Site icon Vistara News

Actor Darshan: ಸಂಸ್ಕಾರ ಹಾಗೂ ಶಿಕ್ಷಣ ಮುಖ್ಯ, ದರ್ಶನ್‌ ಬಳಿ ಎರಡೂ ಇಲ್ಲ; ಶಿಷ್ಯನ ಬಗ್ಗೆ ಗುರು ಬೇಸರ!

Actor Darshan teacher Addanda Cariappa sad on arrested darshan

ಬೆಂಗಳೂರು: ನಟ ದರ್ಶನ್‌ (Actor Darshan) ಅವರು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಅರೆಸ್ಟ್‌ ಆಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌ ಅವರ ಬಗ್ಗೆ ಮೈಸೂರಿನ ರಂಗಾಯಣದ ಅಡ್ಡಂಡ ಕಾರ್ಯಪ್ಪ ಮಾಧ್ಯಮಗಳಿಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ದರ್ಶನ್‌ ಬಗ್ಗೆ ಅವರ ಮೊದಲ ಗುರು ಅಡ್ಡಂಡ ಕಾರ್ಯಪ್ಪ ಅವರು ದರ್ಶನ್‌ ಕುರಿತಾಗಿ ಬೇಸರ ಹೊರ ಹಾಕಿದ್ದಾರೆ. ʻʻದರ್ಶನ್‌ಗೆ ಶನಿಯಾಗಿ ಬಂದಿದ್ದು ಪವಿತ್ರಾ ಗೌಡ. ರೇಣುಕಾಸ್ವಾಮಿ ಪತ್ನಿ ಅನಾಥವಾಗಿದ್ದಾಳೆʼʼಎಂದು ಹೇಳಿಕೊಂಡಿದ್ದಾರೆ.

ಮಾಧ್ಯಮವೊಂದರಲ್ಲಿ ಅಡ್ಡಂಡ ಕಾರ್ಯಪ್ಪ ಮಾತನಾಡಿ ʻʻದರ್ಶನ್‌ ಮೆಜಿಸ್ಟಿಕ್‌ ಸಿನಿಮಾ ಹಿಟ್‌ ಆದ ಬಳಿಕ ನನ್ನ ಹತ್ರ ಬಂದಿದ್ದ. ನನ್ನ ಮನೆಗೆ ಬಂದು ನನ್ನ ಕಾಲಿಗೆ ಬಿದ್ದು ನಿಮ್ಮ ಆಶೀರ್ವಾದ ಎಂದ. ಅಲ್ಲಿಂದ ಅವನು ಬೆಳೆಯುತ್ತ ಹೋದ. ಹಲವು ವಿಡಿಯೊಗಳಲ್ಲಿ ಅವನ ಬಾಡಿ ಲಾಂಗ್ವೇಜ್‌ ನೋಡಿದ್ದೆ. ಅಕ್ಕನ್‌…ಅಮ್ಮನ್‌.. ಈ ರೀತಿ ಹೊಲಸು ಮಾತುಗಳು. ಅದನ್ನು ನೋಡಿ ನನಗೆ ಊಹಿಸಲು ಆಗಿಲ್ಲ. ಇವನ ನಡವಳಿಕೆ ಬರಬರುತ್ತ ತುಂಬ ಚೇಂಜ್‌ ಆಯ್ತು. ಎಜುಕೇಶನ್‌ ಕೊರತೆ ಅವನಿಗೆ ಇದೆʼʼಎಂದರು.

ಬದುಕು ಮತ್ತು ಸಿನಿಮಾ ಬೇರೆ ಬೇರೆ

ʻʻಬದುಕು ಮತ್ತು ಸಿನಿಮಾ ಬೇರೆ ಬೇರೆ. ಆದರೆ ದರ್ಶನ್‌ ಹೇಗೆ ತಿಳಿದುಕೊಂಡಿದ್ದ ಎಂದರೆ, ಸಿನಿಮಾದಲ್ಲಿ ಏನೂ ರೌಡಿಸಂ ಇರುತ್ತೋ ಅದನ್ನ ನೋಡಿ ಬದುಕು ಹಾಗೇ ಅಂದುಕೊಂಡಿದ್ದಾನೆ. ದರ್ಶನ್‌ಗೆ ಒಂದು ಪಾಠ ಇದು. ಅವನ ಜೀವನ ಇಲ್ಲಿಗೆ ಮುಗಿದಿಲ್ಲ. ರೇಣುಕಾಸ್ವಾಮಿ ಏನೋ ಸತ್ತ. ಆದರೆ ಅವನ ಹೆಂಡತಿ ಕಥೆ ಏನು? ದರ್ಶನ್‌ ಅಭಿಮಾನಿಗಳಿಗೆ ನಾನು ಹೇಳುವುದು ಇಷ್ಟೇ. ನಿಮಗೆ ದರ್ಶನ್‌ ಎಷ್ಟು ಮುಖ್ಯವೋ. ಅದೇ ರೀತಿ ರೇಣುಕಾ ಸ್ವಾಮಿ ಹೆಂಡತಿ ಕೂಡ ಅಷ್ಟೇ ಮುಖ್ಯ. ರೇಣುಕಾಸ್ವಾಮಿ ತಪ್ಪು ಮಾಡಿದ್ದಾರೆ. ಆತನ ಹೆಂಡತಿಗೆ ಸಾಂತ್ವನ ಹೇಳಿʼʼಎಂದರು.

