Actor Mohanlal: ಮೋಹನ್‌ ಲಾಲ್‌ ಹೊಸ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಲಿದ್ದಾರಾ ಅರ್ಜುನ್‌ ಸರ್ಜಾ? - Vistara News

ಮಾಲಿವುಡ್

Actor Mohanlal: ಮೋಹನ್‌ ಲಾಲ್‌ ಹೊಸ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಲಿದ್ದಾರಾ ಅರ್ಜುನ್‌ ಸರ್ಜಾ?

ಅರ್ಜುನ್ ಸರ್ಜಾ ಅವರು ಮೋಹನ್ ಲಾಲ್ (Actor Mohanlal) ಅವರೊಂದಿಗೆ ವೃತ್ತಿಪರ ಬಾಂಧವ್ಯವನ್ನು ಹಂಚಿಕೊಂಡಿದ್ದಾರೆ. ಪ್ರಿಯದರ್ಶನ್ ನಿರ್ದೇಶನದ ʻಮರಕ್ಕರ್ʼ ಚಿತ್ರದಲ್ಲಿ ಅವರೊಂದಿಗೆ ನಟಿಸಿದ್ದಾರೆ. ಇದೀಗ ಮೋಹನ್ ಲಾಲ್ ಅವರಿಗೆ ಚಿತ್ರ ಮಾಡುವ ಯೋಜನೆ ಇದೆ ಎಂದು ಬಹಿರಂಗಪಡಿಸಿದ್ದಾರೆ.

VISTARANEWS.COM


on

Arjun Sarja to direct Mohanlal in a new film
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಮಾಲಿವುಡ್‌ ನಟ ಮೋಹನ್ ಲಾಲ್ (Actor Mohanlal) ಈ ಹಿಂದೆ ಅಷ್ಟೇ ರಜನಿಕಾಂತ್‌ ಅಭಿನಯದ ʻಜೈಲರ್‌ʼ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದು, ಸಖತ್‌ ಸುದ್ದಿಯಲ್ಲಿದ್ದರು. ಇದೀಗ ನಟನಿಗೆ ಬಹುಭಾಷಾ ನಟ ಅರ್ಜುನ್‌ ಸರ್ಜಾ ಅವರು ಆ್ಯಕ್ಷನ್‌ ಕಟ್‌ ಹೇಳಲು ಬಯಸಿರುವುದಾಗಿ ತಿಳಿಸಿದ್ದಾರೆ. ಈ ಯೋಜನೆಯು ತಕ್ಷಣವೇ ಪ್ರಾರಂಭವಾಗುವುದಿಲ್ಲ ಎಂದು ಸುಳಿವು ಕೂಡ ನೀಡಿದ್ದಾರೆ.

ಅರ್ಜುನ್ ಸರ್ಜಾ ಅವರು ಮೋಹನ್ ಲಾಲ್ ಅವರೊಂದಿಗೆ ವೃತ್ತಿಪರ ಬಾಂಧವ್ಯವನ್ನು ಹಂಚಿಕೊಂಡಿದ್ದಾರೆ. ಪ್ರಿಯದರ್ಶನ್ ನಿರ್ದೇಶನದ ʻಮರಕ್ಕರ್ʼ ಚಿತ್ರದಲ್ಲಿ ಅವರೊಂದಿಗೆ ನಟಿಸಿದ್ದಾರೆ. ಇದೀಗ ಮೋಹನ್ ಲಾಲ್ ಅವರಿಗೆ ಚಿತ್ರ ಮಾಡುವ ಯೋಜನೆ ಇದೆ ಎಂದು ಬಹಿರಂಗಪಡಿಸಿದ್ದಾರೆ. ಮಾರ್ಟಿನ್ ಚಿತ್ರದ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಈಗಾಗಲೇ ಮೋಹನ್ ಲಾಲ್ ಅವರೊಂದಿಗೆ ಈ ವಿಷಯವನ್ನು ಚರ್ಚಿಸಿದ್ದಾರೆ. ತಕ್ಷಣ ಟೇಕಾಫ್ ಆಗದಿದ್ದರೂ ಅವರ ಜತೆಗಿನ ಸಿನಿಮಾ ಖಂಡಿತ ಆಗುತ್ತದೆ ಎಂದು ಅರ್ಜುನ್ ಸೂಚಿಸಿದ್ದಾರೆ.

ಇದನ್ನೂ ಓದಿ: Actor Arjun Sarja | ಅರ್ಜುನ್‌ ಸರ್ಜಾ ಆರೋಪಕ್ಕೆ ನಟ ವಿಶ್ವಕ್‌ ಖಡಕ್‌ ರೆಸ್ಪಾನ್ಸ್‌!

ಮೋಹನ್ ಲಾಲ್ ಕೊನೆಯದಾಗಿ ʻಅಲೋನ್ʼ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು, ಅದು ನಿರೀಕ್ಷೆಗೆ ತಕ್ಕಂತೆ ಸಿನಿಮಾ ಮೆಚ್ಚುಗೆಗೆ ಪಾತ್ರವಾಗಿಲ್ಲ. ಅವರು ಪ್ರಸ್ತುತ ಜೈಲರ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ರಜನಿಕಾಂತ್ ನಾಯಕತ್ವದ ಚಿತ್ರದಲ್ಲಿ ಅವರು ಅತಿಥಿ ಪಾತ್ರವನ್ನು ಹೊಂದಿದ್ದಾರೆ. ಈ ಸಿನಿಮಾದಲ್ಲಿ ಶಿವರಾಜ್‌ಕುಮಾರ್, ತಮನ್ನಾ ಮತ್ತು ರಮ್ಯಾ ಕೃಷ್ಣನ್ ಕೂಡ ಇದ್ದಾರೆ. ಜೈಲರ್ ಈ ವರ್ಷದ ಕೊನೆಯಲ್ಲಿ ತೆರೆಗೆ ಬರಲಿದೆ. ಇದನ್ನು ನೆಲ್ಸನ್ ನಿರ್ದೇಶಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮಾಲಿವುಡ್

Actor Mohanlal: 56ನೇ ಬಾರಿಗೆ ಮೋಹನ್ ಲಾಲ್ ಜತೆ ತೆರೆ ಹಂಚಿಕೊಳ್ಳುತ್ತಿದ್ದಾರೆ ಈ ಫೇಮಸ್‌ ನಟಿ!

