ಬೆಂಗಳೂರು: ಗೋವಾದ ಸಮುದ್ರ ತಟದಲ್ಲಿ ಸೊಮರ್‌ಸಾಲ್ಟ್ (somersault) ಹೊಡೆಯುವ ವೇಳೆ ದಿಗಂತ್ ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದಿದೆ. ಕುಟುಂಬದ ಜತೆ ನಟ ದಿಗಂತ್ (Diganth Actor) ಗೋವಾ ಪ್ರವಾಸಕ್ಕೆ ತೆರಳಿದ್ದರು. ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದಿರುವ ಬಗ್ಗೆ ದಿಗಂತ್ ಆಪ್ತರಿಂದ ತಿಳಿಯಲ್ಪಟ್ಟಿದೆ. ಕೆಲವೇ ಗಂಟೆಗಳಲ್ಲಿ ಏರ್‌ಲಿಪ್ಟ್ ಮೂಲಕ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಿಗಂತ್ ಅವರನ್ನು ಕುಟುಂಬಸ್ಥರು ಕರೆತರಲಿದ್ದಾರೆ ಎಂದು ಹೇಳಲಾಗಿದೆ.
ಕೆಲವು ವರ್ಷಗಳ ಹಿಂದೆ ವಿದೇಶದಲ್ಲಿ ದಿಗಂತ್ ಚಿತ್ರವೊಂದರ ಚಿತ್ರೀಕರಣ ನಡೆಸುವಾಗ ದುರ್ಘಟನೆಯೊಂದು ಸಂಭವಿಸಿತ್ತು. ಚಿತ್ರೀಕರಣದ ವೇಳೆ ದಿಗಂತ್ ಒಂದು ಕಣ್ಣಿಗೆ ಹಾನಿಯಾಗಿತ್ತು. ದಿಗಂತ್ ಅವರೇ ಈ ಘಟನೆಯನ್ನು ತಿಳಿಸಿದ್ದರು.
ಇದನ್ನೂ ಓದಿ | Actor Diganth | ದಿಗಂತ್ ಗಾಯಗೊಂಡಿರುವ ಸೊಮರ್‌ಸಾಲ್ಟ್ ಎಂದರೆ ಏನು? ಅಪಾಯವೇನು?
ದೂದ್ಪೇಡಾ ದಿಗಂತ್ ಎಂದೇ ಹೆಸರುವಾಸಿಯಾಗಿರುವ ನಟ ದಿಗಂತ್ ತಮ್ಮ ನಟನೆಯಿಂದಲೇ ಹೆಸರುವಾಸಿಯಾದವರು. ಇತ್ತೀಚೆಗೆ ಅವರ ನಟನೆಯ ʼಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲʼ ಸಿನಿಮಾ ಬಿಡುಗಡೆಗೊಂಡಿತ್ತು.
ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಚಿತ್ರದಲ್ಲಿ ಅವರ ಪತ್ನಿ ಐಂದ್ರಿತಾ ರೇ ಸಹ ಅಭಿನಯಿಸಿದ್ದರು. ವಿನಾಯಕ ಕೋಡ್ಸರ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಸಿನಿಮಾ ನಿರ್ದೇಶನ ಮಾಡಿದ್ದರು.
ಇದನ್ನೂ ಓದಿ | ವಿದಾಯದ ವೇಳೆಯಲ್ಲಿ ನೆನಪು; ಗಾಯಕ ಕೆಕೆ ಕಂಠದ ಕನ್ನಡ ಹಾಡು ಕೇಳಿದ್ದೀರಾ?