Site icon Vistara News

Actor Darshan: ಪ್ಲೀಸ್‌ ಪವಿತ್ರಾಳನ್ನು ಬಿಟ್ಟು ಬಿಡಿ ಎಂದು ಅಂಗಲಾಚುತ್ತಿರುವ ದರ್ಶನ್‌?

Actor Darshan Please leave Pavitra Darshan request to police

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆಯ‌ (Renuka Swamy Murder) ನಂತರ ಆಸುಪಾಸಿನ ಸ್ಥಳಗಳಲ್ಲಿದ್ದ ಸಿಸಿ ಕ್ಯಾಮೆರಾದಲ್ಲಿ (CCTV recording) ದಾಖಲಾಗಿದ್ದ ಎಲ್ಲ ದೃಶ್ಯಗಳನ್ನು ಡಿಲೀಟ್‌ (Delete) ಮಾಡಲಾಗಿದೆ ಎಂಬ ಆಘಾತಕಾರಿ ಸಂಗತಿ ಬಯಲಾಗಿದೆ. ಇದರ ಜತೆಗೆ ದರ್ಶನ್‌ (Actor Darshan) ಅವರು ಸ್ಥಳ ಮಹಜರು ವೇಳೆ ತನಿಖಾಧಿಕಾರಿಗಳಿಗೆ ಪವಿತ್ರ ಗೌಡಳನ್ನು ಬಿಟ್ಟು ಬಿಡಿ ಎಂದು ಅಂಗಲಾಚುತ್ತಿದ್ದಾರೆ ಎನ್ನಲಾಗಿದೆ.

ಸ್ಥಳ ಮಹಜರು ವೇಳೆ ತನಿಖಾಧಿಕಾರಿಗೆ ದರ್ಶನ್‌ ಮನವಿ ಮಾಡಿದ್ದಲ್ಲದೇ ಪೊಲೀಸ್ ಠಾಣೆಯಲ್ಲೂ ಪವಿತ್ರಾ ಗೌಡಳನ್ನು ಕೇಸ್ ನಿಂದ ಕೈ ಬಿಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಪವಿತ್ರಾ ಗೌಡಳಿಗೂ ಈ ಕೊಲೆ ಕೇಸ್‌ಗೂ ಸಂಬಂಧವಿಲ್ಲವೆಂದು ದರ್ಶನ್ ಪದೇ ಪದೇ ಹೇಳುತ್ತಿದ್ದು, ಪವಿತ್ರ ಗೌಡಳನ್ನು ಬಿಟ್ಟು ಬಿಡಿ ಎಂದು ಅಂಗಲಾಚುತ್ತಿದ್ದಾರೆ ಎನ್ನಲಾಗಿದೆ. ಆದರೆ ದರ್ಶನ್‌ ಎಷ್ಟೇ ಮನವಿ ಮಾಡಿಕೊಂಡರೂ ಪೊಲೀಸರು ಮಾತ್ರ ಜಗ್ಗದೇ ಇನ್ನಷ್ಟು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಸಿಸಿಟಿವಿ ದಾಖಲೆ ಸಂಪೂರ್ಣ ನಾಶ ಮಾಡಿದ ಪಾತಕಿಗಳು

ಕೊಲೆಯ ಬಳಿಕ, ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ನ ಹಾಗೂ ಹಲ್ಲೆ ನಡೆದ ಪಟ್ಟಣಗೆರೆಯ ಶೆಡ್‌ನ ದೃಶ್ಯಗಳನ್ನು ಡಿಲೀಟ್‌ ಮಾಡಿಸಲಾಗಿದೆ. ಆರೋಪಿಗಳು ಕಳೆದ ಒಂದು ವರ್ಷದ ಸಿಸಿ ಟಿವಿ ದೃಶ್ಯಗಳನ್ನು ಡಿಲೀಟ್ ಮಾಡಿಸಿದ್ದಾರೆ. ಸಿಸಿ ಟಿವಿ ದೃಶ್ಯಗಳೇ ಕೊಲೆಯ ಪ್ರಮುಖ ಸಾಕ್ಷಿ ಆಗಲಿವೆ ಎಂಬ ಹಿನ್ನೆಲೆಯಲ್ಲಿ, ಇವುಗಳನ್ನು ಪೂರ್ತಿಯಾಗಿ ಡಿಲೀಟ್‌ ಮಾಡಲು ಆರೋಪಿಗಳು ಅಪರಾಧ ಪರಿಣಿತರ ಸಲಹೆ ಪಡೆದೇ ಈ ಕೃತ್ಯ ಎಸಗಿದ್ದಾರೆ ಎಂದು ತರ್ಕಿಸಲಾಗಿದೆ.