Actor Mohanlal: ನಟಿ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಈ ಬಗ್ಗೆ ಶೇರ್‌ ಮಾಡಿ ʻʻನಾಲ್ಕು ವರ್ಷಗಳು ನಾಲ್ಕು ನಿಮಿಷಗಳಂತೆ ಕಳೆದಿವೆ. L360”ಎಂದು ಬರೆದುಕೊಂಡಿದ್ದಾರೆ. ಹಲವು ದಶಕಗಳಿಂದ ನಟಿ ಶೋಬನಾ ಮಲಯಾಳಂ ಚಿತ್ರರಂಗದಲ್ಲಿ ನಟಿಸಿಕೊಂಡು ಬಂದವರು. ನಟನೆ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹಲವು ನೃತ್ಯ ಪ್ರದರ್ಶನಗಳನ್ನು ನೀಡುತ್ತ ಬರುತ್ತಿದ್ದರು.

VISTARANEWS.COM


on

Actor Mohanlal Shobana reunites L360
Koo

ಬೆಂಗಳೂರು: ಮಾಲಿವುಡ್‌ ಫ್ಯಾನ್ಸ್‌ ನಟ ಮೋಹನ್ ಲಾಲ್ (Actor Mohanlal) ಮತ್ತು ಶೋಬನಾ (Shobana) ನಡುವಿನ ಆನ್-ಸ್ಕ್ರೀನ್ ಕೆಮಿಸ್ಟ್ರಿಯನ್ನು ಇಷ್ಟಪಡುತ್ತಾರೆ. ಇದೀಗ ಈ ತಾರೆಯರು ಹಲವು ವರ್ಷಗಳ ಬ್ರೇಕ್‌ ನಂತರ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ತಾತ್ಕಾಲಿಕವಾಗಿ ಶೀರ್ಷಿಕೆ ಇಡಲಾದ L360 ಗಾಗಿ ತೆರೆಯ ಮೇಲೆ ಮತ್ತೆ ಒಂದಾಗಲು ಸಿದ್ಧರಾಗಿದ್ದಾರೆ. ʻಆಪರೇಷನ್ ಜಾವಾʼ ಖ್ಯಾತಿಯ ತರುಣ್ ಮೂರ್ತಿ ನಿರ್ದೇಶಿಸುತ್ತಿರುವ ಈ ಚಿತ್ರ ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದ್ದು, ಇಬ್ಬರೂ ತಾರೆಯರು 56ನೇ ಬಾರಿಗೆ ತೆರೆಯನ್ನು ಒಟ್ಟಿಗೆ ಹಂಚಿಕೊಳ್ಳುತ್ತಿದ್ದಾರೆ.

ನಟಿ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಈ ಬಗ್ಗೆ ಶೇರ್‌ ಮಾಡಿ ʻʻನಾಲ್ಕು ವರ್ಷಗಳು ನಾಲ್ಕು ನಿಮಿಷಗಳಂತೆ ಕಳೆದಿವೆ. L360”ಎಂದು ಬರೆದುಕೊಂಡಿದ್ದಾರೆ. ಹಲವು ದಶಕಗಳಿಂದ ನಟಿ ಶೋಬನಾ ಮಲಯಾಳಂ ಚಿತ್ರರಂಗದಲ್ಲಿ ನಟಿಸಿಕೊಂಡು ಬಂದವರು. ಸಾರ್ವಜನಿಕರಿಂದ ಹೆಚ್ಚಾಗಿ ದೂರವೇ ಇರುತ್ತಿದ್ದರು. ನಟನೆ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹಲವು ನೃತ್ಯ ಪ್ರದರ್ಶನಗಳನ್ನು ನೀಡುತ್ತ ಬರುತ್ತಿದ್ದರು.

ಈ ಹಿಂದೆ, ನಟಿ ಸುರೇಶ್ ಗೋಪಿ, ಕಲ್ಯಾಣಿ ಪ್ರಿಯದರ್ಶನ್ ಮತ್ತು ದುಲ್ಕರ್ ಸಲ್ಮಾನ್ ಅವರೊಂದಿಗೆ ನಟಿಸಿದ 2020 ರ ʻವಾರಣೆ ಅವಶ್ಯಮುಂದ್ʼ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು. ಅನೂಪ್ ಸತ್ಯನ್ ಅವರ ಈ ʻವಾರಣೆ ಅವಶ್ಯಮುಂದ್ʼ ಚಿತ್ರದಲ್ಲಿ ಶೋಬನಾ 7 ವರ್ಷಗಳ ನಂತರ ಮತ್ತೆ ಬಣ್ಣ ಹಚ್ಚಿದ್ದರು. ಇದೀಗ ಮೋಹನ್‌ಲಾಲ್‌ ಅವರ ಜತೆ ನಟಿಸಲಿರುವ ಸಿನಿಮಾ ಶೋಬನಾ ಅವರ 91ನೇ ಸಿನಿಮಾವಾಗಿದೆ.

ಇದನ್ನೂ ಓದಿ: Actor Mohanlal: ಮೋಹನ್‌ಲಾಲ್ ಅಭಿನಯದ ʻಮಲೈಕೋಟ್ಟೈ ವಾಲಿಬನ್ʼ ಟೀಸರ್‌ ಔಟ್‌!

