Kannada New Film | ʻಕಾಲಾಯ ನಮಃʼ ಎನ್ನುತ್ತ ಮತ್ತೆ ತೆರೆ ಮೇಲೆ ಬರುತ್ತಿದ್ದಾರೆ ನಟ ಕೋಮಲ್‌! - Vistara News

ಸಿನಿಮಾ

Kannada New Film | ʻಕಾಲಾಯ ನಮಃʼ ಎನ್ನುತ್ತ ಮತ್ತೆ ತೆರೆ ಮೇಲೆ ಬರುತ್ತಿದ್ದಾರೆ ನಟ ಕೋಮಲ್‌!

ʻಕಾಲಾಯ ನಮಃʼ ಚಿತ್ರದ ಮೂಲಕ (Kannada New Film) ಚಿತ್ರರಂಗಕ್ಕೆ ಮರಳಿ ಬರುತ್ತಿದ್ದಾರೆ ನಟ ಕೋಮಲ್‌.

VISTARANEWS.COM


on

Kannada New Film (Komal actor)
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು : ಸ್ಯಾಂಡಲ್‌ವುಡ್‌ ಹಾಸ್ಯ ಕಲಾವಿದ ನಟ ಕೋಮಲ್ ಕುಮಾರ್‌ (Kannada New Film) ಕೆಲವು ವರ್ಷಗಳಿಂದ ಚಿತ್ರರಂಗದಿಂದ ದೂರವಿದ್ದರು. ಈಗ ʻಕಾಲಾಯ ನಮಃʼ ಚಿತ್ರದ ಮೂಲಕ ಚಿತ್ರರಂಗಕ್ಕೆ ಮರಳಿ ಬರುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತಿದೆ.

ನಟ ಕೋಮಲ್‌ ಮಾತನಾಡಿ ʻʻಮನುಷ್ಯನ ಜೀವನದಲ್ಲಿ ಗ್ರಹಗಳ ಪ್ರಭಾವ ಅಪಾರವಾದದ್ದು. ನನ್ನ ಜೀವನದಲ್ಲೂ ಹಾಗೆ. ನಮ್ಮ ಅಣ್ಣ ಜಗ್ಗೇಶ್ ಅವರು, ಕೆಲವು ವರ್ಷಗಳ ಹಿಂದೆ ನನ್ನ ಜಾತಕ ನೋಡಿ, ನಿನಗೆ ಈಗ ಕೇತು ದೆಸೆ ನಡೆಯುತ್ತಿದೆ. ಹಾಗಾಗಿ ಸ್ವಲ್ಪ ಹುಷಾರಾಗಿರು ಅಂದಿದ್ದರು. ಹಾಗಾಗಿ ಐದು ವರ್ಷದಿಂದ ನಾನು ಯಾವುದೇ ಚಿತ್ರಗಳಲ್ಲಿ ಕಾಣಿಸಿಕೊಂಡಿಲ್ಲ.‌ ನಮ್ಮ ಊರಿನ ದೇವರಾದ ಕಾಲಭೈರವನ ಉಪಾಸನೆ ಮಾಡುತ್ತಿದೆ. ಈಗ ಕಾಲ ಕೂಡಿ ಬಂದಿದೆ. “ಕಾಲಾಯ ನಮಃ” ಶುರುವಾಗಿದೆ. ಕಾಲಭೈರವ ದೇವರ ಭಕ್ತನಾದ ನನ್ನ ಸಿನಿಮಾ ಶೀರ್ಷಿಕೆ ಕೂಡ, ಕಾಲದಿಂದಲೇ ಶುರುವಾಗುತ್ತಿರುವುದು ಕಾಕತಾಳೀಯ. ಕಾಲ ನಿಲುವುದಿಲ್ಲ. ಕಾಲ ಯಾರಿಗೂ ಕಾಯುವುದಿಲ್ಲ. ಈ ರೀತಿ ಕಾಲದ ಬಗ್ಗೆ ನಮ್ಮ ಸಿನಿಮಾ ಸಾಗುತ್ತದೆʼ.ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ | Kannada New Film | ಹೊಸ ಸಿನಿಮಾ ಅನೌನ್ಸ್‌ ಮಾಡಿದ ನಟ ರಿಷಿ: ಪ್ರಶಾಂತ್ ರಾಜಪ್ಪ ಆ್ಯಕ್ಷನ್‌ ಕಟ್‌!

Kannada New Film (Komal actor)

ಕೋಮಲ್‌ ಅವರ ಪತ್ನಿ ಅನಸೂಯ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಮತಿವಣನ್ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಅಸಿಯಾ ಫಿರ್ದೋಸಿ, ಸುಚೇಂದ್ರ ಪ್ರಸಾದ್,‌ ತಿಲಕ್ ಹಾಗೂ ಜಗ್ಗೇಶ್ ಅವರ‌ ಪುತ್ರ ಯತಿರಾಜ್ ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸುತ್ತಿದ್ದಾರೆ.‌

