Site icon Vistara News

Actor Komal: ಕೋಮಲ್‌ ಅಭಿನಯದ ʻಯಲಾ ಕುನ್ನಿʼ ಚಿತ್ರಕ್ಕೆ ಮುಹೂರ್ತ: ಸಿನಿಮಾದಲ್ಲಿದ್ದಾರೆ ಸ್ಟಾರ್‌ ಮಕ್ಕಳು!

Actor Komal Yala Kunni New movie

ಬೆಂಗಳೂರು: ಖಳನಾಯಕನ ಪಾತ್ರಗಳಿಗೆ ಹೊಸ ಭಾಷ್ಯ ಬರೆದ ಧೀಮಂತ ನಟ ಅಂದರೆ ವಜ್ರಮುನಿ. ಯಲಾ ಕುನ್ನಿ ವ್ರಜ್ರಮುನಿ ಅವರ ಫೇಮಸ್‌ ಡೈಲಾಗ್‌. ಇದೀಗ ಈ ಹೆಸರಿನಲ್ಲಿ ಸಿನಿಮಾ ಮೂಡಿ ಬರುತ್ತಿದ್ದು, ಕೋಮಲ್‌ (Actor Komal) ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ. ಈ ಹೆಸರಿನಲ್ಲಿ ಸಿನಿಮಾ ಆಗುತ್ತಿರುವುದು ಸಿನಿರಸಿಕರಲ್ಲಿ ಕುತೂಹಲ ಹೆಚ್ಚಾಗಿದೆ.

ಸ್ಯಾಂಡಲ್‌ವುಡ್‌ ನಟ ಕೋಮಲ್‌ ಕೊಂಚ ಬ್ರೇಕ್‌ನ ನಂತರ ಮತ್ತೆ ಚಿತ್ರರಂಗಕ್ಕೆ ಕಮ್‌ಬ್ಯಾಕ್‌ ಆಗಿದ್ದಾರೆ. ಇದೀಗ ಕೋಮಲ್ ಕುಮಾರ್ ನಟಿಸುತ್ತಿರುವ ನೂತನ ಸಿನಿಮಾ ಯಲಾ ಕುನ್ನಿ ಮುಹೂರ್ತ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ನೆರವೇರಿದೆ. ಈ ಸಿನಿಮಾಗೆ ಮೇರಾ ನಾಮ್ ವಜ್ರಮುನಿ ಎಂದು ಅಡಿಬರಹವಿದೆ. ಜಗ್ಗೇಶ್ ಪುತ್ರ ಯತಿರಾಜ್, ಕೋಮಲ್ ಜತೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ. ವಜ್ರಮುನಿ ಅವರ ಮೂರನೇ ಮಗ ಜಗದೀಶ್ ವಜ್ರಮುನಿ ಅವರ ಮಗ ಆಕರ್ಷ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮಹೇಶ್ ಗೌಡ್ರು ನಿರ್ಮಾಣದ ಈ ಸಿನಿಮಾಗೆ, ಎನ್ ಆರ್ ಪ್ರದೀಪ್ ನಿರ್ದೇಶನವಿದೆ.

ಚಿತ್ರದಲ್ಲಿ ಕೋಮಲ್ ಕುಮಾರ್, ಜಯಸಿಂಹ ಮುಸುರಿ, ಯತಿರಾಜ್ ಜಗ್ಗೇಶ್, ಮಂಜು ಪಾವಗಡ, ಮಾಹಂತೇಶ್ ಸೇರಿದಂತೆ ಮುಂತಾದ ತಾರಾಗಣ ವಿದೆ. ಇದೊಂದು ಪುಣ್ಯಕೋಟಿ ಕಥೆ, ಸತ್ಯ ಸುಳ್ಳು ನಡುವೆ ಪಾತ್ರಗಳು ಹಣೆಯಲಾಗಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಚಿತ್ರಕ್ಕೆ ಹೊಸ ನಾಯಕಿ ನಿಸರ್ಗ ಎನ್ನುವವರು ಕೋಮಲ್ ಜತೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ. 50ದಿನಗಳ ಶೂಟಿಂಗ್ ಪ್ಲಾನ್ ಮಾಡಲಾಗಿದ್ದು, ಚಿತ್ರದಲ್ಲಿ ಕೋಮಲ್ ವಜ್ರಮುನಿ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: Kannada New Film | ʻಕಾಲಾಯ ನಮಃʼ ಎನ್ನುತ್ತ ಮತ್ತೆ ತೆರೆ ಮೇಲೆ ಬರುತ್ತಿದ್ದಾರೆ ನಟ ಕೋಮಲ್‌!

1981ರ ಕಾಲಘಟ್ಟದಲ್ಲಿ ನಡೆಯುವ ಕಥೆ ಇದಾಗಿದ್ದು, ಶ್ರೀರಂಗಪಟ್ಟಣ ಹಾಗೂ ಮೈಸೂರು ಸುತ್ತಮುತ್ತಲಿನ ಹಳ್ಳಿ ಪರಿಸರದಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ವಜ್ರಮುನಿಯಾಗಿ ಕೋಮಲ್‌ ರೆಟ್ರೋ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯಲಾ ಕುನ್ನಿ ಚಿತ್ರಕ್ಕೆ ಧರ್ಮ ವಿಶ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಉದಯ್ ಲೀಲಾ ಛಾಯಾಗ್ರಹಣದ ಹೊಣೆ ಹೊತ್ತಿದ್ದಾರೆ.

Exit mobile version