Site icon Vistara News

Actor Darshan: ವಿವಾದಗಳ ನಡುವೆಯೂ ನಟ ದರ್ಶನ್ ಪಾರ್ಟಿ; ಪತ್ನಿ ಜತೆ ಮಸ್ತ್‌ ಡಾನ್ಸ್‌!

darshan

ಬೆಂಗಳೂರು: ಸಾಲು ಸಾಲು ವಿವಾದಗಳಲ್ಲಿ ಸಿಲುಕಿದ್ದರೂ, ಅವ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ನಟ ದರ್ಶನ್‌ (Actor Darshan) ಅವರು ಗೆಳೆಯರ ಜತೆ ಬಿಂದಾಸ್‌ ಪಾರ್ಟಿ ಮಾಡಿರುವುದು ಕಂಡುಬಂದಿದೆ. ಇತ್ತೀಚೆಗಷ್ಟೇ ಹುಟ್ಟು ಹಬ್ಬ ಆಚರಿಸಿಕೊಂಡಿದ್ದ ನಟನ ಸ್ನೇಹಿತರು ಹುಟ್ಟುಹಬ್ಬವನ್ನು ಜೋರಾಗಿಯೇ ಸೆಲೆಬ್ರೇಟ್ ಮಾಡಿದ್ದರು. ಇದರ ನಡುವೆ ಪಾರ್ಟಿಯೊಂದರಲ್ಲಿ ದರ್ಶನ್ ಅವರು ಪತ್ನಿ ವಿಜಯಲಕ್ಷ್ಮಿ ಅವರೊಂದಿಗೆ ಮಸ್ತ್‌ ಡಾನ್ಸ್ ‌ಮಾಡಿದ್ದು, ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನಿರ್ಮಾಪಕ ಉಮಾಪತಿ ಗೌಡ ಹಾಗೂ ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಪದಗಳ ಬಳಕೆ ಹಿನ್ನೆಲೆಯಲ್ಲಿ ಮಹಿಳಾ ಸಂಘಟನೆಗಳು ಸೇರಿ ವಿವಿಧ ಸಂಘಗಳು, ನಟನ ವಿರುದ್ಧ ಅಸಮಾಧಾನ ಹೊರಹಾಕಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದವು. ಆದರೆ, ವಿವಾದಗಳಿಗೆ ಸೊಪ್ಪು ಹಾಕದ ದರ್ಶನ್‌, ಪಾರ್ಟಿಯೊಂದರಲ್ಲಿ ಭಾಗಿಯಾಗಿ ಪತ್ನಿ ಜತೆ ಕುಣಿದು ಕುಪ್ಪಳಿಸಿದ್ದಾರೆ.

ದರ್ಶನ್ ಪ್ರಸ್ತುತ ‘ಕಾಟೇರ’ ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಇತ್ತೀಚೆಗಷ್ಟೆ ‘ಕಾಟೇರ’ ಚಿತ್ರ 50 ದಿನ ಪೂರೈಸಿದೆ. ಇದೀಗ ‘ಡೆವಿಲ್’ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಈ ನಡುವೆ ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮಿ ಸ್ನೇಹಿತರ ಜೊತೆಗೆ ಪಾರ್ಟಿ ಮಾಡಿದ್ದು, ವಿಜಯಲಕ್ಷ್ಮಿ ಜೊತೆಗೆ ದಚ್ಚು ಸಖತ್ ಡಾನ್ಸ್ ಮಾಡಿ ಸಂಭ್ರಮಿಸಿದ್ದಾರೆ.

ಪತ್ನಿಯೊಂದಿಗೆ ಪಾರ್ಟಿ ಮಾಡುವ ಮೂಲಕ ಇತ್ತೀಚೆಗೆ ಪವಿತ್ರಾ ಗೌಡ ಹಾಗೂ ವಿಜಯಲಕ್ಷ್ಮಿ ನಡುವೆ ಎದ್ದಿದ್ದ ವಿವಾದಕ್ಕೂ ಪರೋಕ್ಷ ಉತ್ತರವನ್ನು ದರ್ಶನ್ ನೀಡಿದ್ದಾರೆ.

ಇದನ್ನೂ ಓದಿ | Actor Darshan: ದೇಹ ಅಷ್ಟೇ ಅಲ್ಲ, ಮಾತೂ ತೂಕ ಇರ್ಬೇಕು; ದರ್ಶನ್‌ಗೆ ಉಮಾಪತಿ ತಿರುಗೇಟು!

Exit mobile version