Site icon Vistara News

Aamir Khan: ‘ಸಿತಾರೆ ಜಮೀನ್ ಪರ್’ ಬಿಡುಗಡೆಗೂ ಮುನ್ನ ವೈರಲ್ ಆಗುತ್ತಿದೆ ‘ತಾರೆ ಜಮೀನ್ ಪರ್’ ಚಿತ್ರದ ಈ ವಿಡಿಯೊ!

Aamir Khan

ಮುಂಬೈ : ಆರ್.ಎಸ್.ಪ್ರಸನ್ನ ಅವರ ಮುಂಬರುವ ಚಿತ್ರ ‘ಸಿತಾರೆ ಜಮೀನ್ ಪರ್’ ಈ ವರ್ಷ ಬಿಡುಗಡೆಗೆ ಸಿದ್ಧವಾಗುತ್ತಿದ್ದಂತೆ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚುತ್ತಿದೆ. ಆದರೆ ಈ ನಡುವೆ 2007ರ ಹಿಟ್ ಚಲನಚಿತ್ರ ‘ತಾರೆ ಜಮೀನ್ ಪರ್‌ಗಾಗಿ ದರ್ಶೀಲ್ ಸಫಾರಿ ಅವರ ಆಡಿಷನ್ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Aamir Khan)ಆಗಿದೆ. ಇದು ಸೋಶಿಯಲ್ ಮೀಡಿಯಾದ ಬಳಕೆದಾರರನ್ನು ಹೆಚ್ಚು ಆಕರ್ಷಿಸುತ್ತಿದೆ.

ಶಾಲಾ ಸಮವಸ್ತ್ರದಲ್ಲಿ ದರ್ಶೀಲ್ ಸಫಾರಿ ಕಾಣಿಸಿಕೊಂಡಿರುವ ಈ ವಿಡಿಯೊವನ್ನು ಆಮೀರ್ ಖಾನ್ ಪ್ರೊಡಕ್ಷನ್‍ನ ಅಧಿಕೃತ ಎಕ್ಸ್ ಹ್ಯಾಂಡಲ್‍ನಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೊದಲ್ಲಿ ಇಶಾನ್ ಪಾತ್ರವನ್ನು ನಿರ್ವಹಿಸಿದ ದರ್ಶೀಲ್ ತನ್ನ ಕಾಲ್ಪನಿಕ ಜಗತ್ತಿನಲ್ಲಿ ಸಂಪೂರ್ಣವಾಗಿ ಮುಳುಗಿರುವಾಗ ಅವನನ್ನು ಬೈಯುತ್ತಿರುವ ಶಿಕ್ಷಕರ ಧ್ವನಿ ಕೇಳಿಸುತ್ತದೆ. ವಿಡಿಯೊದಲ್ಲಿ ದರ್ಶೀಲ್‌ನ ಸಂಭಾಷಣೆ ಇಲ್ಲದಿದ್ದರೂ ಅವನ ಪಾತ್ರದ ಬಗ್ಗೆ ಸ್ವತಃ ಆಮೀರ್ ಖಾನ್ ಮಾತನಾಡುತ್ತಿರುವುದು ಕೇಳಿಸುತ್ತದೆ, ಇದು ಇಶಾನ್ ಪಾತ್ರಕ್ಕೆ ದರ್ಶೀಲ್ ಅವರನ್ನು ಆಯ್ಕೆ ಮಾಡಲು ಕಾರಣವಾಗಿರುವ ಬಗ್ಗೆ ಆಮೀರ್‌ ಖಾನ್ ವಿವರಿಸಿದ್ದಾರೆ.

“ಪಾತ್ರಕ್ಕಾಗಿ ದರ್ಶೀಲ್ ಪರೀಕ್ಷೆಯನ್ನು ನೋಡಿದ ದಿನ ನನಗೆ ನೆನಪಿದೆ. ನಾನು ದರ್ಶೀಲ್‍ನ ಮೊದಲ ಶಾಟ್ ನೋಡಿದ ತಕ್ಷಣ ಮತ್ತು ಅವನ ಸಂಭಾಷಣೆ ಹೇಳುವ ಮೊದಲೇ, ಅವನ ಮುಖ ಮತ್ತು ಅಭಿವ್ಯಕ್ತಿಗಳನ್ನು ನೋಡುವ ಮೂಲಕ, ಇದೇ ಹುಡುಗ ಇಶಾನ್ ಪಾತ್ರಕ್ಕೆ ಸೂಕ್ತ ಎಂದು ನಾನು ಭಾವಿಸಿದೆ ಎಂದು ಹೇಳುತ್ತಿರುವುದು ವಿಡಿಯೊದಲ್ಲಿದೆ. ಅದರ ನಂತರ, ಈ ವೀಡಿಯೊವು ಚಿತ್ರದ ದರ್ಶೀಲ್ ಸಫಾರಿಯನ್ನು ಒಳಗೊಂಡ ವಿವಿಧ ದೃಶ್ಯಗಳನ್ನು ಪ್ರಸ್ತುತಪಡಿಸುತ್ತದೆ.