ಜಗ್ಗೇಶ್‌ ಚಿತ್ರದ ಕುರಿತು ಮಾತನಾಡಿ ʻʻಜ್ಯೋತಿಷ ಯಾರು ನಂಬುತ್ತಾರೋ, ಬಿಡುತ್ತಾರೋ ನನಗ ಗೊತ್ತಿಲ್ಲ. ಆದರೆ ನನಗೆ ನಂಬಿಕೆಯಿದೆ. ಕೋಮಲ್ ಅವರಿಗೆ ಕೇತುದೆಸೆ ಇದೆ. 2022 ರವರೆಗೂ ಏನು ಮಾಡಬೇಡ ಅಂದಿದ್ದೆ. ಆತ ನನ್ನ ಮಾತು ಕೇಳಿ ಹಾಗೆ ನಡೆದುಕೊಂಡ. ಈಗ ಕಾಲಭೈರವನ ದಯೆಯಿಂದ ಈ‌ ಚಿತ್ರ ಆರಂಭಿಸಿದ್ದಾನೆ. ನನ್ನ‌ ಮಗ ಯತಿರಾಜ್ ಕೂಡ ಇದರಲ್ಲಿ ಅಭಿನಯಿಸುತ್ತಿದ್ದಾನೆ. ಈ ತಂಡದಿಂದ ಒಳ್ಳೆಯ ಸಿನಿಮಾ ಬರುವ ವಿಶ್ವಾಸವಿದೆ.‌‌ ಒಳ್ಳೆಯದಾಗಲಿʼʼ ಎಂದಿದ್ದಾರೆ. ಈ ಚಿತ್ರಕ್ಕೆ ಎಮಿಲ್‌ ಅವರ ಸಂಗೀತ ನಿರ್ದೇಶನ ಹಾಗೂ ರಾಕೇಶ್ ಸಿ ತಿಲಕ್ ಛಾಯಾಗ್ರಹಣವಿದೆ.

Kannada New Film (Komal actor)

ಇದನ್ನೂ ಓದಿ | Kannada New film | ʻಮಾಫಿಯಾʼ ಚಿತ್ರದ ನಿರ್ದೇಶಕರ ಜತೆ ಮತ್ತೊಮ್ಮೆ ಕೈ ಜೋಡಿಸಿದ ಡೈನಾಮಿಕ್ ಪ್ರಿನ್ಸ್!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Tharun Sudhir: ತರುಣ್-ಸೋನಲ್‌ ನಡುವಿನ ವಯಸ್ಸಿನ ಅಂತರ ಎಷ್ಟು?

Tharun Sudhir: ಈ ಮೂರು ಚಿತ್ರಗಳು ಮೆಚ್ಚುಗೆ ಪಡೆದಿವೆ. ‘ರಾಬರ್ಟ್’ ಸಿನಿಮಾದಲ್ಲಿ ಸೋನಲ್ ನಟಿಸಿದ್ದರು. ಇವರ ಮಧ್ಯೆ ಪ್ರೀತಿ ಮೂಡಿತು. ಈಗ ಇಬ್ಬರೂ ವಿವಾಹ ಆಗುತ್ತಿದ್ದಾರೆ. ಆದರೆ ಇವರಿಬ್ಬರ ಮಧ್ಯೆ ವಯಸ್ಸಿನ ಅಂತರದ ಬಗ್ಗೆ ಭಾರಿ ಚರ್ಚೆ ಆಗುತ್ತಿದೆ.

VISTARANEWS.COM


on

Tharun Sudhir sonal monteiro age differnce
Koo

ಬೆಂಗಳೂರು: ತರುಣ್ ಸುಧೀರ್ (Tharun Sudhir) ಅವರು ನಟನಾಗಿ, ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ. ನಿರ್ದೇಶಕನಾಗಿ ಸ್ಯಾಂಡಲ್​ವುಡ್​ನಲ್ಲಿ ಮೂರು ಹಿಟ್ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ‘ಚೌಕ’, ‘ರಾಬರ್ಟ್’ ಹಾಗೂ ‘ಕಾಟೇರ’ ಚಿತ್ರಗಳನ್ನು ತರುಣ್ ನಿರ್ದೇಶನ ಮಾಡಿದ್ದಾರೆ. ಈ ಮೂರು ಚಿತ್ರಗಳು ಮೆಚ್ಚುಗೆ ಪಡೆದಿವೆ. ‘ರಾಬರ್ಟ್’ ಸಿನಿಮಾದಲ್ಲಿ ಸೋನಲ್ ನಟಿಸಿದ್ದರು. ಇವರ ಮಧ್ಯೆ ಪ್ರೀತಿ ಮೂಡಿತು. ಈಗ ಇಬ್ಬರೂ ವಿವಾಹ ಆಗುತ್ತಿದ್ದಾರೆ. ಆದರೆ ಇವರಿಬ್ಬರ ಮಧ್ಯೆ ವಯಸ್ಸಿನ ಅಂತರದ ಬಗ್ಗೆ ಭಾರಿ ಚರ್ಚೆ ಆಗುತ್ತಿದೆ.

ಸೋನಲ್ ಅವರು ಮಂಗಳೂರಿನವರು. ಅವರು ಮೊದಲು ತಮಿಳು ಸಿನಿಮಾದಲ್ಲಿ ನಟಿಸಿದ್ದರು. ಆನ್​ಲೈನ್​ನಲ್ಲಿ ಇರುವ ಮಾಹಿತಿ ಪ್ರಕಾರ ಅವರು ಜನಿಸಿದ್ದು 1995ರ ಆಗಸ್ಟ್ 11ರಂದು. ಕೆಲವೇ ದಿನಗಳಲ್ಲಿ 29 ವರ್ಷ ತುಂಬಲಿದೆ. ತರುಣ್ ಸುಧೀರ್ ಅವರಿಗೆ 41 ವರ್ಷ ಎನ್ನಲಾಗಿದೆ. ಈಗ ಅವರು ಜನಿಸಿದ್ದು 1983ರಲ್ಲಿ. ಅಂದರೆ, ಇಬ್ಬರ ಮಧ್ಯೆ ಸುಮರು 12 ವರ್ಷಗಳ ಅಂತರ ಇದೆ.

