Site icon Vistara News

Pavitra Lokesh | ಶೀಘ್ರವೇ ಮದುವೆಯಾಗಲಿದ್ದೇವೆ ಎಂದು ಪವಿತ್ರಾ ಲೋಕೇಶ್‌ಗೆ ಲಿಪ್‌ಕಿಸ್‌ ಕೊಟ್ಟ ನರೇಶ್‌: ವಿಡಿಯೊ ಇಲ್ಲಿದೆ!

Pavitra Lokesh

ಬೆಂಗಳೂರು : ಟಾಲಿವುಡ್‌ ನಟ ನರೇಶ್‌ ಹಾಗೂ ನಟಿ ಪವಿತ್ರಾ ಲೋಕೇಶ್‌ (Pavitra Lokesh) ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿ ಇದ್ದಾರೆ ಎಂಬ ಸುದ್ದಿ ಕೆಲವು ದಿನಗಳಿಂದ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿತ್ತು. ಇದೀಗ ನವ ವರ್ಷಕ್ಕೆ ನರೇಶ್‌ ಟ್ವೀಟ್‌ ಮೂಲಕ ಹೊಸ ಸುದ್ದಿಯನ್ನು ನೀಡಿದ್ದಾರೆ. ನರೇಶ್‌- ಪವಿತ್ರಾ ಜೋಡಿ ಹೊಸ ಇನಿಂಗ್ಸ್ ಶುರು ಮಾಡಿದೆ. ಟ್ವೀಟ್‌ ಮೂಲಕ ನರೇಶ್‌ ಅವರು ʻʻಶೀಘ್ರದಲ್ಲೇ ಮದುವೆಯಾಗಲಿದ್ದೇವೆ. ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿʼʼಎಂದು ಪವಿತ್ರಾ ಲೋಕೇಶ್‌ ಅವರಿಗೆ ಲಿಪ್‌ ಕಿಸ್‌ ಕೊಟ್ಟಿರುವ ವಿಡಿಯೊ ಹಂಚಿಕೊಂಡಿದ್ದಾರೆ.

ನರೇಶ್‌ ತಮ್ಮ ಟ್ವೀಟ್‌ನಲ್ಲಿ ʻʻನಮ್ಮ ಪ್ರಪಂಚಕ್ಕೆ ಸ್ವಾಗತ. ಶೀಘ್ರದಲ್ಲಿಯೇ ಮದುವೆಯಾಗಲಿದ್ದೇವೆ. ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿʼʼಎಂದು ಕೇಕ್‌ ಕಟ್‌ ಮಾಡಿ, ಪವಿತ್ರಾ ಲೋಕೇಶ್‌ ಅವರಿಗೆ ಲಿಪ್‌ ಕಿಸ್‌ ನೀಡಿದ್ದಾರೆ. ಇದೀಗ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ | Pavitra Lokesh | ಪವಿತ್ರಾ ಲೋಕೇಶ್‌ ಭುಜದ ಮೇಲೆ ನರೇಶ್‌ ಕೈ: ವಿಡಿಯೊದಲ್ಲಿ ಹೇಳಿದ್ದೇನು?

ಇಬ್ಬರೂ ಜತೆಯಲ್ಲಿ ಇಲ್ಲ?
ಟಾಲಿವುಡ್‌ ನಟ ನರೇಶ್‌ ಹಾಗೂ ನಟಿ ಪವಿತ್ರಾ ಲೋಕೇಶ್‌ ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿ ಇದ್ದಾರೆ ಎಂದು ನರೇಶ್‌ ಮೂರನೇ ಪತ್ನಿ ರಮ್ಯಾ ರಘುಪತಿ ಈ ಹಿಂದೆ ಆರೋಪಿಸಿದ್ದರು. ಇಬ್ಬರೂ ಮೈಸೂರಿನ ಹೋಟೆಲ್‌ವೊಂದರಲ್ಲಿ ರಮ್ಯಾ ರಘುಪತಿ ಕೈಗೆ ಸಿಕ್ಕಿಬಿದ್ದಿದ್ದರು.

ಸಿನಿಮಾ ಪ್ರಚಾರದ ವೇಳೆ ಭುಜದ ಮೇಲೆ ಕೈ ಹಾಕಿದ್ದ ನರೇಶ್‌
ತಾವಿಬ್ಬರೂ ನಟಿಸಿದ ಚಿತ್ರದ ಕುರಿತು ನರೇಶ್‌ ಮಾತನಾಡುವಾಗ ಪವಿತ್ರಾ ಲೋಕೇಶ್‌ ಅವರ ಭುಜದ ಮೇಲೆ ಕೈ ಹಾಕಿರುವ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದನ್ನು ನೋಡಿ ನೆಟ್ಟಿಗರು ಇಬ್ಬರೂ ರಿಲೇಷನ್‌ಶಿಪ್‌ನಲ್ಲಿ ಇದ್ದಂಗಿದೆ ಎಂದು ಕಮೆಂಟ್‌ ಕೂಡ ಮಾಡಿದ್ದರು.

ಇದನ್ನೂ ಓದಿ | Pavitra Lokesh | ಪೊಲೀಸ್ ಠಾಣೆ ಮೆಟ್ಟಿಲೇರಿದ ಪವಿತ್ರಾ ಲೋಕೇಶ್‌: ದೂರಿನಲ್ಲೇನಿದೆ?

Exit mobile version