Site icon Vistara News

Aamir Khan: ಜೈನ ಧರ್ಮದ ತತ್ವ ಪರಿಪಾಲನೆಯಲ್ಲಿರುವ ನಟ ಆಮಿರ್‌ ಖಾನ್‌; ಪ್ರಾರ್ಥನಾ ಸಭೆಯಲ್ಲೂ ಭಾಗಿ!

Aamir Khan

ಮುಂಬೈ: ಬಾಲಿವುಡ್‌ನ ಪ್ರಸಿದ್ಧ ನಟ ಆಮಿರ್‌ ಖಾನ್‌ (Aamir Khan) ಅವರ ಸಿನಿಮಾ ಜರ್ನಿ ಎಲ್ಲರಿಗೂ ತಿಳಿದಿರುವುದೇ. ಆದರೆ ಅವರ ಧಾರ್ಮಿಕ ನಂಬಿಕೆಗಳ ಬಗ್ಗೆ ಹಲವರಿಗೆ ತಿಳಿದಿಲ್ಲ. ಆಮಿರ್‌ ಖಾನ್‌ ಅವರು ಎಲ್ಲ ಧರ್ಮಗಳನ್ನು ಒಂದೇ ರೀತಿಯಲ್ಲಿ ಕಾಣುತ್ತಿದ್ದು, ಹಲವು ಧರ್ಮಗಳ ಆಚರಣೆ ಮಾಡುವಂತವರು. ಅದರಂತೆ ಅವರು ಜೈನ ಧರ್ಮದ ಬಗ್ಗೆ ಸಾಕಷ್ಟು ಆಸಕ್ತಿ ಹೊಂದಿರುವವರಾಗಿದ್ದಾರೆ. ಜೈನ ಧರ್ಮದ ಹಲವಾರು ಕಾರ್ಯಕ್ರಮಗಳಲ್ಲಿ ಈಗಾಗಲೇ ಪಾಲ್ಗೊಂಡಿರುವ ಅವರು ಇತ್ತೀಚೆಗೆ ನಿಧನರಾದ ಜೈನ ಸಂತ ಡಾ.ಕುಮಾರ್‌ ಅವರ ಪ್ರಾರ್ಥನಾ ಸಭೆಯಲ್ಲಿಯೂ ಭಾಗವಹಿಸಿದ್ದರು.

ಇದನ್ನೂ ಓದಿ: Mohammad Amir | ಮತ್ತೆ ಪಾಕ್ ತಂಡದ​ ಪರ ಆಡುವ ಬಯಕೆ ವ್ಯಕ್ತಪಡಿಸಿದ ಮೊಹಮ್ಮದ್‌ ಆಮಿರ್‌!
ಜೈನ ಧರ್ಮದ ಉತ್ಸವದ ಕೊನೆಯ ದಿನವಾದ ಪರ್ಯೂಷನದಂದು ಆ ದಿನದ ಕುರಿತಾಗಿ ಆಮಿರ್‌ ಖಾನ್‌ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಹಂಚಿಕೊಳ್ಳುವ ಅಭ್ಯಾಸವನ್ನು ರೂಢಿಸಿಕೊಂಡಿದ್ದಾರೆ. 2021 ರಲ್ಲಿ, ಜೈನ ಧರ್ಮದ ತತ್ವಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕೆನ್ನುವ ನಿಟ್ಟಿನಲ್ಲಿ ಅವರು ಜೈನ ತೇರಾಪಂತ್ ಭವನದಲ್ಲಿ ಜೈನ ಸಂತ-ಪ್ರೊಫೆಸರ್ ಡಾ ಮಹೇಂದ್ರ ಕುಮಾರ್ ಮತ್ತು ಇತರ ಸನ್ಯಾಸಿಗಳೊಂದಿಗೆ ಚರ್ಚೆಯಲ್ಲಿಯೂ ಭಾಗವಹಿಸಿದ್ದರು.

ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿದ ಆಮಿರ್‌ ಖಾನ್ ಅವರು ನಿಧನರಾದ ಸಂತರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಕಾರ್ಯಕ್ರಮದಲ್ಲಿ ಆಮಿರ್‌ ಅವರ ಬಗ್ಗೆ ಮಾತನಾಡಿದ ನಿರ್ಮಾಪಕ ಮಹಾವೀರ್‌ ಜೈನ್‌, “ಜೈನ ಧರ್ಮವು ತನ್ನ ಜೀವನದ ಮೇಲೆ ಆಳವಾದ ಪ್ರಭಾವವನ್ನು ಬೀರಿದೆ ಎಂದು ಆಮಿರ್‌ ಹೇಳುತ್ತಿರುತ್ತಾರೆ. ಹಾಗಾಗಿಯೇ ಅವರು ಕಳೆದ ಏಳು ವರ್ಷಗಳಿಂದ ಜೈನ ಧರ್ಮದ ತತ್ವಗಳ ಬಗ್ಗೆ ಕಲಿಯುತ್ತಿದ್ದಾರೆ. ಅವರು ಜೀವನದಲ್ಲಿ ಮೂರು ತತ್ವಗಳನ್ನು ಅನುಸರಿಸುತ್ತಾರೆ. ಅವುಗಳೆಂದರೆ ಅನೇಕಾಂತವಾದ, ಅಹಿಂಸೆ ಮತ್ತು ಅಪರಿಗ್ರಹ. ಅವರು ಕನಿಷ್ಠ ಜೀವನಶೈಲಿಯನ್ನು ನಂಬುವವರು” ಎಂದು ಹೇಳಿದ್ದಾರೆ.

ಇದನ್ನೂ ಓದಿ: Aamir Khan | ನಿಶ್ಚಿತಾರ್ಥ ಮಾಡಿಕೊಂಡ ಆಮಿರ್​ ಖಾನ್ ಪುತ್ರಿ ಇರಾ ಖಾನ್‌!
ಆಮಿರ್‌ ಖಾನ್‌ ಅವರು ಸಂಪ್ರದಾಯ, ಪೂಜೆ ವಿಚಾರದಲ್ಲಿ ಆಗಾಗ ಸುದ್ದಿಯಾಗುವ ನಟ ಎಂದೇ ಹೇಳಬಹುದು. ನಟ ಕಳೆದ ವರ್ಷ ಡಿಸೆಂಬರ್‌ ತಿಂಗಳಲ್ಲಿ ತಮ್ಮ ಪ್ರೊಡಕ್ಷನ್‌ ಹೌಸ್‌ನಲ್ಲಿ ಕಳಸ ಪೂಜೆ ನೆರವೇರಿಸಿದ್ದರು. ಮಾಜಿ ಪತ್ನಿ ಕಿರಣ್‌ ರಾವ್‌ ಅವರೊಂದಿಗೆ ಹಿಂದೂ ಸಂಪ್ರದಾಯದಂತೆ ಪೂಜೆ ಮಾಡಿದ್ದ ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗಿದ್ದವು. ಈ ವಿಶೇಷ ಪೂಜೆಗೆ ನೀಲಿ ಬಣ್ಣದ ಸ್ವೆಟ್‌ಶರ್ಟ್‌ ಜತೆ ಜೀನ್ಸ್‌ ಪ್ಯಾಂಟ್‌ ಧರಿಸಿದ್ದ ನಟ ಅದರ ಮೇಲೆ ಬಿಳಿ ಬಣ್ಣದ ಶಾಲು ಹಾಗೂ ಬಿಳಿ ಬಣ್ಣದ ಟೋಪಿ ಧರಿಸಿದ್ದನ್ನು ಕಾಣಬಹುದಾಗಿತ್ತು.

Exit mobile version