Amitabh Bachchan: ಅಮಿತಾಭ್‌ ಮನೆ ಬಳಿ ಈ ಬಾರಿ ಅಭಿಮಾನಿಗಳಿಗೆ ಅಚ್ಚರಿ ಕಾದಿತ್ತು! - Vistara News

ಬಾಲಿವುಡ್

Amitabh Bachchan: ಅಮಿತಾಭ್‌ ಮನೆ ಬಳಿ ಈ ಬಾರಿ ಅಭಿಮಾನಿಗಳಿಗೆ ಅಚ್ಚರಿ ಕಾದಿತ್ತು!

Amitabh Bachchan: ಐಶ್ವರ್ಯಾ ರೈ ಬಚ್ಚನ್, ಅಭಿಷೇಕ್ ಬಚ್ಚನ್, ಮಗಳು ಆರಾಧ್ಯ, ಶ್ವೇತಾ ಬಚ್ಚನ್ ಜತೆಗೆ ಅವರ ಮಗಳು ನವ್ಯಾ, ಜಯಾ ಮತ್ತು ಅಮಿತಾಭ್‌ ಎಲ್ಲರೂ ಭಾಗಿಯಾಗಿದ್ದರು. ʻದಿ ಆರ್ಚೀಸ್​’ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿಲ್ಲ. ಬದಲಿಗೆ, ನೇರವಾಗಿ ನೆಟ್​ಫ್ಲಿಕ್ಸ್​ ಒಟಿಟಿ ಮೂಲಕ ವೀಕ್ಷಣೆಗೆ ಲಭ್ಯವಿದೆ.

VISTARANEWS.COM


on

Amitabh Bachchan's Sunday Surprise Grandson Agastya
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಪ್ರತಿ ಭಾನುವಾರ ಅಮಿತಾಭ್‌ (Amitabh Bachchan) ಅವರು ಮುಂಬೈನ ಜುಹುದಲ್ಲಿರುವ ತಮ್ಮ ಮನೆಯಲ್ಲಿ ಅಭಿಮಾನಿಗಳನ್ನು ಆಗಾಗ ಭೇಟಿ ಮಾಡುತ್ತಲೇ ಇರುತ್ತಾರೆ. ಈ ಬಾರಿ ಮಾತ್ರ ಅಭಿಮಾನಿಗಳಿಗೆ ವಿಶೇಷವಾಗಿತ್ತು. ಅಮಿತಾಭ್‌ ಜತೆಗೆ ಮೊಮ್ಮಗ ಅಗಸ್ತ್ಯ ನಂದಾ ಕೂಡ ಅಭಿಮಾನಿಗಳಿಗೆ ಕೈ ಬೀಸಿದರು. ಅಜ್ಜ-ಮೊಮ್ಮಗ ಜೋಡಿ ಫ್ಯಾನ್ಸ್‌ ಕಡೆಯತ್ತ ಕೈ ಬೀಸುತ್ತಿರುವ ಫೋಟೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಅಗಸ್ತ್ಯ ಅವರ ಚೊಚ್ಚಲ ಚಿತ್ರ ದಿ ಆರ್ಚೀಸ್‌ ಟ್ರೇಲರ್ ಬಿಡುಗಡೆಯಾದ ಬಳಿಕ ಕೂಡ, ಅಮಿತಾಬ್ ಬಚ್ಚನ್ ಅವರು ʻʻನನ್ನ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿದೆʼʼಎಂದು ಬರೆದುಕೊಂಡಿದ್ದರು. ಈ ಸಿನಿಮಾದಲ್ಲಿ ಶಾರುಖ್​ ಖಾನ್​ ಪುತ್ರಿ ಸುಹಾನಾ ಖಾನ್​, ಅಮಿತಾಭ್​ ಬಚ್ಚನ್​ ಮೊಮ್ಮಗ ಅಗಸ್ತ್ಯ ನಂದ ಮುಂತಾದವರು ನಟಿಸಿದ್ದಾರೆ. ಅಗಸ್ತ್ಯ ನಂದ ಅವರ ಚೊಚ್ಚಲ ಈ ಸಿನಿಮಾದ ವಿಶೇಷ ಪ್ರದರ್ಶನದಲ್ಲಿ ಇಡೀ ಬಚ್ಚನ್ ಕುಟುಂಬವು ಹಾಜರಿತ್ತು.

ಐಶ್ವರ್ಯಾ ರೈ ಬಚ್ಚನ್, ಅಭಿಷೇಕ್ ಬಚ್ಚನ್, ಮಗಳು ಆರಾಧ್ಯ, ಶ್ವೇತಾ ಬಚ್ಚನ್ ಜತೆಗೆ ಅವರ ಮಗಳು ನವ್ಯಾ, ಜಯಾ ಮತ್ತು ಅಮಿತಾಭ್‌ ಎಲ್ಲರೂ ಭಾಗಿಯಾಗಿದ್ದರು. ʻದಿ ಆರ್ಚೀಸ್​’ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿಲ್ಲ. ಬದಲಿಗೆ, ನೇರವಾಗಿ ನೆಟ್​ಫ್ಲಿಕ್ಸ್​ ಒಟಿಟಿ ಮೂಲಕ ವೀಕ್ಷಣೆಗೆ ಲಭ್ಯವಿದೆ. ದಿ ಆರ್ಚೀಸ್‌ನಲ್ಲಿ ಸುಹಾನಾ ಮತ್ತು ಅಗಸ್ತ್ಯರಲ್ಲದೆ, ಚಿತ್ರದಲ್ಲಿ ಬೋನಿ ಕಪೂರ್ ಅವರ ಕಿರಿಯ ಮಗಳು ಖುಷಿ ಕಪೂರ್, ಮಿಹಿರ್ ಅಹುಜಾ, ಡಾಟ್, ಯುವರಾಜ್ ಮೆಂಡಾ ಮತ್ತು ವೇದಂಗ್ ರೈನಾ ಕೂಡ ನಟಿಸಿದ್ದಾರೆ.

ಇದನ್ನೂ ಓದಿ: Amitabh Bachchan: ಐಶ್ವರ್ಯಾ- ಅಭಿಷೇಕ್ ವಿಚ್ಛೇದನ; ಸುಳಿವು ಕೊಟ್ರಾ ಅಮಿತಾಭ್‌?

