Site icon Vistara News

Ira khan | ನೂಪುರ್ ಶಿಖರೆ ಜತೆ ಎಂಗೇಜ್‌ ಆದ ಆಮಿರ್​ ಖಾನ್ ಪುತ್ರಿ ಇರಾ ಖಾನ್‌: ವಿಡಿಯೊ ವೈರಲ್‌!

Ira khan

ಬೆಂಗಳೂರು : ಬಾಲಿವುಡ್‌ ನಟ ಆಮಿರ್​ ಖಾನ್​ ಹಾಗೂ ಮಾಜಿ ಪತ್ನಿ ರೀನಾ ದತ್ತ ಪುತ್ರಿ ಇರಾ ಖಾನ್‌ (Ira khan) ಬಹು ವರ್ಷದ ಗೆಳಯ ನೂಪುರ್ ಶಿಖರೆ ಜತೆ ಎಂಗೇಜ್‌ ಆಗಿದ್ದಾರೆ. ಇಟಲಿಯಲ್ಲಿ ನಡೆದ ಐರನ್‌ಮ್ಯಾನ್‌ ಸೈಕ್ಲಿಂಗ್‌ ಇವೆಂಟ್‌ ಒಂದರಲ್ಲಿ ಇರಾ ಖಾನ್‌ಗೆ ರಿಂಗ್‌ ತೊಡಿಸಿ ನೂಪುರ್ ಶಿಖರೆ ಪ್ರಪೋಸ್‌ ಮಾಡಿದ್ದಾರೆ. ಇದೀಗ ಪ್ರಪೋಸ್‌ ಮಾಡಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಇರಾ ಖಾನ್‌ ಹಾಗೂ ನೂಪುರ್ ಶಿಖರೆ ವಿಡಿಯೊವನ್ನು ಇನ್‌ಸ್ಟಾ ಮೂಲಕ ಹಂಚಿಕೊಂಡಿದ್ದಾರೆ. ಈ ಬಗ್ಗೆ ನಟ ನಟಿಯರು ಕಾಮೆಂಟ್‌ ಮೂಲಕ ಶುಭ ಹಾರೈಸಿದ್ದಾರೆ. ಇರಾ ಖಾನ್‌ ಹಾಗೂ ನೂಪುರ್ ಶಿಖರೆ ಎರಡು ವರ್ಷಗಳಿಂದ ಡೇಟಿಂಗ್‌ ಮಾಡುತ್ತಿರುವುದು ಈ ಹಿಂದೆ ಸುದ್ದಿಯಾಗಿತ್ತು. ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿರುವ ಪೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದರು. ನೆಟ್ಟಿಗರು ಇವರಿಬ್ಬರು ಮದುವೆ ಯಾವಾಗ ಎಂದು ಕಮೆಂಟ್‌ ಮೂಲಕ ಕೇಳುತ್ತಿದ್ದರು. ಇದೀಗ ಎಲ್ಲ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಇದನ್ನೂ ಓದಿ | ಹಿಂದೊಮ್ಮೆ ಆಮೀರ್​ ಖಾನ್​ ಮನೆಯೆಂಬ ಪಂಜರದಲ್ಲಿ ಸಿಲುಕಿದ್ದೆ ಎಂದ ಸೋದರ ಫೈಸಲ್​ ಖಾನ್​​

ಇರಾ ತಮ್ಮ ರಿಲೇಷನ್‌ಶಿಪ್‌ ಬಗ್ಗೆ ಖುಷಿಯನ್ನು ಹಂಚಿಕೊಂಡಿದ್ದಾರೆ. ತಮ್ಮ ಸಂಬಂಧದ ಎರಡನೇ ವಾರ್ಷಿಕೋತ್ಸವದ ಕುರಿತು ಇನ್ಸ್ಟಾ ಮೂಲಕ ʻʻನಮ್ಮಿಬ್ಬರ ಸಂಬಂಧಕ್ಕೆ ಎರಡು ವರ್ಷಗಳು ಪೂರೈಸಿದೆ. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ಎಲ್ಲದಕ್ಕೂ ಹೆಚ್ಚಾಗಿ ಪ್ರಾಮಾಣಿಕವಾಗಿ ನಿನ್ನನ್ನು ಪ್ರೀತಿಸುತ್ತೇನೆʼʼಎಂದು ಬರೆದುಕೊಂಡಿದ್ದಾರೆ.

ಈ ಹಿಂದೆ ಇರಾ ಖಾನ್‌ ಹಾಗೂ ನೂಪುರ್ ಶಿಖರೆ ಈದ್‌ ಹಾಗೂ ದೀಪಾವಳಿಯಲ್ಲಿ ಕುಟುಂಬದೊಂದಿಗೆ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆಮಿರ್‌ ಖಾನ್‌ ಕೂಡ ಕ್ರಿಸ್‌ಮಸ್‌ ಸಂದರ್ಭದಲ್ಲಿ ಇವರ ಜತೆ ಕಾಣಿಸಿಕೊಂಡಿದ್ದರು. ಹಾಗೇ ಇರಾ ಮತ್ತು ನೂಪುರ್ ಕ್ರಿಸ್‌ಮಸ್‌ಗೂ ಮುನ್ನ ಜರ್ಮನಿಗೆ ಒಟ್ಟಿಗೆ ಪ್ರಯಾಣಿಸಿದ್ದರು.

ಈ ಹಿಂದೆ ಇರಾ ದತ್ತ ತಮ್ಮ ಹುಟ್ಟು ಹಬ್ಬದ ದಿನದಂದು ಕೇಕ್​ ಕತ್ತರಿಸುವಾಗ ಇರಾ ಖಾನ್​ ಬಿಕಿನಿ ಧರಿಸಿದ್ದಕ್ಕೆ ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದರು.ಇದನ್ನು ಕಂಡು ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡಿದ್ದರು.ಆಮಿರ್​ ಖಾನ್​ ಹಾಗೂ ಆಜಾದ್​ ಖಾನ್​ ಸ್ವಿಮ್ಮಿಂಗ್​ ಡ್ರೆಸ್​ನಲ್ಲಿಯೇ ಕಾಣಿಸಿಕೊಂಡಿದ್ದರು. ಎರಡನೇ ಪತ್ನಿ ಕಿರಣ್​ ರಾವ್​ ಅವರ ಪುತ್ರ ಆಜಾದ್​ ಖಾನ್​ ಕೂಡ ಇರಾ ಖಾನ್ ಜನ್ಮದಿನವನ್ನು ಆಚರಿಸಿದ್ದರು.

ಇದನ್ನೂ ಓದಿ | Laal Singh Chaddha | ದಯವಿಟ್ಟು ನನ್ನ ಸಿನಿಮಾ ಬಹಿಷ್ಕರಿಸಬೇಡಿ: ಮನವಿ ಮಾಡಿದ ಆಮಿರ್‌ ಖಾನ್‌

Exit mobile version