Site icon Vistara News

Aamir Khan: ‘ಸಿತಾರೆ ಜಮೀನ್ ಪರ್’ ಸಿನಿಮಾ ಬಗ್ಗೆ ಅಪ್‌ಡೇಟ್‌ ಹಂಚಿಕೊಂಡ ಆಮೀರ್‌ ಖಾನ್‌!

Aamir Khan on Sitaare Zameen Par release it on Christmas

ಬೆಂಗಳೂರು: `ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಸೋತ ಬಳಿಕ ಆಮೀರ್‌ (Aamir Khan) ಮುಂದಿನ ಪ್ರಾಜೆಕ್ಟ್‌ ಘೋಷಿಸಿದ್ದರು. ಅದುವೇ ‘ಸಿತಾರೆ ಜಮೀನ್ ಪರ್’. 2007ರಲ್ಲಿ ದರ್ಶೀಲ್ ಸಫಾರಿ ಮತ್ತು ಆಮೀರ್ ಖಾನ್ (Aamir Khan) ನಟನೆಯ ‘ತಾರೆ ಜಮೀನ್ ಪರ್’ (Taare Zameen Par) ಬ್ಲಾಕ್‌ಬಸ್ಟರ್‌ ಹಿಟ್‌ ಆಯಿತು. ಆಮೀರ್ ನಿರ್ದೇಶನದ ಚೊಚ್ಚಲ ಸಿನಿಮಾ ಇದಾಗಿದ್ದು, ಡಿಸ್ಲೆಕ್ಸಿಯಾದಿಂದ ಬಳಲುತ್ತಿರುವ ಚಿಕ್ಕ ಹುಡುಗನ ಕುರಿತಾಗಿ ಈ ಸಿನಿಮಾ ಇತ್ತು. ಅಮೋಲ್ ಗುಪ್ತೆ ಬರೆದ ಈ ಚಿತ್ರ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆಯಿತು. ಇದೀಗ ಆಮೀರ್ ಖಾನ್ ತಮ್ಮ ಮುಂಬರುವ ಚಿತ್ರ ‘ಸಿತಾರೆ ಜಮೀನ್ ಪರ್’ ಸಿನಿಮಾ (Sitare Zameen Par)  ಬಿಡುಗಡೆ ಯಾವಾಗ ಎಂಬುದನ್ನು ಮಾಧ್ಯಮವೊಂದರಲ್ಲಿ ಹೇಳಿಕೆ ನೀಡಿದ್ದಾರೆ. ಈ ವರ್ಷದ ಕ್ರಿಸ್‌ಮಸ್ ಸಂದರ್ಭದಲ್ಲಿ ‘ಸಿತಾರೆ ಜಮೀನ್ ಪರ್’ ಸಿನಿಮಾ ಬಿಡುಗಡೆ ಮಾಡಲು ಯೋಜಿಸುತ್ತಿದ್ದೇನೆ ಎಂದು ಆಮೀರ್ ಖಾನ್ ಬಹಿರಂಗಪಡಿಸಿದ್ದಾರೆ.

ಮಾಧ್ಯಮವೊಂದರ ಸಂವಾದದ ಸಮಯದಲ್ಲಿ, ನಟ ಆಮೀರ್ ಖಾನ್ ಮಾತನಾಡಿ, “ನಾಯಕ ನಟನಾಗಿ ನನ್ನ ಮುಂದಿನ ಚಿತ್ರ ‘ಸಿತಾರೆ ಜಮೀನ್ ಪರ್’. ನಾವು ಇದನ್ನು ಈ ವರ್ಷದ ಕೊನೆಯಲ್ಲಿ ಕ್ರಿಸ್ಮಸ್ ಸಂದರ್ಭದಲ್ಲಿ ಬಿಡುಗಡೆ ಮಾಡಲು ಯೋಜಿಸುತ್ತಿದ್ದೇನೆ. ಇದು ಮನರಂಜನಾ ಚಿತ್ರ. ಶೂಟಿಂಗ್‌ ಈಗಾಗಲೇ ಶುರುವಾಗಿದೆʼʼಎಂದು ಹೇಳಿಕೊಂಡಿದ್ದಾರೆ. ಜತೆಗೆ ಈ ಚಿತ್ರದಲ್ಲಿ ಆಮೀರ್‌ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಆಮೀರ್‌ ಅವರು ‘ಅತೀ ಸುಂದರ್’ (‘Aati Sundar’) ಚಿತ್ರದಲ್ಲಿ ಅತಿಥಿ ಪಾತ್ರವನ್ನು ಮಾಡುತ್ತಿದ್ದಾರೆ. ಇದು ಕೆಲವೇ ತಿಂಗಳುಗಳಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: Aamir Khan: ʻಸಿತಾರೆ ಜಮೀನ್ ಪರ್‌ʼನಲ್ಲಿ ಆಮೀರ್ -ದರ್ಶೀಲ್ ಸಫಾರಿ ಮತ್ತೆ ಒಂದಾಗ್ತಾರಾ?

