ಬೆಂಗಳೂರು: ಚಿತ್ರನಟ ದಿಗಂತ್ ಗೋವಾದಲ್ಲಿ ಸೊಮರ್‌ಸಾಲ್ಟ್(Somersault) ಕಸರತ್ತು ನಡೆಸುವಾಗ ಗಾಯಗೊಂಡಿದ್ದಾರೆ. Actor Diganth ಅವರಿಗೆ ಸೊಮರ್‌ಸಾಲ್ಟ್ ಎಂದರೆ ಅಚ್ಚುಮೆಚ್ಚಿನ ಚಟುವಟಿಕೆ.
ಸೊಮರ್‌ಸಾಲ್ಟ್ ಒಂದು ಚಮತ್ಕಾರಿಕ ವ್ಯಾಯಾಮವಾಗಿದ್ದು, ಇದನ್ನು ಫ್ಲಿಪ್, ಹೆಲಿ, ಮತ್ತು ಜಿಮ್ನಾಸ್ಟಿಕ್ಸ್ ಸಾಲೊ ಮತ್ತು ಕನ್ನಡದಲ್ಲಿ ಪಲ್ಟಿ ಎಂತಲೂ ಕರೆಯುತ್ತಾರೆ. ಇದರಲ್ಲಿ ವ್ಯಕ್ತಿಯ ದೇಹ 360 ಡಿಗ್ರಿ ಪಲ್ಟಿ ಹೊಡೆದು ಸುರಕ್ಷಿತವಾಗಿ ಕೆಳಗಿಳಿಯುತ್ತದೆ.
ಸುಪ್ರಾ (ಓವರ್) ಮತ್ತು ಸಾಲ್ಟಸ್ (ಲೀಪ್) ಎಂಬ ಲ್ಯಾಟಿನ್ ಪದದಿಂದ ಈ ಪದವು ಸಾಂಬ್ರೆಸಾಲ್ಟ್ ಎಂದಾಗಿ, ಕೊನೆಗೆ ಸೊಮರ್‌ಸಾಲ್ಟ್ ಅಯಿತು. ಕನ್ನಡದಲ್ಲಿ ಪಲ್ಟಿ ಹೊಡೆಯುವುದು ಎಂದು ಹೇಳಬಹುದಾದರೂ, ಸಾಮಾನ್ಯ ಪಲ್ಟಿಗಿಂತ ಇದು ಅತ್ಯಂತ ಸಂಕೀರ್ಣ ವ್ಯಾಯಾಮ. ಹೆಚ್ಚಾಗಿ ಜಿಮ್ನಾಸ್ಟಿಕ್, ಫುಟ್‌ಬಾಲ್ ಮುಂತಾದ ಕ್ರೀಡೆಗಳಲ್ಲಿ ಈ ಹೆಸರನ್ನು ಬಳಸಲಾಗುತ್ತದೆ.
ಬ್ರಿಟಿಷ್ ಜಿಮ್ನಾಸ್ಟಿಕ್ ಅಸೋಸಿಯೇಷನ್‌ಗಳಲ್ಲಿ, ಕ್ರ್ಯಾಶ್ ಡೈವ್ ಅನ್ನು ¾ ಮುಂಭಾಗದ ಪಲ್ಟಿ ಎಂದು ುಲ್ಲೇಖಿಸಲಾಗಿದೆ. ಈ ಕಸರತ್ತನ್ನು ಕೈಗಳಿಂದ ಹಾಗೂ ಕಾಲುಗಳಿಂದ ಮಾಡುತ್ತಾರೆ. ಇದರಿಂದಾಗಿ ಮುಖ್ಯವಾಗಿ ಕತ್ತಿನ ಭಾಗ ಹಾಗೂ ಬೆನ್ನು ಮೂಳೆಗೆ ಅಪಾಯ ಸಂಭವಿಸುತ್ತದೆ. ಈ ಹಿಂದೆ ಕೆಲವರು ನಿಧನರಾದ ಉದಾಹರಣೆಗಳೂ ಇವೆ.