81ರ ಹರೆಯದಲ್ಲೂ ಅಮಿತಾಭ್ ಬಚ್ಚನ್ ಅವರು ಸಿನಿರಂಗದಲ್ಲಿ ಸಕ್ರಿಯರಾಗಿದ್ದಾರೆ. ಅವರ ಬಳಿ ಹಲವಾರು ಸಿನಿಮಾಗಳೂ ಇವೆ. ಅಮಿತಾಭ್‌ ಅವರು ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಅವರೊಂದಿಗೆ ‘ಪ್ರಾಜೆಕ್ಟ್ ಕೆ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಷ್ಟೇ ಅಲ್ಲದೇ ಟೈಗರ್ ಶ್ರಾಫ್ ಅವರ ‘ಗಣಪತ್’ ಮತ್ತು ‘ದಿ ಇಂಟರ್ನ್’ ಹಿಂದಿ ರಿಮೇಕ್‌ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.ಸೂಪರ್‌ಸ್ಟಾರ್‌ಗಳಾದ ಶಾರುಖ್ ಖಾನ್ ಮತ್ತು ಅಮಿತಾಭ್‌ ಬಚ್ಚನ್ 17 ವರ್ಷಗಳ ಬಳಿಕ ಶೀಘ್ರದಲ್ಲೇ ಒಂದು ಪ್ರಾಜೆಕ್ಟ್‌ಗಾಗಿ ಒಟ್ಟಿಗೆ ತೆರೆಗೆ ಬರುತ್ತಿದ್ದಾರೆ. 2006ರಲ್ಲಿ ಬಿಡುಗಡೆಯಾದ ‘ಕಭಿ ಅಲ್ವಿದಾ ನಾ ಕೆಹನಾ’ದಲ್ಲಿ (Kabhi Alvida Naa Kehna) ಕೊನೆಯ ಬಾರಿಗೆ ಈ ಜೋಡಿ ಒಟ್ಟಿಗೆ ತೆರೆ ಹಂಚಿಕೊಂಡಿತ್ತು. ಈ ಸುದ್ದಿ ವೈರಲ್‌ ಆಗುತ್ತಿದ್ದಂತೆ ಸೋಷಿಯಲ್‌ ಮೀಡಿಯಾದಲ್ಲಿ ಇವರಿಬ್ಬರ ಫ್ಯಾನ್ಸ್‌ ಖುಷಿ ಹಂಚಿಕೊಳ್ಳುತ್ತಿದ್ದಾರೆ.

ಪ್ರಭಾಸ್, ದೀಪಿಕಾ ಪಡುಕೋಣೆ ಮತ್ತು ಕಮಲ್ ಹಾಸನ್ ನಟಿಸಿರುವ ಸೌತ್‌ ಸಿನಿಮಾ ‘ಕಲ್ಕಿ 2898 AD’ ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ‘ತಲೈವರ್ 170’ ಚಿತ್ರದಲ್ಲಿ ಅಮಿತಾಭ್‌ ಅವರು ರಜನಿ ಜತೆ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಾಲಿವುಡ್

Payal Ghosh: 9 ವರ್ಷ ಆಯ್ತು ಯಾರ ಜತೆಗೂ ಮಲಗಿಲ್ಲ, ಇರ್ಫಾನ್‌ ಪಠಾಣ್‌ನೇ ಕೊನೆ ಎಂದ ನಟಿ ಪಾಯಲ್‌ ಘೋಷ್‌ !

Payal Ghosh: ಕೋಲ್ಕತ್ತಾದ ಪಾಯಲ್ ಘೋಷ್‌ ಕೆಲವು ಹಿಂದಿ ಸಿನಿಮಾಗಳಲ್ಲಿ ನಟಿಸಿದರೂ ಅಷ್ಟೊಂದು ಯಶಸ್ಸು ಸಿಗಲಿಲ್ಲ.ಈಗಾಗಲೇ ಸಿನಿಮಾ ಮೂಲಕ ಎಲ್ಲೂ ಸುದ್ದಿಯಲ್ಲಿ ಇಲ್ಲದ ಪಾಯಲ್‌ ಘೋಷ್‌, ಪ್ರತಿ ಬಾರಿಯೂ ಇಂಥ ಪೋಸ್ಟ್‌ ಹಾಗೂ ವಿವಾದಾತ್ಮಕ ಕಮೆಂಟ್‌ ಮಾಡುವ ಮೂಲಕ ಟ್ರೆಂಡಿಂಗ್‌ನಲ್ಲಿ ಇರುತ್ತಾರೆ.

VISTARANEWS.COM


on

Payal Ghosh says she did not had physical relationship with anyone in past 9 years
Koo

ಬೆಂಗಳೂರು: ನಟಿ ಹಾಗೂ ರಾಜಕಾರಣಿ ಪಾಯಲ್‌ ಘೋಷ್‌ (Payal Ghosh) ಆಗಾಗ ತಮ್ಮ ಹೇಳಿಕೆ ಮೂಲಕ ಸುದ್ದಿಯಲ್ಲಿ ಇರುತ್ತಾರೆ. ಇದೀಗ 9 ವರ್ಷಗಳಾದವು. ನಾನು ಯಾರೊಂದಿಗೂ ಸೆಕ್ಸ್ ಮಾಡಿಲ್ಲ. ಇರ್ಫಾನ್ ಪಠಾಣ್ ಜತೆ ಬ್ರೇಕಪ್ ಆದ ನಂತರ ಯಾರೊಂದಿಗೂ ಸೆಕ್ಸ್ ಮಾಡಲಿಲ್ಲ ಎಂದು ಪೋಸ್ಟ್‌ ಹಂಚಿಕೊಂಡಿದ್ದಾರೆ. ಈ ಬಗ್ಗೆ ಸಾಕಷ್ಟು ಚರ್ಚೆಗಳು ಆಗುತ್ತಿವೆ.

ಆಗಾಗ ತಮ್ಮ ಹೇಳಿಕೆ ಮೂಲಕ ಪಾಯಲ್‌ ಘೋಷ್‌ ಸುದ್ದಿಯಲ್ಲಿ ಇರುತ್ತಾರೆ. ಇದೀಗ 9 ವರ್ಷಗಳಾದವು. ನಾನು ಯಾರೊಂದಿಗೂ ಸೆಕ್ಸ್ ಮಾಡಿಲ್ಲ. ಇರ್ಫಾನ್ ಪಠಾಣ್ ಜತೆ ಬ್ರೇಕಪ್ ಆದ ನಂತರ ಯಾರೊಂದಿಗೂ ಸೆಕ್ಸ್ ಮಾಡಲಿಲ್ಲ ಎಂದು ಪೋಸ್ಟ್‌ ಹಂಚಿಕೊಂಡಿದ್ದಾರೆ. ಈ ಬಗ್ಗೆ ಸಾಕಷ್ಟು ಚರ್ಚೆಗಳು ಆಗುತ್ತಿವೆ.

