Site icon Vistara News

777 ಚಾರ್ಲಿ | ಮೊದಲ ದಿನದ ಕಲೆಕ್ಷನ್‌ ಎಷ್ಟು? ಜೂನ್‌ 12ರಂದು Dog Adoption ಅಭಿಯಾನ!

777 ಚಾರ್ಲಿ

ಬೆಂಗಳೂರು : ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ ನಟನೆಯ 777 ಚಾರ್ಲಿ ಸಿನಿಮಾ ಟ್ರೇಲರ್ ಮೇ 16ರಂದು ರಿಲೀಸ್‌ ಆದಾಗ ದೇಶದ ಎಲ್ಲಾ ಕಡೆಯಿಂದ ಉತ್ತಮ ಪ್ರತಿಕ್ರಿಯೆ ಬಂದಿತ್ತು. ಚಾರ್ಲಿ ಜೂನ್‌ 10ರಂದು ಬಿಡುಗಡೆಗೊಂಡಿದೆ. ವಿಶ್ವಾದ್ಯಂತ 777 ಚಾರ್ಲಿ ಸಿನಿಮಾ ಮೊದಲ ದಿನ ಅಂದಾಜು 10-12 ಕೋಟಿ ರೂಪಾಯಿ ಗಳಿಸಿದೆ ಎಂದು ಹೇಳಲಾಗುತ್ತಿದೆ.

ಆದರೆ ಈ ಕುರಿತು ಚಿತ್ರತಂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ . ಇದು ಅಧಿಕೃತವಲ್ಲ. ಸಿನಿಮಾ ರಿಲೀಸ್‌ಗೂ ಮುನ್ನ ಪ್ರೀಮಿಯರ್‌ ಶೋನಲ್ಲಿ ಸಾಕಷ್ಟು ಜನ ಈ ಸಿನಿಮಾ ನೋಡಿದ್ದರು. ಅಲ್ಲಿಯೂ ಕಲೆಕ್ಷನ್‌ ಆಗಿತ್ತು. ಹೆಚ್ಚಿನ ಕಲೆಕ್ಷನ್‌ ಆಗುವ ಸಾಧ್ಯತೆಗಳಿದ್ದು, ಸಿನಿಮಾ ಸಿಕ್ಕಾಪಟ್ಟೆ ಎಮೋಶನ್‌ನಿಂದ ಕೂಡಿದೆ ಎಂದು ಜನರು ರೆಸ್ಪಾನ್ಸ್‌ ಮಾಡುತ್ತಿದ್ದಾರೆ.

ಇದನ್ನೂ ಓದಿ | 777 ಚಾರ್ಲಿ: ಚಾರ್ಲಿನಾ ಭೇಟಿ ಮಾಡಿದ್ರಾ ಸಾಯಿಪಲ್ಲವಿ? ಚಿತ್ರಕ್ಕೆ ಸಿಗುತ್ತಿದೆ ಭರ್ಜರಿ ರೆಸ್ಪಾನ್ಸ್‌

ಮನುಷ್ಯ ಮತ್ತು ಶ್ವಾನದ ನಡುವಿನ ಅಪೂರ್ವ ಬಾಂಧವ್ಯದ ಕಥಾ ಹಂದರವನ್ನು ಹೊಂದಿದ ಈ ಸಿನಿಮಾವನ್ನು ನೋಡಿದ ಪ್ರೇಕ್ಷಕರು ಭಾವುಕರಾಗಿದ್ದಾರೆ, ಕಣ್ಣೀರು ಹಾಕಿದ್ದಾರೆ. ಈ ಚಿತ್ರ ಮೇಲ್ನೋಟಕ್ಕೆ 100 ಕೋಟಿ ರೂಪಾಯಿ ಕಲೆಕ್ಷನ್‌ ಮಾಡುತ್ತದೆ ಎಂಬಂತೆ ಕಾಣುತ್ತಿದೆ.

777 ಚಾರ್ಲಿ ಪ್ಯಾನ್‌ ಇಂಡಿಯಾ ಸಿನಿಮಾ ಆಗಿದ್ದು, ಅಭಿಮಾನಿಗಳ ರೆಸ್ಪಾನ್ಸ್‌ಗೆ ಚಿತ್ರತಂಡ ಖುಷಿಯಾಗಿದೆ. ಭಾರತದಾದ್ಯಂತ 777 ಚಾರ್ಲಿ ಐದು ಭಾಷೆಗಳಲ್ಲಿ ರಿಲೀಸ್‌ ಆಗಿದ್ದು, ಕಂಟೆಂಟ್‌ ಕಾರಣಕ್ಕೆ ರಕ್ಷಿತ್‌ ಶೆಟ್ಟಿ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡಿದರು.

