ಬೆಂಗಳೂರು : ಸ್ಯಾಂಡಲ್‌ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ (777 Charlie) ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಚಾರ್ಲಿ ಮತ್ತು ಧರ್ಮನ ಪಯಣವನ್ನು ಪ್ರೇಕ್ಷಕರು ನೋಡಿ ಕಣ್ತುಂಬಿಸಿಕೊಂಡಿದ್ದಾರೆ. ಚಿತ್ರ ಮಂದಿರಗಳಲ್ಲಿ ರಾರಾಜಿಸುತ್ತಿರುವ 777 ಚಾರ್ಲಿ ಸಿನಿಮಾ 150 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಗುಲ್ಲು ಎಬ್ಬಿಸಿದೆ. ಕಿರಣ್ ರಾಜ್ ನಿರ್ದೇಶನದ ಈ ಸಿನಿಮಾವನ್ನು ಪಂಚ ಭಾಷೆಗಳಲ್ಲಿ ಜನರು ನೋಡಿ ಹಾಡಿ ಹೊಗಳಿದ್ದಾರೆ.
ಇದೀಗ ಮತ್ತೆ 777 ಚಾರ್ಲಿ ಚಿತ್ರತಂಡ ಸಂತಸದ ಸುದ್ದಿಯನ್ನು ಹಂಚಿಕೊಂಡಿದೆ. ಹೌದು ಚಾರ್ಲಿ ಮನೆಗೆ ಬರುತ್ತಿದೆ. 777 ಚಾರ್ಲಿ ಒಟಿಟಿ ರಿಲೀಸ್ ಆಗಲು ಸಜ್ಜಾಗಿದೆ. ಜುಲೈ 29ರಂದು 777 ಚಾರ್ಲಿ ವೂಟ್‌ನಲ್ಲಿ ಸ್ಕ್ರೀಮಿಂಗ್ ಆಗುತ್ತಿದೆ.
ಇದನ್ನೂ ಓದಿ | 777 ಚಾರ್ಲಿ- ಧರ್ಮ ಥರಾ ನೀವು ಜತೆಯಾಗಿ ಪ್ರವಾಸ ಹೋಗ್ತೀರಾ?
ಚಾರ್ಲಿಯಿಂದ ಬಂದ ಲಾಭ ಹಂಚಿಕೊಂಡ ಸಿಂಪಲ್ ಸ್ಟಾರ್
ಸಿನಿಮಾ ಯಶಸ್ಸಿನಲ್ಲಿ ಉಳಿದವರಿಗೂ ಪಾಲಿದೆ ಎಂದು ನಿರ್ಧರಿಸಿರುವ ರಕ್ಷಿತ್ ಈ ಕುರಿತು ತಮ್ಮ ಇನ್‌ಸ್ಟಾ ಮೂಲಕ ಪತ್ರ ಬಿಡುಗಡೆ ಮಾಡಿದ್ದಾರೆ. ಶೇ.10ರಷ್ಟು ಚಿತ್ರದಲ್ಲಿ ಕೆಲಸ ಮಾಡಿದವರಿಗೆ, ನಿರಾಶ್ರಿತ ಶ್ವಾನಗಳ ಹಾಗೂ ಮೂಕ ಪ್ರಾಣಿಗಳ ರಕ್ಷಣೆ ಮತ್ತು ಪೋಷಣೆಗೆ ಸಮರ್ಪಿತವಾಗಿ ದೇಶಾದ್ಯಂತ ಕೆಲಸ ಮಾಡುತ್ತಿರುವ ಎನ್‌ಜಿಓ(NGO)ಗಳಿಗೆ ಶೇ.5ರಷ್ಟು ನೀಡಲು ತೀರ್ಮಾನಿಸಿದ್ದಾರೆ.
777 ಚಾರ್ಲಿ ಸಿನಿಮಾ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುವುದಕ್ಕೂ ಮೊದಲೇ ಚಿತ್ರತಂಡ ಹಲವು ಕಡೆಗಳಲ್ಲಿ ಪ್ರೀಮಿಯರ್ ಶೋ ಏರ್ಪಡಿಸಿತ್ತು. ಇಲ್ಲಿಯೂ ಸಹ ಜನರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಚಿತ್ರದ ಪ್ರಸಾರದ ಹಕ್ಕು ಕೂಡ ಒಳ್ಳೆಯ ಮೊತ್ತಕ್ಕೆ ಮಾರಾಟವಾಗಿತ್ತು. ಹಾಗೇ, ಕನ್ನಡ ಭಾಷೆಯ ಸೆಟಲೈಟ್ ಹಕ್ಕನ್ನು ಕಲರ್ಸ್ ಕನ್ನಡ 21 ಕೋಟಿ ರೂಪಾಯಿಗೆ ಪಡೆದಿದೆ. ಡಿಜಿಟಲ್ ಹಕ್ಕು ಕೂಡ ಇದೇ ಸಂಸ್ಥೆಯ ವೂಟ್‌ಗೆ ಲಭಿಸಿದೆ. ಕನ್ನಡದ ಜತೆಗೆ ಹಿಂದಿ, ತಮಿಳು, ತೆಲುಗು, ಮಲಯಾಳಂನಲ್ಲಿಯೂ ತೆರೆ ಕಂಡಿರುವ ಈ ಸಿನಿಮಾದ ವಿತರಣೆ ಹಕ್ಕನ್ನು ಆಯಾ ಭಾಷೆಗಳ ಪ್ರಖ್ಯಾತ ಸಂಸ್ಥೆಗಳು ಪಡೆದುಕೊಂಡಿವೆ.
ಇದನ್ನೂ ಓದಿ | 777 ಚಾರ್ಲಿ | ಸಿನಿಮಾ ನೋಡಿ ಕಾಲಿವುಡ್ ನಿಂದ ಸ್ಯಾಂಡಲ್‌ವುಡ್‌ಗೆ ಬಂತು ಕಾಲ್!