ನಟಿ ಪೋಸ್ಟ್‌ನಲ್ಲಿ ಹೀಗೆ ಬರೆದುಕೊಂಡಿದ್ದಾರೆ. ʻʻ9 ವರ್ಷಗಳಾದವು. ನಾನು ಯಾರೊಂದಿಗೂ ಸೆಕ್ಸ್ ಮಾಡಿಲ್ಲ. ಇರ್ಫಾನ್ ಪಠಾಣ್ ಜೊತೆ ಬ್ರೇಕಪ್ ಆದ ನಂತರ ಯಾರೊಂದಿಗೂ ಸೆಕ್ಸ್ ಮಾಡಲಿಲ್ಲ. ಇದು ಸುಳ್ಳು ಅಂತ ಅನಿಸಬಹುದು. ಆದರೆ ಇದುವೇ ನಿಜ ಎಂದು ನಟಿ ತಮ್ಮ ಇನ್​ಸ್ಟಾ ಪೋಸ್ಟ್​ನಲ್ಲಿ ಹೇಳಿದ್ದಾರೆ.ನಟಿ ತಾನು ಹಾಗೂ ಇರ್ಫಾನ್ ಪಠಾಣ್ ಲವ್ ಮಾಡುತ್ತಿದ್ದೆವು ಎಂದು ಸೋಷಿಯಲ್ ಮೀಡಿಯಾದಲ್ಲಿ ಹಲವು ಪೋಸ್ಟ್ ಮಾಡಿ ಹೇಳಿದ್ದಾರೆ.

ಇದನ್ನೂ ಓದಿ: Kalki 2898 AD: ಮೊದಲ ದಿನವೇ ಗಳಿಕೆಯಲ್ಲಿ ದಾಖಲೆ ಬರೆದ ‘ಕಲ್ಕಿ 2898 ಎಡಿ’ ಸಿನಿಮಾ; ಕಲೆಕ್ಷನ್‌ ಎಷ್ಟು?

ಈ ಪೋಸ್ಟ್ ನೋಡಿ ಸಾಕಷ್ಟು ಮಂದಿ ಆಕೆಯನ್ನು ಟ್ರೋಲ್ ಮಾಡುತ್ತಿದ್ದಾರೆ. ಇರ್ಫಾನ್‌ ಪಠಾಣ್‌ ಸಾಂಪ್ರದಾಯಿಕ ಕುಟುಂಬ , ಹಾಗಾಗಿ ನಾನು ಬ್ರೇಕಪ್‌ ಆದೆ ಎಂದು ಹೇಳಿಕೊಂಡಿದ್ದಾರೆ. ಇದೀಗ ನೆಟ್ಟಿಗರು ಒಂದು ಕುಟುಂಬವನ್ನು ಹಾಳು ಮಾಡಬೇಡಿ ಎಂದು ಕಮೆಂಟ್‌ ಮಾಡುತ್ತಿದ್ದಾರೆ, ಇರ್ಫಾನ್ ಪಠಾಣ್ ಸೌದಿ ಮಾಡೆಲ್ ಸಫಾ ಬೇಗ್ ಅವರನ್ನು ವಿವಾಹವಾದರು. ಹಿಂದೆ ಶಿವಾಂಗಿ ಎಂಬ ಹುಡುಗಿಯೊಂದಿಗೆ ಸಂಬಂಧ ಹೊಂದಿದ್ದರು. ಕೋಲ್ಕತ್ತಾದ ಪಾಯಲ್ ಘೋಷ್‌ ಕೆಲವು ಹಿಂದಿ ಸಿನಿಮಾಗಳಲ್ಲಿ ನಟಿಸಿದರೂ ಅಷ್ಟೊಂದು ಯಶಸ್ಸು ಸಿಗಲಿಲ್ಲ.

ಈಗಾಗಲೇ ಸಿನಿಮಾ ಮೂಲಕ ಎಲ್ಲೂ ಸುದ್ದಿಯಲ್ಲಿ ಇಲ್ಲದ ಪಾಯಲ್‌ ಘೋಷ್‌, ಪ್ರತಿ ಬಾರಿಯೂ ಇಂಥ ಪೋಸ್ಟ್‌ ಹಾಗೂ ವಿವಾದಾತ್ಮಕ ಕಮೆಂಟ್‌ ಮಾಡುವ ಮೂಲಕ ಟ್ರೆಂಡಿಂಗ್‌ನಲ್ಲಿ ಇರುತ್ತಾರೆ. ʻʻನನ್ನ ಜೀವನದಲ್ಲಿ ಇರ್ಫಾನ್‌ ಪಠಾಣ್‌ಗಿಂತ ಚೆನ್ನಾಗಿರುವ ಆಯ್ಕೆ ಇದ್ದವು. ಆದರೆ, ಪ್ರೀತಿ ಯಾವಾಗಲೂ ಪ್ರೀತಿಯೇ ಅಲ್ಲವೇ? ನನ್ನ ತಂದೆ ನನ್ನ ಸಂಬಂಧಕ್ಕೆ ಎಷ್ಟೇ ವಿರೋಧ ವ್ಯಕ್ತ ಪಡಿಸಿದರೂ ನಾನೆಂದೂ ಮೋಸ ಮಾಡಲಿಲ್ಲ ಎಂದು ಬರೆದಿದ್ದಾರೆ. ನನ್ನ ತಂದೆ ಮುಸ್ಲಿಮರನ್ನು ದ್ವೇಷಿಸುತ್ತಾರೆ. ಆದರೆ ನಾನು ಅವನನ್ನು ಯಾವಾಗಲೂ ಸಪೋರ್ಟ್ ಮಾಡಿದ್ದೆ. ಆದರೆ ಅವನು ನನಗೆ ಕೊಟ್ಟಿದ್ದೇನು?ʼʼ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

Continue Reading

ಬಾಲಿವುಡ್

Kangana Ranaut: ಸಂಸತ್ತಿನ ಹೊರಗೆ ಕೈ ಕುಲುಕಿ ಸಂತಸದ ಕ್ಷಣ ಹಂಚಿಕೊಂಡ ಚಿರಾಗ್ ಪಾಸ್ವಾನ್-ಕಂಗನಾ!