ನಿರ್ದೇಶಕರಿಗೊಬ್ಬ ನಟಿ ಸಿಕ್ರು. ನಟಿಗೊಬ್ಬ ನಿರ್ದೇಶಕ ಸಿಕ್ರು ಎಂದು ನಿನ್ನೆ ಪೋಸ್ಟ್ ಹಂಚಿಕೊಂಡಿದ್ದರು ತರುಣ್‌. ಇಂದು ತರುಣ್ ಅವರು ಸೋನಾಲ್ ಅವರನ್ನು ಮದುವೆಯಾಗುತ್ತಿದ್ದೇನೆ ಎಂದು ವಿಡಿಯೊ ಮೂಲಕ ರಿವೀಲ್ ಮಾಡಿದ್ದಾರೆ. ನಮ್ಮ ಕಥೆಯ ಶುಭಾರಂಭಕ್ಕೆ ನಿಮ್ಮ ಆಶೀರ್ವಾದವಿರಲಿ. ಮದುವೆ ಆಗಸ್ಟ್‌ 11ಕ್ಕೆ ಎಂದು ತರುಣ್​ ಸುಧೀರ್ ವಿಡಿಯೊ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಆಗಸ್ಟ್ 10ರಂದು ರಿಸೆಪ್ಷನ್, ಆಗಸ್ಟ್‌ 11ರಂದು ಮದುವೆ ಎಂದು ತಿಳಿದು ಬಂದಿದೆ. ಬೆಂಗಳೂರಿನ ಕೆಂಗೇರಿ ಬಳಿ ಇರುವ ಪೂರ್ಣಿಮಾ ಕನ್ವೆಷನ್ ಹಾಲ್‌ನಲ್ಲಿ ಮದುವೆ ಅದ್ಧೂರಿಯಾಗಿ ನಡೆಯಲಿದೆ.

ಇದನ್ನೂ ಓದಿ: Tharun Sudhir: ನವರಂಗ್‌ ಥಿಯೇಟರ್‌ನಲ್ಲೇ ಪ್ರೀ ವೆಡ್ಡಿಂಗ್‌ ಫೋಟೊಶೂಟ್‌ ಮಾಡಿಸಿದ್ದೇಕೆ ತರುಣ್‌ ಸುಧೀರ್‌?

ಹಲವು ದಿನಗಳ ಹಿಂದೆ ಸೋನಲ್ ಜೊತೆ ತರುಣ್ ಹೆಸರು ಕೇಳಿಬಂದಿತ್ತು. ಆದರೆ ಪಕ್ಕಾ ಮಾಹಿತಿ ತಿಳಿದು ಬಂದಿರಲಿಲ್ಲ. ಈ ಎಲ್ಲ ಕನ್ಫ್ಯೂಷನ್‌ಗಳಿಗೆ ತರುಣ್‌ ಫುಲ್‌ ಸ್ಟಾಪ್ ಇಟ್ಟಿದೆ ಜೋಡಿ.

ತರುಣ್‌ ಮದುವೆಗೆ ದರ್ಶನ್‌ ಬರ್ತಾರಾ?

ದರ್ಶನ್ ಜೈಲು ಪಾಲಾದ ನಂತರ ಮೊದಲ ಬಾರಿಗೆ ತರುಣ್ ಸುಧೀರ್ ಭೇಟಿ ಮಾಡಿದ್ದರು ತರುಣ್ ಸುಧೀರ್ ಲವ್ ಸ್ಟೋರಿ ಟ್ರ್ಯಾಕ್‌ಗೆ ತಂದಿದ್ದೆ ದರ್ಶನ್. ತರುಣ್ ಹಾಗೂ ನಟಿ ಸೋನಲ್ ಮದುವೆಗೆ ದರ್ಶನ್ ಮುದ್ರೆ ಒತ್ತಿದ್ದರು. ದರ್ಶನ್ ಇಲ್ಲದೆ ಮದುವೆಯನ್ನು ಮುಂದಕ್ಕೆ ಹಾಕಲು ತರುಣ್ ಸಜ್ಜಾಗಿದ್ದರು ಎನ್ನಲಾಗಿತ್ತು. ಹಿರಿಯರ ಸಲಹೆ ನಂತರ ತರುಣ್‌ ಮುದುವೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ನಟ ಮಾಹಿತಿ ನೀಡಿದ್ದಾಗಿದೆ. ʻʻʻದರ್ಶನ್‌ ಅವರಿಗೆ ಸ್ವಲ್ಪ ಹುಷಾರಿಲ್ಲ. ರಿಕವರ್‌ ಆಗುತ್ತ ಇದ್ದಾರೆ. ನನ್ನ ನೋಡಿದಾಗ ಯಾವ ಸ್ಮೈಲ್‌ ಅಲ್ಲಿ ನೋಡುತ್ತಿದ್ದು ಅದೇ ನಗುವಿನಲ್ಲಿ ಇಂದು ನೋಡಿದರು. ಅವರಗಿಂತ ನಾವೇ ವೀಕ್‌ ಆಗಿದ್ದೇವೆ. ನನ್ನ ಮದುವೆ ಬಗ್ಗೆ ದರ್ಶನ್​ ಅವರಿಗೆ ಮೊದಲೇ ಗೊತ್ತಿತ್ತು. ಈ ವಿಚಾರದಲ್ಲಿ ನನಗೆ ಮೊದಲಿನಿಂದಲೂ ತೊಳಲಾಟ ಇತ್ತು. ಯಾವುದೇ ಕಾರಣಕ್ಕೂ ಮದುವೆ ದಿನಾಂಕ ಬದಲಾಯಿಸಬೇಡ ಅಂತ ಅವರು ಹೇಳಿದ್ದಾರೆ. ನಾನು ಬಂದೇ ಬರ್ತೀನಿ ಎನ್ನುವ ನಂಬಿಕೆ ಅವರಲ್ಲಿ ಇದೆ. ಅವರು ಏನು ತಪ್ಪು ಮಾಡಿಲ್ಲ ಎನ್ನುವ ನಂಬಿಕೆ ನಮಗೂ ಇದೆʼʼಎಂದಿದ್ದರು.

