ಮುಂಬೈ: ಬಾಲಿವುಡ್ ನಟ ಗೋವಿಂದ (Actor Govinda) ಮತ್ತು ಸುನಿತಾ ಅಹುಜಾ ಅವರದ್ದು ಪ್ರೇಮ ವಿವಾಹ. ಸಂಬಂಧಿಗಳೇ ಆಗಿದ್ದ ಇವರಿಬ್ಬರು ಪ್ರೀತಿಯಲ್ಲಿ ಬಿದ್ದಿದ್ದು ಹೇಗೆ? ಹೇಗಿತ್ತು ಅವರ ಪ್ರೀತಿಯ ದಿನಗಳು ಎನ್ನುವ ಬಗ್ಗೆ ಅನೇಕರಿಗೆ ಕುತೂಹಲವಿದೆ. ಈ ವಿಚಾರವಾಗಿ ಜೋಡಿ ಇತ್ತೀಚೆಗೆ ಕಾರ್ಯಕ್ರಮದವೊಂದರಲ್ಲಿ ಮಾತನಾಡಿದ್ದು, ಅವರ ಪ್ರೇಮ್ ಕಹಾನಿ ವೈರಲ್ ಆಗಿದೆ.
ಇದನ್ನೂ ಓದಿ: Rashmika Mandanna | ರಶ್ಮಿಕಾ ಮಂದಣ್ಣ ನಟನೆಯ 2ನೇ ಹಿಂದಿ ಚಿತ್ರ ನೇರವಾಗಿ ಒಟಿಟಿಗೆ? ನಟಿ ಟ್ರೋಲ್ ಆಗಿದ್ಯಾಕೆ?
ಗೋವಿಂದ ಅವರ ಮಾವನ ಪತ್ನಿಯ ಸಹೋದರಿಯೇ ಸುನಿತಾ. ಅವರು ಕುಟುಂಬದವರು ಹಾಕಿದ ಸವಾಲಿನ ಮೇರೆಗೆ ಗೋವಿಂದಾರ ಮನ ಒಲಿಸಿಕೊಳ್ಳಲು ಮುಂದಾದರಂತೆ. ಅದೇ ನಿಜವಾಗಿ ಪ್ರೀತಿಯಲ್ಲಿ ಬಿದ್ದರಂತೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಗೋವಿಂದಾ, “ಅವಳಿಗೆ ಆಗ 15 ವರ್ಷ ವಯಸ್ಸು. ನನಗೆ 21 ವರ್ಷ ವಯಸ್ಸು. ಅವಳ ಜತೆ ಪ್ರೀತಿ ಮಾಡುವುದಕ್ಕೂ ಭಯವಾಗುತ್ತಿತ್ತು. ಯಾರಾದರೂ ಮಕ್ಕಳಿಗೆ ಕಿರುಕುಳ ನೀಡುತ್ತಿದ್ದಾನೆ ಎಂದುಬಿಡುತ್ತಾರೇನೋ ಎನಿಸುತ್ತಿತ್ತು” ಎಂದು ಹೇಳಿದ್ದಾರೆ.
“ಆ ವಯಸ್ಸಿನಲ್ಲಿ ಪ್ರೀತಿ ನನಗೇ ಆಶ್ಚರ್ಯವೆನಿಸಿತ್ತು. ಇದೇ ವಿಚಾರದಲ್ಲಿ ಸುನಿತಾಳನ್ನು ಕೇಳಿದ್ದೆ ಕೂಡ. ನೀನಿನ್ನು ಚಿಕ್ಕವಳು, ಪ್ರೀತಿ ಎಂದರೆ ಏನೆಂದು ಗೊತ್ತಾ ಎಂದು ಕೇಳಿದ್ದೆ. ನನಗೆಲ್ಲ ಗೊತ್ತು. ನಾನು ನಿನ್ನನ್ನೇ ಪ್ರೀತಿಸುವುದು ಎಂದು ಅವಳು ಹೇಳಿದ್ದಳು” ಎಂದೂ ಗೋವಿಂದಾ ಅವರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: KGF Movie : ಕೆಜಿಎಫ್ ತಲೆ ಬುಡವಿಲ್ಲದ ಸಿನಿಮಾ ಎಂದು ಹೇಳಿದ ತಪ್ಪಿಗೆ ಕ್ಷಮೆ ಯಾಚಿಸಿದ ತೆಲುಗು ನಿರ್ದೇಶಕ
ಮೊದಲ ರೊಮ್ಯಾನ್ಸ್ ಬಗ್ಗೆಯೂ ಬಾಯಿ ಬಿಟ್ಟಿರುವ ಅವರು, “ಒಂದು ಕಾರ್ಯಕ್ರಮ ಮುಗಿಸಿ ಕಾರಿನಲ್ಲಿ ಮನೆಗೆ ಹೊರಟಿದ್ದೆವು. ಆಗ ಅಚಾನಕ್ಕಾಗಿ ನಮ್ಮಿಬ್ಬರ ಕೈ ಸ್ಪರ್ಶವಾಯಿತು. ಆಕೆ ತಕ್ಷಣ ನನ್ನ ಕೈ ಹಿಡಿದುಕೊಂಡು ಬಿಡಲೇ ಇಲ್ಲ. ನಾನೂ ಹಾಗೇ ಮಾಡಿದೆ. ಅಲ್ಲಿಂದಲೇ ಆರಂಭವಾಗಿದ್ದು ನಮ್ಮ ರೊಮ್ಯಾನ್ಸ್” ಎಂದು ಹೇಳಿದ್ದಾರೆ.
ಗೋವಿಂದಾ ಮತ್ತು ಸುನಿತಾ ಅವರು 1987ರ ಮಾರ್ಚ್ 11ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮದುವೆಯಾಗುವಾಗ ಗೋವಿಂದಾಗೆ 24 ವರ್ಷ ವಯಸ್ಸಾಗಿದ್ದರೆ, ಸುನಿತಾ ಅವರಿಗೆ 18 ವರ್ಷ ವಯಸ್ಸಾಗಿತ್ತು.