ಮೋಹನ್‌ಲಾಲ್‌ ಜತೆ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ

ನಂದಕಿಶೋರ್ ಅವರು ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಮಾಲಿವುಡ್‌ ಸ್ಟಾರ್‌ ಮೋಹನ್ ಲಾಲ್ (Actor Mohan Lal) ಅವರಿಗೆ ನಂದಕಿಶೋರ್ ಸಿನಿಮಾ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಈ ಸಿನಿಮಾಗೆ ಏಕ್ತಾ ಕಪೂರ್‌ ಅವರ ಸಹ ನಿರ್ಮಾಣವಿದೆ. ಈ ಬಹುನಿರೀಕ್ಷಿತ ಚಿತ್ರದ ಶೂಟಿಂಗ್​ ಆರಂಭ ಆಗಿದೆ. ಈ ಚಿತ್ರದ ಪಾತ್ರವರ್ಗ ಗಮನ ಸೆಳೆಯುತ್ತಿದೆ. ಈಗ ರಾಗಿಣಿ ದ್ವಿವೇದಿ (Ragini Dwivedi) ಅವರು ನಟ ಮೋಹನ್​ಲಾಲ್​ ಜತೆ ನಟಿಸುತ್ತಿದ್ದಾರೆ. ಮೋಹನ್​ಲಾಲ್​ ಅಭಿನಯದ ‘ವೃಷಭ’ ಸಿನಿಮಾ ಮೇಲೆ ಅಭಿಮಾನಿಗಳಿಗೆ ಸಖತ್​ ನಿರೀಕ್ಷೆ ಇದೆ.

Continue Reading

ಮಾಲಿವುಡ್

Manjummel Boys: ಕನ್ನಡದಲ್ಲೂ ಬರಲಿದೆ ʻಮಂಜುಮ್ಮೆಲ್ ಬಾಯ್ಸ್ʼ? ಒಟಿಟಿಗೆ ಯಾವಾಗ?

Manjummel Boys: ಚಿದಂಬರಂ ಪೊದುವಾಲ್ ಅವರ ಎರಡನೇ ನಿರ್ದೇಶನ ಸಿನಿಮಾ ಇದು. ಈ ಮುಂಚೆ ʻಜೇನ್‌ಮ್ಯಾನ್ʼ ಹೆಚ್ಚು ಮೆಚ್ಚುಗೆ ಪಡೆದುಕೊಂಡಿತ್ತು. ಸುಶಿನ್ ಶ್ಯಾಮ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.ಫೆಬ್ರವರಿ 22ರಂದು ತೆರೆಗೆ ಬಂದಿದ್ದ ಸಿನಿಮಾ ಈಗಾಗಲೇ 50 ದಿನ ಪೂರೈಸಿದೆ. ಸದ್ಯ ತೆಲುಗು, ತಮಿಳು, ಕನ್ನಡಕ್ಕೂ ಸಿನಿಮಾ ಡಬ್ ಆಗಿದ್ದು ಏಕಕಾಲಕ್ಕೆ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ ಎನ್ನುವ ಚರ್ಚೆ ನಡೆಯುತ್ತಿದೆ.

VISTARANEWS.COM


on

Manjummel Boys ott malayalam to premiere on may
Koo

ಬೆಂಗಳೂರು: ʼಮಂಜುಮ್ಮೇಲ್ ಬಾಯ್ಸ್’ (Manjummel Boys) ಸಾರ್ವಕಾಲಿಕ ಅತಿ ಹೆಚ್ಚು ಹಣ ಗಳಿಸಿದ ಮಲಯಾಳಂ ಚಿತ್ರವಾಗಿ ಹೊರಹೊಮ್ಮಿತ್ತು. ಮಂಜುಮ್ಮೇಲ್ ಬಾಯ್ಸ್’ ಸಿನಿಮಾವನ್ನು ಪ್ರೇಕ್ಷಕರು ಮಾತ್ರವೇ ಅಲ್ಲದೆ ಸಿನಿಮಾ ಸೆಲೆಬ್ರಿಟಿಗಳು, ಸ್ಟಾರ್ ನಟರು ಸಹ ನೋಡಿ ಮೆಚ್ಚಿಕೊಂಡಿದ್ದರು. ಇದೀಗ ‘ಮಂಜುಮ್ಮೆಲ್ ಬಾಯ್ಸ್’ ಸಿನಿಮಾ ಡಿಸ್ನಿ ಪ್ಲಸ್ ಹಾಟ್‌ಸ್ಟರ್‌ನಲ್ಲಿ ಮೇ 3ರಂದು ಸ್ಟ್ರೀಮಿಂಗ್ ಆಗುವುದು ಬಹುತೇಕ ಖಚಿತ ಎಂದು ವರದಿಯಾಗಿದೆ. ಫೆಬ್ರವರಿ 22ರಂದು ತೆರೆಗೆ ಬಂದಿದ್ದ ಸಿನಿಮಾ ಈಗಾಗಲೇ 50 ದಿನ ಪೂರೈಸಿದೆ. ಸದ್ಯ ತೆಲುಗು, ತಮಿಳು, ಕನ್ನಡಕ್ಕೂ ಸಿನಿಮಾ ಡಬ್ ಆಗಿದ್ದು ಏಕಕಾಲಕ್ಕೆ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ ಎನ್ನುವ ಚರ್ಚೆ ನಡೆಯುತ್ತಿದೆ.

ರಜನಿಕಾಂತ್​ಗೆ ಬಹಳ ಇಷ್ಟವಾಗಿತ್ತು ಸಿನಿಮಾ

ಇತ್ತೀಚೆಗಷ್ಟೇ, ಮಂಜುಮ್ಮೆಲ್ ಬಾಯ್ಸ್ ನಿರ್ದೇಶಕ ಚಿದಂಬರಂ ಪೊದುವಾಲ್ (Chidambaram Poduval) ಮತ್ತು ತಂಡ ಸೂಪರ್‌ಸ್ಟಾರ್ ರಜನಿಕಾಂತ್ (Superstar Rajinikanth ) ಅವರನ್ನು ಚೆನ್ನೈನಲ್ಲಿರುವ ಅವರ ನಿವಾಸದಲ್ಲಿ ಭೇಟಿಯಾಗಿದ್ದರು. ಮಂಜುಮ್ಮೇಲ್ ಬಾಯ್ಸ್’ ಸೂಪರ್ ಸ್ಟಾರ್ ರಜನಿಕಾಂತ್​ಗೆ ಬಹಳ ಇಷ್ಟವಾಗಿದ್ದು, ಚಿತ್ರತಂಡವನ್ನು ಮನೆಗೆ ಆಹ್ವಾನಿಸಿ ಸತ್ಕರಿಸಿದ್ದರು.