ರಾಬರ್ಟ್’ ಚಿತ್ರದಲ್ಲಿ ಸೋನಲ್ ಕಾಣಿಸಿಕೊಂಡಿದ್ದರು. ಈ ಸಿನಿಮಾ ಶೂಟಿಂಗ್ ಸಮಯದಲ್ಲೇ ತರುಣ್- ಸೋನಲ್ ನಡುವೆ ಪ್ರೀತಿ ಹುಟ್ಟಿತ್ತು ಎಂದು ಹೇಳಲಾಗುತ್ತಿದೆ. ಇನ್ನು ದರ್ಶನ್‌ ಕೂಡ ಆಗಾಗ ತರುಣ್‌ಗೆ ಮದುವೆ ಮಾಡಿಸಬೇಕು ಎನ್ನುತ್ತಿದ್ದರಂತೆ. ಹಾಗಾಗಿ ಶೂಟಿಂಗ್‌ ಸೆಟ್‌ನಲ್ಲಿ ತರುಣ್- ಸೋನಲ್ ಇಬ್ಬರನ್ನು ತಮಾಷೆಯಾಗಿ ರೇಗಿಸುತ್ತಿದ್ದರು, ಇದೇ ಸಮಯದಲ್ಲಿ ಇಬ್ಬರ ನಡುವೆ ಪ್ರೀತಿ ಮೂಡಿರಬಹುದು ಎನ್ನಲಾಗಿದೆ.

Continue Reading

ಸ್ಯಾಂಡಲ್ ವುಡ್

Kannada New Movie: ಬರ್ತ್‌ಡೇ ದಿನವೇ ಹೊಸ ಸಿನಿಮಾ ಅಪ್ ಡೇಟ್ ಕೊಟ್ಟ ಅಶು ಬೆದ್ರ!

Kannada New Movie: ಅಶು ಬೆದ್ರ ವಫಾ ಹೊಸ ಸಿನಿಮಾದ ಮೇಕಿಂಗ್ ನ್ನು ಅವರ ಹುಟ್ಟುಹಬ್ಬ ವಿಶೇಷವಾಗಿ ಅನಾವರಣ ಮಾಡಲಾಗಿದೆ. ಇಂದು ಅಶು ಬೆದ್ರ ಜನ್ಮದಿನ. ಅಶು ಜನ್ಮದಿನದ ಉಡುಗೊರೆಯಾಗಿ ಸ್ಪೆಷಲ್ ಝಲಕ್ ಮೂಲಕ ಚಿತ್ರತಂಡ ಶುಭಾಷಯ ಕೋರಿದೆ. ಅಂದಹಾಗೇ ಅಶು ಬೆದ್ರ ಹೊಸ ಕನಸಿಗೆ ಪ್ರವೀಣ್ ಕಾಡಶೆಟ್ಟಿ ಸಾಥ್ ಕೊಡುತ್ತಿದ್ದಾರೆ.

VISTARANEWS.COM


on

Kannada New Movie Ashu Bedra Vafah New movie update
Koo

ಬೆಂಗಳೂರು: ʻಅಳಿದು ಉಳಿದವರುʼ ಸಿನಿಮಾ (Kannada New Movie) ಮೂಲಕ ಹೀರೊ ಆಗಿ ಸ್ಯಾಂಡಲ್‌ವುಡ್‌ಗೆ ಪರಿಚಿರತರಾದವರು ಅಶು ಬೆದ್ರ ವಫಾ. ಬರೀ ನಾಯಕನಾಗಿ ಅಲ್ಲ ನಿರ್ಮಾಪಕನಾಗಿ ಕನ್ನಡ ಕಿರುತೆರೆ ಹಾಗೂ ಹಿರಿತೆರೆಗೂ ಗೊತ್ತು ಈ ಪ್ರತಿಭಾನ್ವಿತ ನಟ..ʻರಾಧಾ ಕಲ್ಯಾಣʼ ಸೀರಿಯಲ್ ಜತೆ ಅಳಿದು ಉಳಿದವರು ಹಾಗೂ ಸಿಂಪಲ್ ಆಗಿ ಇನ್ನೊಂದ್ ಲವ್ ಸ್ಟೋರಿ ನಿರ್ಮಿಸಿದ್ದ ಅಶು ಬೆದ್ರ ಈಗ ಮತ್ತೊಂದು ಪ್ರಯತ್ನದ ಮೂಲಕ ಪ್ರೇಕ್ಷಕರ ಎದುರು ಬರಲು ಸಜ್ಜಾಗುತ್ತಿದೆ. ಅದರ ಮೊದಲ ಭಾಗವಾಗಿ ಇಂದು ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಲಾಗಿದೆ.

