Site icon Vistara News

Aaradhya Bachchan: ಆರಾಧ್ಯ ಬಚ್ಚನ್‌ ಬಗ್ಗೆ ಇರುವ ಸುಳ್ಳು ವಿಡಿಯೊಗಳನ್ನು ತೆಗೆದುಹಾಕಿ: ಯೂಟ್ಯೂಬ್‌ಗೆ ಹೈಕೋರ್ಟ್‌ ಸೂಚನೆ

#image_title

ನವದೆಹಲಿ: ಸೆಲೆಬ್ರಿಟಿಗಳೆಂದರೆ ಅವರು ಸುದ್ದಿಯ ಮೂಲವಿದ್ದಂತೆ. ಅವರು ಅದೇನೇ ಮಾಡಿದರೂ ಸುದ್ದಿಯಾಗಿಬಿಡುತ್ತದೆ. ಅದೇ ರೀತಿ ಅವರ ಮಕ್ಕಳೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸುದ್ದಿಯಾಗುವವರಾಗುತ್ತಾರೆ. ಅಮಿತಾಭ್‌ ಬಚ್ಚನ್‌ ಮೊಮ್ಮಗಳು, ಐಶ್ವರ್ಯ ರೈ ಮಗಳಾದ ಆರಾಧ್ಯ ಬಚ್ಚನ್‌ (Aaradhya Bachchan) ಕೂಡ ಈ ರೀತಿ ಸದಾ ಸುದ್ದಿಯಲ್ಲಿರುವ ಸೆಲೆಬ್ರಿಟಿ ಮಗಳು. ಅಂದ ಹಾಗೆ ಈಗಿನ್ನೂ 11 ವರ್ಷದವರಾಗಿರುವ ಆರಾಧ್ಯ ಅವರ ಬಗ್ಗೆ ಯೂಟ್ಯೂಬ್‌ನಲ್ಲಿ ಕೆಲವು ಸುಳ್ಳು ಮಾಹಿತಿಯಿರುವ ವಿಡಿಯೊಗಳು ಹರಿದಾಡುತ್ತಿದ್ದು, ಅವುಗಳನ್ನು ತೆಗೆದುಹಾಕುವಂತೆ ದೆಹಲಿ ಹೈ ಕೋರ್ಟ್‌ ಯೂಟ್ಯೂಬ್‌ಗೆ ಸೂಚಿಸಿದೆ.

ಸುಳ್ಳು ಸುದ್ದಿ ಕುರಿತಾಗಿ ಆರಾಧ್ಯ ಅವರು ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. “ಬಾಲಕಿಯಾದ ನನ್ನ ಬಗ್ಗೆ ಈ ರೀತಿಯ ಸುದ್ದಿಗಳು ನನ್ನ ಭವಿಷ್ಯಕ್ಕೆ ತೊಂದರೆಯನ್ನುಂಟು ಮಾಡಲಿದೆ” ಎಂದು ಅವರು ನ್ಯಾಯಾಲಯದ ಎದುರು ಹೇಳಿಕೊಂಡಿದ್ದರು. ಅವರ ಅರ್ಜಿಯನ್ನು ನ್ಯಾಯಾಲಯ ಗುರುವಾರ ವಿಚಾರಣೆ ನಡೆಸಿದೆ.

ಇದನ್ನೂ ಓದಿ: Delhi High Court: ಅಮಿತಾಭ್ ಬಚ್ಚನ್ ಮೊಮ್ಮಗಳು ಆರಾಧ್ಯ ದಿಲ್ಲಿ ಹೈಕೋರ್ಟ್‌ ಮೆಟ್ಟಿಲೇರಿದ್ದೇಕೆ?
“ಆರಾಧ್ಯ ಬಗ್ಗೆ ಸುಳ್ಳು ಸುದ್ದಿ ಹರಡುತ್ತಿರುವ ವಿಡಿಯೊಗಳನ್ನು ತೆಗೆದುಹಾಕಬೇಕು. ಹಾಗೆಯೇ ಮುಂದೆ ಕೂಡ ಈ ರೀತಿಯ ಸುದ್ದಿಗಳು ಪೋಸ್ಟ್‌ ಆಗದಂತೆ ನೋಡಿಕೊಳ್ಳಬೇಕು” ಎಂದು ನ್ಯಾಯಾಲಯ ಯೂಟ್ಯೂಬ್‌ಗೆ ಆದೇಶಿಸಿದೆ. ಹಾಗೆಯೇ ಈ ರೀತಿಯ ಸುದ್ದಿಗಳನ್ನು ಖಚಿತಪಡಿಸಿಕೊಳ್ಳುವುದಕ್ಕೆ ನಿಮ್ಮಲ್ಲಿ ಯಾವುದೇ ನೀತಿಗಳು ಇಲ್ಲವೇ ಎಂದು ಕೂಡ ಪ್ರಶ್ನೆ ಮಾಡಿದೆ. ಬಳಕೆದಾರರಿಗೆ ವೇದಿಕೆ ಕಲ್ಪಿಸಿಕೊಡುವುದೊಂದೇ ನಿಮ್ಮ ಜವಾಬ್ದಾರಿಯಲ್ಲ, ಅಲ್ಲಿ ಏನು ಹಾಕಲಾಗುತ್ತದೆ ಎನ್ನುವುದರ ಬಗ್ಗೆಯೂ ಜವಾಬ್ದಾರಿಯನ್ನು ಇಟ್ಟುಕೊಳ್ಳಬೇಕು ಎಂದು ನ್ಯಾಯಾಲಯ ತಿಳಿಸಿದೆ.

ಅರ್ಜಿದಾರರು ತಮ್ಮ ಅರ್ಜಿಯಲ್ಲಿ ನಮೂದಿಸಿದ್ದ ಗೂಗಲ್‌ ಮತ್ತು ಯೂಟ್ಯೂಬ್‌ ಪ್ಲಾಟ್‌ಫಾರ್ಮ್‌ಗಳಿಗೆ ಹೈಕೋರ್ಟ್‌ ಐಟಿ ನಿಯಮಗಳ ಪ್ರಕಾರ ತಿದ್ದುಪಡಿ ತರಲಾಗಿದೆಯೇ ಎಂದು ಕೇಳಿದೆ. ಯೂಟ್ಯೂಬ್ ವಿಡಿಯೋಗೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಾಲಯ, ಪ್ರತಿ ಮಗುವಿಗೆ ಗೌರವ ಮತ್ತು ಘನತೆಯಿಂದ ಬದುಕುವ ಹಕ್ಕಿದೆ ಮತ್ತು ಇಂತಹ ನಕಲಿ ಸುದ್ದಿಗಳನ್ನು ತಡೆಯುವುದು ವೇದಿಕೆಯ ಜವಾಬ್ದಾರಿಯಾಗಿದೆ ಎಂದು ಹೇಳಿದೆ.

Exit mobile version