುಡ್‌ನಲ್ಲಿ ಅತ್ಯಂತ ಬೇಡಿಕೆಯ ತಾರೆಗಳಲ್ಲಿ ಒಬ್ಬರಾಗಿ ತಮ್ಮನ್ನು ತಾವು ಗುರುತಿಸಿಕೊಂಡರು. ʻಜೋಡಿ ನಂಬರ್ ಒನ್ʼ ಸೇರಿದಂತೆ ಅನೇಕ ಜನಪ್ರಿಯ ಟಿವಿ ಕಾರ್ಯಕ್ರಮಗಳನ್ನು ಸಹ ಆಯೋಜಿಸಿದ್ದಾರೆ.

ಇದೀಗ ಜೋಡಿ ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಪೃಥ್ವಿರಾಜ್‌ 1994ರಲ್ಲಿ ಬೀನಾ ಅವರನ್ನು ಮದುವೆಯಾಗಿದ್ದರು. ಆರು ವರ್ಷಗಳಿಂದ ಬೇರೆ ಆಗಿದ್ದರು. ಶೀತಲ್‌ ಜತೆ ಮದುವೆಯಾಗುವುದರ ಬಗ್ಗೆ ನಟ ಗ್ನೀನ್‌ ಸಿಗ್ನಲ್‌ ಕೊಟ್ಟಿದ್ದಾರೆ.

ಇದನ್ನೂ ಓದಿ | Prithviraj Sukumaran | ಪೃಥ್ವಿರಾಜ್‌ ಲುಕ್‌ ಹಂಚಿಕೊಂಡ ಹೊಂಬಾಳೆ: ಉಗ್ರಂ ಬಾಲ ಮತ್ತೆ ಬಂದ್ರು ಎಂದ ಫ್ಯಾನ್ಸ್‌!

Exit mobile version