Site icon Vistara News

Actor Mohanlal: ಮೋಹನ್‌ಲಾಲ್ ಹೊಸ ಸಿನಿಮಾದ ಫಸ್ಟ್‌ ಲುಕ್‌ ಔಟ್‌!

Mohanlal Malaikottai Vaaliban First look Out

ಬೆಂಗಳೂರು: ಮೋಹನ್‌ಲಾಲ್ (Actor Mohanlal) ಅವರು ಮಾಲಿವುಡ್‌ ಚಲನಚಿತ್ರೋದ್ಯಮದಲ್ಲಿ ಪ್ರಸಿದ್ಧ ನಟರು. ರಾಷ್ಟ್ರಪ್ರಶಸ್ತಿ ವಿಜೇತರಾದ ಇವರು ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಮೋಹನ್‌ಲಾಲ್ ಅವರ ಮುಂಬುರುವ ಚಿತ್ರ ʻಮಲೈಕೊಟ್ಟೈ ವಾಲಿಬನ್ʼ (Malaikottai Vaaliban) ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಹೊರಬಿದ್ದಿದೆ. ಇದರಲ್ಲಿ ನಟ ಉಗ್ರ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಆ್ಯಕ್ಷನ್-ಥ್ರಿಲ್ಲರ್ ಸಿನಿಮಾ ಇದಾಗಿದ್ದು, ಲಿಜೋ ಜೋಸ್ ಪೆಲ್ಲಿಸ್ಸೆರಿ (Lijo Jose Pellissery) ನಿರ್ದೇಶಿಸಿಸಲಿದ್ದಾರೆ.

ಮಲೈಕೊಟ್ಟೈ ವಾಲಿಬನ್ ಫಸ್ಟ್ ಲುಕ್ ಪೋಸ್ಟರ್ ಔಟ್!

ಏಪ್ರಿಲ್ 14ರಂದು, ಮಲೈಕೊಟ್ಟೈ ವಾಲಿಬನ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಚಿತ್ರತಂಡ ಅನಾವರಣಗೊಳಿಸಿದೆ. ಮೋಹನ್‌ಲಾಲ್‌ ತಮ್ಮ ಟ್ವೀಟ್‌ನಲ್ಲಿ ಪೋಸ್ಟರ್‌ ಹಂಚಿಕೊಂಡು ʻʻಕಾಯುವಿಕೆಗೆ ಒಂದು ಮುಖವಿದೆ! ಮಲೈಕೋಟ್ಟೈ ವಾಲಿಬನ್‌ನ ಫಸ್ಟ್ ಲುಕ್ ನಿಮಗೆ ಪ್ರಸ್ತುತಪಡಿಸುತ್ತಿದ್ದೇನೆ! ಈ ಚಲನಚಿತ್ರಕ್ಕೆ ಜೀವ ತುಂಬುವ ನಮ್ಮ ಪ್ರಯಾಣದಲ್ಲಿ ನಮ್ಮನ್ನು ಹುರಿದುಂಬಿಸುತ್ತಿರಿʼʼಎಂದು ಬರೆದುಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಮೋಹನ್‌ಲಾಲ್‌ ನಿರ್ದೇಶಕ ಲಿಜೋ ಜೋಸ್ ಪೆಲ್ಲಿಸ್ಸೆರಿ ಜತೆ ಕೈ ಜೋಡಿಸಿದ್ದಾರೆ.

ಹಲವು ಸಿನಿಮಾಗಳಲ್ಲಿ ಬ್ಯುಸಿಯಾದ ನಟ

ಮೋಹನ್ ಲಾಲ್ ಕೊನೆಯ ಬಾರಿಗೆ ʻಅಲೋನ್ʼ ಚಿತ್ರದಲ್ಲಿ ಕಾಣಿಸಿಕೊಂಡರು. ಆದರೆ ಈ ಸಿನಿಮಾ ಅಷ್ಟಾಗಿ ಗಳಿಕೆ ಕಂಡಿಲ್ಲ. ಮುಂದೆ ರಜನಿಕಾಂತ್‌ ಅಭಿನಯದ ʻಜೈಲರ್‌ʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಜನಿಕಾಂತ್ ನಾಯಕತ್ವದ ಚಿತ್ರದಲ್ಲಿ ಅವರು ಅತಿಥಿ ಪಾತ್ರವನ್ನು ನಿಭಾಯಿಸುತ್ತಿದ್ದಾರೆ.

ಇದನ್ನೂ ಓದಿ: Actor Mohanlal: ಮೋಹನ್‌ ಲಾಲ್‌ ಹೊಸ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಲಿದ್ದಾರಾ ಅರ್ಜುನ್‌ ಸರ್ಜಾ?

ಮೋಹನ್‌ಲಾಲ್‌ ಟ್ವೀಟ್‌

ಶಿವರಾಜ್‌ಕುಮಾರ್, ತಮನ್ನಾ ಮತ್ತು ರಮ್ಯಾ ಕೃಷ್ಣನ್ ಕೂಡ ಈ ಸಿನಿಮಾದಲ್ಲಿದ್ದಾರೆ. ಜೈಲರ್ ಈ ವರ್ಷದ ಕೊನೆಯಲ್ಲಿ ತೆರೆಗೆ ಬರಲಿದೆ. ಮೋಹನ್ ಲಾಲ್ ಅವರ ಕಿಟ್ಟಿಯಲ್ಲಿ L2, ಬರೋಜ್ ಚಿತ್ರಗಳೂ ಇವೆ.

Exit mobile version