ಇದನ್ನೂ ಓದಿ: Actor Darshan: ಮನಸ್ಸಿಗೆ ಹತ್ತಿರವಾದವರು ಕಷ್ಟ ಅನುಭವಿಸುತ್ತಿದ್ದಾರೆ; ಬರ್ತ್‌ಡೇ ಕ್ಯಾನ್ಸಲ್ ಮಾಡಿದ ರಕ್ಷಕ್ ಬುಲೆಟ್!

ರೇಣುಕಾಸ್ವಾಮಿ ಕೊಲೆಯ ಮೊದಲಿನ ಹಾಗೂ ನಂತರದ ಎಲ್ಲಾ ಸಿಸಿ ಕ್ಯಾಮರಾ ದೃಶ್ಯಗಳನ್ನು ಡಿಲೀಟ್‌ ಮಾಡಿಸಿದ್ದಾರೆ. ತನಿಖೆಗೆ ಇವು ಅತ್ಯಂತ ಅಗತ್ಯವಾಗಿದ್ದು, ಶೆಡ್ ಹಾಗೂ ರೆಸ್ಟೋರೆಂಟ್‌ನ ಸಿಸಿ ಟಿವಿ‌ ರೆಕಾರ್ಡಿಂಗ್‌ ರಿಕವರಿ ಮಾಡಲು ಪೊಲೀಸರು ಹರಸಾಹಸಪಡುತ್ತಿದ್ದಾರೆ. ದರ್ಶನ್‌ ಸೇರಿದಂತೆ ಆರೋಪಿಗಳ ಬಂಧನ ಆದ ಬಳಿಕ ಈ ರೆಕಾರ್ಡಿಂಗ್‌ ಡಿಲೀಟ್‌ ಮಾಡಲಾಗಿದೆಯೇ ಅಥವಾ ಮೊದಲೇ ಮಾಡಲಾಗಿದೆಯೇ ಎಂದು ತಿಳಿದುಬರಬೇಕಿದೆ.

ಕೊಲೆಯ ಪ್ರಮುಖ ಸಾಕ್ಷಿಗಳನ್ನೇ ಖತರ್‌ನಾಕ್ ಆರೋಪಿಗಳು ಡಿಲೀಟ್ ಮಾಡಿದ್ದು, ಈ ಹಿನ್ನೆಲೆಯಲ್ಲಿ ಸಾಕ್ಷಿ ನಾಶಕ್ಕೆ ಪೊಲೀಸ್‌ ಇಲಾಖೆಯಲ್ಲಿರುವವರಿಂದಲೂ ಆರೋಪಿಗಳು ಸಲಹೆ ಪಡೆದಿದ್ದಾರೆಯೇ ಎಂಬುದು ಕೂಡ ತನಿಖಾಧಿಕಾರಿಗಳಿಗೆ ಕುತೂಹಲ ಮೂಡಿಸಿದೆ. ಈಗಾಗಲೇ ಪ್ರಶ್ನೆಗೆ ಒಳಗಾಗುತ್ತಿರುವವರ ಪಟ್ಟಿಯಲ್ಲಿ ಒಬ್ಬ ಪೊಲೀಸ್‌ ಅಧಿಕಾರಿ ಕೂಡ ಇದ್ದಾರೆ ಎಂಬುದನ್ನು ಇಲ್ಲಿ ಗಮನಿಸಬಹುದು.

ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಪಟ್ಟಣಗೆರೆಯ ಶೆಡ್‌ನಲ್ಲಿ ಕೂಡಿಹಾಕಿ ಥಳಿಸಿ ಸಾಯಿಸಲಾಗಿತ್ತು. ನಂತರ ಇದನ್ನು ಮುಚ್ಚಿಹಾಕುವುದು ಹೇಗೆ ಎಂಬ ಕುರಿತು ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ನಲ್ಲಿ ನಟ ಹಾಗೂ ಆರೋಪಿಗಳು ಕೂತು ಮಾತನಾಡಿದ್ದರು. ಇಲ್ಲೇ 30 ಲಕ್ಷ ರೂಪಾಯಿಯ ಡೀಲ್‌ ಕೂಡ ನಡೆದಿತ್ತು. ಇದೀಗ ಎರಡೂ ಕಡೆಗಳ ಸಿಸಿಟಿವಿ ಹಾರ್ಡ್ ಡ್ರೈವ್‌ಗಳು ಕೂಡ ನಾಶವಾಗಿವೆ ಎಂದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ನ ಮಾಲಿಕ‌ ವಿನಯ್‌ನನ್ನು ಕೂಡ ಪ್ರಶ್ನಿಸಲಾಗುತ್ತಿದೆ. ‌

Exit mobile version