Kangana Ranaut: ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಮತ್ತು ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರು ಈ ಮುಂಚೆ ಒಟ್ಟಿಗೆ ತೆರೆ ಹಂಚಿಕೊಂಡಿದ್ದರು. 2011 ರಲ್ಲಿ, ಇಬ್ಬರು ಮಿಲೇ ನಾ ಮಿಲೇ ಹಮ್ ಚಿತ್ರದಲ್ಲಿ ನಟಿಸಿದ್ದರು. ಅಷ್ಟಾಗಿ ಸಿನಿಮಾ ಯಶಸ್ಸು ಕಂಡಿಲ್ಲ. ಆ ಬಳಿಕ ಕ್ರಮೇಣ ಚಿರಾಗ್ ಪಾಸ್ವಾನ್ ರಾಜಕೀಯಕ್ಕೆ ಎಂಟ್ರಿ ಕೊಟ್ಟರು. ಇದೀಗ ಮತ್ತೆ ಚಿರಾಗ್ ಪಾಸ್ವಾನ್ ಮತ್ತು ಬಿಜೆಪಿ ಸಂಸದೆ ಕಂಗನಾ ರಣಾವತ್ ಒಟ್ಟಿಗೆ ಕಂಡಿದ್ದಾರೆ.

VISTARANEWS.COM


on

Kangana Ranaut Chirag Paswan In Parliament
Koo

ಬೆಂಗಳೂರು: ಈ ಬಾರಿ ಆಡಳಿತ ರೂಢ ಎನ್‌ಡಿಎ ಮತ್ತು ಪ್ರತಿಪಕ್ಷಗಳ ಇಂಡಿ ಬಣದ ನಡುವೆ (Kangana Ranaut) ಒಮ್ಮತ ಮೂಡದ ಹಿನ್ನೆಲೆಯಲ್ಲಿ (Chirag Paswan In Parliament) ಹಲವು ದಶಕಗಳ ಬಳಿಕ ಚುನಾವಣೆ ನಡೆಸಲಾಯಿತು. ಇದೀಗ ಎರಡನೇ ಬಾರಿ ಲೋಕಸಭೆ ಸ್ಪೀಕರ್‌ ಆಗಿ ಓಂ ಬಿರ್ಲಾ  ಆಯ್ಕೆಯಾದರು. ಈ ವೇಳೆ ಗಮನ ಸೆಳೆದಿದ್ದು ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಮತ್ತು ಬಿಜೆಪಿ ಸಂಸದೆ ಕಂಗನಾ ರಣಾವತ್ . ಸಂಸತ್ ಭವನದ ಹೊರಗೆ ಚುನಾವಣಾ ಫಲಿತಾಂಶಗಳು ಪ್ರಕಟವಾದ ತಕ್ಷಣ ಪಾಸ್ವಾನ್ ಹಾಗೂ ಕಂಗನಾ ಒಬ್ಬರಿಗೊಬ್ಬರು ಕೈ ಕುಲುಕಿ ಮಾತನಾಡಿದ್ದಾರೆ. ಇವರಿಬ್ಬರ ಸಂತೋಷದ ಕ್ಷಣ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಮತ್ತು ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರು ಈ ಮುಂಚೆ ಒಟ್ಟಿಗೆ ತೆರೆ ಹಂಚಿಕೊಂಡಿದ್ದರು. 2011 ರಲ್ಲಿ, ಇಬ್ಬರು ಮಿಲೇ ನಾ ಮಿಲೇ ಹಮ್ ಚಿತ್ರದಲ್ಲಿ ನಟಿಸಿದ್ದರು. ಅಷ್ಟಾಗಿ ಸಿನಿಮಾ ಯಶಸ್ಸು ಕಂಡಿಲ್ಲ. ಆ ಬಳಿಕ ಕ್ರಮೇಣ ಚಿರಾಗ್ ಪಾಸ್ವಾನ್ ರಾಜಕೀಯಕ್ಕೆ ಎಂಟ್ರಿ ಕೊಟ್ಟರು. ಇದೀಗ ಮತ್ತೆ ಚಿರಾಗ್ ಪಾಸ್ವಾನ್ ಮತ್ತು ಬಿಜೆಪಿ ಸಂಸದೆ ಕಂಗನಾ ರಣಾವತ್ ಒಟ್ಟಿಗೆ ಕಂಡಿದ್ದಾರೆ.

ಅನೇಕ ಚಲನಚಿತ್ರಗಳು ಮತ್ತು ಹಲವಾರು ಚುನಾವಣೆಗಳ ನಂತರ, ಇಬ್ಬರೂ ಮತ್ತೆ ಸಹೋದ್ಯೋಗಿಗಳಾಗಿದ್ದಾರೆ, ಚಲನಚಿತ್ರ ಸೆಟ್‌ನಲ್ಲಿ ಅಲ್ಲ ಆದರೆ ಸಂಸತ್ತಿನಲ್ಲಿ.

ಇದನ್ನೂ ಓದಿ: Vinay Gowda: ʻಡೆವಿಲ್ʼ ಸಿನಿಮಾದಲ್ಲಿ ನಾನೇ ವಿಲನ್, ಪ್ರಾಜೆಕ್ಟ್‌ ಏನಾಗುತ್ತೋ ಗೊತ್ತಿಲ್ಲ ಎಂದ ʻಬಿಗ್ ಬಾಸ್ʼ ಆನೆ ವಿನಯ್ ಗೌಡ!

