Site icon Vistara News

Actor Dhanush | ಧನುಷ್‌ ನಟನೆಯ ದ್ವಿಭಾಷಾ ಚಿತ್ರ ವಾತಿ (ಸರ್‌) ರಿಲೀಸ್‌ ಡೇಟ್‌ ರಿವೀಲ್‌

Actor Dhanush

ಬೆಂಗಳೂರು : ದಕ್ಷಿಣ ಭಾರತದ ಸೂಪರ್‌ ಸ್ಟಾರ್‌ ಧನುಷ್‌ (Actor Dhanush) ಅಭಿನಯದ ತಮಿಳು-ತೆಲುಗು ದ್ವಿಭಾಷಾ ಚಿತ್ರ ʻವಾತಿʼ ಬಿಡುಗಡೆಯ ದಿನಾಂಕವನ್ನು ಘೋಷಿಸಿದೆ. ಚಿತ್ರದ ತೆಲುಗು ಆವೃತ್ತಿಗೆ ʻಸರ್ʼ ಎಂದು ಹೆಸರಿಡಲಾಗಿದೆ.

ಪ್ರಮುಖ ನಿರ್ಮಾಣ ಸಂಸ್ಥೆಯಾದ ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಮತ್ತು ಫಾರ್ಚೂನ್ ಫೋರ್ ಒಟ್ಟಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿವೆ. ವೆಂಕಿ ಅಟ್ಲೂರಿ ನಿರ್ದೇಶನದ ಈ ಸಿನಿಮಾ ಡಿಸೆಂಬರ್‌ 2ರಂದು ತೆರೆಗೆ ಬರುತ್ತಿದೆ. ಈ ಚಿತ್ರದಲ್ಲಿ ಧನುಷ್ ಪ್ರೊಫೆಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ಸಂಯುಕ್ತಾ ಮೆನನ್ ನಟಿಸಿಲಿದ್ದಾರೆ.

ಸಿನಿಮಾಗೆ ದಿನೇಶ್ ಕೃಷ್ಣನ್ ಛಾಯಾಗ್ರಹಣ , ರಾಷ್ಟ್ರ ಪ್ರಶಸ್ತಿ ವಿಜೇತ ನವೀನ್ ನೂಲಿ ಸಂಕಲನವಿದೆ. ಸಂಗೀತ ನಿರ್ದೇಶನ ಜಿವಿ ಪ್ರಕಾಶ್ ಕುಮಾರ್ ಮಾಡುತ್ತಿದ್ದಾರೆ. ಸಾಯಿ ಕುಮಾರ್, ತಣಿಕೆಲ್ಲ ಭರಣಿ ಮತ್ತು ನರ್ರಾ ಶ್ರೀನಿವಾಸ್ ಪೋಷಕ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ.

ಈ ಹಿಂದೆ ನಟ ಧನುಷ್‌ ತಮ್ಮ ಟ್ವಿಟರ್‌ನಲ್ಲಿ 1 ಕೋಟಿ 1೦ ಲಕ್ಷ ಜನ ಫಾಲೋವರ್ಸ್‌ ಹೊಂದುವ ಮೂಲಕ ದಾಖಲೆ ಬರೆದಿದ್ದರು. ಇತ್ತೀಚೆಗೆ ತೆರೆಕಂಡ ʻತಿರುಚಿತ್ರಂಬಲಂʼ ಸಿನಿಮಾ ಮೂಲಕ ಗಮನ ಸೆಳೆದಿದ್ದರು. ʻನಾನೇ ವರುವೇಸ್‌ʼ ಚಿತ್ರದಲ್ಲಿ ಧನುಷ್‌ ನಟಿಸುತ್ತಿದ್ದಾರೆ. ಈ ಸಿನಿಮಾ ಚಿತ್ರೀಕರಣ ಮುಕ್ತಾಯಗೊಂಡಿದ್ದು ನವೆಂಬರ್‌ ಅಥವಾ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ | Dhanush | ನಟನಾಗದೇ ಇದ್ದಿದ್ದರೆ ಧನುಷ್‌ ಏನಾಗುತ್ತಿದ್ದರು?

Exit mobile version