ಅಶು ಬೆದ್ರ ವಫಾ ಹೊಸ ಸಿನಿಮಾದ ಮೇಕಿಂಗ್ ನ್ನು ಅವರ ಹುಟ್ಟುಹಬ್ಬ ವಿಶೇಷವಾಗಿ ಅನಾವರಣ ಮಾಡಲಾಗಿದೆ. ಇಂದು ಅಶು ಬೆದ್ರ ಜನ್ಮದಿನ. ಅಶು ಜನ್ಮದಿನದ ಉಡುಗೊರೆಯಾಗಿ ಸ್ಪೆಷಲ್ ಝಲಕ್ ಮೂಲಕ ಚಿತ್ರತಂಡ ಶುಭಾಷಯ ಕೋರಿದೆ. ಅಂದಹಾಗೇ ಅಶು ಬೆದ್ರ ಹೊಸ ಕನಸಿಗೆ ಪ್ರವೀಣ್ ಕಾಡಶೆಟ್ಟಿ ಸಾಥ್ ಕೊಡುತ್ತಿದ್ದಾರೆ. ಈ ಚಿತ್ರದ ಮೂಲಕ ಪ್ರವೀಣ್ ಅವರು ನಿರ್ದೇಶಕರಾಗಿ ಆಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಸದ್ಯ ಮೇಕಿಂಗ್ ಬಿಡುಗಡೆ ಮಾಡಿರುವ ಚಿತ್ರತಂಡ, ಶೀಘ್ರದಲ್ಲೇ ಟೈಟಲ್ ಜೊತೆಗೆ ಉಳಿದ ತಾರಾಬಳಗ, ತಾಂತ್ರಿಕ ಬಳಗದ ಬಗ್ಗೆ ಮಾಹಿತಿ ನೀಡಲಿದೆ.

ಇದನ್ನೂ ಓದಿ: Actor Yash: ಯಶ್‌ ಹೊಸ ಹೇರ್‌ ಸ್ಟೈಲ್‌ ಯಾವ ಸಿನಿಮಾಗಾಗಿ? ಕೇಶ ವಿನ್ಯಾಸಕ ಕೊಟ್ಟೇ ಬಿಟ್ರು ಬಿಗ್‌ ಅಪ್‌ಡೇಟ್‌!

ಪ್ರವೀಣ್ ಕಾಡಶೆಟ್ಟಿ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದಲ್ಲಿ ಅಶು ಬೆದ್ರ ವಫಾ ನಾಯಕನಾಗಿ ಬಣ್ಣ ಹಚ್ಚಿದ್ದಾರೆ. ಇನ್ನೂ ಮೇಕಿಂಗ್ ವಿಡಿಯೋ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚು ಮಾಡಿದೆ. ಹಳ್ಳಿ ಸೊಗಡನ್ನು ತೆರೆದಿಡುವ ವಿಡಿಯೋ ತುಣುಕು ನೋಡ್ತಿದ್ದರೆ ಸಾಕಷ್ಟು ಜನ ಈ ಸಿನಿಮಾಗೆ ಪರಿಶ್ರಮ ಹಾಕಿರುವುದು ಗೊತ್ತಾಗುತ್ತಿದೆ. ಬಹಳ ಅದ್ಧೂರಿಯಾಗಿ ಸಿನಿಮಾ ಮೂಡಿ ಬರ್ತಿದ್ದು, ಟೈಟಲ್, ಆಕ್ಟರ್..ಹೀಗೆ ಒಂದೊಂದಾಗಿಯೇ ಚಿತ್ರತಂಡ ಅಪ್ ಡೇಟ್ ಕೊಡಲಿದೆ.

Continue Reading

ಸ್ಯಾಂಡಲ್ ವುಡ್

Actor Sharan: ಕನ್ನಡದ ಈ ಹೀರೊ ನಟನಾಗುವ ಮುಂಚೆ ಲಾರಿ ಕ್ಲೀನರ್ ಆಗಿದ್ದರು!

Actor Sharan: ಲಾರಿಯೊಂದರ ಮುಂದೆ ನಿಂತು ಟೀ ಕುಡಿಯುತ್ತಿರುವ ಚಿತ್ರವನ್ನು ನಟ ಹಂಚಿಕೊಂಡಿದ್ದಾರೆ. ದು, ‘ಲಾರಿಯ ಹಿಂದೆ ನಿಲ್ಲುವುದರಿಂದ ಆರಂಭವಾಗಿ ಬೆಳ್ಳಿ ಪರದೆಯ ಮುಂದೆ ಬಂದಿರುವ ಈ ಪಯಣ ಅದ್ಭುತ, ಜೀವನ ಅಚ್ಚರಿಗಳ ಸರಮಾಲೆ’ ಎಂದಿದ್ದಾರೆ ಶರಣ್.

VISTARANEWS.COM


on

Actor Sharan becoming this famous Kannada hero he was a Sharan lorry cleaner
Koo

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ನಟ ಶರಣ್‌ ಅವರು ಮೊದಲಿಗೆ (Actor Sharan) ಕಾಮಿಡಿ ಮೂಲಕ ಪ್ರೇಕ್ಷಕರನ್ನು ಸೆಳೆದವರು. ನಟನಾಗುವ ಮುಂಚೆ ಲಾರಿ ಕ್ಲೀನರ್ ಆಗಿದ್ದರು ಎಂದರೆ ನೀವು ನಂಬಲೇ ಬೇಕು. ಖ್ಯಾತ ನಟಿ ಶ್ರುತಿ ಅವರ ಸಹೋದರ ಶರಣ್ ಹಲವು ವರ್ಷಗಳಿಂದಲೂ ಚಿತ್ರರಂಗದಲ್ಲಿದ್ದಾರೆ. ಆರಂಭದ ಹಲವಾರು ಸಿನಿಮಾಗಳಲ್ಲಿ ಹಾಸ್ಯನಟರಾಗಿ ಮಿಂಚಿ ಬಳಿಕ ನಾಯಕ ನಟನಾಗಿ ಮಿಂಚಿದರು.