ಇದನ್ನೂ ಓದಿ: Manjummel Boys: ʼಮಂಜುಮ್ಮೇಲ್ ಬಾಯ್ಸ್’ ತಂಡಕ್ಕೆ ರಜನಿಕಾಂತ್‌ ಸತ್ಕಾರ!

ಏನಿದು ಕಥೆ?

ಸೌಬಿನ್ ಶಬೀರ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. 2006ರಲ್ಲಿ ಕೇರಳದಿಂದ ತಮಿಳುನಾಡಿನ ಕೊಡೈಕೆನಲ್​ಗೆ ಫ್ರೆಂಡ್ಸ್ ಗ್ರೂಪ್ ಒಂದು ಟ್ರಿಪ್ ಹೊರಡುತ್ತದೆ. ʻಡೆವಿಲ್ಸ್ ಕಿಚನ್ʼ ಹೆಸರಿನ ಗುಹೆಯಲ್ಲಿ ಸುಭಾಷ್ ಎಂಬಾತ ಬೀಳುತ್ತಾನೆ. ಆತನ ರಕ್ಷಿಸಲು ಫ್ರೆಂಡ್ಸ್ ಪ್ರಯತ್ನಿಸುತ್ತಾರೆ. ಇದರಲ್ಲಿ ಸಕ್ಸೆಸ್‌ ಆಗ್ತಾರಾ? ಇಲ್ಲವಾ ಎಂಬುದೇ ಕಥೆ. ಮಲಯಾಳಂ ಮಾತ್ರವಲ್ಲದೆ ತಮಿಳುನಾಡಿನಲ್ಲೂ ಸಿನಿಮಾ ಒಳ್ಳೆಯ ಗಳಿಕೆ ಮಾಡುತ್ತಿದೆ. ಈ ಚಿತ್ರ ತಮಿಳಿಗೂ ಡಬ್ ಆಗಿ ರಿಲೀಸ್ ಆಗಿದೆ.ಸೌಬಿನ್ ಶಾಹಿರ್, ಶ್ರೀನಾಥ್ ಭಾಸಿ, ಬಾಲು ವರ್ಗೀಸ್, ಗಣಪತಿ ಮತ್ತು ಜೀನ್ ಪಾಲ್ ಲಾಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಚಿದಂಬರಂ ಪೊದುವಾಲ್ ಅವರ ಎರಡನೇ ನಿರ್ದೇಶನ ಸಿನಿಮಾ ಇದು. ಈ ಮುಂಚೆ ʻಜೇನ್‌ಮ್ಯಾನ್ʼ ಹೆಚ್ಚು ಮೆಚ್ಚುಗೆ ಪಡೆದುಕೊಂಡಿತ್ತು. ಸುಶಿನ್ ಶ್ಯಾಮ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

Continue Reading

Latest

Movie web series: ಆ್ಯಕ್ಷನ್‌, ಥ್ರಿಲರ್, ಹಾರರ್: ವಾರಾಂತ್ಯಕ್ಕೆ ಬರಲಿವೆ ಬಹು ನಿರೀಕ್ಷಿತ ಚಿತ್ರಗಳು!

Movie, web series: ಹಬ್ಬ ಮುಗಿದು ವಾರ ಕೊನೆಯಾಗುವ ಹೊತ್ತಿಗೆ ಮುಂದಿನ ವಾರದಿಂದ ಒಂದೊಂದು ಚಿತ್ರಗಳು ತೆರೆಗೆ ಬರಲು ಕಾತರಿಸುವಂತಿದೆ. ಒಟಿಟಿಯಲ್ಲೂ ಹೊಸಹೊಸ ಸರಣಿಗಳು ಬರುವ ನಿರೀಕ್ಷೆ ಮೂಡಿಸಿದೆ. ಕೆಲವು ವೆಬ್ ಸೀರಿಸ್‌ಗಳು ಈ ವಾರದಲ್ಲೇ ಸರಣಿ ಪ್ರದರ್ಶನಕ್ಕೆ ಚಾಲನೆ ನೀಡಿವೆ. ಗುರುವಾರ, ಶುಕ್ರವಾರ, ಶನಿವಾರ ಒಂದಷ್ಟು ಸಿನಿಮಾ, ಸೀರಿಸ್ ಬಿಡುಗಡೆಯಾಗಲು ಕಾಯುತ್ತಿವೆ.

VISTARANEWS.COM


on

By

Movie, web series
Koo

ಬೆಂಗಳೂರು: ಹಬ್ಬದ ವೇಳೆಗೆ ಹೊಸ ಚಿತ್ರ ತೆರೆಗೆ ಬರಬಹುದು ಎನ್ನುವ ನಿರೀಕ್ಷೆಯಲ್ಲಿದ್ದವರಿಗೆ ಈ ಬಾರಿ ಯುಗಾದಿ (yugad), ಈದ್ ಮಿಲಾದ್ (eid-millad) ಹಬ್ಬ ಬೇಸರ ಮೂಡಿಸಿತ್ತು. ಯಾಕೆಂದರೆ ರಜೆಯ ಮೂಡ್ ನಲ್ಲಿದ್ದವರಿಗೆ ಯಾವುದೇ ದೊಡ್ಡ ಸಿನಿಮಾಗಳು (Movie, web series) ತೆರೆ (theater) ಮೇಲೆ ಕಾಣಲಿಲ್ಲ, ಒಟಿಟಿಯಲ್ಲೂ (OTT) ಸಿಗಲಿಲ್ಲ.

