ಬೆಂಗಳೂರು: ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಈ ಮುಂಚೆ ತಮ್ಮ ಸಹಾಯಕನ ಮುದುವೆಯಲ್ಲಿ ಭಾಗಿಯಾಗಿ ಸಖತ್ ಸುದ್ದಿಯಾಗಿದ್ದರು. ಇದೀಗ ತಮಿಳು ನಟ ಧನುಷ್ (Actor Dhanush) ಅವರು ತಮ್ಮ ಸಹಾಯಕ ಆನಂದ್ ಅವರ ಮದುವೆಯಲ್ಲಿ ಭಾಗಿಯಾಗಿ ನವದಂಪತಿಗೆ ಶುಭ ಹಾರೈಸಿದ್ದಾರೆ. ಅವರೊಂದಿಗೆ ಫೋಟೊಗೆ ಪೋಸ್ ಕೂಡ ನೀಡಿದರು. ದಂಪತಿಗಳೊಂದಿಗಿನ ನಟನ ಚಿತ್ರಗಳನ್ನು ಧನುಷ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು, ನಟನ ಸರಳತೆಯನ್ನು ಮೆಚ್ಚಿ ಹೊಗಳುತ್ತಿದ್ದಾರೆ. ಈ ಫೋಟೊ ಹಾಗೂ ವಿಡಿಯೊ ಇದೀಗ ಸಖತ್ ವೈರಲ್ ಆಗಿದೆ.
ಈ ಮದುವೆಗೆ ಧನುಷ್ ಬಿಳಿ ಬಣ್ಣದ ಶರ್ಟ್, ನೀಲಿ ಜೀನ್ಸ್ ಮತ್ತು ನೀಲಿ ಟೋಪಿ ಧರಿಸಿ ಆಗಮಿಸಿದ್ದರು. ಸಹನಟ ಕೆನ್ ಕರುಣಾಸ್ (Ken Karunas) ಕೂಡ ಜತೆಗಿದ್ದರು. ವಧು ನಟನನ್ನು ನೋಡಿ ಮುಗುಳ್ನಗುತ್ತಿದ್ದಂತೆ ಧನುಷ್ ವರನ ಕೈ ಕುಲುಕಿ ಶುಭಾಷಯ ತಿಳಿಸಿದರು. ಇದೀಗ ಈ ಫೋಟೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ʻʻಧನುಷ್ ಅವರದ್ದು ಎಂತಹ ಒಳ್ಳೆಯ ನಡವಳಿಕೆ! ಸೆಲೆಬ್ರಿಟಿಗಳು ತಮ್ಮ ಅಭಿಮಾನಿಗಳಿಗೆ ಪ್ರೀತಿ ಮತ್ತು ಬೆಂಬಲವನ್ನು ತೋರಿಸುವುದನ್ನು ನೋಡುವುದೇ ಚೆಂದ. ಅದಕ್ಕಾಗಿಯೇ ಧನುಷ್‌ಗೆ ಇಷ್ಟೊಂದು ಅಭಿಮಾನಿ ಬಳಗವಿದೆ” ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Actor Dhanush: ಸಂಗೀತ ನಿರ್ದೇಶಕ `ಇಳಯರಾಜ’ ಬಯೋಪಿಕ್‌ಗೆ ಧನುಷ್ ಹೀರೊ?
தனது உதவியாளர் ஆனந்த் திருமண வரவேற்ப்பு நிகழ்ச்சியில் திடீரென வந்து வாழ்த்திய தலைவர் @dhanushkraja sir ❣️🔥🙏 #CaptainMiller #Dhanush pic.twitter.com/Lep0bzGyNR
— Dhanush Trends ™ (@Dhanush_Trends) September 16, 2023
ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾದ ಧನುಷ್
ಧನುಷ್ ಅವರ ʻಕ್ಯಾಪ್ಟನ್ ಮಿಲ್ಲರ್ʼ ಚಿತ್ರ ಬಿಡುಗಡೆಗೆ ಸಜ್ಜಾಗುತ್ತಿದೆ. ಕಳೆದ ತಿಂಗಳು ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿತ್ತು. ಅರುಣ್ ಮಾಥೇಶ್ವರನ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇದರಲ್ಲಿ ಪ್ರಿಯಾಂಕಾ ಅರುಳ್ ಮೋಹನ್, ಹ್ಯಾಟ್ರಿಕ್ ಹೀರೊ ಶಿವ ರಾಜ್‌ಕುಮಾರ್, ನಿವೇದಿತಾ ಸತೀಶ್ ಮತ್ತು ಸಂದೀಪ್ ಕಿಶನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ವರ್ಷವೇ ಚಿತ್ರವು ಥಿಯೇಟರ್‌ಗೆ ಬರಲಿದೆ. ಧನುಷ್ ಚಿತ್ರನಿರ್ಮಾಪಕ ಆನಂದ್ ಎಲ್ ರೈ ಅವರೊಂದಿಗೆ ತೇರೆ ಇಷ್ಕ್ ಮೇ ಸಿನಿಮಾ ಕೂಡ ಹೊಂದಿದ್ದಾರೆ. ಇವರಿಬ್ಬರು ಈ ಹಿಂದೆ ರಾಂಝಾನಾ ಮತ್ತು ಅತ್ರಂಗಿ ರೇ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು.
ಚಿತ್ರದ ಇತ್ತೀಚಿನ ಅಪ್‌ಡೇಟ್ ಪ್ರಕಾರ, ತಮಿಳು ನಟ ಧನುಷ್ (Actor Dhanush) ಇಳಯರಾಜ ಬಯೋಪಿಕ್‌ನ ಇಳಯರಾಜರ ಪಾತ್ರವನ್ನು ನಿಭಾಯಿಸಲಿದ್ದಾರೆ ಎನ್ನಲಾಗಿದೆ. ದಿ ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಇಳಯರಾಜ ಅವರ ಮಗ ಯುವನ್ ಶಂಕರ್ ರಾಜಾ ಅವರು ಧನುಷ್ ಅವರೇ ತಂದೆಯ ಬಯೋಪಿಕ್‌ಗೆ ಪಾತ್ರ ನಿಭಾಯಿಸಬೇಕು ಎಂಬ ಬಯಕೆಯನ್ನು ವ್ಯಕ್ತಪಡಿಸಿದ್ದರು ಎಂದು ವರದಿಯಾಗಿದೆ. ʻʻತನ್ನ ತಂದೆಯ ಜೀವನ ಪ್ರಯಾಯಣದಲ್ಲಿ ಸಿನಿಮಾ ಮಾಡಬೇಕಾದರೆ ಧನುಷ್ ನಾಯಕನಾಗಿ ನಟಿಸಲು ಉತ್ತಮ ಆಯ್ಕೆʼʼ ಎಂದು ಹೇಳಿದ್ದರು. ಈ ಚಿತ್ರವನ್ನು ಯುವನ್ ಶಂಕರ್ ರಾಜಾ ತಮ್ಮ ಸ್ವಂತ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ನಿರ್ಮಿಸುವ ನಿರೀಕ್ಷೆಯಿದೆ. ಹಲವು ವರ್ಷಗಳಿಂದ ಹಲವಾರು ನಿರ್ದೇಶಕರು ಇಳಯರಾಜ ಅವರ ಜೀವನಚರಿತ್ರೆ ಮಾಡಲು ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸಿದ್ದರು.