ಶರಣ್‌ ಅವರು ಹಲವು ಕಷ್ಟಗಳನ್ನು ಜೀವನದಲ್ಲಿ ಕಂಡಿದ್ದಾರೆ. ಆ ಬಗ್ಗೆ ಅವರೇ ಸಣ್ಣ ಫೋಸ್ಟ್ ಒಂದನ್ನು ಫೇಸ್​ಬುಕ್​​ನಲ್ಲಿ ಹಂಚಿಕೊಂಡಿದ್ದಾರೆ. “ಚಿತ್ರರಂಗಕ್ಕೆ ಕಾಲಿಡುವ ಮುನ್ನ , ಕೆಲಸ ಹುಡುಕುತ್ತಿದ್ದ ಸಮಯ. , ಕೆಲ ಸಮಯ ಲಾರಿ ಕ್ಲೀನರ್ ಆಗಿ ಕೆಲ್ಸ ಮಾಡಿದ್ದುಂಟು. ಆಗ ಲಾರಿ ಕೊಳ್ಳುವ ಕನಸು ಕಂಡಿದ್ದೂ ಉಂಟು. ಆದರೇ ಲಾರಿಯಲ್ಲಿ ಶುರುವಾದ ನನ್ನ ಪಯಣ ಬೆಳ್ಳಿ ಪರದೆಯ ಮೇಲೆ ಬಂದು ನಿಂತಿರುವುದು ಕಂಡರೆ ಆ ಭಗವಂತನ ಲೀಲೆ’ಗೆ’ಎಂದು ಬರೆದುಕೊಂಡಿದ್ದಾರೆ.

ಲಾರಿಯೊಂದರ ಮುಂದೆ ನಿಂತು ಟೀ ಕುಡಿಯುತ್ತಿರುವ ಚಿತ್ರವನ್ನು ನಟ ಹಂಚಿಕೊಂಡಿದ್ದಾರೆ. ದು, ‘ಲಾರಿಯ ಹಿಂದೆ ನಿಲ್ಲುವುದರಿಂದ ಆರಂಭವಾಗಿ ಬೆಳ್ಳಿ ಪರದೆಯ ಮುಂದೆ ಬಂದಿರುವ ಈ ಪಯಣ ಅದ್ಭುತ, ಜೀವನ ಅಚ್ಚರಿಗಳ ಸರಮಾಲೆ’ ಎಂದಿದ್ದಾರೆ ಶರಣ್.

ಇದನ್ನೂ ಓದಿ: Actor Yash: ಯಶ್‌ ಹೊಸ ಹೇರ್‌ ಸ್ಟೈಲ್‌ ಯಾವ ಸಿನಿಮಾಗಾಗಿ? ಕೇಶ ವಿನ್ಯಾಸಕ ಕೊಟ್ಟೇ ಬಿಟ್ರು ಬಿಗ್‌ ಅಪ್‌ಡೇಟ್‌!

ಇನ್ನು ಶರಣ್‌ ಅವರು ‘ಕರ್ಪೂರದ ಗೊಂಬೆ’, ‘ಪ್ರೇಮ ಪ್ರೇಮ ಪ್ರೇಮ’ ಸಿನಿಮಾಗಳ ಮೂಲಕ ಶರಣ್ ನಟರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.2012 ರಲ್ಲಿ ಬಿಡುಗಡೆ ಆದ ‘ರ್ಯಾಂಬೊ’ ಸಿನಿಮಾ ಮೂಲಕ ನಾಯಕ ನಟನಾಗಿ ಎಂಟ್ರಿ ಕೊಟ್ಟರು.

ಜೈಲಲಿತ ಸಿನಿಮಾದಲ್ಲಿ ನಟ ಶರಣ್ ಮಹಿಳೆಯ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದರು. ಮಲಯಾಳಂನ ‘ಮಾಯಾ ಮೋಹಿನಿ’ ಎಂಬ ಹಿಟ್ ಸಿನಿಮಾ ಸ್ಪೂರ್ತಿಯಿಂದ ಈ ಸಿನಿಮಾ ಮಾಡಲಾಗಿತ್ತು. ಕಾಮಿಡಿ ಜೊತೆಗೆ ಮಾನವ ಸಂಬಂಧಗಳ ಮಹತ್ವ ಸಾರುವ ಈ ಸಿನಿಮಾವನ್ನು ಪಿ ಕುಮಾರ್ ನಿರ್ದೇಶನ ಮಾಡಿದ್ದರು. ಈ ಸಿನಿಮಾದಲ್ಲಿ ಹರೀಶ್ ರಾಜ್, ರವಿಶಂಕರ್, ಟಿ.ಎಸ್. ನಾಗಾಭರಣ, ದಿಶಾ ಪಾಂಡೆ, ಐಶ್ವರ್ಯ ದೇವನ್ ಸೇರಿದಂತೆ ಹಲವರ ತಾರಾಬಳಗವೇ ಸಿನಿಮಾದಲ್ಲಿತ್ತು.

Continue Reading

ಸ್ಯಾಂಡಲ್ ವುಡ್

Actor Darshan: ಜೈಲಿಗೆ ಆಗಮಿಸಿದ ಸಾಧುಕೋಕಿಲ ಭೇಟಿ ನಿರಾಕರಿಸಿದ ದರ್ಶನ್!

Actor Darshan: ದರ್ಶನ್‌ ಅವರನ್ನ ಕಂಡು ವಿನೋದ್ ರಾಜ್‌ ಭಾವುಕರಾಗಿದ್ದರು. ದರ್ಶನ್‌ ಅವರನ್ನ ಮೀಟ್ ಮಾಡಿದ್ಮೇಲೆ ಕಣ್ಣೀರು ಹಾಕುತ್ತಲೇ ಮಾಧ್ಯಮಗಳೊಂದಿಗೆ ಮಾತನಾಡಿದ್ದರು. ಇದೀಗ ದರ್ಶನ್ ಭೇಟಿಗೆ ಅವಕಾಶ ಸಿಗದೇ ಸಾಧುಕೋಕಿಲ ವಾಪಸ್‌ ಆಗಿದ್ದಾರೆ.

