Site icon Vistara News

Aaradhya Bachchan: ಐಶ್ವರ್ಯಾ ರೈ ಮಗಳ ನಟನೆ ಸೂಪರ್‌ ಎಂದ ನೆಟ್ಟಿಗರು!

Aaradhya Bachchan Viral Performance

ಬೆಂಗಳೂರು: ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ಪುತ್ರಿ ಆರಾಧ್ಯ ಬಚ್ಚನ್ ಇತ್ತೀಚೆಗೆ ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ನಡೆದ ವಾರ್ಷಿಕ ದಿನದ ಕಾರ್ಯಕ್ರಮದಲ್ಲಿ ತಮ್ಮ ನಟನೆಯಿಂದ ಗಮನ ಸೆಳೆದಿದ್ದಾರೆ. ಆರಾಧ್ಯ ಬಚ್ಚನ್ ಅಭಿನಯದ ವಿಡಿಯೊ ವೈರಲ್ ಆಗಿದ್ದು, ನೆಟ್ಟಿಗರು ಭೇಷ್‌ ಎಂದು ಕಮೆಂಟ್‌ ಮಾಡಿದ್ದಾರೆ. ಆರಾಧ್ಯ ಆತ್ಮವಿಶ್ವಾಸದಿಂದ ಸ್ಕಿಟ್‌ನಲ್ಲಿರುವ ಪವರ್‌ಫುಲ್‌ ಡೈಲಾಗ್‌ ಹೇಳುವ ಮೂಲಕ ಸಖತ್‌ ಹೈಲೈಟ್‌ ಆದರು.ಈ ವಿಡಿಯೊ ವೈರಲ್‌ ಆಗುತ್ತದ್ದಂತೆ ‘ದಿ ಆರ್ಚೀಸ್ʼ ತಾರಾವರ್ಗಕ್ಕಿಂತ ಸೂಪರ್‌ ಪರ್ಫಾಮೆನ್ಸ್ ಎಂದು ಕಮೆಂಟ್‌ ಮಾಡಿದ್ದಾರೆ ನೆಟ್ಟಿಗರು.

ಸುಹಾನಾ ಖಾನ್, ಖುಷಿ ಕಪೂರ್ ಮತ್ತು ಅಗಸ್ತ್ಯ ನಂದಾ ಅವರಂತಹ ಸ್ಟಾರ್ ಮಕ್ಕಳನ್ನು ಒಳಗೊಂಡಿರುವ ದಿ ಆರ್ಚೀಸ್ʼ ಸಿನಿಮಾಗೆ ಹಾಗೂ ನಿರ್ದೇಶಕ ಜೋಯಾ ಅಖ್ತರ್ ಅವರಿಗೆ ಪರೋಕ್ಷವಾಗಿ ಟೀಕೆ ಮಾಡಿದ್ದಾರೆ ನೆಟ್ಟಿಗರು. “ಐಶ್ವರ್ಯಾ ರೈ ಅವರ ಮಗಳು ಆರಾಧ್ಯ ಬಚ್ಚನ್ ಅವರ ನಟನೆ ನೋಡಿದ ನಂತರ ಎಲ್ಲಾ ಆರ್ಚಿಸ್ ಮಕ್ಕಳು ನಾಚಿಕೆ ಪಡಬೇಕುʼʼಎಂದು ಕಮೆಂಟ್‌ ಮಾಡಿದ್ದಾರೆ ನೆಟ್ಟಿಗರು. ಆರಾಧ್ಯಾ ಅವರು ಪ್ರದರ್ಶನ ನೀಡುತ್ತಿರುವಾಗ ಐಶ್ವರ್ಯಾ ರೈ ಕೂಡ ಖುಷಿಯಿಂದ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡುತ್ತಿರುವ ಫೋಟೊ ಕೂಡ ವೈರಲ್‌ ಆಗಿದೆ. ಅಭಿಷೇಕ್ ಬಚ್ಚನ್, ಅಮಿತಾಭ್ ಬಚ್ಚನ್, ಮತ್ತು ಅಗಸ್ತ್ಯ ನಂದಾ ಸೇರಿದಂತೆ ಕುಟುಂಬದ ಸದಸ್ಯರು ಕೂಡ ಜೋರಾಗಿ ಚಪ್ಪಾಳೆ ಹಾಕುತ್ತರುವುದು ಕಂಡು ಬಂತು.

ಇದನ್ನೂ ಓದಿ: Amitabh Bachchan: ಅಮಿತಾಭ್‌ ಮನೆ ಬಳಿ ಈ ಬಾರಿ ಅಭಿಮಾನಿಗಳಿಗೆ ಅಚ್ಚರಿ ಕಾದಿತ್ತು!

ಬಾಲಿವುಡ್‌ ಸ್ಟಾರ್‌ಗಳ ಭರ್ಜರಿ ಸ್ಟೆಪ್ಸ್‌!