ಇದನ್ನೂ ಓದಿ: Actor Darshan: ರೇಣುಕಾಸ್ವಾಮಿ ಕೊಲೆ ಪ್ರಕರಣ; ಪವಿತ್ರಾ ಗೌಡ ಮ್ಯಾನೇಜರ್ ಅರೆಸ್ಟ್‌

ಸಂಸ್ಕಾರ ಮತ್ತು ಶಿಕ್ಷಣ ಮುಖ್ಯ, ದರ್ಶನ್‌ ಬಳಿ ಎರಡೂ ಇಲ್ಲ!

ʻʻಸಂಸ್ಕಾರ ಮತ್ತು ಶಿಕ್ಷಣ ಮುಖ್ಯ. ಅದು ದರ್ಶನ್‌ ಬಳಿ ಎರಡೂ ಇಲ್ಲ. ಇನ್ನೊಂದು ಅವನಿಗೆ ಸಿಕ್ಕ ಲೋಫರ್ ಫ್ರೆಂಡ್ಸ್. ಸುದೀಪ್‌ಗೆ ಹಾಗೆ ಫ್ರೆಂಡ್ಸ್ ಮಾಡಿಕೊಳ್ಳೋಕೆ ಆಗಲ್ಲ. ಯಾಕಂದ್ರೆ, ಸುದೀಪ್ ವಿದ್ಯಾವಂತ. ಸಹವಾಸ ದೋಷ, ಹೆಂಡ, ಮೊದಲ ಹೆಂಡತಿಗೆ ಚಿತ್ರಹಿಂಸೆ ಕೊಟ್ಟಿದ್ದು, ಹಾಗೇ ಮೀಡಿಯಾದವರು ಅವನನ್ನ 2 ವರ್ಷ ಬ್ಯಾನ್ ಮಾಡಿದರು. ರಾಜ್‌ಕುಮಾರ್ ಅವರ ವಿನೀತತೆಯನ್ನ ನೋಡಿ ದರ್ಶನ್ ಕಲಿತುಕೊಳ್ಳಲಿಲ್ಲ’’ ಎಂದು ಅಡ್ಡಂಡ ಕಾರ್ಯಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ಪೊಲೀಸರು ಮಾಹಿತಿ ಕಲೆ

ಪಟ್ಟಣಗೆರೆ ವಿನಯ್ ಶೆಡ್‌ನಲ್ಲಿ ಇಂದು ಕೂಡ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣ ಬೆನ್ನಲೆ ಮತ್ತಷ್ಟು ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಮಾಹಿತಿ ಪ್ರಕಾರ ದರ್ಶನ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ ಅದೇಷ್ಟೋ ಜನರಿಗೆ ಈ ಶೆಡ್‌ನಲ್ಲಿಯೇ ಚಿತ್ರಹಿಂಸೆ ನೀಡಲಾಗಿತ್ತು ಎನ್ನಲಾಗಿದೆ. ದರ್ಶನ್ ವಿರುದ್ಧ ಮಾತನಾಡಿದವರಿಗೆ ಇದೇ ಶೆಡ್ ನಲ್ಲಿ ಕರೆತಂದು ʻಡಿ ಗ್ಯಾಂಗ್ʼ ಹೊಡೆಯುತ್ತಿದ್ದರು ಎನ್ನಲಾಗಿದೆ. ಬಡ್ಡಿ ದುಡ್ಡು ಕಟ್ಟದ, ಲೋನ್ ಪಾವತಿ ಮಾಡದವರಿಗೆ ಕೂಡ ಇದೇ ಶೆಡ್‌ನಲ್ಲಿ ʻಡಿ ಗ್ಯಾಂಗ್ʼ ನರಕ ತೋರಿಸುತ್ತಿತ್ತು ಎನ್ನಲಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್ ಬೆನ್ನಲೆ ಮತ್ತಷ್ಟು ಕೇಸ್‌ಗಳು ರಿವೀಲ್‌ ಆಗಬಹುದು ಎನ್ನಲಾಗಿದೆ. ಪೊಲೀಸರು ವಶಪಡಿಸಿಕೊಂಡ ಸಿಸಿ ಕ್ಯಾಮರೆ ದೃಶ್ಯಗಳ ಪರಿಶೀಲನೆ ಆಗುತ್ತಿದೆ. ಆರೋಪಿ ವಿನಯ್ ಸೇರಿದಂತೆ ಇತರೆ ಆರೋಪಿಗಳನ್ನು ಮತಷ್ಟು ತೀವ್ರವಾಗಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ರೇಣುಕಾಸ್ವಾಮಿ ಮಾದರಿಯಲ್ಲಿಯೇ ಹಲವು ಜನರಿಗೆ ಗ್ಯಾಂಗ್‌ ಚಿತ್ರಹಿಂಸೆ ನೀಡಿತ್ತಾ ಎಂಬುದುರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ ಪೊಲೀಸರು.

Exit mobile version