Site icon Vistara News

Actor Dhanush: ಹೊಸ ಸಿನಿಮಾ ಅನೌನ್ಸ್‌ ಮಾಡಿದ ಕಾಲಿವುಡ್‌ ಸ್ಟಾರ್‌ ಧನುಷ್‌!

Dhanush and Mari Selvaraj reunite for a new film.

ಬೆಂಗಳೂರು: ಕಾಲಿವುಡ್‌ ಸೂಪರ್‌ ಸ್ಟಾರ್‌ ಧನುಷ್‌ (Actor Dhanush) ತಮಿಳು ಚಿತ್ರರಂಗದ ಪ್ರಮುಖ ನಟರಲ್ಲಿ ಒಬ್ಬರು. ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟ ಧನುಷ್‌ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇದೀಗ ನಟ ಹೊಸ ಯೋಜನೆಗೆ ಕೈ ಹಾಕಿದ್ದಾರೆ. ಈ ಹಿಂದೆ ಕರ್ಣನ್ ಸಿನಿಮಾಗೆ ಆ್ಯಕ್ಷನ್‌ ಕಟ್‌ ಹೇಳಿದ ಮಾರಿ ಸೆಲ್ವರಾಜ್ ಈ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ.

ವಂಡರ್‌ಬಾರ್ ಫಿಲ್ಮ್ಸ್ ಬ್ಯಾನರ್‌ನಡಿಯಲ್ಲಿ ಈ ಸಿನಿಮಾ ನಿರ್ಮಿಸಲಿದ್ದಾರೆ. ಏಪ್ರಿಲ್ 9ರಂದು, ಧನುಷ್ ಅವರು ಹೊಸ ಚಿತ್ರವನ್ನು ಮಾರಿ ಸೆಲ್ವರಾಜ್ ಅವರೊಂದಿಗೆ ಘೋಷಿಸಿದ್ದಾರೆ. ಈ ಬಗ್ಗೆ ಧನುಷ್‌ ಟ್ವೀಟ್‌ ಮಾಡಿ ʻʻಹಲವು ಕಾರಣಗಳಿಗಾಗಿ ವಿಶೇಷವಾದ ಪ್ರತಿಷ್ಠಿತ ಯೋಜನೆ. ಓಂ ನಮಃ ಶಿವಾಯʼʼಎಂದು ಬರೆದುಕೊಂಡಿದ್ದಾರೆ. ಮಾರಿ ಸೆಲ್ವರಾಜ್ ಮತ್ತು ಧನುಷ್ ಈ ಹಿಂದೆ ಕರ್ಣನ್ ಚಿತ್ರಕ್ಕಾಗಿ ಜತೆಯಾಗಿದ್ದರು ಈ ಸಿನಿಮಾ ಉತ್ತಮ ವಿಮರ್ಶೆಗಳನ್ನು ಪಡೆಯಿತು.

ಹಲವು ಸಿನಿಮಾಗಳಲ್ಲಿ ಬ್ಯುಸಿಯಾದ ನಟ ಧನುಷ್‌

ಧನುಷ್ ಕೊನೆಯದಾಗಿ ʻವಾತಿʼ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು, ಇದು ಫೆಬ್ರವರಿಯಲ್ಲಿ ತೆರೆಗೆ ಬಂದಿತು ಅಷ್ಟೇ ಅಲ್ಲದೇ ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಗಳಿಕೆ ಕಂಡಿತು. ಇದು ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆಯಿತು. ಈ ಸಿನಿಮಾ ವೆಂಕಿ ಅಟ್ಲೂರಿ ನಿರ್ದೇಶಿಸಿದ್ದಾರೆ.

ಸದ್ಯ ಅರುಣ್ ಮಾಥೇಶ್ವರನ್ ನಿರ್ದೇಶನದ ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲಿ ಧನುಷ್ ಕೆಲಸ ಮಾಡುತ್ತಿದ್ದಾರೆ. ಕನ್ನಡದ ಖ್ಯಾತ ನಟ ಶಿವ ರಾಜ್‌ಕುಮಾರ್ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.