ಕರಣ್ ಜೋಹರ್ ಜತೆಗೆ ಅಭಿಷೇಕ್, ಅಮಿತಾಭ್‌ ಬಚ್ಚನ್ ಜತೆ ಐಶ್ವರ್ಯ ಕೂಡ ಡ್ಯಾನ್ಸ್ ಮಾಡಿರುವ ವಿಡಿಯೊ ವೈರಲ್‌ ಆಗಿದೆ. ಅಬ್ರಾಮ್ ಮತ್ತು ಆರಾಧ್ಯ ಬಚ್ಚನ್ ಸೇರಿದಂತೆ ಹಲವಾರು ಬಾಲಿವುಡ್ ಸ್ಟಾರ್ ಮಕ್ಕಳು ಈ ಶಾಲೆಯಲ್ಲೇ ಓದುತ್ತಿದ್ದಾರೆ. ವೇದಿಕೆಯಲ್ಲಿ ಶಾರುಖ್‌ ಮಗ ಕೂಡ ಪ್ರದರ್ಶನ ಕೊಟ್ಟಿರುವ ವಿಡಿಯೊ ವೈರಲ್‌ ಆಗಿದೆ. ಶಾರುಖ್ ಖಾನ್, ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಮಕ್ಕಳನ್ನು ಹುರಿದುಂಬಿಸಿರುವ ಸಾಕಷ್ಟು ಫೋಟೊಗಳು ವೈರಲ್‌ ಆಗಿವೆ. ಮಕ್ಕಳ ಕಾರ್ಯಕ್ರಮದ ಆದ ಬಳಿಕ ‘ಓಂ ಶಾಂತಿ ಓಂ’ ಚಿತ್ರದ ‘ದೀವಾಂಗಿ ದೀವಾಂಗಿ’ ಹಾಡಿಗೆ ಎಲ್ಲಾ ತಾರೆಯರು ನೃತ್ಯ ಮಾಡಿದರು.

ಶಾರುಖ್ ಖಾನ್ ಅವರ ಮಗಳು ಸುಹಾನಾ ಖಾನ್ ಮತ್ತು ಕರಣ್ ಜೋಹರ್ ಅವರೊಂದಿಗೆ ಅವರ ಚಿತ್ರದ ಹಾಡಿಗೆ ನೃತ್ಯ ಮಾಡುವುದನ್ನು ಕಾಣಬಹುದು. ಸಮಾರಂಭದಲ್ಲಿ ಕರೀನಾ ಕಪೂರ್ ಖಾನ್ ಸಹ ಉಪಸ್ಥಿತರಿದ್ದರು.ಅವರ ಮಗ ತೈಮೂರ್ ಅಲಿ ಖಾನ್ ವೇದಿಕೆಯಲ್ಲಿ ಹೋಗಿ ಪ್ರದರ್ಶನ ನೀಡುತ್ತಿರುವಾಗ ಅವರನ್ನು ಹುರಿದುಂಬಿಸುತ್ತಿರುವುದು ಕಂಡುಬಂದಿದೆ. ಗೌರಿ ಖಾನ್ ಅವರು ಮಕ್ಕಳು ಪ್ರದರ್ಶನ ನೀಡುತ್ತಿದ್ದಂತೆ ಉತ್ಸಾಹದಿಂದ ಚಪ್ಪಾಳೆ ತಟ್ಟಿದರು.

ಈ ಶಾಲೆ ಮುಂಬೈನ ಬಾಂದ್ರಾದಲ್ಲಿ ಇದೆ. ಧೀರೂಭಾಯಿ ಅಂಬಾನಿ ಶಾಲೆ ವಿಶ್ವದ ಟಾಪ್ 10 ಶಾಲೆಗಳಲ್ಲಿ ಒಂದಾಗಿದೆ. ಶಾಲೆಯಲ್ಲಿ ಪ್ರತಿ 10 ವಿದ್ಯಾರ್ಥಿಗಳಿಗೆ 1 ಶಿಕ್ಷಕರಿದ್ದಾರೆ. ಇಲ್ಲಿ ಅಧ್ಯಯನ ಮಾಡಿದರೆ ಭವಿಷ್ಯದಲ್ಲಿ ಸುಲಭವಾಗಿ ವಿದೇಶದಲ್ಲಿ ಅಧ್ಯಯನ ಮಾಡುವ ರೀತಿಯ ವ್ಯವಸ್ಥೆ ಇಲ್ಲಿದೆ. ಈ ಕಾರಣಕ್ಕೆ ಇಲ್ಲಿ ಹೆಚ್ಚಿನ ಪ್ರವೇಶ ಶುಲ್ಕ ಪಡೆಯಲಾಗುತ್ತದೆ. ಈ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಕ್ಕೆ 1ರಿಂದ 1.5 ಲಕ್ಷ ರೂ. ಇದೆ ಎನ್ನಲಾಗಿದೆ. ಪ್ರೌಢ ಶಿಕ್ಷಣ 8ರಿಂದ 10ನೇ ತರಗತಿವರೆಗೆ ಸುಮಾರು 4ರಿಂದ 5 ಲಕ್ಷ ಶುಲ್ಕ ವಿಧಿಸಲಾಗುತ್ತದೆ.

Exit mobile version