ಪರಂವಃದಿಂದ ಹೊಸ ಅಭಿಯಾನ

777 ಚಾರ್ಲಿ Care ಸಹಯೋಗದೊಂದಿಗೆ  ಜೂನ್‌ 12ರಂದು ಅಡಾಪ್ಷನ್‌ ಡ್ರೈವ್‌ ಅಭಿಯಾನವನ್ನು ಆಯೋಜಿಸುತ್ತಿದೆ. ಸಂಜೆ 5.30ಕ್ಕೆ ಬೆಂಗಳೂರಿನ ಡಾ. ರಾಜ್‌ಕುಮಾರ್‌ ರಸ್ತೆಯಲ್ಲಿರುವ ಒರಾಯನ್‌ ಮಾಲ್‌ಗೆ ಬನ್ನಿ ಎಂದು ಪೋಸ್ಟ್‌ ಹಂಚಿಕೊಂಡಿದ್ದಾರೆ.

ಸಾಕಷ್ಟು ಸುದ್ದಿ ಆಯ್ತು ಚಾರ್ಲಿ

ಸಿನಿಮಾ ನೋಡಿದ ಬಳಿಕ ಕೆಲವು ಜನರು ಸಾಕಷ್ಟು ಬದಲಾವಣೆಯತ್ತ ಮುಖ ಮಾಡಿದ್ದಾರೆ. ಸಿನಿಮಾ ನೋಡಿ ಹಲವರು ತಮ್ಮ ಮನೆಯ ನಾಯಿಗೆ ಚಾರ್ಲಿ ಎಂದು ಹೆಸರಿಟ್ಟಿದ್ದಾರೆ. ಎಷ್ಟೋ ಜನರು ನಾಯಿಗಳನ್ನು ದತ್ತು ಪಡೆದಿದ್ದಾರೆ. ಮಂಗಳೂರಿನಲ್ಲಿ ಶ್ವಾನದಳದ ನಾಯಿಗೆ ಚಾರ್ಲಿ ಎಂದು ನಾಮಕರಣ ಮಾಡಿರುವ ಸುದ್ದಿಯೂ ವೈರಲ್‌ ಆಗಿತ್ತು. ಬಿಡುಗಡೆಗೂ ಮುನ್ನ ಸಾಕಷ್ಟು ಜನ ತಮ್ಮ ಸಾಕು ನಾಯಿಯೊಂದಿಗೆ ಸೆಲ್ಫಿ ತೆಗೆದು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿ ಸಂತಸ ವ್ಯಕ್ತಪಡಿಸಿದ್ದರು.

ಈ ಸಿನಿಮಾವನ್ನು ಕಿರಣ್‌ ರಾಜ್‌ ನಿರ್ದೇಶನ ಮಾಡಿದ್ದು, ಸಂಗೀತಾ ಶೃಂಗೇರಿ ನಾಯಕಿಯಾಗಿ ನಟಿಸಿದ್ದಾರೆ. ರಾಜ್‌ ಬಿ ಶೆಟ್ಟಿ, ಗೋಪಾಲಕೃಷ್ಣ ದೇಶಪಾಂಡೆ, ಬಾಬ್ಬಿ ಸಿಂಹ ಸೇರಿದಂತೆ ದೊಡ್ಡ ಕಲಾವಿದರ ದಂಡೇ ಇದರಲ್ಲಿದೆ. ಮೈಸೂರು, ಕಾರವಾರ, ಗೋವಾ, ಗುಜರಾತ್‌, ರಾಜಸ್ಥಾನ, ಕಾಶ್ಮೀರ, ಹಿಮಾಚಲ ಪ್ರದೇಶಗಳಲ್ಲಿ ಸಿನಿಮಾವನ್ನು ಚಿತ್ರೀಕರಿಸಲಾಗಿದೆ.

ಇದನ್ನೂ ನೋಡಿ | 777 ಚಾರ್ಲಿ | ಸಿನಿಮಾ ಸ್ಫೂರ್ತಿ ಪಡೆದು ಶ್ವಾನದಳದ ನಾಯಿಗೆ ಇಟ್ಟ ಹೆಸರೇನು?

Exit mobile version