Site icon Vistara News

Actor Diganth | ಶಸ್ತ್ರ ಚಿಕಿತ್ಸೆ ನಂತರ ದಿಗಂತ್‌ ಹೇಗಿದ್ದಾರೆ?

Actor Diganth

ಬೆಂಗಳೂರು: ಗೋವಾ ಬೀಚ್‌ನಲ್ಲಿ ಸೊಮರ್‌ಸಾಲ್ಟ್‌(Somersault) ಕಸರತ್ತು ನಡೆಸುವಾಗ ಗಾಯಗೊಂಡಿದ್ದ ಚಿತ್ರನಟ ದಿಗಂತ್‌ (Actor Diganth) ಚೇತರಿಸಿಕೊಳ್ಳುತ್ತಿದ್ದಾರೆ.

ಇದೀಗ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು, ದಿಗಂತ್‌ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ದಿಗಂತ್ ಕುತ್ತಿಗೆ ಭಾಗಕ್ಕೆ ಮಾತ್ರ‌ ಏಟಾಗಿದ್ದು, ಬೆನ್ನುಮೂಳೆಗೆ ಯಾವುದೇ ಅಪಾಯ ಆಗಿಲ್ಲ. ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ. ದಿಗಂತ್ ಹಂತಹಂತವಾಗಿ ಚೇತರಿಗೆ ಕಾಣಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಅವರ ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದಿತ್ತು. ಕೆಲವೇ ಗಂಟೆಗಳಲ್ಲಿ ಏರ್‌ಲಿಪ್ಟ್ ಮೂಲಕ ಅವರನ್ನು ಕುಟುಂಬಸ್ಥರು ಮಂಗಳವಾರ ಸಂಜೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಸೇರಿಸಿದ್ದರು.

ಇದನ್ನೂ ಓದಿ | Actor Diganth | ದಿಗಂತ್‌ ಗಾಯಗೊಂಡಿರುವ ಸೊಮರ್‌ಸಾಲ್ಟ್‌ ಎಂದರೆ ಏನು? ಅಪಾಯವೇನು?

ದಿಗಂತ್ ನಟಸಿ, ಯೋಗರಾಜ್ ಭಟ್ ನಿರ್ದೇಶಿಸಿದ ಗಾಳಿಪಟ -2 ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಮೂಲಕ ಮತೊಮ್ಮೆ ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸುವ ಭರವಸೆಯಲ್ಲಿ ದಿಗಂತ್‌ ಇದ್ದಾರೆ. ತೆಲುಗಿನ ʼಎವರುʼ ಚಿತ್ರದ ಕನ್ನಡ ರಿಮೇಕ್‌ನಲ್ಲೂ ಇವರು ನಟಿಸಲಿದ್ದಾರೆ.

ಇದನ್ನೂ ಓದಿ | Diganth Actor | ಸೊಮರ್‌ಸಾಲ್ಟ್‌ ವೇಳೆ ನಟ ದಿಗಂತ್‌ ಕತ್ತಿಗೆ ಗಂಭೀರ ಪೆಟ್ಟು

Exit mobile version