18ನೇ ಲೋಕಸಭೆಯ ಸ್ಪೀಕರ್‌ ಆಗಿ ಎನ್‌ಡಿಎಯಿಂದ ಕಣಕ್ಕಿಳಿದ ಬಿಜೆಪಿ ಸಂಸದ ಓಂ ಬಿರ್ಲಾ (Om Birla) ಅವರು ಆಯ್ಕೆಯಾಗಿದ್ದಾರೆ (Lok Sabha Speaker). ಸಾಮಾನ್ಯವಾಗಿ ಅವಿರೋಧವಾಗಿ ಸ್ಪೀಕರ್‌ ಹುದ್ದೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆದರೆ ಈ ಬಾರಿ ಆಡಳಿತ ರೂಢ ಎನ್‌ಡಿಎ ಮತ್ತು ಪ್ರತಿಪಕ್ಷಗಳ ಇಂಡಿ ಬಣದ ನಡುವೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಹಲವು ದಶಕಗಳ ಬಳಿಕ ಚುನಾವಣೆ ನಡೆಸಲಾಯಿತು. ಇದೀಗ ಎರಡನೇ ಬಾರಿ ಲೋಕಸಭೆ ಸ್ಪೀಕರ್‌ ಆಗಿ ಆಯ್ಕೆ ಆಗಿರುವ ಓಂ ಬಿರ್ಲಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಸೇರಿದಂತೆ ಎಲ್ಲಾ ಸಂಸತ್‌ ಸದಸ್ಯರು ಪಕ್ಷಾತೀತ ಅಭಿನಂದನೆ ಸಲ್ಲಿಸಿದರು.

ವಿಪ್‌ ಜಾರಿ

ಆರಂಭದಲ್ಲಿ ಎನ್‌ಡಿಎ ಪ್ರತಿಪಕ್ಷಗಳ ಮನವೊಲಿಸಲು ಯತ್ನಿಸಿತ್ತು. ಓಂ ಬಿರ್ಲಾ ಅವರನ್ನು ಬೆಂಬಲಿಸಲು ಒಪ್ಪಿಗೆ ಸೂಚಿಸಿದ್ದ ಇಂಡಿ ಬಣ ಡೆಪ್ಯುಟಿ ಸ್ಪೀಕರ್ ತಮಗೆ ಸಿಗಬೇಕೆಂಬ ಷರತ್ತು ವಿಧಿಸಿತ್ತು. ಆದರೆ ಇದಕ್ಕೆ ಎನ್‌ಡಿಎ ಒಪ್ಪಿಗೆ ಸೂಚಿಸದ ಹಿನ್ನೆಲೆಯಲ್ಲಿ ಮಾತುಕತೆ ಮುರಿದು ಬಿದ್ದು ಕೊನೆಯ ಕ್ಷಣದಲ್ಲಿ ಕೊಂಡಿಕುನಾಲ್ ಸುರೇಶ್ ಮಂಗಳವಾರ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿ ಮತ್ತು ಕಾಂಗ್ರೆಸ್‌ ಎಲ್ಲ ಸದಸ್ಯರಿಗೆ ಹಾಜರಾಗುವಂತೆ ಮಂಗಳವಾರ ವಿಪ್‌ ಜಾರಿ ಮಾಡಿದ್ದವು.

Continue Reading

ಟಾಲಿವುಡ್

Rashmika Mandanna: ರಶ್ಮಿಕಾ ಇದೀಗ ಟಾಲಿವುಡ್‌ಗೆ ಬೈ ಬೈ; ಬಾಲಿವುಡ್‌ನಲ್ಲಿಯೇ ಬಿಡಾರ!

Rashmika Mandanna: ಇತ್ತ ರಶ್ಮಿಕಾ ಮಂದಣ್ಣ ಪುಷ್ಪ 02 ಚಿತ್ರದ ಬಾಕಿ ಕೆಲಸ ಮುಗಿಸಿ, ಸಿಕಂದರ್ ಚಿತ್ರದ ಚಿತ್ರೀಕರಣಕ್ಕೆ ತೆರಳಲಿದ್ದಾರೆ. ಮತ್ತೊಂದೆಡೆ, ರಶ್ಮಿಕಾ ಅವರು ಪುಷ್ಪ 2 ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಡಿಸೆಂಬರ್ 6 ರಂದು ಸಿನಿಮಾ ಬಿಡುಗಡೆಯಾಗಲಿದೆ.

VISTARANEWS.COM


on

Rashmika Mandanna Ayushmann Khurrana Team Up For Horror Comedy
Koo

ಬೆಂಗಳೂರು: ನ್ಯಾಶನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ (Rashmika Mandanna) ಬಾಲಿವುಡ್‌ನಲ್ಲಿ ಮಿಂಚುತ್ತಿದ್ದಾರೆ. ಹಿಂದಿಯಲ್ಲಿ ಈಗಾಗಲೇ ಗುಡ್ ಬೈ, ಮಿಶನ್ ಮಜ್ನು, ಛಾವಾ ಚಿತ್ರಗಳನ್ನು ಮಾಡಿರುವ ರಶ್ಮಿಕಾ, ಸಲ್ಮಾನ್ ಖಾನ್ ಜತೆ ಕೂಡ ತೆರೆ ಹಂಚಿಕೊಳ್ಳುತ್ತಿದ್ದಾರೆ. ಸಲ್ಮಾನ್ ಅಭಿನಯದ `ಸಿಕಂದರ್’ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇದರ ನಡುವೆ ರಶ್ಮಿಕಾ ಮಂದಣ್ಣ ಮತ್ತೊಂದು ಹಿಂದಿ ಚಿತ್ರಕ್ಕೆ ಗ್ನೀನ್ ಸಿಗ್ನಲ್ ನೀಡಿದ್ದಾರೆ, ಬಾಲಿವುಡ್‌ನ ಪ್ರತಿಭಾವಂತ ಹೀರೋ ಆಯುಷ್ಮಾನ್ ಖುರಾನಾಗೆ ನಾಯಕಿಯಾಗಿದ್ದಾರೆ ಎಂದು ವರದಿಯಾಗಿದೆ. ಆಯುಷ್ಮಾನ್ ಖುರಾನ ಮತ್ತು ರಶ್ಮಿಕಾ ಅಭಿನಯಿಸಲಿರುವ ಈ ಚಿತ್ರಕ್ಕೆ ʻವ್ಯಾಂಪೈರ್ಸ್‌ ಆಫ್ ವಿಜಯ್ ನಗರʼ ಎಂದು ಹೆಸರಿಡಲಾಗಿದೆ.

ʻಸ್ತ್ರೀʼ. ʻಬೇಡಿಯಾʼ.. ʻಮುಂಜ್ಯಾʼನಂತಹ ಹಾರರ್ ಕಾಮಿಡಿ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ದಿನೇಶ್ ವಿಜನ್ ಆಯುಷ್ಮಾನ್ ಕುರಾನಾ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ.

