Site icon Vistara News

Prathap Pothen Death | ಖ್ಯಾತ ನಟ, ನಿರ್ದೇಶಕ ಪ್ರತಾಪ್ ಪೋಥೆನ್ ಶವವಾಗಿ ಪತ್ತೆ

Prathap Pothen Death

ಚೆನ್ನೈ : ಹೆಸರಾಂತ ನಟ ಮತ್ತು ಚಿತ್ರ ನಿರ್ಮಾಪಕ ಪ್ರತಾಪ್ ಪೋಥೆನ್ (Prathap Pothen Death) ಶುಕ್ರವಾರ (ಜು.15) ಚೆನ್ನೈನಲ್ಲಿ ನಿಧನರಾಗಿದ್ದಾರೆ.

ವರದಿಗಳ ಪ್ರಕಾರ, ಪ್ರತಾಪ್ ಪೋಥೆನ್ (69) ನಗರದ ಕಿಲ್ಪಾಕ್‌ನಲ್ಲಿರುವ ಅವರ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮಲಯಾಳಂ, ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಮಲಯಾಳಂ ಚಿತ್ರರಂಗದಲ್ಲಿ ಪೌರಾಣಿಕ ನಿರ್ದೇಶಕ ಭರತನ್ ಅವರೊಂದಿಗೆ ʻಆವರಂʼ, ʻಥಕಾರʼ ಚಲನಚಿತ್ರಗಳ ಮೂಲಕ ಸಿನಿರಂಗಕ್ಕೆ ಕಾಲಿಟ್ಟಿದ್ದರು.

ಇದನ್ನೂ ಓದಿ | ಬೆಂಗಾಲಿ ಯುವ ನಟಿ ಬಿದಿಶಾ ಡೇ ಶವವಾಗಿ ಪತ್ತೆ

ʻಮೂಡುಪನಿʼ, ʻವರುಮಯಿನ್ ನಿರಂ ಸಿವಪ್ಪುʼ ಚಲನಚಿತ್ರಗಳೊಂದಿಗೆ ಪ್ರತಾಪ್ ತಮಿಳಿನಲ್ಲಿ ನಟಿಸಿದ್ದಾರೆ. ಪ್ರತಾಪ್ ಅವರು 1980ರ ದಶಕದಲ್ಲಿ ಚಲನಚಿತ್ರಗಳನ್ನು ನಿರ್ದೇಶಿಸಲು ಪ್ರಾರಂಭಿಸಿದರು. ಅವರ ಮೊದಲ ಚಲನಚಿತ್ರ ʻಮೀಂದುಮ್ ಒರು ಕಥಲ್ ಕಥೈʼ. ಈ ಚಿತ್ರಕ್ಕೆ ಅತ್ಯುತ್ತಮ ನಿರ್ದೇಶನಕ್ಕಾಗಿ ಇಂದಿರಾ ಗಾಂಧಿ ಪ್ರಶಸ್ತಿಯನ್ನು ಗೆದ್ದರು.

ಕಮಲ್ ಹಾಸನ್ ಜತೆಗಿನ ʻವೆಟ್ರಿ ವಿಝಾʼ, ಮಲಯಾಳಂನಲ್ಲಿ ಮೋಹನ್ ಲಾಲ್ ಜತೆಗೆ ʻಒರು ಯಾತ್ರಮೊಳಿʼ ಸೇರಿದಂತೆ ತಮಿಳಿನಲ್ಲಿ ಒಟ್ಟು 12 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. 2D ಎಂಟರ್‌ಟೈನ್‌ಮೆಂಟ್ ನಿರ್ಮಿಸಿದ ಜ್ಯೋತಿಕಾ ನಟಿಸಿದ ಕೋರ್ಟ್‌ರೂಮ್ ಥ್ರಿಲ್ಲರ್‌ ʻಪೊನ್ಮಗಲ್ ವಂಥಲ್‌ʼನಲ್ಲಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಅನೇಕ ಸಿನಿಮಾಗಳಲ್ಲಿ ನಟಿಸಿದ ಇವರಿಗೆ 1980ರಲ್ಲಿ ತೆರೆಕಂಡ ʻಲೋರಿʼ ಮತ್ತು ʻಚಮರಮ್ʼ ಚಿತ್ರಗಳು ದೊಡ್ಡ ಮಟ್ಟದ ಯಶಸ್ಸನ್ನು ನೀಡಿದವು.

ಕೊನೆಯದಾಗಿ ʻಸಿಬಿಐ5 ದಿ ಬ್ರೇನ್ʼ ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಪ್ರತಾಪ್ ಅವರು, ಪಪ್ಪು, ಅರವಂ, ಕನಲ್​, ಜೀವಾ, ವೇಗಂ, ಆಥಂ, ಪೋರೆನ್ಸಿಕ್​ ಸೇರಿದಂತೆ 100ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ | ನಿಗೂಢ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾದ ಮಲಯಾಳಂ ರೂಪದರ್ಶಿ

Exit mobile version