ಹಬ್ಬ ಮುಗಿದು ವಾರ ಕೊನೆಯಾಗುವ ಹೊತ್ತಿಗೆ ಮುಂದಿನ ವಾರದಿಂದ ಒಂದೊಂದು ಚಿತ್ರಗಳು ತೆರೆಗೆ ಬರಲು ಕಾತರಿಸುವಂತಿದೆ. ಒಟಿಟಿಯಲ್ಲೂ ಹೊಸಹೊಸ ಸರಣಿಗಳು ಬರುವ ನಿರೀಕ್ಷೆ ಮೂಡಿಸಿದೆ. ಕೆಲವು ವೆಬ್ ಸೀರಿಸ್‌ಗಳು ಈ ವಾರದಲ್ಲೇ ಸರಣಿ ಪ್ರದರ್ಶನಕ್ಕೆ ಚಾಲನೆ ನೀಡಿವೆ. ಗುರುವಾರ, ಶುಕ್ರವಾರ, ಶನಿವಾರ ಒಂದಷ್ಟು ಸಿನಿಮಾ, ಸೀರಿಸ್ ಬಿಡುಗಡೆಯಾಗಲು ಕಾಯುತ್ತಿವೆ.

ಇದನ್ನೂ ಓದಿ: Duniya Vijay: ಪುತ್ರಿಗಾಗಿ ಹೊಸ ಸಿನಿಮಾ ಅನೌನ್ಸ್‌ ಮಾಡಿದ ದುನಿಯಾ ವಿಜಯ್‌

ಎಂದಿನಂತೆ ಕನ್ನಡ ಚಿತ್ರರಂಗದಿಂದ ಯಾವುದೇ ಹೊಸ ಸಿರೀಸ್‌, ಚಿತ್ರಗಳು ತೆರೆಗೆ ಬರುವ ನಿರೀಕ್ಷೆ ಇಲ್ಲ. ಈಗಾಗಲೇ ಥಿಯೇಟರ್‌ಗಳಲ್ಲಿ ‘ಯುವ’, ‘ಬ್ಲಿಂಕ್’ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಕೆಲವು ಸಿನಿಮಾಗಳು ಥಿಯೇಟರ್‌ಗೆ ಬಂದಿದ್ದರೂ ಒಟಿಟಿಗೆ ಬಂದಿಲ್ಲ. ಹೀಗಾಗಿ ಮುಂದೆಯಾದರೂ ಒಂದಷ್ಟು ಸಿನಿಮಾಗಳ ಒಟಿಟಿಯಲ್ಲಿ ಬರಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ ಕನ್ನಡ ಸಿನಿ ಪ್ರಿಯರು.

ಈ ವಾರದಲ್ಲಿ ಹಲವು ಚಿತ್ರಗಳು ಥಿಯೇಟರ್ ಹಾಗೂ ಓಟಿಟಿಗೆ ಬರಲು ಸಜ್ಜಾಗಿದೆ. ಅವುಗಳ ಕುರಿತು ಮಾಹಿತಿ ಇಲ್ಲಿದೆ.

ʻಬಡೇ ಮಿಯಾ ಚೋಟೆ ಮಿಯಾʼ

ಅಕ್ಷಯ್ ಕುಮಾರ್ ಹಾಗೂ ಟೈಗರ್ ಶ್ರಾಫ್ ಜೊತೆಯಾದರೆ ಆ್ಯಕ್ಷನ್ ನೊಂದಿಗೆ ಮನೋರಂಜನೆಗೇನೂ ಕೊರತೆಯಾಗದು. ಇವರಿಬ್ಬರು ಒಟ್ಟಿಗೆ ನಟಿಸಿರುವ ಅಲಿ ಅಬ್ಬಾಸ್ ಜಾಫರ್ ನಿರ್ದೇಶನದ ʻಬಡೇ ಮಿಯಾ ಚೋಟೆ ಮಿಯಾʼ ಈ ವಾರದಲ್ಲಿ ತೆರೆಗೆ ಬರಲಿದೆ. ಮಾನುಷಿ ಚಿಲ್ಲರ್‌, ಸೋನಾಕ್ಷಿ ಸಿನ್ಹಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ʻಮೈದಾನ್’

ಬಹು ನಿರೀಕ್ಷೆ ಮೂಡಿಸಿರುವ ಅಜಯ್ ದೇವಗನ್ ಜತೆಗೆ ಪ್ರಿಯಾಮಣಿ ನಟನೆಯ ‘ಮೈದಾನ್’ ಸಿನಿಮಾ ತೆರೆಗೆ ಬರಲು ಕಾಯುತ್ತಿದೆ. ಬೋನಿ ಕಪೂರ್ ನಿರ್ದೇಶನದ ಈ ಚಿತ್ರ ಖ್ಯಾತ ಭಾರತದ ಫುಟ್ಬಾಲ್ ತರಬೇತುದಾರ ಸೈಯದ್ ಅಬ್ದುಲ್ ರಹೀಮ್ ಅವರ ಜೀವನವನ್ನು ಆಧರಿಸಿದೆ.