ಈ ವರ್ಷದ ನವೆಂಬರ್‌ನಿಂದ ಚಿತ್ರ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ. “ಇದು ಆಯುಷ್ಮಾನ್ ಖುರಾನಾ ಮತ್ತು ರಶ್ಮಿಕಾ ಮಂದಣ್ಣ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿರುವ ಮೊದಲ ಸಿನಿಮಾ. ಪ್ರಸ್ತುತ ಸಿನಿಮಾ ಸ್ಕ್ರಿಪ್ಟ್ ಆಗುತ್ತಿದೆ. ಶೀಘ್ರದಲ್ಲೇ ಪ್ರೀ-ಪ್ರೊಡಕ್ಷನ್ ಹಂತ ಮುಗಲಿದೆʼ ಎಂದು ವರದಿಯಾಗಿದೆ.

ಇದನ್ನೂ ಓದಿ: Vinay Gowda: ʻಡೆವಿಲ್ʼ ಸಿನಿಮಾದಲ್ಲಿ ನಾನೇ ವಿಲನ್, ಪ್ರಾಜೆಕ್ಟ್‌ ಏನಾಗುತ್ತೋ ಗೊತ್ತಿಲ್ಲ ಎಂದ ʻಬಿಗ್ ಬಾಸ್ʼ ಆನೆ ವಿನಯ್ ಗೌಡ!

ಆದಿತ್ಯ ಸತ್ಪೋದರ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಸದ್ಯಕ್ಕೆ ದಿನೇಶ್ ವಿಜನ್ ತಮ್ಮ ಸ್ತ್ರೀ 2 ಚಿತ್ರದ ಬಿಡುಗಡೆಯ ಕೆಲಸದಲ್ಲಿದ್ದಾರೆ. ಇತ್ತ ರಶ್ಮಿಕಾ ಮಂದಣ್ಣ ಪುಷ್ಪ 02 ಚಿತ್ರದ ಬಾಕಿ ಕೆಲಸ ಮುಗಿಸಿ, ಸಿಕಂದರ್ ಚಿತ್ರದ ಚಿತ್ರೀಕರಣಕ್ಕೆ ತೆರಳಲಿದ್ದಾರೆ.ಆಯುಷ್ಮಾನ್ ಖುರಾನಾ ಸದ್ಯಕ್ಕೆ ಕರಣ್ ಜೋಹರ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನೂ ಆಯುಷ್ಮಾನ್ ಕೈಯಲ್ಲಿ ʻಬಾರ್ಡರ್ʼ ಚಿತ್ರದ ಸಿಕ್ವೆಲ್ ಕೂಡ ಇದೆ. ಮತ್ತೊಂದೆಡೆ, ರಶ್ಮಿಕಾ ಅವರು ಪುಷ್ಪ 2 ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಡಿಸೆಂಬರ್ 6 ರಂದು ಸಿನಿಮಾ ಬಿಡುಗಡೆಯಾಗಲಿದೆ.

ʻಸಿಖಂದರ್’ ಸಿನಿಮಾ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿರಲಿದೆ. 400 ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿನಿಮಾ ಸಿದ್ಧವಾಗುತ್ತಿದೆ ಎಂದು ವರದಿಯಾಗಿದೆ. ಸಲ್ಮಾನ್ ಖಾನ್ ಕೊನೆಯದಾಗಿ ‘ಟೈಗರ್ 3’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.ತಮಿಳು, ತೆಲುಗಿನಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಎಆರ್ ಮುರುಗದಾಸ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರವನ್ನು ಸಾಜಿದ್ ನಾಡಿಯಾವಾಲ ನಿರ್ಮಾಣ ಮಾಡುತ್ತಿದ್ದು, ದೊಡ್ಡ ಬಜೆಟ್​ನಲ್ಲಿ ಸಿದ್ಧವಾಗುತ್ತಿದೆ. ಮುರುಗದಾಸ್ ಅವರು ಈ ಮೊದಲು ‘ಗಜಿನಿ’, ‘ಸ್ಟಾಲಿನ್’, ‘ಸೆವೆಂತ್ ಸೆನ್ಸ್’, ‘ತುಪ್ಪಾಕಿ’, ‘ಸ್ಪೈಡರ್’ ಸೇರಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದರು. ಮುರುಗದಾಸ್ ಅವರು ಆಮಿರ್ ಖಾನ್ ನಟಿಸಿದ್ದ ‘ಗಜಿನಿ’ ಚಿತ್ರವನ್ನು ಅವರೇ ನಿರ್ದೇಶನ ಮಾಡಿದ್ದರು.

Continue Reading

Latest

Parineethi Chopra: ಏಳುಮಲ್ಲಿಗೆ ತೂಕದ ಚೆಲುವೆ ಪರಿಣಿತಿ ಚೋಪ್ರಾ ಸಿಕ್ಕಾಪಟ್ಟೆ ದಪ್ಪಗಾಗಿದ್ದು ಯಾಕೆ?

Parineethi Chopra: ಸಿನಿಮಾಕ್ಕಾಗಿ ನಟ-ನಟಿಯರು ತಮ್ಮ ದೇಹತೂಕವನ್ನು ಹೆಚ್ಚು ಕಡಿಮೆ ಮಾಡಿಕೊಳ್ಳುವುದು ಸಾಮಾನ್ಯ. ಕೆಲವೊಮ್ಮ ಇದರಿಂದ ಅವರು ಸಿಕ್ಕಾಪಟ್ಟೆ ಟ್ರೋಲ್ಗೆ ಒಳಗಾಗುತ್ತಾರೆ. ಏಳು ಮಲ್ಲಿಗೆ ತೂಕದಂತಿರುವ ನಟಿಯರು ಸಡನ್ನಾಗಿ ಊದಿಕೊಂಡಾಗ ಜನರ ಬಾಯಿಗೆ ತುತ್ತಾಗುತ್ತಾರೆ. ಪರಿಣಿತಿ ಚೋಪ್ರಾ ಕೂಡ ಈ ಸಮಸ್ಯೆ ಎದುರಿಸಿದ್ದಾರೆ. ಇಮ್ತಿಯಾಜ್ ಅಲಿ ಅವರ ಚಿತ್ರ ‘ಅಮರ್ ಸಿಂಗ್ ಚಮ್ಕಿಲಾ’ ಚಿತ್ರದಲ್ಲಿ ನಟಿಸಿದ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ(Parineethi Chopra) ಅವರು ತಮ್ಮ ತೂಕ ಹೆಚ್ಚಳದಿಂದ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದರು. ಈ ಚಿತ್ರಕ್ಕಾಗಿ ಅವರು 16 ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾರಂತೆ.