VISTARANEWS.COM


on

Actor Darshan refused to meet the Sadhu Kokila who arrived in jail
Koo

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್‌ ದರ್ಶನ್ (Actor Darshan) ಜೈಲು ಸೇರಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ದರ್ಶನ್‌ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಹಿಂದೆ ದರ್ಶನ್ ಅವರನ್ನ ಭೇಟಿಯಾಗಲು ಪರಪ್ಪನ ಅಗ್ರಹಾರ ಜೈಲಿಗೆ ವಿನೋದ್‌ ರಾಜ್‌ ಆಗಮಿಸಿದ್ದರು. ದರ್ಶನ್‌ ಅವರನ್ನ ಕಂಡು ವಿನೋದ್ ರಾಜ್‌ ಭಾವುಕರಾಗಿದ್ದರು. ದರ್ಶನ್‌ ಅವರನ್ನ ಮೀಟ್ ಮಾಡಿದ್ಮೇಲೆ ಕಣ್ಣೀರು ಹಾಕುತ್ತಲೇ ಮಾಧ್ಯಮಗಳೊಂದಿಗೆ ಮಾತನಾಡಿದ್ದರು. ಇದೀಗ ದರ್ಶನ್ ಭೇಟಿಗೆ ಅವಕಾಶ ಸಿಗದೇ ಸಾಧುಕೋಕಿಲ ವಾಪಸ್‌ ಆಗಿದ್ದಾರೆ.

ವಾರಕ್ಕೆ ಎರಡು ಬಾರಿ ಮಾತ್ರ ಭೇಟಿಗೆ ಅವಕಾಶ ಇತ್ತು. ಒಂದು ಬಾರಿ ಭೇಟಿಗೆ ಐದು ಮಂದಿಗೆ ಅವಕಾಶ ಇರುವ ನಿಯಮವಿದೆ. ಈಗಾಗಲೇ ಒಂದು ಬಾರಿ ದರ್ಶನ್ ಭೇಟಿಗೆ ಕುಟುಂಬ ಹೋಗಿತ್ತು. ಗುರುವಾರ ಮತ್ತೊಮ್ಮೆ ದರ್ಶನ್ ಫ್ಯಾಮಿಲಿ ಆಗಮಿಸುವ ಹಿನ್ನೆಲೆಯಲ್ಲಿ ಸಾಧುಕೋಕಿಲ ಅವರಿಗೆ ಅವಕಾಶ ಕಲ್ಪಿಸಿಕೊಟ್ರೆ ಮುಂದಿನ ದಿನಗಳಲ್ಲಿ ಫ್ಯಾಮಿಲಿಗೆ ಅವಕಾಶ ಸಿಗುವುದಿಲ್ಲ. ಹೀಗಾಗಿ ಗುರುವಾರ ಫ್ಯಾಮಿಲಿ ಜೊತೆಗೆ ಸಾಧುಕೋಕಿಲ ಅವರಿಗೆ ಬನ್ನಿ ಎಂದು ದರ್ಶನ್ ಜೈಲಾಧಿಕಾರಿಗಳ ಮೂಲಕ ಸಾಧುಕೋಕಿಲಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಸಾಧುಕೋಕಿಲ ಮಾತನಾಡಿ ʻʻನಾನು ಇಂದು ಭೇಟಿ ಮಾಡಿದರೆ ಕುಟುಂಬದವರಿಗೆ ಅವಕಾಶ ಸಿಗುವುದಿಲ್ಲ. ಹೀಗಾಗಿ ನಾನು ಗುರುವಾರ ಕುಟುಂಬದವರ ಜೊತೆ ಭೇಟಿ ಮಾಡುತ್ತೇನೆ. ಮೀಡಿಯಾದವರು ವಿಡಿಯೋ ‌ಮಾಡಿದ್ದರಿಂದ ನನ್ನನ್ನು ಹೊರಗೆ ಕಳುಹಿಸಿಬಿಟ್ರುʼʼಎಂದು ಮಾಧ್ಯಮಗಳ ಮುಂದೆ ನಗೆ ಚಟಾಕಿ ಹಾರಿಸಿದರು.

ಇದನ್ನೂ ಓದಿ: Actor Darshan: ನಟ ದರ್ಶನ್‌ಗೆ ಇನ್ನೂ 3 ದಿನ ಜೈಲೂಟವೇ ಗತಿ; ಜು.25ಕ್ಕೆ ಆದೇಶ ಕಾಯ್ದಿರಿಸಿದ ಕೋರ್ಟ್‌

ಇನ್ನು ದರ್ಶನ್‌ ಅವರನ್ನು ನೋಡಲು ಮೊದಲಿಗೆ ಫ್ಯಾನ್ಸ್‌ ಬರುತ್ತಿದ್ದರು. ಮಾರತ್ತಹಳ್ಳಿಯಿಂದ ಆಟೋ ಚಾಲಕ ಸುನೀಲ್ ದರ್ಶನ್ ನೋಡಲು ಆಗಮಿಸಿ ಸುದ್ದಿಯಾಗಿದ್ದರು. ತಿಂಗಳಿಗೆ ಒಮ್ಮೆ ದರ್ಶನ್ ಅಣ್ಣನ ಭೇಟಿ ಮಾಡುತ್ತಿದ್ದೆ ಆದರೆ ಈಗ ಜೈಲಿನಲ್ಲಿ ಇದ್ದಾರೆ. ಹಾಗಾಗಿ ನೋಡಲು ಬಂದೆ. ನಮ್ ಬಾಸ್ ಒಳ್ಳೆಯ ಕೆಲಸಗಳನ್ನು ಜನರಿಗೆ ಮಾಡುತ್ತಿದ್ದರು. ಈಗ ಅವರು ಜೈಲಿನಲ್ಲಿ ಕಷ್ಟ ಅನುಭವಿಸುತ್ತಿದ್ದಾರೆ. ತಂದೆ ತಾಯಿ‌ ಬಿಟ್ರೆ ದರ್ಶನ್ ನನಗೆ ದೇವರುʼʼಎಂದಿದ್ದರು