ಪ್ರೇಮಲು

ಹಾಟ್ ಸ್ಟಾರ್ ನಲ್ಲಿ ಸಣ್ಣ ಬಜೆಟ್‌ನ ಮಲಯಾಳಂ ಚಿತ್ರ ಪ್ರೇಮಲು ತೆರೆಗೆ ಬರಲಿದೆ. ಮಲಯಾಳಂ ಹಾಗೂ ತೆಲುಗಿನಲ್ಲಿ ಡಬ್ ಆಗಿ ಹಿಟ್ ಆಗಿದ್ದ ಈ ಚಿತ್ರದ ತೆಲುಗು ಚಿತ್ರ ಈಗಾಗಲೇ ಒಟಿಟಿಯಲ್ಲಿದೆ. ಏಪ್ರಿಲ್ 12ರಂದು ಮಲಯಾಳಂ, ತಮಿಳು, ಕನ್ನಡ ಮತ್ತು ಹಿಂದಿಯಲ್ಲಿ ಡಿಸ್ನಿ+ ಹಾಟ್‌ಸ್ಟಾರ್ ಒಟಿಟಿಯಲ್ಲಿ ಸ್ಟ್ರೀಮ್ ಆಗಲಿದೆ. ನೆಸ್ಲೇನ್ ಕೆ ಗೂಫರ್ ಮತ್ತು ಮಮಿತಾ ಬೈಜು ನಾಯಕಿಯರಾಗಿ ನಟಿಸಿರುವ ಪ್ರೇಮಲು ಚಿತ್ರವನ್ನು ಗಿರೀಶ್ ಎಡಿ ನಿರ್ದೇಶಿಸಿದ್ದಾರೆ.

ಕರುಂಗಾಪಿಯಂ

ಬಾಕ್ಸ್ ಆಫೀಸ್ ನಲ್ಲಿ ಹೀನಾಯ ಸೋಲು ಕಂಡ ಕಾಜಲ್ ಅಗರ್‌ವಾಲ್ ಹಾಗೂ ರೆಗಿಮಾ ಕಸೆಂದ್ರಾ ನಟನೆಯ ‘ಕರುಂಗಾಪಿಯಂ’ ಸಿನಿಮಾ ತೆಲುಗಿಗೂ ಡಬ್ ಆಗಿ ಒಟಿಟಿಯಲ್ಲಿ ತೆರೆಕಂಡಿದೆ.


ಅಮೇಜಾನ್ ಪ್ರೈಂ

ಈ ಬಾರಿ ಅಮೇಜಾನ್ ಪ್ರೈಂ ನಲ್ಲಿ ಏಪ್ರಿಲ್ 1ರಿಂದ ಹಾಲಿವುಡ್ ಸಿರೀಸ್ ಫಾಲ್ ಔಟ್, ಏಪ್ರಿಲ್ 9ರಿಂದ ಹಾರರ್ ಸಿನೆಮಾ ದಿ ಎಕ್ಸಾರ್ಸಿಸ್ಟ್: ಬಿಲಿವರ್, ಏಪ್ರಿಲ್ 8 ಅನ್‌ಫರ್ಗಟನ್ ಸೀಸನ್-5 ಸರಣಿ, ಏಪ್ರಿಲ್ 12ರಿಂದ ಎನ್‌ಡಬ್ಲೂಎಸ್‌ಎಲ್ -ಒರಿಜಿನಲ್ ಸೀರಿಸ್ ತೆರೆಕಾಣುತ್ತಿದೆ.


ನೆಟ್‌ಫ್ಲಿಕ್ಸ್

ನೆಟ್‌ಫ್ಲಿಕ್ಸ್ ನಲ್ಲಿಏಪ್ರಿಲ್ 8ರಿಂದ ಸ್ಪಿರಿಟ್ ರೇಂಜರ್ಸ್-ಸೀಸನ್-3(ಆನಿಮೇಟೆಡ್ ಸೀರಿಸ್), ಏಪ್ರಿಲ್ 10ರಿಂದ ದಿ ಹೈಜಾಕಿಂಗ್ ಆಫ್ ಫ್ಲೈಟ್ 601(ವೆಬ್ ಸೀರಿಸ್), ಅನ್‌ಲಾಕ್ಡ್: ಎ ಜೈಲ್ ಎಕ್ಸ್‌ಪೆರಿಮೆಂಟ್(ಡಾಕ್ಯೂ ಸೀರಿಸ್), ಜೆನ್ನಿಫರ್ ವಾಟ್ ಡಿಡ್(ಕ್ರೈಂ ಡಾಕ್ಯುಮೆಂಟರಿ), ಆಂತ್ರಾಸೈಟ್(ಫ್ರೆಂಚ್ ವೆಬ್ ಸೀರಿಸ್), ಏಪ್ರಿಲ್ 11ರಿಂದ ಮಿಡ್ ಸಮ್ಮರ್ ನೈಟ್- ಸೀಸನ್-1(ನಾರ್ವೆ ಥ್ರಿಲ್ಲರ್ ಸೀರಿಸ್), ಯಾಜ್ ದಿ ಕ್ರೋ ಫೈಲ್ಸ್- ಸೀಸನ್-3(ಟರ್ಕಿಸ್ ವೆಬ್ ಸೀರಿಸ್) , ಹಾರ್ಟ್‌ಬ್ರೇಕ್ ಹೈ- ಸೀಸನ್-2 (ಟೀನ್ ಬೆವ್ ಸೀರಿಸ್), ಏಪ್ರಿಲ್ 12ರಿಂದ ಸ್ಟೋಲೆನ್(ಸ್ವಿಡಿಶ್ ಸಿನಿಮಾ), ಅಮರ್ ಸಿಂಗ್ ಚಮ್ಕಿಲಾ(ಹಿಂದಿ ಸಿನಿಮಾ) ತೆರೆಯಲ್ಲಿ ಕಾಣಿಸಲಿದೆ. ಜೀ-5ನಲ್ಲಿ ಏಪ್ರಿಲ್ 12ರಿಂದ ʻಗಾಮಿʼ (ತೆಲುಗು ಸಿನಿಮಾ) ತೆರೆಗೆ ಬರಲಿದೆ.

Continue Reading

South Cinema

Thalapathy Vijay: ದಳಪತಿ ವಿಜಯ್ ‘ಗ್ರೇಟೆಸ್ಟ್ ಆಫ್ ಆಲ್ ಟೈಮ್ʼ ರಿಲೀಸ್‌ ಡೇಟ್‌ ಅನೌನ್ಸ್‌!