ಬಾಲಿವುಡ್ ನಟ ಆಮೀರ್ ಖಾನ್ ಅವರ ನಿರ್ದೇಶನ ಮತ್ತು ನಿರ್ಮಾಣದ ಚಿತ್ರವಾದ ‘ತಾರೆ ಜಮೀನ್ ಪರ್’ ಡಿಸೆಂಬರ್ 21, 2007ರಂದು ಚಿತ್ರಮಂದಿರಗಳಲ್ಲಿ ಪದಾರ್ಪಣೆ ಮಾಡಿತು. ದರ್ಶೀಲ್ ಸಫಾರಿ ಇಶಾನ್ ಪಾತ್ರದಲ್ಲಿ ನಟಿಸಿದ್ದ.

ಇತನ ಜೊತೆಗೆ ತನಯ್ ಛೇಡಾ, ವಿಪಿನ್ ಶರ್ಮಾ ಮತ್ತು ಟಿಸ್ಕಾ ಚೋಪ್ರಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಈ ಹೃದಯಸ್ಪರ್ಶಿ ಚಲನಚಿತ್ರವು ನಿರೀಕ್ಷೆಗಳನ್ನು ಮೀರಿ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸನ್ನು ಗಳಿಸಿತ್ತು. 12 ಕೋಟಿ ರೂ.ಗಳ ಮಧ್ಯಮ ಬಜೆಟ್‍ನಲ್ಲಿ ನಿರ್ಮಿಸಲಾದ ‘ತಾರೆ ಜಮೀನ್ ಪರ್’ ಚಿತ್ರ ಗಮನಾರ್ಹವಾಗಿ 98 ಕೋಟಿ ರೂ.ಗಿಂತ ಹೆಚ್ಚಿನ ಆದಾಯವನ್ನು ಗಳಿಸಿತ್ತು.

ಇದನ್ನೂ ಓದಿ:ಎಮ್ಮೆಗಾಗಿ ಮಾಲೀಕರ ಕಿತ್ತಾಟ; ಮಾಲೀಕನ ಹುಡುಕಲು ಎಮ್ಮೆಯ ಮೊರೆ ಹೋದ ಪೊಲೀಸರು!

ಇದೀಗ ಆಮೀರ್ ಖಾನ್ ನಿರ್ಮಾಣದ ಬೆಂಬಲದೊಂದಿಗೆ ಮುಂಬರುವ ಚಿತ್ರ ‘ಸಿತಾರೆ ಜಮೀನ್ ಪರ್’ ನಲ್ಲಿ, ನಟ ಆಮೀರ್ ಖಾನ್ ಸ್ವತಃ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. ಈ ಚಿತ್ರವು ಅಂಗವಿಕಲ ಕ್ರೀಡಾಪಟುಗಳು ಆಚರಿಸುವ ಜಾಗತಿಕ ಕ್ರೀಡಾಕೂಟವಾದ ಪ್ರತಿಷ್ಠಿತ ಪ್ಯಾರಾಲಿಂಪಿಕ್ ಕ್ರೀಡಾಕೂಟದಿಂದ ಸ್ಫೂರ್ತಿ ಪಡೆದಿದೆ ಎಂದು ವರದಿಯಾಗಿದೆ.

ಸದ್ಯಕ್ಕೆ, ಪಾತ್ರವರ್ಗ ಮತ್ತು ಹೆಚ್ಚಿನ ಕಥಾವಸ್ತುವಿನ ವಿವರಗಳನ್ನು ಚಿತ್ರತಂಡ ಇನ್ನೂ ಬಹಿರಂಗಪಡಿಸಿಲ್ಲ. 2022 ರ ಚಿತ್ರ ಲಾಲ್ ಸಿಂಗ್ ಚಡ್ಡಾ ಬಿಡುಗಡೆಯಾದ ನಂತರ ‘ಸಿತಾರೆ ಜಮೀನ್ ಪರ್’ ಚಿತ್ರದ ಮೂಲಕ ಆಮೀರ್ ಖಾನ್ ಸಿನಿಮಾ ರಂಗಕ್ಕೆ ಮತ್ತೆ ಮರಳಿದ್ದಾರೆ.

Exit mobile version