ದರ್ಶನ್ ಭೇಟಿ ಮಾಡಬೇಕೆಂದು ಅಭಿಮಾನಿಯೊಬ್ಬ ರಂಪಾಟವಾಡಿರುವುದು ಕಂಡುಬಂದಿತ್ತು. ಜೈಲ್ ಚೆಕ್ ಪೋಸ್ಟ್ ಬಳಿ ರಸ್ತೆಯಲ್ಲಿ ಕುಳಿತ ಅಭಿಮಾನಿ, ದರ್ಶನ್ ನೋಡಬೇಕೆಂದು ಕಣ್ಣೀರು ಹಾಕಿದ್ದಾನೆ. ಮದ್ಯಪಾನ ಮಾಡಿ ಬಂದಿದ್ದ ವ್ಯಕ್ತಿ, ದರ್ಶನ್ ನೋಡಲೇ ಬೇಕು ಎಂದು ಪಟ್ಟು ಹಿಡಿದಿದ್ದರಿಂದ ಆತನನ್ನು ಮನವೊಲಿಸಲು ಪೊಲೀಸರು ಹೈರಾಗಿದ್ದರು.

Continue Reading
Advertisement
Akhila bharat Veerashaiva Mahasabha taluk unit new president and directors padagrahana programme in koratagere
ತುಮಕೂರು15 seconds ago

Koratagere News: ವೀರಶೈವ ಮಹಾಸಭಾದಿಂದ ಧಾರ್ಮಿಕ ನೆಲೆಗಟ್ಟು ಭದ್ರ; ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ

IBPS
ಉದ್ಯೋಗ15 mins ago

IBPS: ರಾಷ್ಟ್ರೀಕೃತ ಬ್ಯಾಂಕ್‌ಗಳ 6,128 ಹುದ್ದೆಗೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ; ಇಲ್ಲಿದೆ ಹೊಸ ಟೈಮ್‌ ಟೇಬಲ್‌

Congress Protest
ಕರ್ನಾಟಕ20 mins ago

Congress Protest: ಇಡಿ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ; ದ್ವೇಷ ರಾಜಕೀಯವನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದ ಸಿಎಂ

Tharun Sudhir sonal monteiro age differnce
ಸ್ಯಾಂಡಲ್ ವುಡ್23 mins ago

Tharun Sudhir: ತರುಣ್-ಸೋನಲ್‌ ನಡುವಿನ ವಯಸ್ಸಿನ ಅಂತರ ಎಷ್ಟು?

murder case
ಬೆಳಗಾವಿ24 mins ago

Murder case : ಭೂ ವಿವಾದಕ್ಕಾಗಿ ಪರಸ್ಪರ ಹೊಡೆದಾಡಿಕೊಂಡ ಅಣ್ಣ-ತಮ್ಮ ಮೃತ್ಯು

Paris Olympic 2024
ಕ್ರೀಡೆ37 mins ago

Paris Olympic 2024:’ಆ್ಯಂಟಿ-ಸೆಕ್ಸ್ ಬೆಡ್’ನ ಸಾಮರ್ಥ್ಯ ಪರೀಕ್ಷೆ ನಡೆಸಿದ ಆಸ್ಟ್ರೇಲಿಯಾದ ಟೆನಿಸ್​ ಆಟಗಾರ್ತಿಯರು; ವಿಡಿಯೊ ವೈರಲ್​

Suraj Revanna Case
ಕ್ರೈಂ43 mins ago

Suraj Revanna Case: ಸಲಿಂಗ ಕಾಮ ಪ್ರಕರಣ; ಸೂರಜ್‌ ರೇವಣ್ಣ ಜೈಲಿನಿಂದ ರಿಲೀಸ್‌

IND vs SL
ಕ್ರೀಡೆ1 hour ago

IND vs SL: ಭಾರತ ವಿರುದ್ಧದ ಟಿ20 ಸರಣಿಗೆ ತಂಡ ಪ್ರಕಟಿಸಿದ ಶ್ರೀಲಂಕಾ

Kannada New Movie Ashu Bedra Vafah New movie update
ಸ್ಯಾಂಡಲ್ ವುಡ್1 hour ago

Kannada New Movie: ಬರ್ತ್‌ಡೇ ದಿನವೇ ಹೊಸ ಸಿನಿಮಾ ಅಪ್ ಡೇಟ್ ಕೊಟ್ಟ ಅಶು ಬೆದ್ರ!

Union Budget 2024
Latest1 hour ago

Union Budget 2024: 7 ಬಜೆಟ್‍ಗಳಲ್ಲಿ 7 ಬಣ್ಣದ ಸೀರೆ ಧರಿಸಿ ಮಿಂಚಿದ ನಿರ್ಮಲಾ ಸೀತಾರಾಮನ್!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ3 days ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

karnataka Rain
ಮಳೆ4 days ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ4 days ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ5 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ5 days ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ1 week ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ1 week ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ1 week ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

ಟ್ರೆಂಡಿಂಗ್‌