ಧನುಷ್‌ ಟ್ವೀಟ್‌

ಇದನ್ನೂ ಓದಿ: Actor Dhanush | `ಕೊಟ್ಲಲ್ಲಪೋ ಕೈ’ ಸಿನಿಮಾ ಖ್ಯಾತಿಯ ನಟ ಧನುಷ್‌ ಇನ್ನಿಲ್ಲ

ಕ್ಯಾಪ್ಟನ್‌ ಮಿಲ್ಲರ್‌ ಸಿನಿಮಾ

ಕ್ಯಾಪ್ಟನ್ ಮಿಲ್ಲರ್ ಚಿತ್ರಕ್ಕೆ ಸತ್ಯಜ್ಯೋತಿ ಫಿಲ್ಮ್ಸ್‌ ಬಂಡವಾಳ ಹೂಡಿದೆ. ಇನ್ನು ಸಂದೀಪ್ ಕಿಶನ್ ಮತ್ತು ಪ್ರಿಯಾಂಕಾ ಅರುಲ್ ಮೋಹನ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ತಮಿಳು, ತೆಲುಗು ಹಾಗೂ ಹಿಂದಿಯಲ್ಲಿ ಈ ‘ಕ್ಯಾಪ್ಟನ್ ಮಿಲ್ಲರ್ ಸಿನಿಮಾ ಬಿಡುಗಡೆಯಾಗಲಿದೆ.

ಐತಿಹಾಸಿಕ ಕಥಾ ಹಂದರ ಹೊಂದಿರುವ ‘ಕ್ಯಾಪ್ಟನ್ ಮಿಲ್ಲರ್’ !

ಈ ಚಿತ್ರ 1930 ಮತ್ತು 40ರ ದಶಕದ ಮದ್ರಾಸ್‌ ಪ್ರೆಸಿಡೆನ್ಸಿ ಹಿನ್ನೆಲೆಯಲ್ಲಿ ಸೆಟ್ಟೇರಲಿದೆ. ಶೀಘ್ರದಲ್ಲಿಯೇ ಚಿತ್ರೀಕರಣ ಪ್ರಾರಂಭವಾಗುತ್ತದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಚಿತ್ರಕ್ಕೆ ಶ್ರೇಯಸ್ ಕೃಷ್ಣ ಅವರ ಛಾಯಾಗ್ರಹಣ, ನಾಗೂರನ್ ಅವರ ಸಂಕಲನ ಮತ್ತು ಜಿ ವಿ ಪ್ರಕಾಶ್ ಕುಮಾರ್ ಅವರ ಸಂಗೀತ ಸಂಯೋಜನೆ ಇದೆ. ಸತ್ಯಜ್ಯೋತಿ ಫಿಲ್ಮ್ಸ್‌ನ ಸೆಂಧಿಲ್‌ ತ್ಯಾಗರಾಜನ್‌ ಮತ್ತು ಅರ್ಜುನ್‌ ತ್ಯಾಗರಾಜನ್‌ ನಿರ್ಮಿಸಿರುವ ʻಕ್ಯಾಪ್ಟನ್‌ ಮಿಲ್ಲರ್‌ʼ 2023ರಲ್ಲಿ ತೆರೆ ಕಾಣಲಿದೆ. ಮದನ್‌ ಕರ್ಕಿ ಸಂಭಾಷಣೆ ಇದೆ. ರಾಷ್ಟ್ರ ಪ್ರಶಸ್ತಿ ವಿಜೇತೆ ಪೂರ್ಣಿಮಾ ರಾಮಸ್ವಾಮಿ ಮತ್ತು ಕಾವ್ಯ ಶ್ರೀರಾಮ್‌ ಅವರು ವಸ್ತ್ರ ವಿನ್ಯಾಸ ಮಾಡಿದ್ದಾರೆ.

Exit mobile version