Thalapathy Vijay: ಗೋಟ್’ ಚೆನ್ನೈ, ಥೈಲ್ಯಾಂಡ್, ಹೈದರಾಬಾದ್ ಮತ್ತು ಪಾಂಡಿಚೇರಿಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಇದೊಂದು ವೈಜ್ಞಾನಿಕ ಕಾಲ್ಪನಿಕ ಸಿನಿಮಾವಾಗಿದೆ. 2024ರ ಸೆಪ್ಟೆಂಬರ್ 5ರಂದು ‘ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್’ ಸಿನಿಮಾ ಬಿಡುಗಡೆ ಆಗಲಿದೆ. ವೆಂಕಟ್ ಪ್ರಭು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ತ್ರಿಷಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

VISTARANEWS.COM


on

Thalapathy Vijay
Koo

ಬೆಂಗಳೂರು: ವೆಂಕಟ್ ಪ್ರಭು ನಿರ್ದೇಶನದ ದಳಪತಿ ವಿಜಯ್ (Thalapathy Vijay) ಅವರ ಬಹುನಿರೀಕ್ಷಿತ ಚಿತ್ರ ‘ಗ್ರೇಟೆಸ್ಟ್ ಆಫ್ ಆಲ್ ಟೈಮ್ (ಗೋಟ್)’ (‘Greatest Of All Time (GOAT)’) ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಇದೀಗ ಸಿನಿಮಾದ ರಿಲೀಸ್‌ ಡೇಟ್‌ ಅನೌನ್ಸ್‌ ಆಗಿದೆ. 2024ರ ಸೆಪ್ಟೆಂಬರ್ 5ರಂದು ‘ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್’ ಸಿನಿಮಾ ಬಿಡುಗಡೆ ಆಗಲಿದೆ.

ದಳಪತಿ ವಿಜಯ್ ಫಸ್ಟ್‌ ಲುಕ್‌ ಪೋಸ್ಟರ್‌ ಜತೆ ರಿಲೀಸ್‌ ಡೇಟ್‌ ಅನೌನ್ಸ್‌ ಆಗಿದೆ. ಚಿತ್ರದಲ್ಲಿ ವಿಜಯ್ ನಾಯಕ ಮತ್ತು ಖಳನಾಯಕನಾಗಿ ಎರಡು ಪಾತ್ರಗಳನ್ನು ನಿರ್ವಹಿಸಲಿದ್ದಾರೆ ಎನ್ನಲಾಗಿದೆ. ʻGOAT’ ಸಿನಿಮಾದಲ್ಲಿ ವಿಜಯ್ ಜತೆ ಪ್ರಭುದೇವ, ಪ್ರಶಾಂತ್, ವಿನಯ್, ಮೀನಾಕ್ಷಿ ಚೌಧರಿ ಮೊದಲಾದವರು ನಟಿಸುತ್ತಿದ್ದಾರೆ. ವೆಂಕಟ್ ಪ್ರಭು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ತ್ರಿಷಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಗೋಟ್’ ಅನ್ನು ಎಜಿಎಸ್ ಎಂಟರ್‌ಟೈನ್‌ಮೆಂಟ್‌ನಿಂದ ಕಲ್ಪತಿ ಎಸ್ ಅಘೋರಂ, ಕಲ್ಪತಿ ಎಸ್ ಗಣೇಶ್ ಮತ್ತು ಕಲ್ಪತಿ ಎಸ್ ಸುರೇಶ್ ಅವರು ಬೃಹತ್ ಬಜೆಟ್‌ನಲ್ಲಿ ನಿರ್ಮಿಸಿದ್ದಾರೆ. ಚಿತ್ರಕ್ಕೆ ಯುವನ್ ಶಂಕರ್ ರಾಜಾ ಅವರ ಸಂಗೀತ ಸಂಯೋಜನೆ. ಸಿದ್ಧಾರ್ಥ ನುನಿ ಅವರ ಛಾಯಾಗ್ರಹಣ ಮತ್ತು ವೆಂಕಟ್ ರಾಜೇನ್ ಅವರ ಸಂಕಲನವಿದೆ.

“ಗೋಟ್’ ಚೆನ್ನೈ, ಥೈಲ್ಯಾಂಡ್, ಹೈದರಾಬಾದ್ ಮತ್ತು ಪಾಂಡಿಚೇರಿಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಇದೊಂದು ವೈಜ್ಞಾನಿಕ ಕಾಲ್ಪನಿಕ ಸಿನಿಮಾವಾಗಿದೆ. ಪ್ರಶಾಂತ್, ಪ್ರಭುದೇವ, ಸ್ನೇಹಾ, ಅಜ್ಮಲ್ ಅಮೀರ್, ವೈಭವ್, ಲೈಲಾ, ಮೋಹನ್, ಅರವಿಂದ್ ಆಕಾಶ್ ಮತ್ತು ಅಜಯ್ ರಾಜ್ ಸೇರಿದಂತೆ ಅನೇಕರು ನಟಿಸಿದ್ದಾರೆ.

ಇದನ್ನೂ ಓದಿ: Thalapathy Vijay: ತಾಯಿಗಾಗಿ ಸಾಯಿ ಬಾಬಾ ಮಂದಿರ ಕಟ್ಟಿದ ತಮಿಳು ಖ್ಯಾತ ನಟ!

