ಬೆಂಗಳೂರು: ಬಹುಭಾಷಾ ನಟಿ ಮೀನಾ (Actor Meena) ಹಾಗೂ ಕಾಲಿವುಡ್ ನಟ ಧನುಷ್ (Actor Dhanush) ಮದುವೆಯಾಗಲಿದ್ದಾರೆ ಎಂಬ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಇಬ್ಬರೂ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿರಲಿದ್ದಾರೆ ಎಂದು ಯೂಟ್ಯೂಬ್ ವಾಹಿನಿಯಲ್ಲಿ ಬೈಲ್ವಾನ್ ರಂಗನಾಥನ್ ಹೇಳಿದ್ದಾರೆ. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಧನುಷ್ ಅಭಿಮಾನಿಗಳು ರಂಗನಾಥನ್‌ನನ್ನು ಸೋಷಿಯಲ್ ಮೀಡಿಯಾದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಪುಟ್ನಂಜ, ಚೆಲುವ, ಗ್ರಾಮದೇವತೆ, ಸಿಂಹಾದ್ರಿಯ ಸಿಂಹ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಖ್ಯಾತ ನಟಿ ಮೀನಾ ಪತಿ ವಿದ್ಯಾಸಾಗರ್ ಶ್ವಾಸಕೋಶದ ಸೋಂಕಿನಿಂದ ಇತ್ತೀಚೆಗೆ ನಿಧನರಾಗಿದ್ದರು. ಧನುಷ್ ಕೂಡಾ ರಜನಿಕಾಂತ್ ಪುತ್ರಿ ಐಶ್ವರ್ಯಾ ಅವರಿಗೆ ಡಿವೋರ್ಸ್ ನೀಡಿದ್ದಾರೆ. ಪತಿಯ ಸಾವಿನ ನೋವಿನಿಂದ ಚೇತರಿಸಿಕೊಂಡಿರುವ ನಟಿ ಮೀನಾ ಅವರ 2ನೇ ಮದುವೆ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಆದರೆ ಇದೀಗ ಬೈಲ್ವಾನ್ ರಂಗನಾಥನ್ ಹೇಳಿಕೆ ಭಾರಿ ಚರ್ಚೆಗೆ ಒಳಗಾಗಿದೆ.
ಬೈಲ್ವಾನ್ ರಂಗನಾಥನ್ ಹೇಳಿದ್ದೇನು?
ಮೀನಾ ಹಾಗೂ ಧನುಷ್ ಇಬ್ಬರು ಒಂಟಿ ಜೀವನ ನಡೆಸುತ್ತಿದ್ದಾರೆ. ಮುಂಬರುವ ಜುಲೈನಲ್ಲಿ ಇಬ್ಬರೂ ಮದುವೆಯಾಗುತ್ತಾರೆ. ಅದು ವರ್ಕೌಟ್ ಆಗಲಿಲ್ಲ ಅಂದ್ರೆ ಇಬ್ಬರೂ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿರಲಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ ಅಥವಾ ಸುಳ್ಳಾ ಎಂಬುದು ಕಾದುನೋಡಬೇಕಿದೆ.
ಇದನ್ನೂ ಓದಿ: Dhanush:150 ಕೋಟಿ ರೂ. ಬೆಲೆ ಬಾಳುವ ಮನೆಯನ್ನು ಪೋಷಕರಿಗೆ ಗಿಫ್ಟ್ ಮಾಡಿದ ಧನುಷ್: ಫೋಟೊಗಳು ಇಲ್ಲಿವೆ!
ತಮಿಳು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಹಾಗೂ ಕಾಮಿಡಿ ಪಾತ್ರಗಳಲ್ಲಿ ಅಭಿನಯಿಸಿರುವ ನಟ ಬೈಲ್ವಾನ್ ರಂಗನಾಥನ್ ಆಗಾಗ ವಿವಾದಾತ್ಮಕ ಹೇಳಿಕೆಯನ್ನು ನೀಡುತ್ತಲೇ ಇರುತ್ತಾರೆ. ಅಷ್ಟೇ ಅಲ್ಲದೇ ರಜನಿಕಾಂತ್ ಪುತ್ರಿ ಐಶ್ವರ್ಯಾ ಅವರ ಕುರಿತು ಮಾತನಾಡಿದ್ದಾರೆ. ಐಶ್ವರ್ಯಾ ರಜನಿಕಾಂತ್ ಹಾಗೂ ಧನುಷ್ ಸಂಸಾರ ಮುರಿದುಬಿದ್ದಿದೆ. ಪತಿ ಧನುಷ್ ಅವರಿಂದ ದೂರಾದ ಮೇಲೆ ಸಂಗೀತ ನಿರ್ದೇಶಕ ಅನಿರುದ್ಧ್ ಜತೆಗೆ ಐಶ್ವರ್ಯಾ ರಜನಿಕಾಂತ್ ಕ್ಲೋಸ್ ಆಗಿದ್ದಾರೆ ಎಂತಲೂ ಹೇಳಿಕೊಂಡಿದ್ದಾರೆ.
ಬೈಲ್ವಾನ್ ರಂಗನಾಥನ್ ವಿರುದ್ಧ ಅಭಿಮಾನಿಗಳು ಸಿಡಿಮಿಡಿಗೊಂಡಿದ್ದಾರೆ. ಇನ್ನೊಬ್ಬರ ವೈಯಕ್ತಿಕ ಜೀವನದ ಬಗ್ಗೆ ಬಾಯಿಗೆ ಬಂದ ಹಾಗೆ ಕಮೆಂಟ್ ಮಾಡುವುದಕ್ಕೆ ನಾಚಿಕೆ ಆಗಲ್ಲವಾ ಎಂದು ಕೇಳುತ್ತಿದ್ದಾರೆ.