VISTARANEWS.COM


on

Parineethi Chopra
Koo

ಮುಂಬೈ : ಇತ್ತೀಚೆಗೆ ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆಯಾದ ಇಮ್ತಿಯಾಜ್ ಅಲಿ ಅವರ ಚಿತ್ರ ‘ಅಮರ್ ಸಿಂಗ್ ಚಮ್ಕಿಲಾ’ ಚಿತ್ರದಲ್ಲಿ ನಟಿಸಿದ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ(Parineethi Chopra) ಅವರು ತಮ್ಮ ತೂಕ ಹೆಚ್ಚಳದಿಂದ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದರು. ಇದೀಗ ಅವರು ತಮ್ಮ ತೂಕ ಹೆಚ್ಚಳಕ್ಕೆ ಸಂಬಂಧಪಟ್ಟ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ನಟಿ ನಟಿ ಪರಿಣಿತಿ ಚೋಪ್ರಾ ಅವರು ಚಿತ್ರದ ಯಶಸ್ಸಿನ ನಂತರ ಸುದ್ದಿ ಮಾಧ್ಯಮವೊಂದರಲ್ಲಿ ಸಂದರ್ಶನ ನೀಡಿದ್ದು, ಅದರಲ್ಲಿ ಅವರು ಸಿನಿಮಾ ತಾರೆಯರು ಸಿನಿಮಾದ ಪಾತ್ರಕ್ಕಾಗಿ ತೂಕ ಹೆಚ್ಚು-ಕಡಿಮೆ ಮಾಡಿಕೊಳ್ಳುವುದಾಗಿ ತಿಳಿಸಿ ಹೇಳಿದ್ದಾರೆ. ಅವರು ‘ಅಮರ್ ಸಿಂಗ್ ಚಮ್ಕಿಲಾ’ ಚಿತ್ರದಲ್ಲಿ ಅಮರ್ ಜೋತ್ ಕೌರ್ ಪಾತ್ರದಲ್ಲಿ ನಟಿಸಿದ್ದು, ಇದರಲ್ಲಿ ಅವರು ದಪ್ಪವಾಗಿ ಕಾಣಿಸುತ್ತಿದ್ದರು. ಆದರೆ ಈ ಚಿತ್ರಕ್ಕಾಗಿ ಅವರು 16 ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾರಂತೆ.

‘ಅಮರ್ ಸಿಂಗ್ ಚಮ್ಕಿಲಾ’ ಚಿತ್ರದ ಯಶಸ್ಸಿನ ನಂತರ ನಟಿ 15 ದಿನಗಳ ವಿರಾಮ ತೆಗೆದುಕೊಂಡು ತಮ್ಮ ಪತಿ ರಾಜಕಾರಣಿ ರಾಘವ್ ಚಡ್ಡಾ ಅವರೊಂದಿಗೆ ಸಮಯ ಕಳೆದಿದ್ದಾರಂತೆ. ಇದೀಗ ಮತ್ತೆ ತಮ್ಮ ನಟನಾ ಕ್ಷೇತ್ರಕ್ಕೆ ಹಿಂತಿರುಗಿದ ನಟಿ ಉತ್ತಮ ಚಿತ್ರಗಳನ್ನು ನೀಡುವ ಯೋಜನೆಯಲ್ಲಿದ್ದಾರಂತೆ. ಆದರೆ ತನ್ನಿಂದ ಅಭಿಮಾನಿಗಳು ಇನ್ನು ಉತ್ತಮವಾದ ಅಭಿನಯವನ್ನು ಬಯಸುತ್ತಿದ್ದಾರೆ. ಹಾಗಾಗಿ ತಾನು ಇನ್ನೂ ಹೆಚ್ಚು ಕಲಿಯಬೇಕಿದೆ ಎಂಬುದಾಗಿ ತಿಳಿಸಿದ್ದಾರೆ.

ಅಲ್ಲದೇ ‘ ಚಮ್ಕಿಲಾ’ ಚಿತ್ರಕ್ಕಾಗಿ ಅವರು 100 ಪ್ರತಿಶತದಷ್ಟು ಕೆಲಸ ಮಾಡಿದ್ದಾರೆ ಎಂಬುದನ್ನು ತಿಳಿಸಿದ್ದಾರೆ. ಈ ಚಿತ್ರಕ್ಕಾಗಿ ನಟಿ ತಾವು16 ಕೆಜಿ ಹೆಚ್ಚಿಸಿದ್ದು, ಇಂತಹ ಕೆಲಸ ಮಾಡಲು ಒಂದು ಎರಡು ನಟಿಯರು ಬಿಟ್ಟರೆ ಬೇರೆ ಯಾರು ಮಾಡಲು ಸಿದ್ಧರಿರುವುದಿಲ್ಲ ಎಂಬುದಾಗಿ ತಿಳಿಸಿದ್ದಾರೆ. ಹಾಗೇ ಈ ಚಿತ್ರಕ್ಕಾಗಿ ಅವರು 2 ವರ್ಷಗಳಿಂದ ಬೇರೆ ಯಾವ ಕೆಲಸ ಮಾಡಲಿಲ್ಲ. ಸೆಟ್ ನಲ್ಲಿ ಲೈವ್ ಆಗಿ ಹಾಡುವುದು, ಧ್ವನಿ ನೀಡುವಂತಹ ಕೆಲಸ ಮಾಡಿದ್ದು, ಈ ಕೆಲಸವನ್ನು ಹೆಚ್ಚಿನ ಸಿನಿಮಾ ತಾರೆಯರು ಸ್ಟುಡಿಯೊದಲ್ಲಿ ಮಾಡುತ್ತಾರೆ. ಈ ರೀತಿ ರಿಸ್ಕ್ ಯಾರು ತೆಗೆದುಕೊಳ್ಳುವುದಿಲ್ಲ ಎಂದು ಅವರು ಹೇಳಿದ್ದಾರೆ. ಅಲ್ಲದೇ ಕೆಲಸಗಳನ್ನು ಮಾಡುವುದರಿಂದ ಇದು ನಮಗೆ ಹೆಚ್ಚು ಪ್ರೇರಣೆ ನೀಡುತ್ತದೆ ಮತ್ತು ಚಿತ್ರತಂಡ ನಮ್ಮನ್ನು ಸ್ವೀಕರಿಸುತ್ತಾರೆ ಎಂದು ಅವರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಸೋನಾಕ್ಷಿ ಸಿನ್ಹಾಗೆ ದುಬಾರಿ ಗಿಫ್ಟ್‌ ನೀಡಿದ ಪತಿ ಜಹೀರ್ ಇಕ್ಬಾಲ್!