ಇದನ್ನೂ ಓದಿ | Diganth Actor | ಸೊಮರ್‌ಸಾಲ್ಟ್ ವೇಳೆ ನಟ ದಿಗಂತ್ ಕತ್ತಿಗೆ ಗಂಭೀರ ಪೆಟ್ಟು
ಹಾನಿಗಳು
೧. ಮಣಿಕಟ್ಟಿನ ಮುರಿತಗಳು, ಕೈ ಮತ್ತು ಬೆರಳುಗಳಿಗೆ ಗಾಯಗಳು
೨. ಕಾರ್ಟಿಲೆಜ್ ಡ್ಯಾಮೇಜ್
೩. ಬೆನ್ನು ನೋವು, ಬೆನ್ನುಹುರಿ ಮುರಿತಗಳು
೪. ತಲೆ, ಕುತ್ತಿಗೆ ಅಥವಾ ಮಣಿಕಟ್ಟಿಗೆ ಹಾನಿಯಾಗುತ್ತದೆ
ಮಿಜೋರಾಂ ಫುಟ್ಬಾಲ್ ಆಟಗಾರ ಸಾವನ್ನಪ್ಪಿದ ಘಟನೆ
೨೦೧೪ರಲ್ಲಿ ಮಿಜೋರಾಂನ ಬೆತ್ಲೆಹೆಮ್ ವೆಂಗ್ತ್ಲಾಂಗ್ ಫುಟ್‌ಬಾಲ್ ತಂಡದ ಮಿಡ್ ಫೀಲ್ಡರ್ ಪೀಟರ್ ಬಯಾಕ್ಸಾಂಜುಲಾ(೨೩) ಗೋಲ್ ಸಂಭ್ರಮಿಸಲು ಸೊಮರ್‌ಸಾಲ್ಟ್ ಮಾಡಿದರು. ಆದರೆ ಲ್ಯಾಂಡ್ ಆಗುವ ವೇಳೆ ಬೆನ್ನುಹುರಿ ಡ್ಯಾಮೇಜ್ ಆದ ಕಾರಣ ಸಾವನಪ್ಪಿದರು.
ಗೋವಾದಲ್ಲಿ ಸಾವನ್ನಪ್ಪಿದ ಪ್ರವಾಸಿಗ
೨೦೨೦ರಲ್ಲಿ ಗೋವಾದ ಬಾಗಾ ಬೀಚ್‌ನಲ್ಲಿ ಸೊಮರ್‌ಸಾಲ್ಟ್ ಮಾಡುವಾಗ ಮಹಾರಾಷ್ಟ್ರದ ಪ್ರವಾಸಿಗ ಬಾಲು ಶಿಂಧೆ(೪೦) ಲ್ಯಾಮಡ್ ಆಗುವಾಗ ತಲೆ ನೆಲಕ್ಕೆ ಅಪ್ಪಳಿಸಿತು. ಆಗ ಕುತ್ತಿಗೆ ಹಾಗೂ ಬೆನ್ನುಹುರಿಗೆ ಹಾನಿಯಾಗಿ ಸಾವನ್ನಪ್ಪಿದ್ದರು.
ಇದೀಗ ಕನ್ನಡದ ನಟ ದಿಗಂತ್ ಅವರು ಪ್ಲಿಪ್ ಮಾಡಲು ಹೋಗಿ ಕುತ್ತಿಗೆಗೆ ಏಟು ಸಂಭವಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಹಿಂದೆ ಕೂಡ ಸಾಕಷ್ಟು ವಿಡಿಯೋಗಳನ್ನು ದಿಗಂತ್ ತಮ್ಮ ಇನ್ಸ್ಟಾ ಮೂಲಕ ಫ್ಲೀಪ್ ವಿಡಿಯೋ ಶೇರ್ ಮಾಡಿಕೊಂಡಿದ್ದರು.
ಇದನ್ನೂ ಓದಿ | ವಿದಾಯದ ವೇಳೆಯಲ್ಲಿ ನೆನಪು; ಗಾಯಕ ಕೆಕೆ ಕಂಠದ ಕನ್ನಡ ಹಾಡು ಕೇಳಿದ್ದೀರಾ?