Site icon Vistara News

Actor Dhanush: ಶಿವಣ್ಣ-ಧನುಷ್‌ ಅಭಿನಯದ ಕ್ಯಾಪ್ಟನ್ ಮಿಲ್ಲರ್ ಫಸ್ಟ್‌ ಲುಕ್‌ ಔಟ್‌!

Actor Dhanush

ಬೆಂಗಳೂರು: ನಟ ಧನುಷ್ (Actor Dhanush) ಅಭಿನಯದ ʻಕ್ಯಾಪ್ಟನ್ ಮಿಲ್ಲರ್ʼ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆಗೊಂಡಿದೆ. ಈ ಚಿತ್ರ 1930 ಮತ್ತು 40ರ ದಶಕದ ಮದ್ರಾಸ್‌ ಪ್ರೆಸಿಡೆನ್ಸಿ ಹಿನ್ನೆಲೆಯಲ್ಲಿರುವ ಈ ಚಿತ್ರ ಇತ್ತೀಚೆಗೆ ಸೆಟ್ಟೇರಿತ್ತು. ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ಧನುಷ್‌ ಸುತ್ತಲೂ ಹೆಣಗಳ ರಾಶಿ ಇದೆ. ಅದರ ಮಧ್ಯೆ ಧನುಷ್ ಕೈಯಲ್ಲಿ ಗನ್‌ ಹಿಡಿದು ನಿಂತಿದ್ದಾರೆ.

‘ಗೌರವವೇ ಸ್ವಾತಂತ್ರ್ಯ’ ಎಂದು ಈ ಪೋಸ್ಟರ್​ಗೆ ಧನುಷ್ ಕ್ಯಾಪ್ಷನ್‌ ನೀಡಿದ್ದಾರೆ. ಈ ಲುಕ್​ಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಶಿವಣ್ಣ ಕೂಡ ಮೆಚ್ಚುಗೆ ಸೂಚಿಸಿದ್ದಾರೆ. ಇದೀಗ ನೆಟ್ಟಿಗರು ಅನಿರೀಕ್ಷಿತ ಲುಕ್‌ ಇದು ಎಂದು ಕಮೆಂಟ್‌ ಮಾಡಿದ್ದಾರೆ. ಕ್ಯಾಪ್ಟನ್ ಮಿಲ್ಲರ್ ಅರುಣ್ ಮಾಥೇಶ್ವರನ್ ನಿರ್ದೇಶಿಸಿದ್ದು, ಜಿವಿ ಪ್ರಕಾಶ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದಲ್ಲಿ ಧನುಷ್ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಅವರು ತಂದೆ ಮತ್ತು ಮಗನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಇದರಲ್ಲಿ ಶಿವರಾಜ್‌ ಕುಮಾರ್, ಪ್ರಿಯಾಂಕಾ ಮೋಹನ್, ನಿವೇದಿತಾ ಸತೀಶ್, ಜಾನ್ ಕೊಕ್ಕೆನ್ ಮತ್ತು ಮೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಚಿತ್ರದ ಪೋಸ್ಟರ್ ಕುರಿತು ನಿರ್ದೇಶಕ ಅರುಣ್ ಮಾತನಾಡಿ ʻʻಧನುಷ್ ಕೈಯಲ್ಲಿ ಹಿಡಿದಿರುವ ಗನ್ ಲೂಯಿಸ್ ಗನ್ (ಮೊದಲ ವಿಶ್ವ ಯುದ್ಧದ ಕಾಲದ ಮೆಷಿನ್ ಗನ್) ಎಂದು ಕರೆಯಲಾಗುತ್ತದೆ. ನಾವು ಈ ರೀತಿಯ ಗನ್ ಖರೀದಿಸಿದ್ದೇವೆ ಮತ್ತು ಅದನ್ನು ಚಿತ್ರದ ಉದ್ದೇಶಕ್ಕಾಗಿ ಬಹಳ ಆಸಕ್ತಿದಾಯಕ ರೀತಿಯಲ್ಲಿ ಮಾರ್ಪಡಿಸಿದ್ದೇವೆ. ಧನುಷ್ ಅವರ ವೃತ್ತಿಜೀವನದಲ್ಲಿಯೇ ಈ ಸಿನಿಮಾ ಅತಿದೊಡ್ಡ ಚಿತ್ರಗಳಲ್ಲಿ ಒಂದಾಗಿರುವುದರಿಂದ ನಾವು ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಗೊಳಿಸಿದ್ದೇವೆ. ಬಜೆಟ್‌ನಲ್ಲಿಯೂ ಸಹ, ಇದು ತಮಿಳು ಚಿತ್ರರಂಗದಲ್ಲಿಯೇ ದೊಡ್ಡ ಸಿನಿಮಾʼʼ ಎಂದರು.

ಇದನ್ನೂ ಓದಿ: Actor Dhanush | ಕಾಲಿವುಡ್‌ಗೆ ಎಂಟ್ರಿ ಕೊಟ್ಟ ಶಿವಣ್ಣ: ಧನುಷ್‌ ನಟನೆಯ ಕ್ಯಾಪ್ಟನ್ ಮಿಲ್ಲರ್‌ನಲ್ಲಿ ಸ್ಕ್ರೀನ್ ಶೇರ್!

ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲಿ ಧನುಷ್ ಒಟ್ಟು ಮೂರು ಲುಕ್‌ಗಳಲ್ಲಿ ನಟಿಸಲಿದ್ದಾರೆ ಎಂದು ಅರುಣ್ ಬಹಿರಂಗಪಡಿಸಿದ್ದಾರೆ. “ಚಿತ್ರದಲ್ಲಿ ಧನುಷ್ ಮೂರು ಗೆಟಪ್‌ಗಳನ್ನು ಹೊಂದಿರುತ್ತಾರೆ. ಮೊದಲ ಪೋಸ್ಟರ್ ಈ ಲುಕ್‌. ಉಳಿದವುಗಳನ್ನು ಮುಂದಿನ ಪ್ರಚಾರದ ಸಮಯದಲ್ಲಿ ಬಿಡುಗಡೆ ಮಾಡಲಾಗುತ್ತದೆ. 85ರಷ್ಟು ಚಿತ್ರೀಕರಣ ಈಗಾಗಲೇ ಮುಗಿದಿದೆ. ಶಿವ ರಾಜ್‌ಕುಮಾರ್ ಅವರ ಭಾಗಗಳನ್ನು ಸಹ ಶೂಟಿಂಗ್‌ ಮುಗಿಸಿದ್ದೇವೆʼʼ ಎಂದರು.

ಚಿತ್ರದಲ್ಲಿ ನಟ ಧನುಷ್ (Actor Dhanush ) ಜತೆ ಶಿವಣ್ಣ ಸ್ಕ್ರೀನ್ ಶೇರ್ ಮಾಡಲಿದ್ದಾರೆ. ಧನುಷ್ ಅಣ್ಣನ ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಳ್ಳಲಿದ್ದಾರೆ.

Exit mobile version