ಇಮ್ತಿಯಾಜ್ ಅಲಿ ನಿರ್ದೇಶನದ ‘ಅಮರ್ ಸಿಂಗ್ ಚಮ್ಕಿಲಾ’ ಚಿತ್ರವು ಪಂಜಾಬಿ ಗಾಯಕ ಅಮರ್ ಸಿಂಗ್ ಚಮ್ಕಿಲಾ ಅವರ ದಂತಕಥೆಯನ್ನು ಆಧರಿಸಿದೆ. ಅವರ ಹಾಡುಗಳಲ್ಲಿನ ಸಾಹಿತ್ಯದಿಂದ ಅವರನ್ನು ಹಾಡುಹಗಲಿನಲ್ಲಿಯೇ ಗುಂಡಿಕ್ಕಿ ಕೊಲ್ಲಲಾಯಿತು. ಅವರ ಜೊತೆ ಅವರ ಪತ್ನಿ ಅಮರ್ ಜೋತ್ ಅವರನ್ನು ಕೂಡ ಕೊಲ್ಲಲಾಗುತ್ತದೆ. ಈ ಚಿತ್ರದಲ್ಲಿ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಅವರು ಅಮರ್ ಜೋತ್ ಪಾತ್ರದಲ್ಲಿ ನಟಿಸಿದರೆ, ದಿಲ್ಜಿತ್ ದೋಸಾಂಜ್ ಅಮರ್ ಸಿಂಗ್ ಚಮ್ಕಿಲಾ ಪಾತ್ರ ಮಾಡಿದ್ದಾರೆ. ಈ ಚಿತ್ರ ಸೂಪರ್ ಹಿಟ್ ಆಗಿ ಹೊರಹೊಮ್ಮಿದ್ದು, ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ.

Continue Reading
Advertisement
Actor Darshan support by singer dr shamitha malnad
ಸ್ಯಾಂಡಲ್ ವುಡ್20 mins ago

Actor Darshan: ಆರಡಿ ದೇಹವ ಮೂರಡಿ ಬಗ್ಗಿಸಿ ನಮ್ಮೊಂದಿಗೆ ವಿನಯದಿ ಮಾತನಾಡಿದ ದರ್ಶನ್‌ ಅಣ್ಣ ಎಂದ ಖ್ಯಾತ ಗಾಯಕಿ!

airtel price hike
ಪ್ರಮುಖ ಸುದ್ದಿ24 mins ago

Airtel Price Hike: ಜಿಯೋ ನಂತರ ಏರ್‌ಟೆಲ್‌ ಡೇಟಾ ಬಳಕೆದಾರರ ಜೇಬಿಗೂ ಕತ್ತರಿ; 21% ದರ ಏರಿಕೆ

murder Case in Kalaburagi
ಕಲಬುರಗಿ26 mins ago

Murder case : ಗಾಣಗಾಪುರ ದತ್ತನ ದರ್ಶನಕ್ಕೆ ಆಗಮಿಸಿದ ಭಕ್ತನ ಬರ್ಬರ ಹತ್ಯೆ

Actor Darshan special appeal to the fans
ಸ್ಯಾಂಡಲ್ ವುಡ್41 mins ago

Actor Darshan: ಪರಪ್ಪನ ಅಗ್ರಹಾರದಿಂದಲೇ ಅಭಿಮಾನಿಗಳ ಬಳಿ ದರ್ಶನ್‌ ವಿಶೇಷ ಮನವಿ; ಏನದು?

D. K. Shivakumar
ಕ್ರೀಡೆ45 mins ago

D. K. Shivakumar: ಫೈನಲ್​ ಪ್ರವೇಶಿಸಿದ ಭಾರತ ತಂಡಕ್ಕೆ ಶುಭ ಹಾರೈಸಿದ ಡಿಸಿಎಂ ಶಿವಕುಮಾರ್‌

Self Harming
ಕ್ರೈಂ47 mins ago

Self Harming : ಸಾಲಗಾರರ ಕಾಟ; ಇಲಿ ಪಾಷಣ ಸೇವಿಸಿ ಜೀವ ಬಿಟ್ಟ ಮೆಕ್ಯಾನಿಕ್

Gold Rate Today
ವಾಣಿಜ್ಯ57 mins ago

Gold Rate Today: ಮತ್ತೆ ಏರಿಕೆ ಕಂಡ ಚಿನ್ನದ ಬೆಲೆ; ಬೆಂಗಳೂರಿನಲ್ಲಿ ಎಷ್ಟಿದೆ ದರ?

Sonu Srinivas Gowda harassed by darshan fans
ಸ್ಯಾಂಡಲ್ ವುಡ್1 hour ago

Sonu Srinivas Gowda: ದರ್ಶನ್‌ ಬಗ್ಗೆ ಮಾತನಾಡಿಲ್ಲ ಎಂದು ಸೋನು ಶ್ರೀನಿವಾಸ್ ಗೌಡಗೆ ಕಿರುಕುಳ ಕೊಟ್ಟ ದಚ್ಚು ಫ್ಯಾನ್ಸ್‌!

Paris Olympics 2024
ಕ್ರೀಡೆ1 hour ago

Paris Olympics 2024: ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಆ್ಯತ್ಲೀಟ್‌ಗಳಿಗೆ ಶುಭ ಕೋರಿದ ರಾಷ್ಟ್ರಪತಿ ಮುರ್ಮು

haveri accident tt
ಪ್ರಮುಖ ಸುದ್ದಿ2 hours ago

Haveri Accident: ಪೂಜೆ ಮಾಡಿಸಿಕೊಂಡು ಬಂದ ಹೊಸ ವಾಹನ 13 ಜನರ ಬಲಿ ಪಡೆಯಿತು!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ16 hours ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ18 hours ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು20 hours ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ23 hours ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ4 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ7 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ7 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ1 week ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು2 weeks ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು2 weeks ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

ಟ್ರೆಂಡಿಂಗ್‌