14 ವರ್ಷಗಳ ಬಳಿಕ ದಳಪತಿ ವಿಜಯ್‌ ಕೇರಳಕ್ಕೆ

ದಳಪತಿ ವಿಜಯ್ (Thalapathy Vijay) ಬಹುನಿರೀಕ್ಷಿತ ಚಿತ್ರ ‘ಗ್ರೇಟೆಸ್ಟ್ ಆಫ್ ಆಲ್ ಟೈಮ್ (ಗೋಟ್)’ (‘Greatest Of All Time (GOAT)’) ಕ್ಲೈಮ್ಯಾಕ್ಸ್ ಚಿತ್ರೀಕರಣಕ್ಕಾಗಿ ನಟ 14 ವರ್ಷಗಳ ಬಳಿಕ ಕೇರಳಕ್ಕೆ ಭೇಟಿ ನೀಡಿದ್ದರು. ವಿಜಯ್ ಈ ಸಿನಿಮಾದ ಚಿತ್ರೀಕರಣಕ್ಕಾಗಿ ಒಂದು ವಾರಗಳ ಕಾಲ ಕೇರಳದಲ್ಲಿಯೇ ಇದ್ದರು. ಜನಸಂದಣಿಯನ್ನು ನಿಯಂತ್ರಿಸಲು ಪೊಲೀಸರು ಮಹತ್ವದ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದರು. ಅಷ್ಟೇ ಅಲ್ಲ, ‘ವಿಜಯ್ ಸ್ಟಾರ್ಮ್ ಹಿಟ್ಸ್ ಕೇರಳ’ ಮತ್ತು ‘ಗೋಟ್’ ಎಂಬ ಹ್ಯಾಶ್‌ಟ್ಯಾಗ್‌ಗಳು ಎಕ್ಸ್‌ನಲ್ಲಿ ಟ್ರೆಂಡ್‌ ಆಗಿದ್ದವು. ಎಷ್ಟೇ ಕಟ್ಟು ನಿಟ್ಟಿದ್ದರೂ ಅಭಿಮಾನಿಗಳು ನಟನ ಕಾರಿನ ಗ್ಲಾಸ್‌ಅನ್ನು ಪುಡಿ ಪುಡಿ ಮಾಡಿದ್ದರು.

Continue Reading
Advertisement
Neha Murder case CID Officer
ಹುಬ್ಬಳ್ಳಿ8 mins ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

Virender Sehwag
ಕ್ರೀಡೆ16 mins ago

Virender Sehwag: ಬಡ ದೇಶದ ಕ್ರಿಕೆಟ್​ ಲೀಗ್​ ಆಡಲ್ಲ ಎಂದ ವೀರೇಂದ್ರ ಸೆಹವಾಗ್; ಕಾರಣವೇನು?

Guru Raghavendra and Vasishta Co operative Bank fraud handed over to SIT says DK Shivakumar
ಬೆಂಗಳೂರು19 mins ago

Bank fraud: ಗುರು ರಾಘವೇಂದ್ರ, ವಸಿಷ್ಠ ಸಹಕಾರ ಬ್ಯಾಂಕ್‌ಗಳ ಹಗರಣ ಎಸ್‌ಐಟಿ ಹೆಗಲಿಗೆ; ಶೀಘ್ರ ಕ್ರಮವೆಂದ ಡಿಕೆಶಿ

Shakhahaari Movie In OTT amzon Prime
ಸ್ಯಾಂಡಲ್ ವುಡ್24 mins ago

Shakhahaari Movie: ಒಟಿಟಿಗೆ ಎಂಟ್ರಿ ಕೊಡ್ತಿದೆ ʻಶಾಖಾಹಾರಿʼ ಸಿನಿಮಾ! ಸ್ಟ್ರೀಮಿಂಗ್‌ ಎಲ್ಲಿ? ಯಾವಾಗ?

Xiaomi EV
ಆಟೋಮೊಬೈಲ್26 mins ago

Xiaomi EV: ತಿಂಗಳಲ್ಲಿ 75 ಸಾವಿರ ಆರ್ಡರ್ ಸ್ವೀಕರಿಸಿದ ಕ್ಸಿಯೋಮಿ ಎಸ್‌ಯು 7 ಎಲೆಕ್ಟ್ರಿಕ್‌ ಕಾರು; ಟೆಸ್ಲಾಗಿಂತ ಅಗ್ಗ!

Nilkrishna Gajare JEE main 2024 result AIR 1
ಅಂಕಣ34 mins ago

JEE Main 2024 Result: ದೇಶಕ್ಕೇ ಮೊದಲ ರ‍್ಯಾಂಕ್ ಪಡೆದ ರೈತನ ಮಗ! ಈತನ ಯಶಸ್ಸು ಸ್ಫೂರ್ತಿದಾಯಕ

Aircraft Crash
ದೇಶ39 mins ago

Aircraft Crash: ಭಾರತೀಯ ವಾಯುಪಡೆಯ ವಿಮಾನ ಪತನ; ಭಾಗಗಳು ಸುಟ್ಟು ಭಸ್ಮ

Lok Sabha Election 2024 vote for better future and 98 year old woman dies when returning officer arrives at home to cast her vote
ಪ್ರಮುಖ ಸುದ್ದಿ50 mins ago

Lok Sabha Election 2024: ಮತ ಹಾಕಿಸಿಕೊಳ್ಳಲು ಚುನಾವಣಾಧಿಕಾರಿಗಳು ಮನೆಗೆ ಬಂದಾಗಲೇ 98ರ ವೃದ್ಧೆ ಸಾವು!

Horlicks Label
ದೇಶ53 mins ago

Horlicks Label: ಹಾರ್ಲಿಕ್ಸ್‌ ಇನ್ನು ಹೆಲ್ತ್‌ ಡ್ರಿಂಕ್ಸ್‌ ಅಲ್ಲ ಎಂದ ಹಿಂದುಸ್ತಾನ್‌ ಯುನಿಲಿವರ್;‌ ಕಾರಣ ಏನು?

Salaar Movie In star suvarna
ಕಿರುತೆರೆ54 mins ago

Salaar Movie: ಕಿರುತೆರೆಗೆ ಬಂದೇ ಬಿಡ್ತು ಬ್ಲಾಕ್ ಬಸ್ಟರ್ ಸಿನಿಮಾ ‘ಸಲಾರ್’!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Neha Murder case CID Officer
ಹುಬ್ಬಳ್ಳಿ8 mins ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

Lok sabha election 2024
Lok Sabha Election 20242 hours ago

Lok Sabha Election 2024 : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ; ಪ್ರವಾಸಿ ತಾಣಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

Dina Bhavishya
ಭವಿಷ್ಯ1 day ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು3 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ3 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು3 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು3 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ3 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ4 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

ಟ್ರೆಂಡಿಂಗ್‌