‘ಸಿತಾರೆ ಜಮೀನ್ ಪರ್’ ಚಿತ್ರದಲ್ಲಿ ಆಮೀರ್ ಖಾನ್ ಜೋಡಿಯಾಗಿ ಜೆನಿಲಿಯಾ ದೇಶಮುಖ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿತಾರೆ ಜಮೀನ್ ಪರ್’ ಚಿತ್ರದ ಪಾತ್ರವರ್ಗದ ಬಗ್ಗೆ ಮುಂದಿನ ದಿನಗಳಲ್ಲಿ ನಟ ಮಾಹಿತಿ ಹಂಚಿಕೊಳ್ಳಲಿದ್ದಾರೆ.

ತಾರೆ ಜಮೀನ್ ಪರ್ ಸಿನಿಮಾ ಹೇಗಿರಲಿದೆ?

ಈ ಮುಂಚೆ ಆಮೀರ್‌ ಈ ಸಿನಿಮಾ ಕುರಿತು ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದರು. ʻʻಈ ಚಿತ್ರದ ಹೆಸರು ‘ಸಿತಾರೆ ಜಮೀನ್ ಪರ್’ ಏಕೆಂದರೆ ನಾವು ಅದೇ ಥೀಮ್‌ನೊಂದಿಗೆ ಮುಂದೆ ಹೋಗುತ್ತಿದ್ದೇವೆ. ‘ತಾರೆ ಜಮೀನ್ ಪರ್’ ಭಾವನಾತ್ಮಕ ಚಿತ್ರವಾಗಿತ್ತು. ಈ ಚಿತ್ರ ನಿಮ್ಮನ್ನು ನಗಿಸುತ್ತದೆ. ಆ ಚಿತ್ರವು ನಿಮ್ಮನ್ನು ಅಳುವಂತೆ ಮಾಡಿತು, ಇದು ನಿಮಗೆ ಮನರಂಜನೆ ನೀಡುತ್ತದೆʼಎಂದು ಮಾಹಿತಿ ಹಂಚಿಕೊಂಡಿದ್ದರು.

ನಟ ಮಾತು ಮುಂದುವರಿಸಿʻʻ ಆದರೆ ಸಿನಿಮಾ ಥೀಮ್ ಒಂದೇ ಆಗಿರುತ್ತದೆ. ಅದಕ್ಕಾಗಿಯೇ ನಾವು ಈ ಹೆಸರನ್ನು ಬಹಳ ಯೋಚನೆ ಮಾಡಿ ಇಟ್ಟುಕೊಂಡಿದ್ದೇವೆ. ನಮ್ಮೆಲ್ಲರಲ್ಲೂ ನ್ಯೂನತೆ ಹಾಗೂ ದೌರ್ಬಲ್ಯಗಳು ಇರುತ್ತವೆ. ಜತೆಗೆ ನಮ್ಮೆಲ್ಲರಿಗೂ ಏನಾದರೂ ವಿಶೇಷತೆಯೂ ಇರುತ್ತದೆ. ಆ ಚಿತ್ರದಲ್ಲಿ ವಿಶೇಷ ಮಗು ಇಶಾನ್ ಪಾತ್ರವಾಗಿತ್ತು. ನನ್ನ ಪಾತ್ರವು ‘ತಾರೆ ಜಮೀನ್ ಪರ್’ನಲ್ಲಿ ಆ ಪಾತ್ರಕ್ಕೆ ಸಹಾಯ ಮಾಡಿತ್ತು. ‘ಸಿತಾರೆ ಜಮೀನ್ ಪರ್’ನಲ್ಲಿ, ತಮ್ಮದೇ ಆದ ಸಮಸ್ಯೆಗಳನ್ನು ಹೊಂದಿರುವ ಆ ಒಂಬತ್ತು ಹುಡುಗರು ನನಗೆ ಸಹಾಯ ಮಾಡುತ್ತಾರೆ, ಹಾಗಾಗಿ ಕಥೆ ವಿರುದ್ಧವಾಗಿರಲಿದೆʼʼ ಎಂದಿದ್ದರು.

ಇದನ್ನೂ ಓದಿ: Aamir Khan: ಪತಿಯಾಗಿ ನನ್ನಲ್ಲಿದ್ದ ಕೊರತೆಗಳೇನು? ಮಾಜಿ ಪತ್ನಿಗೆ ಆಮೀರ್‌ ಖಾನ್ ಪ್ರಶ್ನೆ!

ʻತಾರೆ ಜಮೀನ್ ಪರ್’ ಸಿನಿಮಾದಲ್ಲಿ ಹುಡುಗನ ಸಮಸ್ಯೆಯನ್ನು ಅರ್ಥಮಾಡಿಕೊಳ್ಳದ ಹೆತ್ತವರು ಅವನನ್ನು ಬೋರ್ಡಿಂಗ್ ಶಾಲೆಗೆ ಸೇರಿಸುತ್ತಾರೆ. ಶಿಕ್ಷಕ ಆಮೀರ್‌ ಖಾನ್ ಭೇಟಿಯಾಗುತ್ತಾರೆ. ಈ ಸಿನಿಮಾದಲ್ಲಿ ದರ್ಶೀಲ್ ನಟನೆಗೆ ಮೆಚ್ಚುಗೆ ಸಿಕ್ಕಿತ್ತು. ‘ತಾರೆ ಜಮೀನ್ ಪರ್’ 21 ಡಿಸೆಂಬರ್ 2007 ರಂದು ಬಿಡುಗಡೆಯಾಗಿತ್ತು.

Exit mobile version